Tuesday, September 30, 2025

KGID: 01-04-2020 ರಿಂದ 31-03-2022 ರ ವರೆಗೆ ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಅಧಿಲಾಭಾಂಶ ನೀಡುವ ಬಗ್ಗೆ.

  ISARESOURCEINFO       Tuesday, September 30, 2025
KGID: 01-04-2020 ರಿಂದ 31-03-2022  ರ ವರೆಗೆ ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಅಧಿಲಾಭಾಂಶ ನೀಡುವ ಬಗ್ಗೆ.



ಕರ್ನಾಟಕ ಸರ್ಕಾರವು ಉಲ್ಲೇಖ (1) ರ ನಿರ್ದೇಶನಾಲಯದ ಪ್ರಸ್ತಾವನೆ ಮತ್ತು ವಿಮಾ ಗಣಕರ ವಿಮಾ ಮೌಲ್ಯಮಾಪನ ವರದಿಯನ್ನು ಪರಿಶೀಲಿಸಿ, ಅಂಗೀಕರಿಸಿದ ನಂತರ ದಿನಾಂಕ: 01-04-2020 ರಿಂದ 31-03-2022 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವಿಮಾ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಲಾಭಾಂಶ ಮತ್ತು 01-04-2022 00 31-03-2024 ರ ವರೆಗಿನ ಅವಧಿಯಲ್ಲಿ ವಿವಿಧ ಹಕ್ಕುಗಳ ರೂಪದಲ್ಲಿ ಹೊರ ಹೋಗಿರುವ ಪಾಲಿಸಿಗಳಿಗೆ ಮಧ್ಯಕಾಲೀನ ಅವಧಿಗೆ ಲಾಭಾಂಶವನ್ನು ಉಲ್ಲೇಖ (2) ರ ಆದೇಶದಲ್ಲಿ ಘೋಷಿಸಿ, ಮಂಜೂರು ಮಾಡಲಾಗಿದ್ದು, ವಿವರವನ್ನು ಈ ಕೆಳಕಂಡಂತೆ ನೀಡಲಾಗಿದೆ.

1) ದಿನಾಂಕ: 01-04-2020 00 31-03-2022 ರ ದ್ವೈವಾರ್ಷಿಕ ಮೌಲ್ಯಮಾಪನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ಹಾಗೂ ಚಾಲ್ತಿಯಲ್ಲಿದ್ದ ಪ್ರತಿ ತಿಂಗಳ ಅವಧಿಯನ್ನು ಒಳಗೊಂಡಂತೆ ಪಾಲಿಸಿಗಳ ಸ್ಥಿರಪಡಿಸಿದ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಸರಳ ಪ್ರತ್ಯಾವರ್ತಿ ಲಾಭಾಂಶವನ್ನು (Simple Reversionary Bonus) ನೀಡುವುದು;

2) ಅವಧಿಪೂರ್ಣ, ಮರಣಜನ್ಯ ಮತ್ತು ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ 01-04-2022 ರಿಂದ 31-03-2024 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80-00 ರಂತೆ ಮಧ್ಯಕಾಲೀನ ಅವಧಿಗೆ ಲಾಭಾಂಶವನ್ನು (Interim period Bonus) ನೀಡುವುದು;

3) ಮೇಲ್ಕಂಡ ಆದೇಶ ಹಾಗೂ ದರಗಳನ್ನಯ ಇಲಾಖೆಯ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳು ಅರ್ಹ ವಿಮಾದಾರರಿಗೆ ಸರಳ ಪ್ರತ್ಯಾವರ್ತಿ ಲಾಭಾಂಶ ಪಾವತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅಗತ್ಯವಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡು, ಪಾವತಿ ಸಂದರ್ಭದಲ್ಲಿ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಈ ಮೂಲಕ ತಿಳಿಯಪಡಿಸಿದೆ.

1) 01-04-2020 ರಿಂದ 31-03-2022 3 ದೈವಾರ್ಷಿಕ ಅವಧಿಯದ್ದಾಗಿದ್ದು, ವಿಮಾದಾರರ ಜನ್ಮ ದಿನಾಂಕವು 01-04-1967 ರ ನಂತರ ಆಗಿದ್ದು, ಹಕ್ಕು ಪ್ರಕರಣವು 31-03-2022 ರ ನಂತರ ಇತ್ಯರ್ಥಗೊಂಡಿದ್ದಲ್ಲಿ ಮಾತ್ರ ಅಂತಹವರು ಪ್ರಸ್ತುತ ಲಾಭಾಂಶ ಮೊತ್ತವನ್ನು ಪಾವತಿ ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೂ ಹಿಂದಿನ ಅವಧಿಗೆ ಈಗಾಗಲೇ ಲಾಭಾಂಶ ಪಾವತಿಸಲಾಗಿರುತ್ತದೆ.

2) ದಿನಾಂಕ: 01-04-2024 ರ ನಂತರ ಉದ್ಭವಗೊಂಡ ಹಕ್ಕು ಪ್ರಕರಣಗಳಿಗೆ ಮುಂದೆ ಲಾಭಾಂಶ ನೀಡಬೇಕಾಗಿರುವುದರಿಂದ ಇಂತಹ ಪ್ರಕರಣಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಟ್ಟುಕೊಳ್ಳತಕ್ಕದ್ದು.

3) ಲಾಭಾಂಶ ನೀಡುವಾಗ ಯಾವುದೇ ರೀತಿಯ ತಪ್ಪಿನಿಂದಾಗಿ ಹಕ್ಕುದಾರರಿಗೆ ಹೆಚ್ಚುವರಿ ಪಾವತಿ ಆಗದಂತೆ ಎಲ್ಲ ಬಗೆಯ ಎಚ್ಚರವನ್ನು ವಹಿಸತಕ್ಕದ್ದು. ಫಲಪ್ರದ ಹಕ್ಕು ಇತ್ಯರ್ಥದ ಸಂದರ್ಭದಲ್ಲಿ ರದ್ದುಗೊಂಡ ಪಾಲಿಸಿಗಳ ಬಗ್ಗೆ ತೀವು ನಿಗಾ ವಹಿಸಿ ಅಂತಹ ಪಾಲಿಸಿಗಳ ವಿಮಾಮೊತ್ತಕ್ಕೆ ಲಾಭಾಂಶ ಗಣನೆಯಾಗದಂತೆ ನೋಡಿಕೊಳ್ಳತಕ್ಕದ್ದು. ತಪ್ಪಿದಲ್ಲಿ ಅಂತಹ ಪಾವತಿಗಳಿಗೆ ಸಂಬಂಧಪಟ್ಟ ವಿಷಯ ನಿರ್ವಾಹಕರು / ಅಧೀಕ್ಷಕರು / ಜಿಲ್ಲಾ ವಿಮಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಆದ್ದರಿಂದ ಪ್ರತಿಯೊಂದು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸತಕ್ಕದ್ದು.

4) ಹಕ್ಕು ಇತ್ಯರ್ಥಗೊಂಡ ಪ್ರಕರಣಗಳಿಗೆ ಪ್ರಸ್ತುತದ ಲಾಭಾಂಶ ನೀಡುವ ಮುನ್ನ ಅಂತಹ ಕಡತಗಳು ಆಂತರಿಕ ತಪಾಸಣೆ (Audit) ಮಾಡಲ್ಪಟ್ಟಿದೆ ಎಂಬುದನ್ನು ಖಾತರಿಪಡಿಸಿಕೊಂಡು, ಲೆಕ್ಕ ತಪಾಸಣೆಯಲ್ಲಿ ಸೂಚಿಸಿರುವಂತೆ ಹೆಚ್ಚುವರಿ ಪಾವತಿಗಳನ್ನು ಲಾಭಾಂಶ ಪಾವತಿ ಮೊತ್ತದಲ್ಲಿ ಕಟಾವಣೆ ಮಾಡಿ ಸರಿಪಡಿಸಿಕೊಳ್ಳತಕ್ಕದ್ದು.

5) ದಿನಾಂಕ 01-04-2020 ಮತ್ತು ನಂತರದ ಹೊಣೆಯ ದಿನಾಂಕ ಹೊಂದಿದ ಪಾಲಿಸಿಗಳು ದಿನಾಂಕ 31-03-2022 ರ ಒಳಗಾಗಿ ಮರಣಜನ್ಯ ಅಥವಾ ವಿಮಾ ತ್ಯಾಗ ಮೌಲ್ಯ ಹಕ್ಕಿನ ರೂಪದಲ್ಲಿ ಇತ್ಯರ್ಥಗೊಂಡಿದ್ದಲ್ಲಿ ಸದರಿ ಪಾಲಿಸಿಗಳು ಎರಡು ಮೌಲ್ಯ ಮಾಪನ ಅವಧಿಯ ನಡುವೆ ಚಾಲ್ತಿಯಲ್ಲಿರದ ಕಾರಣ (Non-participation in inter-valuation period) ಅಂತಹ ಪಾಲಿಸಿಗಳಿಗೆ ನಿಯಮಾನುಸಾರ ಯಾವುದೇ ಲಾಭಾಂಶ ಪಾವತಿಸಲು ಅವಕಾಶವಿಲ್ಲವಾದ್ದರಿಂದ, ಜಿಲ್ಲಾ ವಿಮಾಧಿಕಾರಿಗಳು ಜಾಗರೂಕತೆಯಿಂದ ಪರಿಶೀಲಿಸಿ, ಇಂತಹ ಪ್ರಕರಣಗಳಿಗೆ ಲಾಭಾಂಶ ಪಾವತಿ ಮಾಡಬಾರದು.

6) ದಿನಾಂಕ 01-04-2020 ಮತ್ತು ನಂತರದ ಹೊಣೆಯ ದಿನಾಂಕ ಹೊಂದಿದ ಪಾಲಿಸಿಗಳು ದಿನಾಂಕ 31-03-2022 ರ ನಂತರ ಮರಣಜನ್ಯ ಅಥವಾ ವಿಮಾ ತ್ಯಾಗ ಮೌಲ್ಯ ಹಕ್ಕಿನ ರೂಪದಲ್ಲಿ ಇತ್ಯರ್ಥಗೊಂಡಿದ್ದಲ್ಲಿ ಸದರಿ ಪಾಲಿಸಿಗಳು ಎರಡು ಮೌಲ್ಯ ಮಾಪನ ಅವಧಿಯ ನಡುವೆ ಚಾಲ್ತಿಯಲ್ಲಿರುವುದರಿಂದ (Participated in valuation period) ಅಂತಹ ಪಾಲಿಸಿಗಳು 2020-22 ನೇ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ತಿಂಗಳುಗಳಿಗೆ ಮಾತ್ರ ಲಾಭಾಂಶ ಲಭ್ಯವಾಗುವ ಕಾರಣ ಇಂತಹ ಪ್ರಕರಣಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ ಲಭ್ಯವಿರುವ ಅವಧಿಗೆ ಮಾತ್ರ ಮಧ್ಯಕಾಲೀನ ಅವಧಿಗೆ ಲಾಭಾಂಶವನ್ನು ಪಾವತಿಸತಕ್ಕದ್ದು.

7) ಆನ್‌ಲೈನ್ ನಲ್ಲಿ ಇತ್ಯರ್ಥಗೊಂಡ ಫಲಪ್ರದ ಪಾಲಿಸಿಗಳ ನಿವ್ವಳ ಮೊತ್ತವು ಋಣಾತ್ಮಕವಾಗಿ ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಸರಿಯಾಗಿ ಪರಿಶೀಲಿಸಿ, ಪ್ರಸ್ತುತ ಲಾಭಾಂಶ ಲೆಕ್ಕಾಚಾರದಿಂದ ಋಣಾತ್ಮಕ ಮೊತ್ತವನ್ನು ಕಡಿತಗೊಳಿಸಿದ ನಂತರ ಲಾಭಾಂಶ ಮೊತ್ತವನ್ನು ಪಾವತಿಸತಕ್ಕದ್ದು.

8) ಆಡಿಟ್ ಆಗಿಲ್ಲದ ಕಡತಗಳಿಗೆ ಲಾಭಾಂಶ ನೀಡಬೇಕಾದ ಅನಿವಾರ್ಯ ಸಂದರ್ಭಬಂದಲ್ಲಿ ಅಂತಹ ಕಡತಗಳನ್ನು ಜಿಲ್ಲಾ ವಿಮಾಧಿಕಾರಿಗಳು ಮತ್ತು ಅಧೀಕ್ಷಕರು ಪೂರ್ಣವಾಗಿ ಪುನರಾವಲೋಕನ ಮಾಡಿ (review) ದೃಢೀಕರಣ ಸಹಿ ಮಾಡಿದ ನಂತರವೇ ಪಾವತಿಸತಕ್ಕದ್ದು.

9) ಲಾಭಾಂಶ ಪಾವತಿಯನ್ನು ಹಕ್ಕು ಪ್ರಕರಣಗಳ ಉದ್ಭವದ ತಿಂಗಳಿನ ಕ್ರಮಾನುಗತ ಹಾಗೂ ಈ ಕೆಳಗೆ ನಮೂದಿಸಿರುವ ಪ್ರಕರಣದ ವಿಧದ ಸರದಿಯಲ್ಲಿ ವ್ಯತ್ಯಾಸವಾಗದಂತೆ, 04-2022 ರ ಉದ್ಭವ ತಿಂಗಳಿನಿಂದ ಆರಂಭಿಸಿ, ಆನ್‌ಲೈನ್‌ನಲ್ಲಿ ಇತ್ಯರ್ಥಪಡಿಸುವುದು. ತಾಂತ್ರಿಕೇತರ ಅಥವಾ ಇತರೆ ಕಾರಣಗಳಿಂದಾಗಿ ಹಳೆಯ ಲಾಭಾಂಶ ಪಾವತಿಯ ಪ್ರಕರಣಗಳು ಬಾಕಿ ಇದ್ದಲ್ಲಿ ಅಂತಹ ಪ್ರಕರಣಗಳನ್ನು ಪ್ರತ್ಯೇಕಿಸಿ, ಸಕಾರಣಗಳೊಂದಿಗೆ ಪಟ್ಟಿ ತಯಾರಿಸಿ, ಕೇಂದ್ರ ಕಛೇರಿಯಿಂದ ಅನುಮತಿ ಪಡೆದ ನಂತರ ಇತ್ಯರ್ಥಗೊಳಿಸುವಂತೆ ಸೂಚಿಸಲಾಗಿದೆ.

▪️ಫಲಪ್ರದ
▪️ಮರಣಜನ್ಮ
▪️ವಿಮಾ ತ್ಯಾಗ ಮೌಲ್ಯ

10) ಲಾಭಾಂಶ ವಿಲೇವಾರಿ ಸಂದರ್ಭದಲ್ಲಿ ಯಾವುದೇ ಅಧಿಕಾರಿ / ನೌಕರರು ರಜೆಯನ್ನು ಪಡೆಯಲು ಇಚ್ಚಿಸಿದಲ್ಲಿ ಸಂಬಂಧಪಟ್ಟ ವಿಭಾಗದ ಉಪನಿರ್ದೇಶಕರ ಪೂರ್ವಾನುಮತಿ ಪಡೆದ ನಂತರವೇ ರಜೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು.

ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ, ಲಾಭಾಂಶ ಪಾವತಿ ಕಾರ್ಯವನ್ನು ಈ ಕೂಡಲೇ ಪ್ರಾರಂಭಿಸಿ ಆನ್‌ಲೈನ್‌ನಲ್ಲಿಯೇ ನಿರ್ವಹಿಸಿ ಒಂದು ತಿಂಗಳೊಳಗಾಗಿ ಮುಕ್ತಾಯಗೊಳಿಸತಕ್ಕದ್ದು ಎಂದು ಈ ಮೂಲಕ ಸೂಚಿಸಲಾಗಿದೆ.


logoblog

Thanks for reading KGID: 01-04-2020 ರಿಂದ 31-03-2022 ರ ವರೆಗೆ ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಅಧಿಲಾಭಾಂಶ ನೀಡುವ ಬಗ್ಗೆ.

Newest
You are reading the newest post