GPF Statement.2024-25, Check your GPF Statement....
ಸೂಚನೆಗಳು
1. ಒಂದು ವೇಳೆ ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತಃಖೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸಾ.ಭ.ನಿ. ಖಾತೆಗೆ ಜಮಾ ಮಾಡಿದ ಅಥವಾ ಹಿಂತೆಗೆದ ಮೊತ್ತಕ್ಕೂ. ಸಾ.ಭ.ನಿ. ಲೆಕ್ಕ ತಃಖ್ಯೆಯಲ್ಲಿ ನಮೂದಿಸಿದ ವಿವರಗಳಿಗೂ ವ್ಯತ್ಯಾಸವಿದ್ದಲ್ಲಿ. ದಯವಿಟ್ಟು ಜಮಾ ಮಾಡಿದ ಅಥವಾ ಹಿಂತೆಗೆದ ಮೊತ್ತದ ವಿವರಗಳನ್ನು ತಕ್ಷಣವೇ ಈ ಕಛೇರಿಗೆ ಕಳುಹಿಸತಕ್ಕದ್ದು.
2. ನಿಮ್ಮ ಸಾ.ಭ.ನಿ. ಖಾತೆಯಲ್ಲಿ, ಖಾತೆಗೆ ಜಮಾ ಆಗದ ಕಂತುಗಳು (ಮಿಸ್ಸಿಂಗ್ ಕ್ರೆಡಿಟ್ಸ್) ಇದ್ದಲ್ಲಿ, ಜಮಾ ಮಾಡಿದ ವಿವರಗಳನ್ನು ಈ ಕಛೇರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡತಕ್ಕದ್ದು.
3. ಪ್ರಸಕ್ತ ವರ್ಷದಲ್ಲಿ ಅಥವಾ ವರ್ಷದ ಕೆಲವು ತಿಂಗಳುಗಳಲ್ಲಿ ಸಾ.ಭ.ನಿ. ಖಾತೆಗೆ ವಂತಿಗೆಯನ್ನು ಜಮಾ ಮಾಡದೆ ಇದ್ದಲ್ಲಿ, ಜಮಾ ಮಾಡಿರದ ಅವಧಿಯ ಮಾಹಿತಿಯನ್ನು ಈ ಕಛೇರಿಗೆ ತಿಳಿಸುವುದು.
4. ನಿಮ್ಮ ಸಾ.ಭ.ನಿ. ಖಾತೆಯ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತ:ಖೆಯಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸತಕ್ಕದ್ದು.
5. ಸಾಮಾನ್ಯ ಭವಿಷ್ಯ ನಿಧಿ ವಾರ್ಷಿಕ ಲೆಕ್ಕ ತಖ್ಯೆಯು ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್, ಡಿ.ಪಿ.ಎ.ಆರ್.ನ ಹೆಚ್.ಆರ್.ಎಂ.ಎಸ್. ವೆಬ್ ಸೈಟ್ ನ - ಡಿಡಿಒ ಲಾಗ್‌ಇನ್ ನಲ್ಲೂ ಲಭ್ಯವಿರುತ್ತದೆ.
(HOME > MIS Report > Download GPF Statement)
6. ನಿಮ್ಮ ಸಾ.ಭ.ನಿ. ಖಾತೆಯ ಅಂತಿಮ ಹಿಂತೆಗೆತದ ಅರ್ಜಿಯನ್ನು ಸರಿಯಾದ ಸಮಯಕ್ಕೆ ಇತ್ಯರ್ಥಗೊಳಿಸುವ ಸಲುವಾಗಿ ನಿವೃತ್ತಿಗೆ ಮೂರು ತಿಂಗಳುಗಳಷ್ಟು ಮುಂಚಿತವಾಗಿ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ಮೂಲಕ ಕಳುಹಿಸತಕ್ಕದ್ದು. ಅರ್ಜಿಯಲ್ಲಿ ದಯವಿಟ್ಟು ನಿಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನಮೂದಿಸಿ.
7. ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತರುವ ಅಧಿಕಾರಿ / ನೌಕರರು ತಮ್ಮ ಸಂಬಳದಿಂದ ಕಡಿತಗೊಳಿಸಲ್ಪಟ್ಟ ಸಾ.ಭ.ನಿ. ವಂತಿಗೆಯು ತಕ್ಷಣವೇ ಸ್ವಾಯತ್ತ ಸಂಸ್ಥೆಯ ಮೂಲಕ ಸಾ.ಭ.ನಿ. ಖಾತೆಗೆ ಜಮಾ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಖಜಾನೆಗೆ ಸಲ್ಲಿಸುವ ಚಲನ್ ಜೊತೆಗೆ ಸಾ.ಭ.ನಿ. ವಂತಿಗೆ ವಿವರಣೆ ಪಟ್ಟಿಯನ್ನು ಲಗತ್ತಸತಕ್ಕದ್ದು ಹಾಗೂ ಚಲನ್ ಮತ್ತು ಸಾ.ಭ.ನಿ ವಂತಿಗೆ ವಿವರಣೆ ಪಟ್ಟಿಯ ಒಂದು ಪ್ರತಿಯನ್ನು ಈ ಕಛೇರಿಗೆ ಕಳುಹಿಸತಕ್ಕದ್ದು.
8. ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಸಾ.ಭ.ನಿ. ಖಾತೆಯಿಂದ ಮುಂಗಡವನ್ನು ಮಂಜೂರು ಮಾಡುವ ಮೊದಲು ಪ್ರಸಕ್ತ ವರ್ಷದ ಮಾರ್ಚ್ ತಿಂಗಳ ನಂತರ ಈಗಾಗಲೇ ಮಂಜೂರಾಗಿರುವ ಮುಂಗಡ / ಅಂಶಿಕ ಹಿಂತೆಗೆತದ ವಿವರಗಳನ್ನು ಗಣನೆಗೆ ತೆಗೆದುಕೊಂಡು ಮಂಜೂರು ಮಾಡತಕ್ಕದ್ದು.
9. ಈ ಕಛೇರಿಗೆ ಸಲ್ಲಿಸುವ ಸಾ.ಭ.ನಿ.ಗೆ ಸಂಬಂಧಿಸಿದ ಎಲ್ಲಾ ಪತ್ರ / ಅಂಶಿಕ ಹಿಂತೆಗೆತದ ಅರ್ಜಿ / ಅಂತಿಮ ಹಿಂತೆಗೆತದ ಅರ್ಜಿಗಳಲ್ಲಿ ವಂತಿಗೆದಾರರ / ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ನಮೂದಿಸತಕ್ಕದ್ದು.
10. ಪ್ರತೀ ತಿಂಗಳೂ ಈ ಕಛೇರಿಗೆ ಸಲ್ಲಿಸುವ ಸಾ.ಭ.ನಿ. ವಂತಿಗೆ ವಿವರಣೆ ಪಟ್ಟಿಯಲ್ಲಿ ನಿಮ್ಮ ಸಾ.ಭ.ನಿ. ಖಾತೆಯ ಶ್ರೇಣಿ. ಸಂಖ್ಯೆ ಮತ್ತು ಹೆಸರನ್ನು ಸರಿಯಾಗಿ ನಮೂದಿಸಲ್ಪಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
No comments:
Post a Comment