2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025) ಯು ದಿನಾಂಕ:07/12/2025 ರಂದು ರಾಜ್ಯಾದ್ಯಂತ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ https://schooleducation.karnataka.gov.in ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಅಧಿಸೂಚನೆ ಮತ್ತು ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ತಪ್ಪದೇ ಓದಿ ಅರ್ಥೈಸಿಕೊಂಡು, ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:9/11/2025 ಆಗಿರುತ್ತದೆ.
ಅರ್ಹತೆ ಏನು?
ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) ನ ಪತ್ರ ಸಂಖ್ಯೆ NCTE- Reg1018/1135/2018-US (Regulation Section)-HQ Dated-04/08/2022 ರ ಆದೇಶ "as per dictionary meaning, the word "pursuing" means undergoing and/or proceeding further. Therefore, a candidate who has been admitted in any of the TTC and undergoing teacher training course (TTC) can be said to be "pursuing" such teacher training course and shall be eligible to appear in TET examination, irrespective of the fact that whether, by the last date specified for filling up the online form for TET examination he has, in fact, appeared in the examination of the concerned teacher training course and the result is awaited. "Pursuing" the requisite teacher training course is sufficient to make such a candidate eligible to appear in the TET examination. Therefore, on a fair reading of Clause 5(ii) of the NCTE guidelines, a person who has been admitted in TTC and is pursuing, he/she can appear in the TET examination". ನ ಪ್ರಕಾರ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು.
4. ಅಭ್ಯರ್ಥಿಗಳಿಗೆ ಸೂಚನೆಗಳು:
1. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2024 ಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ:23/10/2025 ರಿಂದ 09/011/2025 ರ ಒಳಗಾಗಿ ಇಲಾಖಾ ವೆಬ್ಸೈಟ್ https://schooleducation.karnataka.gov.in ಗೆ login ನಲ್ಲಿ ಅರ್ಜಿ ಸಲ್ಲಿಸುವುದು.
2. ಆನ್‌ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಪೂರ್ಣವಿವರಗಳನ್ನೊಳಗೊಂಡ ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ Print out ನ್ನು ಪಡೆದುಕೊಳ್ಳುವುದು.
3. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ, ಅವರು ಹೊಸದಾಗಿ ಸಲ್ಲಿಸುವ ಅರ್ಜಿಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕು.
5. ಆನ್‌ಲೈನ್ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮ:
1. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಸಂಪರ್ಕಿಸಿ ಅಧಿಸೂಚನೆಯಲ್ಲಿ ನೀಡಲಾಗಿರುವ ಸೂಚನೆಗಳನ್ನು ತಪ್ಪದೇ ಓದಿ, ಅರ್ಥೈಸಿಕೊಳ್ಳುವುದು.
2. 'Registration' ಆದ ನಂತರ Login' ಆಗಿ ಆನ್‌ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು.
3. User ID ಮತ್ತು Password ಅನ್ನು ಅಭ್ಯರ್ಥಿಗಳು ಇತರರಿಗೆ ಸಿಗದಂತೆ/ ಗೊತ್ತಾಗದಂತೆ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಳ್ಳತಕ್ಕದ್ದು, ಒಂದು ವೇಳೆ ತಮ್ಮ User ID ಮತ್ತು Password ಇತರೆ ಯಾರಿಗಾದರೂ ಲಭ್ಯವಾದಲ್ಲಿ ತಮ್ಮ ಹೆಸರಿನಿಂದ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ವ್ಯತ್ಯಾಸ ಮಾಡುವ ಅಥವಾ ವಿರೂಪಗೊಳಿಸುವ ಸಾಧ್ಯತೆಯಿರುತ್ತದೆ. ಇದಕ್ಕೆ ಸಿ.ಎ.ಸಿ ಜವಾಬ್ದಾರಿಯಾಗಿರುವುದಿಲ್ಲ.
4. ಅಭ್ಯರ್ಥಿಯು Passport ಅಳತೆಯ (ಎದುರು ಭಂಗಿಯಲ್ಲಿ ಇರುವಂತಹ) ಭಾವಚಿತ್ರವನ್ನು 50KB ಗೆ ಮೀರದಂತೆ ಹಾಗೂ ಕಪ್ಪು ಶಾಹಿಯಲ್ಲಿ ಮಾಡಿರುವ ಸಹಿಯನ್ನು 40KB ಗೆ ಮೀರದಂತೆ ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ಲೋಡ್ ಮಾಡುವುದು.
5. ಅಭ್ಯರ್ಥಿಯ ಭಾವಚಿತ್ರ ಹಾಗೂ ಹೆಸರು ತಾಳೆ ಆಗದಿದ್ದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
6. ಪರೀಕ್ಷೆ ಶುಲ್ಕವನ್ನು Internet Banking / Debit Card/Credit ಕಾರ್ಡ್ ಅಥವಾ ಬ್ಯಾಂಕ್ ಚಲನ್(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ) ಮೂಲಕವೇ ಪಾವತಿಸತಕ್ಕದ್ದು.
7. ಅಭ್ಯರ್ಥಿಗಳು ಒಮ್ಮೆ ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ ಮರುಪಾವತಿ ಮಾಡುವುದಿಲ್ಲ ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.
8. INTERNET /SERVER ನ ಒತ್ತಡವನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.
9. ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್ ಮೂಲಕ login ಆಗಿ ಡೌನ್‌ಲೋಡ್ ಮಾಡಿಕೊಳ್ಳುವುದು. ಅರ್ಜಿ ಶುಲ್ಕ ಪಾವತಿಯಾದ ಎರಡು ದಿನಗಳ ನಂತರದಲ್ಲೂ ಪೇಮೆಂಟ್ ಸೈಟಸ್ (Payment Status) ಪೆಂಡಿಂಗ್ ಎಂದು ಕಂಡುಬಂದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು ಸಂಪರ್ಕಿಸುವುದು.
10. ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲಾದ ತಮ್ಮ ಅನ್‌ಲೈನ್ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಯಾವುದೇ ಕಛೇರಿ ಸಂಬಂಧಿತ ಪತ್ರವ್ಯವಹಾರಕ್ಕಾಗಿ ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು.
11. ಅಭ್ಯರ್ಥಿಗಳು ಅತ್ಯಂತ ಜಾಗರುಕತೆಯಿಂದ ಆನ್‌ಲೈನ್ ಅರ್ಜಿಯನ್ನು ಭರ್ತಿಮಾಡಬೇಕು. ಅರ್ಜಿಯನ್ನು Submit ಮಾಡುವ ಮೊದಲು, ಭರ್ತಿ ಮಾಡಲಾದ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ/ ಬದಲಾವಣೆಗೆ ಅವಕಾಶ ಇರುವುದಿಲ್ಲ.
12. ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಯ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
13. ಅಭ್ಯರ್ಥಿಗಳು ಒಮ್ಮೆ ಮಾಹಿತಿ ತುಂಬಿ ಅಂತಿಮವಾಗಿ ಅರ್ಜಿ ಸಲ್ಲಿಸಿದ ಮೇಲೆ ಯಾವುದೇ ತಿದ್ದುಪಡಿಗೆ, ಹೊಸ ವಿವರಗಳನ್ನು ಅರ್ಜಿಯಲ್ಲಿ ಸೇರಿಸಲು ಅಥವಾ ತೆಗೆಯಲು(Edit ಗೆ) ಅವಕಾಶವಿರುವುದಿಲ್ಲ. ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಕೇಂದ್ರೀಕೃತ ದಾಖಲಾತಿ ಘಟಕವು ಜವಾಬ್ದಾರಿಯಾಗಿರುವುದಿಲ್ಲ.
14. KARTET-2025 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಳಕೆಯಲ್ಲಿರುವಂತಹ ತಮ್ಮ ಸ್ವಂತ ಮೊಬೈಲ್‌ನ ಸಂಪರ್ಕ ಸಂಖ್ಯೆಯನ್ನು ಹಾಗೂ ಇ-ಮೇಲ್ ವಿಳಾಸವನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸುವುದು.
15. ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಆಗಿಂದಾಗ್ಗೆ ಇಲಾಖಾ ವೆಬ್‌ಸೈಟ್ https://schooleducation.karnataka.gov.in ನ್ನು ಸಂಪರ್ಕಿಸುವುದು.