ಪ್ರಸ್ತಾವನೆ:
ಮೇಲೆ ಕ್ರ.ಸಂ. (1) ರಲ್ಲಿ ಓದಲಾದ 2025-26ನೇ ಸಾಲಿನ ಆಯವ್ಯಯ ಭಾಷಣ ಖಂಡಿಕೆ-144 ರಲ್ಲಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವ ಮೂಲಕ 'ಆರೋಗ್ಯ ಕವಚ' ಸೇವೆಯನ್ನು ಬಲಪಡಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಆದೇಶದಲ್ಲಿ ರಾಜ್ಯದಲ್ಲಿ ಆರೋಗ್ಯ ಕವಚ-108 ಆಂಬ್ಯುಲೆನ್ಸ್ ತುರ್ತು ಸೇವೆಯನ್ನು ಜನರಿಗೆ ಒದಗಿಸುವ ಹಿನ್ನಲೆಯಲ್ಲಿ ಮುಂದಿನ 7 ವರ್ಷಗಳ ಅವಧಿಗೆ ಅರ್ಹ ಸೇವಾದಾರರನ್ನು ಟೆಂಡರ್ ಮೂಲಕ ಆಯ್ಕೆ ಮಾಡಿ ಹಾಗೂ Service Level Agreement ಮಾಡಿಕೊಳ್ಳಲು ಹಾಗೂ ದಿ: 14.5.2020 ರಿಂದ ಹೊಸ ಸೇವಾದಾರರನ್ನು ಆಯ್ಕೆ ಮಾಡಿ ಹೊಸ ಕರಾರು ಜಾರಿಗೆ ಬರುವಂತೆ GVK-IMRI ಸಂಸ್ಥೆಯೊಡನೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಈ ಹಿಂದೆ ಮಾಡಿಕೊಂಡಿರುವ ಒಡಂಬಡಿಕೆಯ ಷರತ್ತು ಮತ್ತು ನಿಬಂಧನೆಗಳನ್ವಯ ಮುಂದುವರೆಸಲು ಅನುಮೋದನೆ ನೀಡಲಾಗಿದೆ.
ಮೇಲೆ ಕ್ರ.ಸಂ. (3) ರಲ್ಲಿ ಓದಲಾದ ಆದೇಶದಲ್ಲಿ ಆರೋಗ್ಯ ಕವಚ 108 ಆಂಬುಲೆನ್ಸ್ ತುರ್ತು ಸೇವೆಯನ್ನು ಮೇಲ್ದರ್ಜೆಗೇರಿಸಿ ಆಂಬ್ಯುಲೆನ್ಸ್ ಸಂಖ್ಯೆಗಳನ್ನು 750 ಕ್ಕೆ ಸೀಮಿತಗೊಳಿಸಿ 54 ಕರೆ ಕೇಂದ್ರದ ಆಸನ ಸಂಖ್ಯೆಯನ್ನು 75 ಆಸನಗಳ ತುರ್ತು ಕರೆ ಕೇಂದ್ರ ಹಾಗೂ ತುರ್ತು ವೈದ್ಯಕೀಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು (ಅಂದಾಜು ರೂ.1260.00 ಕೋಟಿ ವೆಚ್ಚದಲ್ಲಿ) ಹಾಗೂ ಅರ್ಹ ಸೇವಾದಾರರನ್ನು ಮುಂದಿನ 5 ವರ್ಷಗಳ ಅವಧಿಗೆ ನಿರ್ವಹಿಸಲು ಕೆ.ಟಿ.ಪಿ.ಪಿ ಕಾಯ್ದೆ 1999 ಮತ್ತು ನಿಯಮಗಳು 2000ರನ್ವಯ Quality and Cost Based Selection (QCBS) ಮಾದರಿಯಲ್ಲಿ ಉತ್ತಮ ಸೇವೆಗೆ ಅಗತ್ಯವಿರುವ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಸೇವಾದಾರರನ್ನು ಆಯ್ಕೆ ಮಾಡಲು ಸರ್ಕಾರವು ಮಂಜೂರಾತಿ ನೀಡಿದೆ. ಮುಂದುವರೆದು, ಆಯ್ಕೆಯಾದ ಸೇವಾದಾರರ ಸೇವೆಯು ತೃಪ್ತಿಕರವಾಗಿದ್ದಲ್ಲಿ ಇಲಾಖೆವತಿಯಿಂದ ಮತ್ತೆ 2 ವರ್ಷಗಳ ಅವಧಿಗೆ ಅವರ ಸೇವೆಯನ್ನು ಮುಂದುವರೆಸಲು ಸಹ ಮಂಜೂರಾತಿ ನೀಡಲಾಗಿದೆ.
ಮೇಲೆ ಕ್ರ.ಸಂ. (4)ರಲ್ಲಿ ಓದಲಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಕ-ಕಡತದಲ್ಲಿ ರಾಜ್ಯ ಸರ್ಕಾರವು ಆಗಸ್ಟ್ 2008 ರಂದು GVK-EMRI ಸಂಸ್ಥೆ (ಪ್ರಸ್ತುತ EMRI GHS) ಸಂಸ್ಥೆಯೊಂದಿಗೆ 108 ಆರೋಗ್ಯ ಕವಚ ತುರ್ತು ಆಂಬುಲೆನ್ಸ್ ಸೇವೆಗಳನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸಲು 10 ವರ್ಷದ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಾಗುತ್ತಿದ್ದು, ಪ್ರಸ್ತುತ ಸಂಸ್ಥೆಯ ಸೇವೆಯು ತೃಪ್ತಿಕರವಾಗಿಲ್ಲವಾದ್ದರಿಂದ ಹಾಗೂ ಸೇವಾ ಷರತ್ತುಗಳ ಒಪ್ಪಂದಗಳಿಗೆ ಬದ್ಧವಾಗಿಲ್ಲವಾದ್ದರಿಂದ ದಿ: 14.8.2017 ರಂದು ಒಡಂಬಡಿಕೆಯನ್ನು ರದ್ದುಗೊಳಿಸಲು ನೋಟೀಸು ಜಾರಿಗೊಳಿಸಲಾಗಿದ್ದು, ಆದರೆ ಸಾರ್ವಜನಿಕರಿಗೆ ತುರ್ತು ವೈದ್ಯಕೀಯ ಆಂಬುಲೆನ್ಸ್ ಸೇವೆಯನ್ನು ಯಾವುದೇ ಅಡೆತಡೆಗಳು ಇಲ್ಲದೇ ಅಡಚಣಾ ರಹಿತ ಸೇವೆ ನೀಡುವ ಉದ್ದೇಶದಿಂದ ಒಡಂಬಡಿಕೆ ರದ್ದುಗೊಳಿಸಿದ ನಂತರ ಸರ್ಕಾರದ ಅನುಮತಿ ಪಡೆದು ಸದರಿ ಸೇವಾದಾರರನ್ನೇ ಮುಂದುವರೆಸಲಾಗಿದೆ.
108-ಆರೋಗ್ಯ ಕವಚ ಸೇವೆಗೆ ಹೊಸಸೇವಾದಾರರನ್ನು QCBS ಮಾದರಿಯಲ್ಲಿ ಆಯ್ಕೆ ಮಾಡಲು ಅನುಮೋದನೆ ಪಡೆದು 4 ಬಾರಿ ಟೆಂಡರ್ ಆಹ್ವಾನಿಸಲಾಗಿದ್ದು, 4 ಟೆಂಡರ್ಗಳು ವಿಫಲವಾಗಿರುವುದರಿಂದ ಮತ್ತು ಸೇವಾದಾರರು ಮಾಡಿಕೊಂಡಿರುವ ಒಡಂಬಡಿಕೆಯ ದಿನಾಂಕ: 14-08-2008 ರ Clause XI (B) ರನ್ವಯ ಮೂರು ತಿಂಗಳ ಒಳಗಾಗಿ ನಿರ್ಗಮಿಸುವುದಾಗಿ 108-ಆರೋಗ್ಯ ಕವಚ ಸೇವಾದಾರರು ದಿನಾಂಕ: 09-01-2025 ರಂದು ಪತ್ರವನ್ನು ಸಲ್ಲಿಸಿರುತ್ತಾರೆ ಹಾಗೂ 2025-26ನೇ ಸಾಲಿನ ಆಯವ್ಯಯ ಘೋಷಣೆಯ ಖಂಡಿಕೆ-144 ರಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವ ಮೂಲಕ 'ಆರೋಗ್ಯ ಕವಚ' ಸೇವೆಯನ್ನು ಬಲಪಡಿಸಲು ಈ ಕೆಳಕಂಡ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
1. ರಾಜ್ಯ ಮಟ್ಟದಲ್ಲಿ ಸರ್ಕಾರಿ ಸ್ವಾಮ್ಯದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟನ್ನು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು
2. ಸರ್ಕಾರಿ ಸ್ವಾಮ್ಯದ ಮಾಹಿತಿ ತಂತ್ರಜ್ಞಾನದ ಮೂಲಭೂತ ಸೌಕರ್ಯಗಳಾದ ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆ.ಎಸ್.ಡಿ.ಸಿ) ಮತ್ತು ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ (KSWAN) ಬಳಸಿಕೊಂಡು ಅನುಷ್ಠಾನಗೊಳಿಸಲು
3. ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ, (MeitY) ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯು ವಿನ್ಯಾಸ ಮಾಡಿರುವ NG 112 ಕಮಾಂಡ್ ಆಂಡೆ ಕಂಟ್ರೋಲ್ ಅಪ್ಲಿಕೇಷನ್ನ್ನು ಅಳವಡಿಸಿಕೊಂಡು ನಮ್ಮ ಅಗತ್ಯಕ್ಕೆ ತಕ್ಕಂತೆ ಮರು ವಿನ್ಯಾಸ ಮಾಡಿಕೊಂಡು ಬಳಕೆ ಮಾಡಿಕೊಳ್ಳಲು (ಇದು ಭಾರತ ಸರ್ಕಾರದ ಕೇಂದ್ರಿಕೃತ ಅಪ್ಲಿಕೇಷನ್ ಆಗಿರುತ್ತದೆ).
4. ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ, (MeitY)ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡು 112 NG-ERSS ತಂತ್ರಾಂಶ ಬಳಸಿಕೊಂಡು 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮಗಳ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲು 4 'ಜಿ' ವಿನಾಯಿತಿಯನ್ನು ಪಡೆದು ಸದರಿ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅನುಮೋದನೆಯ ನಂತರ ತಂತ್ರಜ್ಞಾನ ಹಾಗೂ ನಿರ್ವಹಣೆಗಾಗಿ ಒಡಂಬಡಿಕೆ ಮಾಡಿಕೊಳ್ಳಲು
5. ಜಿಲ್ಲಾ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ಗಳು ಮತ್ತು ಆಂಬ್ಯುಲೆನ್ಸ್ ಗಳ ದೈನಂದಿನ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿವೀಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವಹಿಸಲು
6. ರಾಜ್ಯ ವಲಯದ ಆಂಬ್ಯಲೆನ್ಸ್ ಗಳನ್ನು ವಿಶೇಷ ವರ್ಗದಡಿಯಲ್ಲಿ 108 ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅಧೀನಕ್ಕೆ ತರಲು
7. ಜಿಲ್ಲಾ ಮಟ್ಟದಲ್ಲಿ ಆಂಬುಲೆನ್ಸ್ ಸೇವೆಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಸೇವೆಯನ್ನು ಹೊರಗುತ್ತಿಗೆಯ ಆಧಾರದ ಮೇಲೆ ಪಡೆಯಲು
8. ರಾಜ್ಯ ಮಟ್ಟದಲ್ಲಿ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಚಟುವಟಿಕೆಗಳು ಸೇರಿದಂತೆ 108 ಮತ್ತು 104 ಒಟ್ಟಾರೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕಾರ್ಯಕ್ರಮ ನಿರ್ವಹಣಾ ಘಟಕವನ್ನು ಸ್ಥಾಪಿಸುವುದು, ಇದರ ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-144 ರಲ್ಲಿನ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವ ಮೂಲಕ 'ಆರೋಗ್ಯ ಕವಚ' ಸೇವೆಯನ್ನು ಬಲಪಡಿಸಲಾಗುವುದು ಎಂಬ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-EMRI ಸಂಸ್ಥೆ (ಪ್ರಸ್ತುತ EMRI GHS) ಸಂಸ್ಥೆಯಿಂದ ಹಿಂಪಡೆದು, ಈ ಸೇವೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ 112 NG ERSS ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್ ಗಳ ವಿಕೇಂದ್ರಿಕೃತವಾಗಿ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ.
ಈ ಯೋಜನೆಯನ್ನು 2025-26 ನೇ ಸಾಲಿನ ಅನುಮೋದಿತ ಅನುದಾನದ ಮಿತಿಯೊಳಗೆ ಅನುಷ್ಠಾನ ಮಾಡತಕ್ಕದ್ದು ಹಾಗೂ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಪಡೆಯಲು ಪ್ರತ್ಯೇಕ ಪ್ರಸ್ತಾವನೆ ಹಾಗೂ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ, (MeitY)ದಡಿಯಲ್ಲಿನ C-DAC ತಿರುವಂತಪುರಂ ಸಂಸ್ಥೆಯ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡು 112 NG-ERSS ತಂತ್ರಾಂಶ ಬಳಸಿಕೊಂಡು 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ ಕಾರ್ಯಕ್ರಮಗಳ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲುಕೆಟಿಪಿಪಿ ಕಾಯ್ದೆ ಕಲಂ 4(g) ವಿನಾಯಿತಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸತಕ್ಕದ್ದು. ಮುಂದುವರೆದು ಯೋಜನೆಯ ಅನುಷ್ಠಾನಕ್ಕೆ ವಿವರವಾದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಹಾಗೂ ಆಡಳಿ ತಾತ್ಮಕ ಅನುಮೋದನೆ ಪಡೆಯತಕ್ಕದ್ದು
ಸದರಿ ಆದೇಶವನ್ನು ಸಚಿವ ಸಂಪುಟದ ನಿರ್ಣಯ ಸಂಖ್ಯೆ: 442/2025 ರಲ್ಲಿನ ಅನುಮೋದನೆ ಹಾಗೂ ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 438 EXP-5/2025, ದಿನಾಂಕ: 02.06.2025 ಮತ್ತು ಯೋಜನಾ ಇಲಾಖೆಯ ಹಿಂಬರಹ ಸಂಖ್ಯೆ: PDS-HDD/104/2025, ದಿನಾಂಕ: 04.06.2025 ರಲ್ಲಿನ ಸಹಮತಿಯ ಮೇರೆಗೆ ಹೊರಡಿಸಲಾಗಿರುತ್ತದೆ.
No comments:
Post a Comment