Tuesday, September 16, 2025

KIND ATTENTION TAXPAYERS!: ಐಟಿಆರ್ ಸಲ್ಲಿಕೆ ಅವಧಿ 1 ದಿನ ವಿಸ್ತರಣೆ

  ISARESOURCEINFO       Tuesday, September 16, 2025
KIND ATTENTION TAXPAYERS!: ಐಟಿಆರ್ ಸಲ್ಲಿಕೆ ಅವಧಿ 1 ದಿನ ವಿಸ್ತರಣೆ

The due date for filing of Income Tax Returns (ITRs) for AY 2025-26, originally due on 31st July 2025, was extended to 15th September 2025.

The Central Board of Direct Taxes has decided to further extend the due date for filing these ITRs for AY 2025-26 from 15th September, 2025 to 16th September, 2025.

To enable changes in the utilities, the e- filing portal will remain in maintenance mode from 12:00 AM  to 02:30AM on 16th September 2025.
ಪೋರ್ಟಲ್‌ನಲ್ಲಿ ತೊಂದರೆಗಳು

ಎದುರಾಗಿರುವುದರಿಂದ ಗಡುವನ್ನು ವಿಸ್ತರಿಸುವಂತೆ ನೆಟಿಜನ್‌ಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯ ಅವಧಿಯನ್ನು ಕೇಂದ್ರ ಸರ್ಕಾರ 1 ದಿನದ ಮಟ್ಟಿಗೆ ವಿಸ್ತರಿಸಿ ಸೋಮವಾರ ಮಧ್ಯರಾತ್ರಿ ಆದೇಶ ಹೊರಡಿಸಿದೆ.

ಸೋಮವಾರ ಮಧ್ಯರಾತ್ರಿಯವರೆಗೆ ಗಡುವು ನಿಗದಿಪಡಿಸಲಾಗಿತ್ತು. ಈಗ ಹೊಸ ಆದೇಶದ ಪ್ರಕಾರ, ಮಂಗಳವಾರ ಮಧ್ಯರಾತ್ರಿವರೆಗೆ ಐಟಿಆರ್ ಸಲ್ಲಿಕೆಗೆ ಅವಕಾಶ ಸಿಗಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಮಧ್ಯೆ, ಸೋಮವಾರ ಸಂಜೆಯವರೆಗೆ 7 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾಗಿವೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೆರಿಗೆ ಪಾವತಿ ಮತ್ತು ಆ್ಯನುವಲ್‌ ಇನ್‌ಫಾರ್ಮೇಶನ್ ಸ್ಟೇಟ್‌ಮೆಂಟ್ (ಎಐಎಸ್- ವಾರ್ಷಿಕ ಮಾಹಿತಿ ಹೇಳಿಕೆ) ಡೌನ್‌ಲೋಡ್ ಮಾಡುವಾಗ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತೊಂದರೆಗಳು ಕಂಡುಬಂದಿವೆ ಎಂದು ಹಲವಾರು ಚಾರ್ಟಡ್್ರ ಅಕೌಂಟೆಂಟ್‌ಗಳು ಮತ್ತು ವ್ಯಕ್ತಿಗಳು ಹೇಳಿದ್ದರು. ಸೋಮವಾರವೂ ಇ-ಫೈಲಿಂಗ್ ಪೋರ್ಟಲ್ ಗೆ ಲಾಗಿನ್ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿದ್ದರು.

ಇದಕ್ಕೆ ಉತ್ತರಿಸಿದ್ದ ಇಲಾಖೆ, ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಫೈಲ್ ಮಂಗಳವಾರ ಕೊನೇ ದಿನ

▪️1 ಪೋರ್ಟಲ್‌ನಲ್ಲಿ ತೊಂದರೆ
▪️ನೆಟಿಜನ್‌ಗಳ ದೂರು
▪️7 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆ

ಮಾಡುವವರು ತಮ್ಮ ಕಂಪ್ಯೂಟರ್‌ನ ಕ್ಯಾಚ್ ಕ್ಲಿಯರ್ ಮಾಡಬೇಕು ಇಲ್ಲವೆ ಬೇರೆ ಕಂಪ್ಯೂಟರ್ ಮೂಲಕ ಫೈಲ್ ಮಾಡಬೇಕು. ಐಎಸ್, ಟಿಐಎಸ್ ಸೌಲಭ್ಯವೂ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಗಡುವು ವಿಸ್ತರಣೆಯಾಗಿದೆ ಎಂಬುದಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸುತ್ತಿದ್ದು ಇದನ್ನು ನಂಬಬಾರದು. ಅಧಿಕೃತವಾಗಿ ಪ್ರಕಟಿಸುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದೂ ಸೋಮವಾರ ಮಧ್ಯಾಹ್ನ ಇಲಾಖೆ ಹೇಳಿತ್ತು. ಆದರೆ ಮಧ್ಯರಾತ್ರಿ ವೇಳೆಗೆ, ಒಂದು ದಿನ ಗಡುವು ವಿಸ್ತರಿಸಿದೆ.

Press Release issued:

logoblog

Thanks for reading KIND ATTENTION TAXPAYERS!: ಐಟಿಆರ್ ಸಲ್ಲಿಕೆ ಅವಧಿ 1 ದಿನ ವಿಸ್ತರಣೆ

Previous
« Prev Post