ಪಿಎಫ್ ಅನ್ನುವುದು ಉದ್ಯೋಗಿಗಳ ಪಾಲಿಗೆ ಒಂದು ಸೆಂಟಿಮೆಂಟ್. ಅದೊಂದು ಆಸರೆ. ಆದರೆ, ಹಣ ಹಿಂಪಡೆಯುವ ನಿಯಮಗಳು ಹಿಂದೆ ತುಂಬಾ ಗೊಂದಲದಿಂದ ಕೂಡಿದ್ದವು. ಹಣ ಹಿಂಪಡೆಯುವ ಪ್ರತಿ ಉದ್ದೇಶಕ್ಕೂ ಬೇರೆ ನಿಯಮ, ಬೇರೆ ಷರತ್ತುಗಳು ಇದ್ದವು. ಬೇರೆಬೇರೆ ದಾಖಲೆಗಳನ್ನು ಖಲೆಗಳನ್ನು ನೀಡಬೇಕಾಗಿತ್ತು. ಇವುಗಳೆಲ್ಲಾ ಸೇರಿ ಸಾಮಾನ್ಯ ನೌಕರರಿಗೆ ತುಂಬಾ ಕಷ್ಟವಾಗುತ್ತಿತ್ತು. ಕೆಲವು ಸಲ ಕ್ಷೇಮ್ ತಿರಸ್ಕೃತವಾಗುತ್ತಿತ್ತು. ತನ್ನ ಸದಸ್ಯರಿಗೆ ನೆರವಾಗಲು ಅನೇಕ ನಿಯಮಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್‌ಒ) ಬದಲಿಸಿದೆ. ಪರಿಷ್ಕೃತ ನಿಯಮಗಳ ಪರಿಣಾಮ, ಅನುಕೂಲವನ್ನು ಅರ್ಥ ಮಾಡಿಕೊಳ್ಳೋಣ ಬನ್ನಿ.
ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ) ಇಅನ್ನುವುದು ನಮ್ಮ ಕೆಲಸದ ದಿನಗಳಲ್ಲಿ ನಾವು ಮತ್ತು ನಮ್ಮ ಉದ್ಯೋಗದಾತರು ಹು ಉಳಿಸುವ ಒಂದು ಹಣಕಾಸಿನ ಭದ್ರತ ನಿವೃತ್ತಿ ನಂತರ ಈ ಹಣವೇ ನಮ್ಮ ಪಿಂಚಣಿ ಹಂತದ ಆಧಾರವಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ - ಉದಾಹರಣೆಗೆ ಮದುವೆ. ಮನೆ ಖರೀದಿ, ಮಕ್ಕಳ ಶಿಕ್ಷಣ ಅಥವಾ ತುರ್ತು ಅನಾರೋಗ್ಯದ ವೇಳೆ ನಾವು ಏಎಫ್ ಖಾತೆಯಿಂದ ಒಂದಿಷ್ಟು ಮೊತ್ತವನ್ನು ವಾಪಸ್ ಪಡೆಯಬಹುದು.
ಆದರೆ, ಈ ಹಣ ಹಿಂಪಡೆಯುವ ನಿಯಮಗಳು ಹಿಂದೆ ತುಂಬಾ ಗೊಂದಲದಿಂದ ಕೂಡಿದ್ದವು ಪ್ರತಿ ಉದ್ದೇಶಕ್ಕೂ ಬೇರೆ ನಿಯಮ, ಬೇರೆ ಷರತ್ತುಗಳು, ಬೇರೆ ದಾಖಲೆಗಳನ್ನು ನೀಡಬೇಕಾದ ಪರಿಸ್ಥಿತಿ ಇತ್ತು ಇವುಗಳೆಲ್ಲಾ ಸೇರಿ ಸಾಮಾನ್ಯ ನೌಕರರಿಗೆ ತುಂಬಾ ಕಷ್ಟವಾಗುತ್ತಿತ್ತು. ಹಲವರು ತಮ್ಮ ಇಪಿಎಫ್ ಹಣವನ್ನು ತೆಗೆದುಕೊಳ್ಳುವಾಗ ದಾಖಲೆ ಪತ್ರಗಳ ಸಮಸ್ಯೆಗಳಿಂದಾಗಿ ಕ್ಷೇಮ್ ತಿರಸ್ಕೃತ ಆಗುತ್ತಿದ್ದ ಸಂದರ್ಭಗಳು ಹೆಚ್ಚಾಗಿದ್ದವು. ಈ ಸಮಸ್ಯೆಗಳನ್ನು ಮನಗಂಡು, ಇಪಿಎಫ್‌ಒ(ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) 2025ರಲ್ಲಿ ಹೊಸ ವಿತ್ ಡ್ರಾ ನಿಯಮಗಳನ್ನು ಹೊರತಂದಿದೆ. ಈ ಪ್ರಕಟಣೆ ಪ್ರೆಸ್ ಇನಾರ್ಮೇಶನ್ ಬುರೊ (ಪಿಐಡಿ) ಮೂಲಕ ಹೊರಬಂದಿದ್ದು, ಇಪಿಎಫ್ ಒ ಈಗ ಹೊಸ ಬತ್ ಡ್ಯಾವಲ್ ವಕ್ರಿಯೆಯನ್ನು ಸಂಪೂರ್ಣವಾಗಿ ಸರಳಗೊಳಿಸುವ ಉದ್ದೇಶ ಹೊಂದಿದೆ.
ಈ ಹೊಸ ನಿಯಮಗಳು ಯಾವ ರೀತಿಯಲ್ಲಿ ನಿಮ್ಮ ಜೀವನವನ್ನು ಸುಲಭಗೊಳಿಸುತ್ತವೆ ಎಂಬುದನ್ನು ನಾವು ಹಂತಹಂತವಾಗಿ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ.
ಹಿಂದಿನ ಜಟಿಲ ವ್ಯವಸ್ಥೆಯಿಂದ ಸರಳ 3 ವಿಭಾಗಗಳ ಕಡೆಗೆ
ಮೊದಲು, ಇಪಿಎಫ್‌ನಲ್ಲಿ 13 ವಿಭಿನ್ನ ಹಣ ತೆಗೆಯುವ ಆಯ್ಕೆಗಳು ಇದ್ದು, ಉದಾಹರಣೆಗೆ - ಮದುವೆ, ಶಿಕ್ಷಣ, ಮನೆ ಖರೀದಿ, ಪ್ರಕೃತಿ ವಿಕೋಪ, ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ಯಾದಿ ಪ್ರತಿ ಉದ್ದೇಶಕ್ಕೂ ಬೇರೆ ನಿಯಮ, ಬೇರೆ ಡಾಕ್ಯುಮೆಂಟ್ ಇತ್ತು. ಇದುಂದ ಸದಸ್ಯರಿಗೆ ಯಾವ ಫಾರ್ಮ್ ಹಾಕಬೇಕು. ಯಾವ ಪ್ರಮಾಣ ಪತ್ರ ಕೊಡಬೇಕು ಅನ್ನೋದು ತುಂಬಾ ಕಷ್ಟವಾಗುತ್ತಿತ್ತು.ಕೆಲವೊಮ್ಮೆ ಕ್ಲೇಮ್ ರಿಜೆಕ್ಟ್ ಆಗುತ್ತಿತ್ತು.
ಹೊಸ ನಿಯಮವು ಈ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಿದೆ. ಎಲ್ಲ 13 ನಿಯಮಗಳನ್ನು ಕೇವಲ 3 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. Essential Needs (ಅವಶ್ಯಕ ಅಗತ್ಯಗಳು): ಶಿಕ್ಷಣ, ಮದುವೆ, ಆರೋಗ್ಯ
2. Housing Needs (ಮನೆ ಸಂಬಂಧಿತ ಅಗತ್ಯಗಳು): ಮನೆ ಖರೀದಿ ನಿರ್ಮಾಣ ಅಥವಾ ಸಾಲ ತೀರಿಸುವುದು.
3. Special Circumstances ( ವಿಶೇಷ ಪರಿಸ್ಥಿತಿಗಳು):
ಉದ್ಯೋಗ ಕಳೆದುಕೊಳ್ಳುವುದು, ಪ್ರಕೃತಿ ವಿಕೋಪ, ಲಾಕ್ ಔಟ್, ಪ್ಯಾಂಡಮಿಕ್ ಅಥವಾ ಬೇರೆ ಆರ್ಥಿಕ ತುರ್ತು ಸ್ಥಿತಿಗಳು.
ಈಗ ನೀವು ಯಾವ ಕಾರಣಕ್ಕೆ ಹಣ ಬೇಕೆಂದು ನಿಖರವಾಗಿ ಆಯ್ಕೆ ಮಾಡಬಹುದು. ಬೇರೆಬೇರೆ ನಿಯಮಗಳನ್ನು ಹುಡುಕುವ ಅಗತ್ಯವಿಲ್ಲ.
ಉದಾಹರಣೆ: ಹಳೆಯ ನಿಯಮದಂತೆ ನೀವು ನಿಮ್ಮ ಮಗಳ ಮದುವೆಗೆ ಹಣ ತೆಗೆಯಬೇಕೆಂದರೆ, 'marriage ceremony" ಎಂಬ ಪ್ರತ್ಯೇಕ ಫಾರ್ಮ್ ತುಂಬಿ ಮದುವೆ ಆಮಂತ್ರಣ ಪತ್ರ ಅಥವಾ ಬಿಲ್ ಹಾಕಬೇಕಿತ್ತು. ಆದರೆ ಈಗ ನೀವು ಕೇವಲ "Essential Needs" ಆಯ್ಕೆಮಾಡಿ, ಆನ್ ಲೈನ್ ಕ್ಲೈಮ್ ಹಾಕಬಹುದು. ಯಾವ ಕಾಗದ ಪತ್ರದ ತೊಂದರೆಯೂ ಇಲ್ಲ,
ಈಗ ನಿಮ ಖಾತೆಯ ಎಲ್ಲ ಹಣ ಹಿಂಪಡೆಯಬಹುದಾ?
ಹಿಂದಿನ ನಿಯಮದಲ್ಲಿ ವಿತ್ ಡ್ರಾಗೆ ಅನುಮತಿ ನೀಡಿದ್ದರೂ, ಅದು ಕೇವಲ employee contribution ನಿಂದ (ನಿಮ್ಮ ಕೊಡುಗೆ) ಮಾತ್ರ ಸಾಧ್ಯವಾಗುತ್ತಿತ್ತು. ಅಂದರೆ, ನೀವು ಹಾಗೂ ಕಂಪನಿ ಇಬ್ಬರೂ ಪಿಎಫ್ ಹಣ ಹಾಕುತ್ತಿದ್ದರೂ, ಹಿಂಪಡೆಯುವಾಗ ಕಂಪನಿ ಕೊಟ್ಟ ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಇರಲಿಲ್ಲ.
ಆದರೆ, ಹೊಸ ನಿಯಮದ ಪ್ರಕಾರ, ಈಗ ನೀವು ನಿಮ್ಮ eligible balance ನ 100%, ಅಂದರೆ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರ ಕೊಡುಗೆಯನ್ನು ಸೇರಿದ ಆ ಮೊತ್ತವನ್ನು ವಿತ್ ಡ್ರಾ ಮಾಡಬಹುದು, ಇದರಿಂದ ನಿಜವಾದ ಅರ್ಥದಲ್ಲಿ ನೀವು ನಿಮ್ಮ ಸಂಪೂರ್ಣ ಹಕ್ಕಿನ ಹಣವನ್ನು ಬಳಸಿಕೊಳ್ಳಬಹುದು.
ಗಮನವಿರಲಿ - ಬಹುತೇಕ ಇಪಿಎಫ್ ಸದಸ್ಯರು ಈ ಈಗ ಹೊಸ ನಿಯಮಗಳ ನಂತರ ಗೊಂದಲದಲ್ಲಿದ್ದಾರೆ. ಈಗ ನಾವು ನಮ್ಮ ಸಂಪೂರ್ಣ ಪಿಎಫ್ ಬ್ಯಾಲೆನ್ಸ್ ಅನ್ನು (100%) ತೆಗೆಯಬಹುದು ಎಂದು ಭಾವಿಸುತ್ತಿದ್ದಾರೆ. ಆದರೆ, ಇದು ಸಂಪೂರ್ಣವಾಗಿ ಸರಿಯಲ್ಲ
ಹೊಸ ನಿಯಮದಲ್ಲಿ ನೌಕರ ಮತ್ತು ಉದ್ಯೋಗದಾತ ಇಬ್ಬರ ಕೊಡುಗೆಯ ಮೊತ್ತವನ್ನೂ ತೆಗೆಯಲು ಅನುಮತಿ ನೀಡಲಾಗಿದೆ. ಆದರೆ ಅದರ ಜೊತೆಗೆ ಒಂದು ಹೊಸ ಷರತ್ತು ಕೂಡ ಸೇರಿಸಲಾಗಿದೆ. ಆದರ ಪ್ರಕಾರ, ನೀವು ಪಿಎಫ್ ನಿಂದ ಹಣ ತೆಗೆಯುವಾಗ ಕನಿಷ್ಠ 25% ಬ್ಯಾಲೆನ್ಸ್ ಅನ್ನು ಪಿಎಫ್ ಖಾತೆಯಲ್ಲಿ ಉಳಿಸಬೇಕು. ಅಂದರೆ, ನೀವು ನಿಮ್ಮ ಸಂಪೂರ್ಣ ಹಣ 100% ಅನ್ನು ತೆಗೆಯಲು ಸಾಧ್ಯವಿಲ್ಲ, ವಾಸ್ತವವಾಗಿ, ನೀವು ಗರಿಷ್ಠ 75% ತನಕ ಮಾತ್ರ ತೆಗೆಯಲು ಆರ್ಹರಾಗಿರುತ್ತೀರಿ.
ಉದಾಹರಣೆ: ನಿಮ್ಮ ಪಿಎಫ್ ಖಾತೆಯಲ್ಲಿ ಒಟ್ಟು 8 ಲಕ್ಷ ರೂ. ಇದ್ದರೆ, ನೀವು ಆದರ 6 ಲಕ್ಷ ರೂ. (ಅಂದರೆ 75%) ತನಕ ಮಾತ್ರ ವಿತ್ ಡ್ರಾ ಮಾಡಬಹುದು. ಉಳಿದ 2 ಲಕ್ಷ ರೂ.ಗಳನ್ನು ಖಾತೆಯಲ್ಲಿ ಉಳಿಸಬೇಕು. ಅದು ಮುಂದುವರಿಯುತ್ತಾ ವರ್ಷಕ್ಕೆ 8.25% ಬಡ್ಡಿಯನ್ನು ಗಳಿಸುತ್ತದೆ.
ಹೀಗಾಗಿ, ಹೊಸ ನಿಯಮದಲ್ಲಿ 100% withdrawal ಎಂದರೆ ಎರಡು ಭಾಗಗಳ ಕೊಡುಗೆ ಹಣವನ್ನು employee + employ-er share) ತೆಗೆಯಲು ಅವಕಾಶವಿದೆ. ಆದರೆ ಸಂಪೂರ್ಣ ಬ್ಯಾಲೆನ್ಸ್‌ನ 10001% ಅಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.
ಈ ನಿಯಮದ ಉದ್ದೇಶ ಚೆನ್ನಾಗಿದೆ. ಸದಸ್ಯರು ತಮ್ಮ ಪಿಎಫ್ ಖಾತೆಯನ್ನು ಸಂಪೂರ್ಣ ಖಾಲಿ ಮಾಡದೇ. ಕನಿಷ್ಟ ಒಂದು ಭಾಗವನ್ನು ನಿವೃತ್ತಿ ನಿಧಿಯಾಗಿ ಉಳಿಸಿಕೊಂಡು ಹೋಗಬೇಕು ಎಂಬುದಾಗಿದೆ. ಇದು ದೀರ್ಘಾವಧಿಯಲ್ಲಿ ನಿಮ್ಮ retirement corpus (ನಿವೃತ್ತಿ ನಿಧಿ) ಬೆಳೆಸಲು ಸಹಾಯ ಮಾಡುತ್ತದೆ. ಈ ಬದಲಾವಣೆ ನೌಕರರಿಗೆ ಅತ್ಯಂತ ಪ್ರಯೋಜನಕಾಲ, ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ
ಶಿಕ್ಷಣ ಮತ್ತು ಮದುವೆಗೆ ವಿತ್ ಡ್ರಾವಲ್ ಮಿತಿ ಹೆಚ್ಚಳ:
ಹಿಂದಿನ ನಿಯಮದಲ್ಲಿ ಶಿಕ್ಷಣ ಮತ್ತು ಮದುವೆ ಉದ್ದೇಶಗಳಿಗಾಗಿ ವಿತ್ ಡ್ರಾ.. ಮಾಡಲು ಮೂರು ಬಾರಿ ಮಾತ್ರ ಅವಕಾಶ ಇತ್ತು, ಅಂದರೆ, ನಿಮ್ಮ ಸಂಪೂರ್ಣ ಸೇವಾ ಅವಧಿಯಲ್ಲಿ ಮೂರು ಸಲ ವಿತ್ ಡ್ರಾ ಮಾಡಿದರೆ, ನಂತರ ಯಾವಾಗ ಬೇಕಾದರೂ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಈಗ ಹೊಸ ನಿಯಮದಲ್ಲಿ ಇದನ್ನು ಸಂಪೂರ್ಣ ಬದಲಾಯಿಸಲಾಗಿದೆ.
ಈಗ ಶಿಕ್ಷಣದ ಉದ್ದೇಶಕ್ಕಾಗಿ 10 ಬಾರಿ ವಿತ್ ಡ್ರಾ ಮಾಡಬಹುದು. ಮದುವೆ ಉದ್ದೇಶಕ್ಕಾಗಿ 5 ಬಾರಿ ವಿತ್ ಡ್ರಾ ಮಾಡಬಹುದು. ಇದು ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅತ್ಯಂತ ಉಪಯುಕ್ತ ಬದಲಾವಣೆ.
ಉದಾಹರಣೆ: ನೀವು ನಿನ್ನು ಮದುವೆಗೆ ಒಮ್ಮೆ ಪಿಎಫ್ ವಿಕ್ ಡ್ರಾ ಮಾಡಿದ್ದೀರಿ. ನಂತರ ನಿಮ್ಮ ಮಕ್ಕಳ ಕಾಲೇಜು ಶುಲ್ಕಕ್ಕಾಗಿ ಎರಡು ಬಾರಿ ವಿತ್ ಡ್ರಾ ಮಾಡಿದ್ದೀರಿ ಎಂದಾದರೆ, ಹಿಂದಿನ ನಿಯಮದಲ್ಲಿ ನೀವು ಮಿತಿಯನ್ನು ಹೊಂದುತ್ತೀರಿ, ಆದರೆ ಈಗ, ನೀವು ಮುಂದಿನ ವರ್ಷಗಳಲ್ಲಿ ಮಕ್ಕಳ ಮುಂದಿನ ಶಿಕ್ಷಣ ಅಥವಾ ಇನ್ನೊಬ್ಬರ ಮದುವೆಗೆ ವಿತ್ ಡ್ರಾ ಮಾಡಬಹುದು. ಇದು ನೌಕರರಿಗೆ ಹಣಕಾಸಿನ ಫ್ಲೆಕ್ಸಿಬಿಲಿಟಿಯನ್ನು ನೀಡುತ್ತದೆ.