2025-26 ನೇ ಸಾಲಿನ D.El.Ed, D.P.Ed & D.P.S.E ಕೋರ್ಸ್ ಗಳಿಗೆ ಸರ್ಕಾರಿ ಕೋಟಾದ ಸೀಟುಗಳಿಗೆ ದಾಖಲಾತಿ ಪ್ರಕ್ರಿಯೆ ಕುರಿತು ಅಧಿಸೂಚನೆ ಪ್ರಕಟ.
2025-26 ನೇ ಸಾಲಿನ D.El.Ed, D.P.Ed & D.P.S.E ಕೋರ್ಸ್ ನ(ವಿವಿಧ ಮಾಧ್ಯಮಗಳ ) ಪ್ರಥಮ ವರ್ಷದ ವ್ಯಾಸಂಗಕ್ಕಾಗಿ ರಾಜ್ಯದಲ್ಲಿನ ಅಂಗೀಕೃತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‌ಸೈಟ್ www.schooleducation.kar.nic.in ಅನ್ನು ಸಂಪರ್ಕಿಸಿ, ವೆಬ್‌ಸೈಟ್‌ನಲ್ಲಿ ಕಾಣುವ APPLICATION FOR D.El.Ed / D.P.S.E / D.P.Ed / ADMISSIONS FOR GOVERNMENT QUOTA SEATS: 2025-26ರ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು, ಸದರಿ ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ (DIET) ಕೇಂದ್ರಗಳಲ್ಲಿ ಅಂತಿಮ ದಿನಾಂಕದೊಳಗೆ ಸಲ್ಲಿಸುವುದು.
1. ವೇಳಾಪಟ್ಟಿ:-
ಸೂಚನೆ: ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ (SBI) ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ Joint Director' CAC, BANGALORE. ಇವರ ಹೆಸರಿಗೆ ಬ್ಯಾಂಕ್ ಹುಂಡಿ ಪಡೆದು ಭರ್ತಿ ಮಾಡಿದ ಆಫ್‌ಲೈನ್ ಅರ್ಜಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ ಕೇಂದ್ರಕ್ಕೆ (DIET) ಸಲ್ಲಿಸುವುದು. ಮೇಲಿನ ಶುಲ್ಕ ವಿವರಗಳು ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಡಿ D.EL.Ed / D.P.S.ED.P.Ed ಕೋರ್ಸುಗಳಿಗೆ ದಾಖಲಾಗುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಅರ್ಜಿಗಳನ್ನು ಭರ್ತಿ ಮಾಡುವಾಗ ಅಪೂರ್ಣ ಮಾಹಿತಿ, ತಪ್ಪು ಮಾಹಿತಿಗಳನ್ನು ನೀಡುವುದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರರಾಗಿರುತ್ತಾರೆ. ಇಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಎಂದು ತಿಳಿಸಲಾಗಿದೆ.