IDBI Recuritment -2025 ಪ್ರತಿಷ್ಠಿತ ಇಂಡಿಯನ್ ಡೆವಲಪ್ಮೆಂಟ್ ಬ್ಯಾಂಕ್ ದಲ್ಲಿ ಜೂನಿಯರ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ್ [IDBI] ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ.ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ. ಮುಂಬರುವ ಜೂನ್ 8ರಂದು ಆನ್‌ಲೈನ್ ಪರೀಕ್ಷೆ ನಡೆಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
IDBI ನೇಮಕಾತಿ: ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್
ಹುದ್ದೆಗಳ ಸಂಖ್ಯೆ: 676
ಈ ಸಾಮಾನ್ಯ ವರ್ಗದವರಿಗೆ 271, ಎಸ್‌ಸಿ ಅಭ್ಯರ್ಥಿಗಳಿಗೆ 140, ಎಸ್‌ಟಿ ಅಭ್ಯರ್ಥಿಗಳಿಗೆ 74, ಒಬಿಸಿ ಅಭ್ಯರ್ಥಿಗಳಿಗೆ 124 ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ 67 ಹುದ್ದೆಗಳನ್ನು ಮೀಸಲಿಡಲಾಗಿದೆ.
IDBI ನೇಮಕಾತಿ: ವಿದ್ಯಾರ್ಹತೆ ಏನು?
ಕಲೆ, ವಾಣಿಜ್ಯ, ವಿಜ್ಞಾನ ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿರು ತ್ತದೆ. ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.
ಎಸ್‌ಸಿ/ಎಸ್‌ಟಿ/ವಿಶೇಷ ಚೇತನ ಅಭ್ಯರ್ಥಿಗಳಾಗಿದ್ದರೆ ಶೇಕಡಾ 55 ಅಂಕ ಪಡೆದು ಪಾಸಾಗಿರಬೇಕು. ಇದಕ್ಕೆ ಪೂರಕವಾದ ಯಾವುದೇ ಡಿಪ್ಲೊಮಾ ಕೋರ್ಸ್‌ಗಳನ್ನು ಅರ್ಹತೆ ಯನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ವಯೋಮಿತಿ ನಿಗದಿ:
ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ, ಗರಿಷ್ಠ 25 ವರ್ಷ. ಅಂದರೆ ಅಭ್ಯರ್ಥಿಗಳು 2000ರ ಮೇ 2ರ ಮೊದಲು ಹಾಗೂ 2005ರ ಮೇ 1ರ ( ಈ ದಿನಾಂಕ ಗಳು ಸೇರಿದಂತೆ) ನಂತರ ಜನಿಸಿದವರಾಗಿರಬಾರದು.
IDBI ಬ್ಯಾಂಕ್ ನೇಮಕಾತಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಆನ್‌ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ, ವೈಯಕ್ತಿಕ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ.
ಆನ್‌ಲೈನ್ ಪರೀಕ್ಷೆಯಲ್ಲಿ ಲಾಜಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಶನ್‌ಗೆ ಸಂಬಂಧಿಸಿದ 60 ಅಂಕಗಳ 60 ಪ್ರಶ್ನೆಗಳು, ಇಂಗ್ಲಿಷ್ ಲಾಂಗ್ವೇಜ್ ಮತ್ತು ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಗೆ ಸಂಬಂಧಿಸಿದಂತೆ ತಲಾ 40 ಅಂಕಗಳ 40 ಪ್ರಶ್ನೆಗಳು ಹಾಗೂ ಜನರಲ್ ಅವೇರ್ನೆಸ್ / ಬ್ಯಾಂಕಿಂಗ್/ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದಂತೆ 60 ಅಂಕಗಳ 60 ಪ್ರಶ್ನೆಗಳನ್ನು ನೀಡಲಾಗುತ್ತದೆ.
ನೇಮಕಾತಿ ಪೂರ್ವ ತರಬೇತಿ:
SC/ST /OBC ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ. ಇದರ ಅಗತ್ಯವಿದ್ದವರು ಅರ್ಜಿ ಸಲ್ಲಿಸುವಾಗಲೇ ಇದಕ್ಕೆ ಸಂಬಂಧಿಸಿದ ಅರ್ಜಿ ದಾಖಲೆಯನ್ನು ಸಲ್ಲಿಸಲು ಸೂಚಿಸಲಾಗಿದೆ.
IDBI ನೇಮಕಾತಿ: ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ/ಎಸ್‌ಟಿ/ವಿಶೇಷ ಅಭ್ಯರ್ಥಿಗಳು ಇಂಟಿಮೇಷನ್ ಫೀ ಮಾತ್ರ 250 ರೂ. ಪಾವತಿಸಬೇಕು.
ಉಳಿದೆಲ್ಲಾ ವರ್ಗದವರು ಇಂಟಿಮೇಷನ್ ಫೀ 250 ರೂ. ಸೇರಿ ಒಟ್ಟು 1050 ರೂ. ಶುಲ್ಕವಾಗಿ ಪಾವತಿಸಬೇಕು. ಇದರೊಂದಿಗೆ ಬ್ಯಾಂಕ್ ಸೇವಾ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
IDBI ನೇಮಕಾತಿ : ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-05- 2025
ಪರೀಕ್ಷಾ ದಿನಾಂಕ: ಜೂನ್ 8, 2025
IDBI ಬ್ಯಾಂಕ್ ನೇಮಕಾತಿ: ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು:
ಬೆಂಗಳೂರು,ಬೆಳಗಾವಿ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮೈಸೂರು, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿ,
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: CLICK HERE
ಅರ್ಜಿ ಸಲ್ಲಿಕೆಗೆ ಲಿಂಕ್: CLICK HERE
ಅಧಿಕೃತ ವೆಬ್ಸೈಟ್: CLICK HERE
No comments:
Post a Comment