ಭಾರತದ ಸ್ವಾತಂತ್ರ್ಯ ಚಳುವಳಿಯ ಅಂತಿಮ ಹಂತ:
ಜಿನ್ನಾನ 14 ಅಂಶಗಳ ಜೊತೆ ಮತೆ 11 ಅಂಶಗಳು:
1938ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚಂದ್ರಬೋಸ್ ಮತ್ತು ಗಾಂಧೀಜಿಯವರು ಮುಸ್ಲಿಂಲೀಗ್‌ನ ಜಿನ್ನಾನೊಡನೆ ಮಾತುಕತೆಯಾಡಲು ಅನುಮತಿ ನೀಡಿತು. ಅದರಂತೆ ಮಾತುಕತೆಗಳು ಪ್ರಾರಂಭವಾದವು. ಮೇ 26ರ ಮಾತುಕತೆಯ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಕಾಂಗ್ರೆಸ್ ಮುಸ್ಲಿಂ ಪ್ರಾತಿನಿಧ್ಯವುಳ್ಳ ಲೀಗಿನೊಡನೆ ಸಂಧಾನ ನಡೆಸುವುದೆಂದು ಪೂರ್ವಭಾವಿಯಾಗಿ ಸ್ಪಷ್ಟಗೊಳಿಸಬೇಕೆಂದು ಜಿನ್ನಾ ಒತ್ತಾಯಪಡಿಸಿದರು. ಜಿನ್ನಾರವರು ಹಿಂದೆ ತಮ್ಮ “14 ಅಂಶಗಳನ್ನು ತಿಳಿಸಿದ್ದರು ಅದಕ್ಕೆ ಕೆಳಗಿನ 11 ಅಂಶಗಳನ್ನು ಸೇರ್ಪಡೆಯಾಗಿ ಕೇಳಿಕೆಯಲ್ಲಿ ಸಲ್ಲಿಸಿದರು. ಆ 11 ಅಂಶಗಳಾವುವೆಂದರೆ
1. 'ವಂದೇ ಮಾತರಂ' ಹಾಡುವುದನ್ನು ನಿಲ್ಲಿಸಬೇಕು.
2. ಈಗ ಸದಸ್ಯದಲ್ಲಿ ಮುಸ್ಲಿಂ ಬಹುಸಂಖ್ಯಾತರಿರುವ ರಾಜ್ಯಗಳಲ್ಲಿ ಆ ಬಹುಸಂಖ್ಯಾತ ತತ್ವವನ್ನು ಪ್ರಾದೇಶಿಕ * ಪುನರ್ವಿಂಗಡಣೆ ಅಥವಾ ಹೊಂದಾಣಿಕೆಯಿಂದ ವ್ಯತ್ಯಾಸ ಮಾಡಕೂಡದು.
3. ಮುಸ್ಲಿಮರಲ್ಲಿ ನಡೆದು ಬಂದಿರುವ ಗೋವಧೆಯ ವಿಚಾರವಾಗಿ ನಡುವೆ ಪ್ರವೇಶಿಸಕೂಡದು.
4. ಮುಸ್ಲಿಮರ ಆಸಾನ್‌ಕರೆ ಮತ್ತು ಅವರ ಧರ್ಮಾಚರಣೆ ಈ ಹಕ್ಕುಗಳಿಗೆ ನಡುವೆ ಯಾವ ರೀತಿಯಲ್ಲೂ ಅಡ್ಡಿ ಮಾಡಬಾರದು.
5. ಮುಸ್ಲಿಮರ ವೈಯಕ್ತಿಕ ನ್ಯಾಯ ಮತ್ತು ಸಂಸ್ಕೃತಿಗೆ ಶಾಸನಬದ್ಧವಾದ ಭದ್ರತೆ ಬೇಕು.
6. ರಾಜ್ಯ ನೌಕರಿಯಲ್ಲಿ ಮುಸ್ಲಿಮರ ಭಾಗವನ್ನು ರಾಜ್ಯಾಂಗ ಶಾಸನ ನಿಬಂಧನೆಗಳಲ್ಲಿ ಸ್ಪಷ್ಟವಾಗಿ ಗೊತ್ತುಮಾಡಿರಬೇಕು.as hotte
7. ಜಾತೀಯ ನಿಬಂಧನೆಗಳ ಮೇಲೆ ಕಾಂಗ್ರೆಸ್ ಮಂಡಿಸಿರುವ ವಿರೋಧವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಇದು ಅರಾಷ್ಟ್ರೀಯ ಎಂದು ವರ್ಣಿಸಕೂಡದು.
8. ಉರ್ದುವಿನ ಬಳಕೆಯನ್ನು ಕಡಿಮೆ ಮಾಡದಿರುವ ಬಗ್ಗೆ ಶಾಸನಬದ್ಧವಾದ ಭದ್ರತೆಬೇಕು.
9. ಸ್ಥಳೀಯ ಸಂಸ್ಥೆಗಳ ಪ್ರಾತಿನಿಧ್ಯ ಜಾತೀಯ ನಿಬಂಧನೆಯಲ್ಲಿ ಉಕ್ತವಾಗಿರುವ ತತ್ವಗಳನ್ನು ಅನುಸರಿಸಬೇಕು.
10. ತ್ರಿವರ್ಣ ಧ್ವಜವನ್ನು ಬದಲಾಯಿಸಬೇಕು ಅಥವಾ ಪರ್ಯಾಯವಾಗಿ ಮುಸ್ಲಿಂ ಲೀಗ್ ಧ್ವಜಕ್ಕೂ ಸಮಾನ ಪ್ರಾಮುಖ್ಯ ನೀಡಬೇಕು.
11. ಭಾರತದ ಮುಸ್ಲಿಮರ ಪರವಾಗಿ ಲೀಗ್ ಒಂದೇ ಮತ್ತು ಅದು ಮಾತ್ರವೇ ಪ್ರಾತಿನಿಧಿಕವಾದ ಮತ್ತು ಅಧಿಕಾರವತ್ತಾದ ಸಂಸ್ಥೆ ಎಂದು ಒಪ್ಪಬೇಕು.
te beker
ಈ ಜಿನ್ನಾನ ಈ 11 ಅಂಶಗಳು ಗಾಂಧೀಜಿ ಮತ್ತು ಬೋಸರನ್ನು ಸ್ಥಂಭೀಭೂತರನ್ನಾಗಿಸಿದವು. ಮಾತುಕತೆ ಸ್ವಚ್ಛವಾಯಿತು. ಜೂನ್ 16 ರಂದು ಜಿನ್ನಾ ತಮ್ಮ ಹಾಗೂ ಗಾಂಧೀಜಿಯವರ ನಡುವೆ ನಡೆದ ವ್ಯವಹಾರವನ್ನು ಪ್ರಕಟಿಸಿದರು, ಚೆನ್ನಾನ 11 ಅಂಶಗಳು ದೇಶೀಯವಾಗೇ ದ್ವಿರಾಷ್ಟ್ರ ನಿರ್ಮಾಣದಂತಿದ್ದವು. ಜಿನ್ನಾನ ಹಠಮಾರಿತನವು ಮುಂದಿನ ಐಕ್ಕೆ ಭಾರತದ ಯೋಜನೆಯನ್ನು ಗಾಂಧೀಜಿಯನ್ನೊಳಗೊಂಡಂತೆ ಎಲ್ಲ ನಾಯಕರೂ ಮರೆತು ಭಾರತದ ವಿಭಜನೆಯತ್ತ ಯೋಚಿಸುವಂತೆ ಹಾಗೂ ಯೋಜಿಸುವಂತೆ ಮಾಡಿದವು.
ಜಿನ್ನಾನ 'ದ್ವಿರಾಷ್ಟ್ರ ಸಿದ್ಧಾಂತ' ಅಥವಾ ಮುಸ್ಲಿಂ ಲೀಗ್‌ನ 'ಪಾಕಿಸ್ತಾನ ನಿರ್ಣಯ'
ಕಾಂಗ್ರೆಸ್ ಮಂತ್ರಿಮಂಡಲಗಳಿಗೆ ರಾಜೀನಾಮೆ ನೀಡಿದ ಸಮಯವನ್ನು ಬ್ರಿಟಿಷ್ ಸರ್ಕಾರ ಮತ್ತು ಮುಸ್ಲಿಂ ಲೀಗ್ ಒಕ್ಕೂಟವು ಕಾಂಗ್ರೆಸ್ ರಾಷ್ಟ್ರೀಯ ಚಳುವಳಿಯ ಧಮನಕ್ಕೆ ಉಪಯೋಗಿಸಿಕೊಂಡವು, ವೈಸ್‌ರಾಯ್ ಅಸ್ಸಾಂನಲ್ಲಿ ಸಾದುಲ್ಲಾಖಾನರಿಗೆ, ಮಂತ್ರಿಮಂಡಲ ರಚಿಸಲು ಆಹ್ವಾನಿಸಿದರು. ಈ ಸುಸಂಧಿಯನ್ನು ಉಪಯೋಗಿಸಿಕೊಂಡು ಬಂಗಾಳದ ಮುಖ್ಯಮಂತ್ರಿ ನಾಜಿಮುದ್ದೀನ್ ಮತ್ತು ಸಾದುಲ್ಲಾಖಾನ್ ಆ ಪ್ರದೇಶದಲ್ಲಿ ಮುಸ್ಲಿಮರನ್ನು ಬಹುಸಂಖ್ಯಾತರನ್ನಾಗಿಸುವ ಕ್ರಮಗಳನ್ನು ಕೈಗೊಂಡರು. ಕಾಂಗ್ರೆಸ್ ಅಧ್ಯಕ್ಷರಾದ ಮೌಲಾನಾ ಅಜಾದ್ರು 1940ರ ರಾಮಘರ್ ಕಾಂಗ್ರೆಸ್ ಅಧಿವೇಶನದಲ್ಲಿ 'ಮುಸ್ಲಿಮರು ಭಾರತದ ರಾಜಕೀಯದಲ್ಲಿ ಅಲ್ಪಸಂಖ್ಯಾತರಲ್ಲ, 80 ರಿಂದ 90 ದಶಲಕ್ಷದಷ್ಟಿರುವ ಮುಸ್ಲಿಮರು ಏಳು ಪ್ರಾಂತ್ಯಗಳಲ್ಲಿ ಅಲ್ಪಸಂಖ್ಯಾತರಾಗಿದ್ದು ಐದು ಪ್ರಾಂತ್ಯಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಹೀಗಿರುವಾಗ ಮುಸ್ಲಿಮರು ಅಲ್ಪಸಂಖ್ಯಾತರೆಂಬ ಸೋತ ಭಾವನೆಗೆ ತುತ್ತಾಗಲು ಯಾವ ಕಾರಣವೂ ಇಲ್ಲ" ಎಂಬ ಹೊಸ ನಿಲುವನ್ನು ಘೋಷಿಸಿದರು. ಈ ಅಂಶವನ್ನು ಮುಸ್ಲಿಂಲೀಗ್ ನಾಯಕ ಮಹ್ಮದ್ ಅಲಿ, ಎಂ.ಕೆ. ದೆಹವಿಯವರು "ಭಾರತದ ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಅವರೊಂದು ರಾಷ್ಟ್ರ ಎಂಬ ಮಾತನ್ನು ಅಧಿಕೃತವಾಗಿ ಚುನಾಯಿತಗೊಂಡ ಕಾಂಗ್ರೆಸ್ ಅಧ್ಯಕ್ಷರೇ ಘೋಷಿಸಿದ್ದಾರೆ." ಎಂದು ಪುನರ್ ವ್ಯಾಖ್ಯಾನಿಸಿದರು.
ಬ್ರಿಟಿಷ್ ಸರ್ಕಾರವು ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ನಡುವಣ ಬಿರುಕು ಹೊಂದಿಸಲಾಗದೆಂದು ಅಭಿಪ್ರಾಯಪಟ್ಟಿತು. ಆದರೆ ಗಾಂಧೀಜಿಯವರು ಹಿಂದೂ-ಮುಸ್ಲಿಂ ಸಮಸ್ಯೆಯು ದೇಶೀಯವಾದುದೆಂದು ಬ್ರಿಟಿಷರು ಭಾರತದಿಂದ ಹೊರಹೋದಕೂಡಲೇ ಮಾಯವಾಗುವುದೆಂದು ನಂಬಿದ್ದರು. ಮೌಲಾನಾ ಅಜಾದ್ರು 1940ರ ರಾಮ್‌ಘರ್ ಅಧಿವೇಶನದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಯು ಪರಂಪರಾನುಗತವಾಗಿ ಬಂದುದೆಂದು ತಿಳಿಸುತ್ತಾ "ನಾವು ಇಷ್ಟಪಡುತ್ತೇವೋ ಇಲ್ಲವೋ ಭಾರತದಲ್ಲಿ ಲೀನವಾಗಿ ವಿಭಜಿಸಲಾರದಂತಾಗಿದ್ದೇವೆ' ಎಂದು ತಿಳಿಸಿದರು. ಆದರೂ ಕೋಮು ಭಿನ್ನತೆ ಅಂತಿಮ ಘಟ್ಟಕ್ಕೆ ತಲುಪಿ ಮುಸ್ಲಿಂ ಲೀಗ್ 23-3-1940ರ ಲಾಹೋರ್ ಅಧಿವೇಶನದಲ್ಲಿ "ಪಾಕಿಸ್ತಾನ ನಿರ್ಣಯ'ವನ್ನು ಅಂಗೀಕರಿಸಿತು. ಅಧಿವೇಶನದಲ್ಲಿ ಮಹಮದಾಲಿಜಿನ್ನಾ ಮಾತನಾಡಿ “ಭಾರತದಲ್ಲಿನ ಇಂದಿನ ಸಮಸ್ಯೆ ಜಾತಿ, ಕೋಮುಗಳ ನಡುವಣದ್ದಲ್ಲ, ಅದು ನಿಚ್ಚಳವಾಗಿ ರಾಷ್ಟ್ರ ರಾಷ್ಟ್ರಗಳ ನಡುವಣ ಸ್ವರೂಪದ್ದಾಗಿದೆ. ಭಾರತ ಒಂದೇ ರಾಷ್ಟ್ರ ಎಂಬ ತಪ್ಪು ಅಭಿಪ್ರಾಯ ಅಳತೆಮೀರಿ ಬೆಳೆದಿರುವುದೇ ನಮ್ಮ ಬಹುಮಟ್ಟಿನ ಸಮಸ್ಯೆಗಳಿಗೆಲ್ಲ ಮೂಲಕಾರಣ. ಈ ಚಿಂತನೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ದೇಶವು ಸರ್ವನಾಶಕ್ಕೆ ಗುರಿಯಾದೀತು ಎಂದು ತಿಳಿಸಿ ಮುಸ್ಲಿಮರು ಒಂದು ರಾಷ್ಟ್ರವೇ, ಅವರಿಗೆ ತಮ್ಮದೇ ಮಾತೃಭೂಮಿ, ತಮ್ಮದೇ ಆದ ಭೂ ಪ್ರದೇಶ ಮತ್ತು ತಮ್ಮದೇ ಆದ ರಾಜ್ಯಭಾರ ಇರಬೇಕು" ಎಂದು ದ್ವಿರಾಷ್ಟ್ರ ಸಿದ್ಧಾಂತಕ್ಕೆ ಬೀಜ ಬಿತ್ತಿದರು.
ಜಿನ್ನಾರವರ ಈ ಹೇಳಿಕೆಯನ್ನು ಮುಸ್ಲಿಂ ಲೀಗ್ ಅಧಿಕೃತವಾಗಿ ಅಂಗೀಕರಿಸಿತು. "ಮುಸ್ಲಿಮರು ಬಹುಸಂಖ್ಯಾತರಾಗಿರುವ ವಾಯುವ್ಯ ಮತ್ತು ಪೂರ್ವ ವಲಯಗಳನ್ನು ಸ್ವತಂತ್ರ ಹಾಗೂ ಸಾರ್ವಭೌಮವಾದ ಸ್ವತಂತ್ರ ರಾಜ್ಯಗಳಾಗಿ ರಚಿಸಬೇಕು" ಎಂಬ ಇದೇ ನಿರ್ಣಯವು ಮುಂದೆ 'ಪಾಕಿಸ್ತಾನ ನಿರ್ಣಯ" ಎಂಬುದಾಗಿ ಪ್ರಸಿದ್ದಿಗೆ ಬಂದಿತು. ಮುಸ್ಲಿಂ ಲೀಗ್ "ಪಾಕಿಸ್ತಾನ ನಿರ್ಣಯಕ್ಕೆ" ಆರಿಸಿಕೊಂಡ ಲಾಹೋರ್‌ನಲ್ಲೇ ಹತ್ತು ವರ್ಷಗಳ ಹಿಂದೆ ನೆಹರೂ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಭಾರತದ ಸ್ವಾತಂತ್ರ್ಯದ ಶಪಥ ಕೈಗೊಂಡಿದ್ದು ಅರ್ಥಸೂಚಕವಾಗಿ ಕಾಣುತ್ತದೆ. ಗಾಂಧೀಜಿಯವರು ಲಾಹೋರ್ ನಿರ್ಣಯವನ್ನು ಅಸತ್ಯವೆಂದು ಅದನ್ನು ಅಹಿಂಸೆಯ ಮೂಲಕ ತಡೆಯಲು ಪ್ರಯತ್ನಿಸುತ್ತೇನೆಂದು ಅಭಿಪ್ರಾಯಪಟ್ಟರು.
1940ರ ಆಗಸ್ಟ್ 8ರ ಕೊಡುಗೆ
1940ರ ಆಗಸ್ಟ್ 8ರ ಪ್ರಸ್ತಾವನೆಯನ್ನು ಮಾಡಲು ಕಾರಣವೇನೆಂದರೆ 1935ರ ಕಾಯಿದೆ ಅಖಿಲ ಭಾರತ ಸಂಯುಕ್ತ ಒಕ್ಕೂಟವನ್ನು ಕೇಂದ್ರದಲ್ಲಿ ಸ್ಥಾಪಿಸಿ ಪ್ರಾಂತ್ಯಗಳಲ್ಲಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಿತು. ಆದರೆ ದೇಶೀಯ ಸಂಸ್ಥಾನಗಳು ಈ ಒಂದು ಒಕ್ಕೂಟವನ್ನು ಒಪ್ಪಲಿಲ್ಲ. 1936ರಲ್ಲಿ ಚುನಾವಣೆ ನಡೆದು ಕಾಂಗ್ರೆಸ್ 7 ಪ್ರಾಂತ್ಯಗಳಲ್ಲಿ, ಮುಸ್ಲಿಂ ಲೀಗ್ ಎರಡು ಪ್ರಾಂತ್ಯಗಳಲ್ಲಿ ಅಧಿಕಾರಕ್ಕೆ ಬಂದವು. 1939ರ ಸೆಪ್ಟೆಂಬರ್ ತಿಂಗಳಲ್ಲಿ ದ್ವಿತೀಯ ಮಹಾಯುದ್ಧ ಆರಂಭವಾಗಿ ಇಂಗ್ಲೆಂಡ್ ಜರ್ಮನಿಯ ವಿರುದ್ಧ ಯುದ್ಧ ಸಾರಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಭಾರತೀಯರ ಒಪ್ಪಿಗೆಯನ್ನು ಪಡೆಯದೆ ಜರ್ಮನಿಯ ಮೇಲೆ ಭಾರತದ ಪರವಾಗಿ ಯುದ್ಧವನ್ನು ಘೋಷಣೆ ಮಾಡಿತು. ಇದಕ್ಕೆ ಮುಂಚೆ ಭಾರತೀಯರ ಒಪ್ಪಿಗೆಯನ್ನು ಪಡೆಯದಿದ್ದುದರಿಂದ ಭಾರತದಾದ್ಯಂತ ತೀವ್ರ ವಿರೋಧ ಕಂಡುಬಂದಿತು. ಸಾಮ್ರಾಜ್ಯ ಶಾಹಿಯ ಮೇಲೆ ನಡೆಯುತ್ತಿದ್ದ ಯುದ್ಧಕ್ಕೆ ಸಹಕಾರ ನೀಡಲು ನಿರಾಕರಿಸಿ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ನೀಡಿದವು.
ಈ ಒಂದು ಕಠಿಣ ಸಂದರ್ಭದಲ್ಲಿ ಭಾರತೀಯರ ಮತ್ತು ಭಾರತೀಯ ಪಡೆಗಳ ಸಹಾಯ ಆವಶ್ಯಕವಾಗಿ ಇಂಗ್ಲೆಂಡ್‌ಗೆ ಬೇಕಾಗಿತ್ತು. ಆದ್ದರಿಂದ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಪೂರೈಸಿದರೆ ತಾನು ಯುದ್ಧದಲ್ಲಿ ಸಹಕಾರ ನೀಡುವುದಾಗಿ ತಿಳಿಸಿತು. ಆಗ ವೈಸ್‌ರಾಯಿಯಾಗಿದ್ದ ಲಾರ್ಡ್ ಲಿನ್‌ಲಿತ್‌ಗೌ ಆಗಸ್ಟ್ 8, 1940ರಲ್ಲಿ
ಒಂದು ಪ್ರಸ್ತಾವನೆಯನ್ನು ಭಾರತೀಯರ ಮುಂದಿಟ್ಟ. ಇದು ಆಗಸ್ಟ್ ಪ್ರಸ್ತಾವನೆ ಎಂದು ಜನಪ್ರಿಯವಾಗಿದೆ.
ಈ ಪ್ರಸ್ತಾವನೆಯ ಮುಖ್ಯಾಂಶಗಳು:
1. ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲಾಗುವುದು.
2. ಯುದ್ಧ ಮುಗಿದ ನಂತರ ಭಾರತಕ್ಕೆ ಒಂದು ಹೊಸ ಸಂವಿಧಾನವನ್ನು ರೂಪಿಸಲು ಒಂದು ಪ್ರಾತಿನಿಧಿಕ ಸಮಿತಿಯನ್ನು ರಚಿಸಲಾಗುವುದು. ಇದಕ್ಕೆ ಭಾರತೀಯ ಸದಸ್ಯರನ್ನು ನೇಮಕ ಮಾಡಲಾಗುವುದು.
3. ಗವರ್ನರ್ ಜನರಲ್‌ನ ಕಾರ್ಯಕಾರಿ ಸಮಿತಿಯನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರತಿನಿಧಿಗಳನ್ನು ನೇಮಿಸಲಾಗುವುದು.
4. ಯುದ್ಧದ ತರುವಾಯ ಡೊಮಿನಿಯನ್ ಮಾದರಿ ಆಧಾರದ ಮೇಲೆ ಜವಾಬ್ದಾರಿ ಸರ್ಕಾರವನ್ನು ರಚಿಸಲಾಗುವುದು.
5. ಬ್ರಿಟಿಷ್ ಇಂಡಿಯಾ ಹಾಗೂ ರಾಜ್ಯಗಳ ಪ್ರತಿನಿಧಿಗಳಿಂದ ಕೂಡಿದ 'ಯುದ್ಧ ಸಲಹಾ ಸಮಿತಿ' ಯನ್ನು ನೇಮಕ ಮಾಡಲು ವೈಸ್‌ರಾಯ್ ಒಪ್ಪಿಕೊಂಡನು.
ಈ ಮಹಾ ನೀಡಿಕೆಯ ಪ್ರಸ್ತಾವನೆ ಭಾರತೀಯ ಆಶೋತ್ತರಗಳನ್ನು ತೃಪ್ತಿಪಡಿಸುವುದಿಲ್ಲವೆಂದು ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿ ಎರಡಕ್ಕೂ ಸಮಾನವಾದ ಪ್ರಾತಿನಿಧ್ಯವನ್ನು ಕಾರ್ಯಕಾರಿ ಸಮಿತಿಯಲ್ಲಿ ನೀಡಬೇಕೆಂದು ಒತ್ತಾಯಿಸಿದವು.
ಕ್ರಿಪ್ಸ್ ಆಯೋಗ
ಕ್ರಿಪ್ಸ್ ಆಯೋಗವನ್ನು ಕಳುಹಿಸಲು ಕಾರಣಗಳೆಂದರೆ,
1. ದ್ವಿತೀಯ ಮಹಾಯುದ್ಧದಲ್ಲಿ ಜರ್ಮನಿಯ ಆಕ್ರಮಣಗಳನ್ನು ಎದುರಿಸುವುದು ಇಂಗ್ಲೆಂಡಿಗೆ ಬಹಳ ಕಷ್ಟವಾಯಿತು. ಈ ವೇಳೆಗೆ ಜಪಾನ್ ಯುದ್ಧದಲ್ಲಿ ಭಾಗವಹಿಸಿದ್ದರಿಂದಾಗಿ ಇಂಗ್ಲೆಂಡ್ ಸ್ಥಿತಿ ಇನ್ನಷ್ಟು ಚಿಂತಾಜನೆಕವಾಯಿತು. ಜಪಾನೀಯರು ಬ್ರಿಟಿಷ್ ವಸಾಹತುಗಳನ್ನು ಗೆದ್ದುಕೊಂಡು ಭಾರತದ ಪೂರ್ವಗಡಿಗಳವರೆಗೂ ಬಂದು ಭಾರತದ ಮೇಲೆ ಧಾಳಿ ಮಾಡುವ ಬೆದರಿಕೆಯನ್ನು ಹಾಕಿದರು. ಜೊತೆಗೆ ಭಾರತದಲ್ಲಿ ಗಾಂಧೀಜಿಯವರು ಕಾಯಿದೆಭಂಗ ಚಳುವಳಿಯನ್ನು ಆರಂಭಿಸಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸರ್ಕಾರ ಸಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಕೂಲಂಕುಶವಾಗಿ ಚರ್ಚಿಸಿ ಯುದ್ಧ ಮಂತ್ರಿಮಂಡಲವು ಭಾರತದೊಂದಿಗೆ ರಾಜಕೀಯ ಒಪ್ಪಂದವನ್ನು ಮಾಡಿಕೊಳ್ಳಲು ಸಿದ್ಧವಾಯಿತು. ಜೊತೆಗೆ ಚರ್ಚಿಲ್ ತನ್ನ ನಿರ್ದಾರವನ್ನು ಬದಲಿಸಿ ಸಂವಿಧಾನ ರಚನೆಯ ಕಾರ್ಯವನ್ನು ಭಾರತೀಯರಿಗೆ ಒಪ್ಪಿಸುವ ಇಂಗಿತದ ಜೊತೆಗೆ ಸಾಮಾನ್ಯ ಸಭೆಯ ನಾಯಕ ಕ್ರಿಪ್ಸ್ ನನ್ನು ಭಾರತಕ್ಕೆ ಕಳುಹಿಸುವ ಇಂಗಿತವನ್ನು ವ್ಯಕ್ತಪಡಿಸಿದ.
2. ಚಿಯಾಂಗ್ ಕೈಷೇಕ್‌ನ ಒತ್ತಡ : 1942ರಲ್ಲಿ ಚಿಯಾಂಗ್ ಕೈಷೇಕ್ ಭಾರತಕ್ಕೆ ಭೇಟಿ ನೀಡಿದಾಗ ಬ್ರಿಟಿಷ್ ಸರ್ಕಾರ ಮತ್ತು ಬಾರತೀಯರ ನಡುವೆ ಒಪ್ಪಂದ ಅಗತ್ಯವೆಂದು ಒತ್ತಿ ಹೇಳಿದರು.
3. ರೂಸ್‌ವೆಲ್ಟ್ನ ಒತ್ತಡ : ರೂಸ್‌ವೆಲ್ಟ್ ಭಾರತೀಯರ ಸ್ವಾತಂತ್ರ್ಯ ಬಯಕೆಯ ಬಗ್ಗೆ ಸಾಕಷ್ಟು ಸಹಾನುಭೂತಿಯನ್ನು ಹೊಂದಿದ್ದ. ಬ್ರಿಟಿಷರ ಸಾಮ್ರಾಜ್ಯಶಾಹಿ ನಿಲುವಿನಿಂದಾಗಿ ಭಾರತ ಮತ್ತು ಇಂಗ್ಲೆಂಡಿನ ನಡುವೆ ಯಾವ ಒಂದು ಒಪ್ಪಂದಕ್ಕೂ ಬರಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟು 1941ರಲ್ಲಿ ಅಟ್ಲಾಂಟಿಕ್ ಚಾರ್ಟರಿನ ಸಮಯದಲ್ಲಿ ಭಾರತದ ವಿಷಯಕ್ಕೆ ಸಂಬಂಧಿಸಿದಂತೆ ನಡೆದುಕೊಂಡ ರೀತಿಯನ್ನು ರೂಸ್‌ವೆಲ್ಟ್ ಒಪ್ಪಲಿಲ್ಲ. ಹೀಗೆ ಭಾರತದ ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿದ್ದ ರೂಸ್‌ವೆಲ್ಟ್ ಅಟ್ಲಾಂಟಿಕ್ ಚಾರ್ಟರ್ ಭಾರತಕ್ಕೆ ಅನ್ವಯವಾಗುವಂತೆ ಮಾಡಲು ಚರ್ಚಿಲ್ ಜೊತೆ ಮಾತುಕತೆ ನಡೆಸಿದರು.
4. ಭಾರತಕ್ಕೆ ಸ್ವಯಂ ಆಡಳಿತವನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜಕಾರಣಿಗಳೊಂದಿಗೆ ಸಂಧಾನ ನಡೆಸುವಂತೆ ಬ್ರಿಟಿಷ್ ಪ್ರಧಾನಿ ಚರ್ಚಿಲ್‌ಗೆ ಆಸ್ಟ್ರೇಲಿಯಾದ ವಿದೇಶಾಂಗ ಮಂತ್ರಿ ಕೋರಿಕೊಂಡನು. ಜೊತೆಗೆ ಇಂತಹ ಸಮಯದಲ್ಲಿ ಭಾರತೀಯರ ಸಹಕಾರ ಬಹಳ ಮುಖ್ಯವೆಂದು ಅಭಿಪ್ರಾಯಪಟ್ಟನು. ಇಂತಹ ಸಮಯದಲ್ಲಿ ಕ್ರಿಪ್ಸ್ ಆಯೋಗವು ಮಾರ್ಚ್ 22, 1942ರಲ್ಲಿ ಭಾರತಕ್ಕೆ ಬಂದಿತು. ಇದು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಂಧಾನದ ಮಾತುಕತೆಯನ್ನು ಆರಂಭಿಸಿತು.
ಕ್ರಿಪ್ಸ್ ಆಯೋಗದ ಶಿಫಾರಸ್ಸುಗಳು ಈ ರೀತಿ ಇವೆ.ಸಾಂನ ದ ರಾಂಡ ಗಯ
1. ಯುದ್ಧ ನಿಂತನಂತರ ಭಾರತ ಒಕ್ಕೂಟವನ್ನು ರಚಿಸಲಾಗುವುದು. ಬ್ರಿಟಿಷ್ ಕಾಮನ್‌ವೆಲ್ತ್‌ನಲ್ಲಿ ಭಾರತ ಒಂದು ವಸಾಹತುವಾಗಿ ಅಂದರೆ ತನ್ನ ಆಂತರಿಕ ಅಥವಾ ವಿದೇಶಿ ವ್ಯವಹಾರಗಳಲ್ಲಿ ಯಾವುದೇ ರೀತಿಯಲ್ಲಿ ಬ್ರಿಟನ್ನಿಗೆ ಅಧೀನವಾಗಿರದ ರೀತಿಯಲ್ಲಿ ಹೊಸದಾದ ಭಾರತ ಒಕ್ಕೂಟವನ್ನು ರಚಿಸುವುದು ಬ್ರಿಟಿಷ್ ಸರ್ಕಾರದ ಉದ್ದೇಶವಾಗಿದೆ.
2. ಯುದ್ಧ ನಿಂತಕೂಡಲೇ ಭಾರತಕ್ಕೆ ಹೊಸ ಸಂವಿಧಾನವನ್ನು ರಚಿಸುವ ಹೊಣೆಯನ್ನು ಭಾರತೀಯರಿಗೆ ವಹಿಸಿಕೊಡಲಾಗುತ್ತದೆ. ದೇಶೀಯ ರಾಜ್ಯಗಳು ಸಂವಿಧಾನ ರಚನಾ ಸಮಿತಿಯಲ್ಲಿ ಸೇರತಕ್ಕದ್ದು.
3. ಈ ರೀತಿ ರಚನೆಗೊಂಡ ಸಂವಿಧಾನವನ್ನು ಯಾವುದೇ ಪ್ರಾಂತ್ಯ ಒಪ್ಪಲು ಸಿದ್ಧವಿರದಿದ್ದಲ್ಲಿ ಅದು ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡು ಒಕ್ಕೂಟ ಸ್ಥಾನಮಾನವನ್ನು ಹೊಂದಲು ಅವಕಾಶ ಮಾಡಿಕೊಡಲಾಗುವುದು. ಹಾಗೆಯೇ ಯಾವುದೇ ಪ್ರಾಂತ್ಯ ಹಾಲಿ ಇರುವ ಸಂವಿಧಾನೀಯ ಸ್ಥಾನವನ್ನು ಉಳಿಸಿಕೊಂಡು ಹೋಗಲು ಹಕ್ಕನ್ನು ಕೊಡಬೇಕು.
4. ಬ್ರಿಟಿಷ್ ಸರ್ಕಾರ ಮತ್ತು ಸಂವಿಧಾನ ರಚನೆಯ ಸಮಿತಿ ಪರಸ್ಪರ ಮಾತುಕತೆಗಳೊಂದಿಗೆ ಒಂದು ಒಪ್ಪಂದಕ್ಕೆ ಬಂದು ಸಹಿ ಹಾಕುವುದು. ಬ್ರಿಟಿಷರಿಂದ ಸಂಪೂರ್ಣ ಹೊಣೆಗಾರಿಕೆಯನ್ನು ಕೊಟ್ಟಾಗ ಉದ್ಭವವಾಗುವ ಎಲ್ಲಾ ಅವಶ್ಯ ವಿಷಯವನ್ನು ಈ ಒಪ್ಪಂದ ಒಳಗೊಂಡಿರತಕ್ಕದ್ದು.
5. ಅಲ್ಪಸಂಖ್ಯಾತರಿಗೆ ಅಗತ್ಯವಾದ ರಕ್ಷಣೆಯನ್ನು ಕೊಡಲಾಗುವುದು.
6. ಭಾರತ ಒಕ್ಕೂಟ ಬ್ರಿಟಿಷ್ ಕಾಮನ್‌ವೆಲ್ತ್‌ನ ಇತರ ಸದಸ್ಯ ರಾಷ್ಟ್ರಗಳೊಂದಿಗೆ ಭವಿಷ್ಯದಲ್ಲಿ ರೂಪಿಸಬಹುದಾದ ಸಂಬಂಧದ ಬಗ್ಗೆ ಯಾವುದೇ ನಿರ್ಬಂಧವನ್ನು ಹೇರಬಾರದು.
7. ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಭಾರತೀಯ ನಾಯಕರುಗಳು ವೈಸ್‌ರಾಯ್ ಕಾರ್ಯಕಾರಿ ಮಂಡಳಿಗೆ ಸೇರಿಕೊಂಡು ಯುದ್ಧ ಖಾತೆ ಒಂದನ್ನು ಬಿಟ್ಟು ಉಳಿದೆಲ್ಲಾ ಖಾತೆ ಅಥವಾ ಆಡಳಿತ ವಿಭಾಗಗಳನ್ನು ನೋಡಿಕೊಳ್ಳುವುದು.
8. ಭಾರತವು ಈಗ ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಯಲ್ಲಿ ಹಾಗೂ ಹೊಸ ಸಂವಿಧಾನ ರಚನೆಯಾಗುವವರೆವಿಗೆ ಬ್ರಿಟಿಷ್ ಸರ್ಕಾರವು ಜಾಗತಿಕ ಯುದ್ಧದ ಪರಿಣಾಮವಾಗಿ ಭಾರತದ ರಕ್ಷಣೆಯ ಹೊಣೆಯನ್ನು ವಹಿಸಿಕೊಳ್ಳತಕ್ಕದ್ದು. ಸರ್ಕಾರ ಭಾರತೀಯ ಸೈನ್ಯ ಬಲವನ್ನು ಸಂಘಟಿಸಲು ಜನತೆಯೊಂದಿಗೆ ಸಹಕರಿಸಬೇಕು.
ಎಂ. ವಿ. ಪೈಲಿಯವರ ಮಾತಿನಲ್ಲಿ ಹೇಳುವುದಾದರೆ "ಕ್ರಿಪ್ಸ್ನ ಶಿಫಾರಸ್ಸುಗಳು ಎಲ್ಲಾ ಭಾರತೀಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು, ಆದರೆ ಅದು ಯಾರನ್ನೂ ಸಮಾಧಾ ಪಡಿಸಲಿಲ್ಲ”. ಕ್ರಿಪ್ಸ್ನ ಯೋಜನೆಯನ್ನು ಕಾಂಗ್ರೆಸ್ ಈ ಕೆಳಗಿನ ಕಾರಣಗಳನ್ನು ಮುಂದಿಟ್ಟು ತಿರಸ್ಕರಿಸಿತು.
1. ಪ್ರಾಂತ್ಯಗಳಿಗೆ ಕೊಟ್ಟ ಅಧಿಕಾರಗಳು ಭಾರತದ ಏಕತೆಗೆ ಬಲವಾದ ಪೆಟ್ಟನ್ನು ಕೊಡುತ್ತವೆ.
2. ರಕ್ಷಣಾ ಇಲಾಖೆಯನ್ನು ಭಾರತೀಯರಿಗೆ ಬಿಟ್ಟುಕೊಡಬೇಕು.
3. ಮುಸ್ಲಿಂ ಲೀಗ್, ಮುಸ್ಲಿಮರಿಗೆ ಅಗತ್ಯವಾದ ರಕ್ಷಣೆ ಇಲ್ಲ ಎಂದು ತಕರಾರು ಮಾಡಿ ಕ್ರಿಪ್ಸ್ನ ಯೋಜನೆಯನ್ನು ತಿರಸ್ಕರಿಸಿತು.
ಪ್ರತಿಯೊಬ್ಬ ಭಾರತೀಯ ನಾಯಕರು ಕ್ರಿಪ್ಸ್ ನಿಯೋಗದ ಬಗ್ಗೆ ಬೇರೆ, ಬೇರೆ ರೀತಿಯ ಅಭಿಪ್ರಾಯ ಹೊಂದಿದ್ದರು. ಅಲ್ಲದೆ ಕಾಂಗ್ರೆಸ್ ಆಡಳಿತದಲ್ಲಿ ಭಾಗವಹಿಸಲು ಸಮ್ಮತಿಸಲಿಲ್ಲ. ಮಹಾತ್ಮ ಗಾಂಧೀಜಿ ಕ್ರಿಪ್ಟ್ನ ಶಿಫಾರಸ್ಸನ್ನು ಹೀಗೆ ಹೇಳಿದ್ದಾರೆ. "ದಿವಾಳಿಯಾಗುವ ಸ್ಥಿತಿಯಲ್ಲಿದ್ದ ಬ್ಯಾಂಕಿನ ಹೆಸರಿನಲ್ಲಿ ಮುಂದಿನ ದಿನಾಂಕ ಹೊಂದಿದ್ದ ಚೆಕ್ಕು" ಎಂದು ಅಭಿಪ್ರಾಯಪಟ್ಟು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತಿರಸ್ಕರಿಸುವಂತೆ ತಿಳಿಸಿದರು. 1942ರ ಏಪ್ರಿಲ್ 11 ರಂದು ಕ್ರಿಪ್ಸ್ನ ಎಲ್ಲಾ ಶಿಫಾರಸ್ಸುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) 1942
ಕ್ರಿಪ್ಸ್ನ ನೇತೃತ್ವದ ವರದಿಯು ಭಾರತೀಯ ಜನತೆಯ ಅಶೋತ್ತರಕ್ಕೆ ವಿರುದ್ಧವಾಗಿತ್ತು. ಇಂತಹ ಸಮಯದಲ್ಲಿ ಭಾರತೀಯ ನಾಯಕರಲ್ಲಿ ಕೆಲವು ಅಭಿಪ್ರಾಯ ಮೂಡಿಬಂದವು. ಅಂದಿನ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಂತಹ ಮೌಲಾನಾ ಅಬುಲ್ ಕಲಮ್ ಅಜಾದ್‌ರವರು ಭಾರತದ ಸ್ವಾತಂತ್ರ್ಯಕ್ಕಾಗಿ, ಬ್ರಿಟಿಷರ ಜೊತೆ ಸಂಧಾನ ನಡೆಸಿದರು. ಅದರ ಫಲವಾಗಿ ಬ್ರಿಟಿಷ್ ಸರ್ಕಾರ ಎರಡನೆ ಮಹಾಯುದ್ಧಕ್ಕೆ ಭಾರತ ಸಹಕರಿಸುವಂತೆ, ಆ ನಂತರ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಭರವಸೆಯಿತ್ತರು. ನೆಹರೂರವರು ಇದೊಂದು ಕೇವಲ ಬಾಹ್ಯ ಸ್ವರೂಪದ ಮತ್ತೊಂದು ವಚನವೆಂದು ಅಭಿಪ್ರಾಯಪಟ್ಟರು. ಮಿತ್ರ ರಾಷ್ಟ್ರಗಳ ಸೇನಾ ಮುಖ್ಯಸ್ಥ ಸೈನಿಕ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಂಪೂರ್ಣ ಬೆಂಬಲ ನೀಡಿ ಜಪಾನೀಯರ ಆಕ್ರಮಣವನ್ನು ತಡೆಯಬೇಕೆಂದು ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ನೀಡುವುದಾಗಿ ಭಾರತಕ್ಕೆ ಭರವಸೆಯಿತ್ತನು. ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಶೋತ್ತರಗಳನ್ನು ತಿರಸ್ಕರಿಸಿದರು. 1942 ಜುಲೈ 14ರಂದು ವಾರ್ದಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಕ್ರಿಪ್ಸ್ನ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆಯೂ, ಅದು ಭಾರತೀಯರನ್ನು ಒಡೆದು ಹಾಳುವ ಬ್ರಿಟಿಷ್ ಸರಕಾರದ ಭೇದೋಪಾಯ ನೀತಿಯೆಂದು ಅರಿತು ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಸಂಪೂರ್ಣ ಸ್ವಾತಂತ್ರ್ಯಗಳಿಸಬಹುದೆಂದು ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬ್ರಿಟಿಷ್ ಸರಕಾರಕ್ಕೆ 24 ದಿನಗಳ ಕಾಲಾವಕಾಶ ನೀಡಿದುದಲ್ಲದೇ, ಗಾಂಧೀಜಿಯವರು 1942 ಜುಲೈ 15ರಂದು ವಿದೇಶಿ ಪತ್ರಿಕೆಗೆ ನೀಡಿದ ಸಂದೇಶದಲ್ಲಿ 'ಇದೊಂದು ಶಾಂತಿಯುತ ಮತ್ತು ಅಹಿಂಸೆಯ ಹೋರಾಟವೆಂದರು". 1942 ಜುಲೈ 25 ರಂದು ಚಿಯಾಂಗ್ ಕೈಷೇಕ್, ಅಮೇರಿಕಾದ ಅಧ್ಯಕ್ಷ ರೂಸ್‌ವೆಲ್ಸ್‌ಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ನ ಶಾಂತಿಯುತ ಹೋರಾಟ ಫಲಪ್ರದವಾಗುವಂತೆ ಮಧ್ಯಸ್ಥಿಕೆ ವಹಿಸಬೇಕೆಂದು ತಿಳಿಸಿದರು. ಆದರೆ ಚರ್ಚಿಲ್ ರೂಸ್‌ವೆಲ್ಟ್ರ ಪತ್ರವನ್ನು ಪರಿಗಣಿಸದೇ ಹೋದರು. ಬ್ರಿಟಿಷ್ ಸರಕಾರ ಯಾವುದೇ ಒಂದು ಸೂಕ್ತ ವ್ಯವಸ್ಥೆ ಕೈಗೊಳ್ಳದೇ ಎಲ್ಲಾ ರಾಜಕೀಯ ಚಟುವಟಿಕೆಯನ್ನು ಹತ್ತಿಕ್ಕುವ ಸಾಹಸ ಮಾಡಿತು. ಕೋಮುವಾರು ಭಾವನೆಯನ್ನು ಉಲ್ಬಣಗೊಳಿಸಿ ಭಾರತೀಯರನ್ನು ಒಡೆದು ಆಳುವ ಬ್ರಿಟಿಷ್ ಸರಕಾರದ ಭೇದೋಪಾಯದ ನೀತಿ ಜನತೆಗೆ ಅರಿವಾಯಿತು.