Gruhalakshmi scheme – ಮಹಿಳೆಯರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಹೆಜ್ಜೆ
ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ “ಗೃಹಲಕ್ಷ್ಮಿ ಯೋಜನೆ” ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉದ್ದೇಶಿಸಿರುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ₹2000ರ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು 06-06-2023ರ ಸರ್ಕಾರದ ಆದೇಶದಂತೆ ಜಾರಿಗೊಳಿಸಲಾಗಿದೆ. ಇದರ ಮಾರ್ಗಸೂಚಿಗಳನ್ನು 17-07-2023 ರಂದು ಹೊರಡಿಸಲಾಗಿದೆ.
Gruhalakshmi scheme: ಯೋಜನೆಯ ಅನುಷ್ಠಾನ:
ಡಿ.ಬಿ.ಟಿ (Direct Benefit Transfer) ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಧನಸಹಾಯ ವರ್ಗಾವಣೆಯ ಪ್ರಕ್ರಿಯೆ 19-07-2023ರಿಂದ ಪ್ರಾರಂಭಗೊಂಡಿದೆ. ಈ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕವಿಲ್ಲ. ಫಲಾನುಭವಿಗಳ ಖಾತೆಗಳಿಗೆ DBT ಮೂಲಕ ಧನಸಹಾಯ ಪಾವತಿಯನ್ನು 30-08-2023ರಿಂದ ಪ್ರಾರಂಭಿಸಲಾಗಿದೆ.
Gruhalakshmi scheme: ಅರ್ಹ ಫಲಾನುಭವಿಗಳು:
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ವಿತರಿಸಲ್ಪಡುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ಉಲ್ಲೇಖಿಸಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ, ಲಿಂಗತ್ವ ಅಲ್ಪಸಂಖ್ಯಾತರಿಗೂ ಯೋಜನೆಯ ಸೌಲಭ್ಯವನ್ನು 18-07-2023 ರಂದು ಸರ್ಕಾರವು ವಿಸ್ತರಿಸಿದೆ.
Gruhalakshmi scheme: ಅರ್ಹರಾಗದವರು:
1. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರು ಯೋಜನೆಗೆ ಅರ್ಹರಾಗಿರುವುದಿಲ್ಲ.
2. ಕುಟುಂಬದ ಯಜಮಾನಿ ಅಥವಾ ಅವರ ಪತಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದರೆ, ಅವರು ಸಹ ಯೋಜನೆಯಿಂದ ವಂಚಿತರಾಗುತ್ತಾರೆ.
ನೋಂದಣಿ ಪ್ರಕ್ರಿಯೆ:
ಯೋಜನೆಗೆ ನೋಂದಣಿ ಮಾಡಲು ಸರ್ಕಾರವು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಉಚಿತವಾಗಿ ಅವಕಾಶ ಕಲ್ಪಿಸಿದೆ.
ಆರ್ಥಿಕ ವಿವರಗಳು:
▪️2023-24ನೇ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ರೂ. 17,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.
▪️2024-25ನೇ ಸಾಲಿಗೆ ರೂ. 28,608.40 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ.
▪️ಫಲಾನುಭವಿಗಳ ಅಂಕಿಅಂಶಗಳು (ಜುಲೈ 2024ರ ಅಂತ್ಯದವರೆಗೆ):
▪️ಒಟ್ಟು ನೋಂದಾಯಿತ ಫಲಾನುಭವಿಗಳು – 1.25 ಕೋಟಿ
▪️ಇತರೆ ವರ್ಗದ ಫಲಾನುಭವಿಗಳು – 93,69,532
▪️ಪರಿಶಿಷ್ಟ ಜಾತಿ ಫಲಾನುಭವಿಗಳು – 22,63,894
▪️ಪರಿಶಿಷ್ಟ ಪಂಗಡ ಫಲಾನುಭವಿಗಳು – 8,83,547
▪️ಯೋಜನೆ ಆರಂಭದಿಂದ ಇಂದಿನವರೆಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ 13 ತಿಂಗಳ ಧನಸಹಾಯ (₹2000 ಪ್ರತಿ ತಿಂಗಳು) ನೀಡಲಾಗಿದ್ದು, ಒಟ್ಟು ₹26,000 ಪ್ರತಿ ಫಲಾನುಭವಿಗೆ ಪಾವತಿಸಲಾಗಿದೆ. ಇದುವರೆಗೆ ಸರ್ಕಾರವು ₹30,295.89 ಕೋಟಿಗಳ ವೆಚ್ಚ ಭರಿಸಿದೆ.
ಸಹಾಯ ಮತ್ತು ದೂರು ಪರಿಹಾರ:
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳು ಅಥವಾ ಪ್ರಶ್ನೆಗಳಿಗೆ ಪರಿಹಾರ ನೀಡಲು, ಕೇಂದ್ರ ಪುರಸ್ಕೃತ ಮಹಿಳಾ ಸಹಾಯವಾಣಿ 181 ಮೂಲಕ ಸರ್ಕಾರವು ಸ್ಪಂದಿಸುತ್ತಿದೆ.
▪️ಗೃಹಲಕ್ಷ್ಮಿ ಯೋಜನೆ — “ಮಹಿಳೆಯ ಕೈಗೆ ನೇರವಾಗಿ ಧನಸಹಾಯ, ಕುಟುಂಬದ ಆರ್ಥಿಕ ಭದ್ರತೆಗೆ ಸರ್ಕಾರದ ನಿಷ್ಠೆ.”
Gruhalakshmi scheme: ಅನರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಪರಿಶೀಲಿಸಿ
▪️ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ https://ahara.karnataka.gov.in/Home/EServices
▪️ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
▪️ಅಲ್ಲಿ e-Ration Card ಎಂಬ ಆಯ್ಕೆ ಕಾಣಿಸುತ್ತದೆ
▪️Show cancelled/Suspended ಮೇಲೆ ಕ್ಲಿಕ್ ಮಾಡಿ 
▪️ಲಿಸ್ಟ್ ನಲ್ಲಿ ಜಿಲ್ಲೆ, ತಿಂಗಳು, ತಾಲೂಕನ್ನು ಆಯ್ಕೆ ಮಾಡಿ
▪️ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು
▪️ಅದರಲ್ಲಿ ರದ್ದು ಆಗಿರುವುದಕ್ಕೆ ಕಾರಣ ನೀಡಲಾಗಿರುತ್ತದೆ.