ನಿವೃತ್ತಿ ಹೊಂದಲಿರುವ ಕೇಂದ್ರ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರಕಾರ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವ ಕೇಂದ್ರ ಸರಕಾರಿ ನೌಕರರಿಗೆ ಸರಕಾರವು ಹೊಸ ನಿಯಮಗಳನ್ನು ರೂಪಿಸಿದೆ.
ಕೇಂದ್ರ ಸರಕಾರಿ ನೌಕರರು ನಿವೃತ್ತರಾಗುತ್ತಲೇ ಅವರಿಗೆ ಪಿಎಫ್ ಮೊತ್ತ, ಪಿಂಚಣಿ ಹಣ ಜಮೆಯಾಗುವುದೂ ಸೇರಿ ಹಲವು ಸೌಲಭ್ಯಗಳನ್ನು ಕ್ಷಿಪ್ರವಾಗಿ ನೀಡುವ ದಿಸೆಯಲ್ಲಿ ಸರಕಾರ ಹೊಸ ನಿಯಮಗಳನ್ನು ರೂಪಿಸಿದೆ. ಅಷ್ಟೇ ಅಲ್ಲ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈಗಾಗಲೇ ಮಾರ್ಗಸೂಚಿಗಳನ್ನೂ ಹೊರಡಿಸಿದೆ.
ಕೆಲವೇ ದಿನಗಳಲ್ಲಿ ನಿವೃತ್ತರಾಗುವ ನೌಕರರಿಗೆ ಪೆನ್‌ನ್ ಪೇಮೆಂಟ್ ಆರ್ಡರ್ (ಪಿಪಿಒ) ನೀಡಬೇಕು.
ಅದರೊಂದಿಗೆ, ನೌಕರರು ನಿವೃತ್ತರಾಗುತ್ತಲೇ ಅವರಿಗೆ ಎಲ್ಲ ಸೌಲಭ್ಯಗಳು ಸಿಗಬೇಕು. ಇನ್ನು, ನಿವೃತ್ತರಾಗುವ ನೌಕರರ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಕಡ್ಡಾಯವಾಗಿ ಸಂಗ್ರಹಿಸಬೇಕು.
ಇ-ಎಚ್‌ಆರ್‌ಎಂಎಸ್‌ನಲ್ಲಿ ನೌಕರರ ಸಕಲ ಮಾಹಿತಿ ಸಿಗುವಂತಿರಬೇಕು. ಪ್ರತಿ ಇಲಾಖೆಯಲ್ಲೂ ಒಬ್ಬ ಪೆನ್ಸನ್ ಮಿತ್ರ ಅಥವಾ ವೆಲ್‌ಫೇರ್ ಆಫೀಸರ್ ಇರಬೇಕು. ಇದರ ಜತೆಗೆ, ಎಲ್ಲ ಇಲಾಖೆಗಳು ಕೂಡ ಭವಿಷ್ಯ ಪೋರ್ಟಲ್ ಅನ್ನು ಕಡ್ಡಾಯವಾಗಿ ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.