ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿ ಫಾರ್ ಟ್ರೈಬಲ್ ಸ್ಟುಡೆಂಟ್ಸ್ (ಎನ್‌ಇಎಸ್‌ಟಿಎಸ್) ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಂಶುಪಾಲರು, ಸ್ನಾತಕೋತ್ತರ ಶಿಕ್ಷಕರು, ಪದವೀಧರ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಸ್ಟಾಫ್ ನರ್ಸ್, ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಮತ್ತು ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಇಎಂಆರ್ ಎಸ್ ಸ್ಟಾಫ್ ಸೆಲೆಕ್ಷನ್ ಎಕ್ಸಾಂ ನಡೆಸಲಾಗುತ್ತಿದೆ. ವಿವಿಧ ಹುದ್ದೆಗಳಿಗೆ ಬಹುಹಂತದ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದೇಶದಲ್ಲಿ ಒಟ್ಟಾರೆ 708 ಏಕಲವ್ಯ ಮಾದರಿ ಶಾಲೆಗಳಿದ್ದು, ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು.
ಹುದ್ದೆಗಳ ವಿವರ:
▪️ಪ್ರಾಂಶುಪಾಲ: 225
▪️ಸ್ನಾತಕೋತ್ತರ ಶಿಕ್ಷಕ: 1460
▪️ಪದವೀಧರ ಶಿಕ್ಷಕ: 3962
▪️ಅಕೌಂಟೆಂಟ್: 61
▪️ಸ್ಟಾಫ್ ನರ್ಸ್: 550
▪️ಹಾಸ್ಟೆಲ್ ವಾರ್ಡನ್:346
▪️ಹಾಸ್ಟೆಲ್ ವಾರ್ಡನ್ (ಮಹಿಳೆ):289
▪️ಜೂ.ಸೆಕ್ರೆಟರಿ ಅಸಿಸ್ಟೆಂಟ್: 228
▪️ಲ್ಯಾಬ್ ಅಟೆಂಡೆಂಟ್: 146
▪️ಮಹಿಳೆಯರಿಗೆ ಆದ್ಯತೆ:
ಶಿಕ್ಷಕ ಹುದ್ದೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಯಿಲ್ಲ. ಆದರೆ, ಆಯಾ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಶೇ.20 ಹಾಗೂ ಗರಿಷ್ಠ ಶೇ.60 ರವರೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.!
▪️ಅರ್ಜಿ ಶುಲ್ಕ:
ಮಹಿಳೆಯರು, ಎಸ್‌ಟಿ, ಎಸ್‌ಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳು 500 ರೂ. ಸಂಸ್ಕರಣಾ ಶುಲ್ಕ ಮಾತ್ರ ಪಾವತಿಸಬೇಕಿದೆ. ಉಳಿದ ವರ್ಗದವರು ಪ್ರಾಂಶುಪಾಲ ಹುದ್ದೆಗೆ 2,500, ಶಿಕ್ಷಕ ಹುದ್ದೆಗಳಿಗೆ 2,000 ರೂ. ಹಾಗೂ ಬೋಧಕೇತರ ಹುದ್ದೆಗಳಿಗೆ 1,500 ರೂ. ಶುಲ್ಕ ಪಾವತಿಸಬೇಕಿದೆ.
▪️ಗರಿಷ್ಠ ವಯೋಮಿತಿ:
▪️ಪ್ರಾಂಶುಪಾಲ ಹುದ್ದೆ- 50 ವರ್ಷ,
▪️ಸ್ನಾತಕೋತ್ತರ ಶಿಕ್ಷಕರು- 40 ವರ್ಷ
▪️ಪದವೀಧರ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಸ್ಟಾಫ್ ನರ್ಸ್- 35 ವರ್ಷ
▪️ಅಕೌಂಟೆಂಟ್ಸ್ ಹಾಗೂ ಲ್ಯಾಬ್ ಅಟೆಂಡೆಂಟ್ಸ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳಿಗೆ 30 ವರ್ಷ ನಿಗದಿ ಪಡಿಸಲಾಗಿದೆ.
▪️ಉಳಿದಂತೆ ಆಯಾ ಮೀಸಲಾತಿಯನ್ವಯ ವಯೋ ಸಡಿಲಿಕೆ ಅನ್ವಯವಾಗಲಿದೆ.
▪️ಆಯ್ಕೆ ಪ್ರಕ್ರಿಯೆ:
ಆಯಾ ಹುದ್ದೆಗೆ ತಕ್ಕಂತೆ ಆಯ್ಕೆ ಪ್ರಕ್ರಿಯೆ ಇರಲಿದೆ. ಪ್ರಾಂಶುಪಾಲ ಹುದ್ದೆಗೆ ಎರಡು ಹಂತದ ಪರೀಕ್ಷೆ ಹಾಗೂ ಸಂದರ್ಶನವಿದೆ. ಉಳಿದ ಹುದ್ದೆಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಅಕೌಂಟೆಂಟ್ ಹಾಗೂ ಅಸಿಸ್ಟೆಂಟ್ ಹುದ್ದೆಗಳಿಗೆ ಕೌಶಲ ಪರೀಕ್ಷೆ (ಟೈಪಿಂಗ್) ಇರಲಿದೆ.
▪️ವೇತನ ಶ್ರೇಣಿ ವಿವರ:
1. ಪ್ರಾಂಶುಪಾಲ: ₹ 78,800-2,09,200
2. ಸ್ನಾತಕೋತ್ತರ ಶಿಕ್ಷಕ: ₹47,600-1,51,100
3. ಪದವೀಧರ ಶಿಕ್ಷಕ:₹44,900-1,42,400
4. ಲೈಬ್ರರಿಯನ್: ₹44,900-1,42,400
5. ಅಕೌಂಟೆಂಟ್ : ₹35,400-1,12,400
6.ಸ್ಟಾಫ್ ನರ್ಸ್ : ₹ 29,200-92,300
7. ಹಾಸ್ಟೆಲ್ ವಾರ್ಡನ್: ₹29,200-92,300
8. ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್: ₹19,900- 63,200,
9.ಲ್ಯಾಬ್ ಅಟೆಂಡೆಂಟ್ : ₹8000-56,900
ಶೈಕ್ಷಣಿಕ ಅರ್ಹತೆ:
▪️ಪ್ರಾಂಶುಪಾಲರ ಹುದ್ದೆಗೆ ಸ್ನಾತಕೋತ್ತರ ಪದವೀಧರರಾಗಿದ್ದು, ಬಿ.ಇಡಿ ಪೂರ್ಣಗೊಳಿಸಿರಬೇಕು.
▪️ಸ್ನಾತಕೋತ್ತರ ಶಿಕ್ಷಕ ಹುದ್ದೆಗೆ ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ, ಪದವೀಧರ ಶಿಕ್ಷಕ ಹುದ್ದೆಗೆ ಪದವಿಯೊಂದಿಗೆ ಬಿ.ಇಡಿ ಗಳಿಸಿರಬೇಕು.
▪️ಸ್ಟಾಫ್ ನರ್ಸ್ ಹುದ್ದೆಯವರು ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡಿರಬೇಕು.
▪️ಅಕೌಂಟೆಂಟ್ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
▪️ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಹುದ್ದೆಗಳಿಗೆ 12ನೇ ತರಗತಿ ಪಾಸಾಗಿರತಕ್ಕದ್ದು.
▪️ಲ್ಯಾಬ್ ಅಸಿಸ್ಟೆಂಟ್‌ಗಳು ಎಸ್‌ಎಸ್ ಎಲ್‌ಸಿ ಬಳಿಕ ಲ್ಯಾಬ್ ಟೆಕ್ನಿಕ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು.
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅವಕಾಶ:
ನವೋದಯ ವಿದ್ಯಾಲಯಗಳ ಮಾದರಿಯಲ್ಲಿಯೇ 6ರಿಂದ 12ನೇ ತರಗತಿಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಬ್ಲಾಕ್ ಹಂತದಲ್ಲಿ ಸ್ಥಾಪಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಊಟದ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
▪️ಮಹತ್ವದ ದಿನಾಂಕಗಳು:
▪️ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-09-2025
▪️ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-10-2025
▪️ಮಹತ್ವದ ಲಿಂಕ್ ಗಳು:
▪️ಅಧಿಸೂಚನೆ ಡೌನ್ಲೋಡ್ ಮಾಡಲು- CLICK HERE
▪️ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಲಿಂಕ್ - CLICK HERE
▪️ಮತ್ತಷ್ಟು ಮಾಹಿತಿ ವೀಕ್ಷಿಸಲು - CLICK HERE