Schedule Caste Servy Tricks: Just take a look-2025
ಶಿಕ್ಷಕ ಬಂಧುಗಳೇ...
ಜಾತಿ ಸಮೀಕ್ಷೆ ಮಾಡೋಕೆ ಹೋಗುತ್ತಿರುವವರಿಗೆ ಕೆಲವೊಂದು ಟಿಪ್ಸ್ ಪೂರ್ತಿ ಓದಿ ಖಂಡಿತ ಸಹಾಯ ಆಗುತ್ತೆ.
ಮತದಾನ ಪಟ್ಟಿಯ ಕ್ರಮ ಸಂಖ್ಯೆಯಂತೆ ಸಮೀಕ್ಷೆ ಮಾಡಬೇಡಿ, ಒಂದು ಬೀದಿ , ಒಂದು ಏರಿಯಾ ಅಥವಾ ಒಂದು ರಸ್ತೆ ಬದಿ ಅನುಸರಿಸಿ ಸಮೀಕ್ಷೆ ಮಾಡಿ ತುಂಬಾ ಸುಲಭವಾಗುತ್ತದೆ.
ಒಂದು ಮನೆ ಸಮೀಕ್ಷೆ ಆದ ನಂತರ ಮತದಾರರ ಪಟ್ಟಿಯಲ್ಲಿ ನೋಡಿ ಆ ಕುಟುಂಬಕ್ಕೆ ಟಿಕ್ ಗುರುತು ಮಾಡಿಕೊಳ್ಳಿ
ಸಮೀಕ್ಷೆ ಮುಗಿಸಿದ ಮನೆಯ ಬಾಗಿಲು ಅಥವಾ ಗೊಡೆಗೆ ಸಮೀಕ್ಷೆ ಮಾಡಿದ ಬಗ್ಗೆ ಬರೆದು ಬನ್ನಿ. ಉದಾಹರಣೆಗೆ ಜಾ. ಸ. 2025(ಜಾತಿ ಸಮೀಕ್ಷೆ 2025) ಅಥವಾ CC2025 ( CASTE CENSUS) ಎಂದು ನಮೂದಿಸಿ ಇದರಿಂದ ನಿಮಗೆ ಗೊಂದಲ ಆಗುವುದಿಲ್ಲ. ಸಮೀಕ್ಷೆ ಪೂರ್ಣಗೊಂಡ ಅಥವಾ ಉಳಿದ ಮನೆಗಳ ಮಾಹಿತಿ ಸಿಗುತ್ತದೆ
ಸಮೀಕ್ಷೆ ವತಿಯಿಂದ ಕೊಡುವ ಐಡಿ ಕಾರ್ಡ್ ಹಾಕಿಕೊಂಡು ಹೋಗಿ ಒಂದು ವೇಳೆ ಸಮೀಕ್ಷೆ ವತಿಯಿಂದ ಐಡಿ ಕಾರ್ಡ್ ಕೊಡದಿದ್ದರೆ ಈಗಾಗಲೇ ನಿಮ್ಮ ಹತ್ತಿರ ಇರುವ ಶಿಕ್ಷಣ ಇಲಾಖೆಯ ಐಡಿ ಕಾರ್ಡ್ ಕತ್ತಿಗೆ ಹಾಕಿಕೊಂಡು ಹೋಗಿ
ರೇಷನ್ ಕಾರ್ಡ್ ಮೊದಲು ಕೇಳಿ ಪಡೆದು ನಂತರ ಸಮೀಕ್ಷೆ ಮಾಡಿ, BPL ರೇಷನ್ ಕಾರ್ಡ್ ಪಡೆದರೆ ಅರ್ಧ ಕೆಲಸ ಮುಗಿದಂತೆ, ಕೆಲಸ ಸುಲಭವಾದಂತೆ.
ಪ್ರತಿಯೊಂದು BPL ರೇಷನ್ ಕಾರ್ಡ್ ನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಬೇಕು
BPL ರೇಷನ್ ಕಾರ್ಡ್ ಆಧಾರದ ಮೇಲೆ ಸಮೀಕ್ಷೆ ಮಾಡಿ, ಮತದಾರರ ಪಟ್ಟಿ ಆಧಾರದಲ್ಲಿ ಸಮೀಕ್ಷೆ ಮಾಡಬೇಡಿ, ಮತದಾರರ ಪಟ್ಟಿ ನಿಮಗೆ ಕುಟುಂಬ ಅಥವಾ ಮನೆಯನ್ನು ಗುರುತಿಸಲು ಅಷ್ಟೇ ಬಳಸಿಕೊಳ್ಳಲು ಸಹಾಯಕ.
ಮಾಹಿತಿದಾರರು ಕೊಡುವ ಮಾಹಿತಿಯನ್ನು ಅಂತಿಮ ಎಂದು ಪರಿಗಣಿಸಬೇಕು, ಕ್ರಾಸ್ ಪ್ರಶ್ನೆ ಕೇಳಬೇಡಿ
ಸಮೀಕ್ಷೆ ಸತ್ಯಾಂಶವನ್ನು ಹೊಂದಿರಲಿ, ಊಹೆಗಳಿಗೆ ಅವಕಾಶ ಬೇಡ.
ಆದಷ್ಟೂ ಸೌಜನ್ಯಯುತವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ, ಕೆಲವೊಮ್ಮೆ ಕೆಲವೊಂದು ಪ್ರಶ್ನೆಗಳಿಗೆ ಮನವೊಲಿಸಿ ಉತ್ತರ ಪಡೆಯಬೇಕಾಗುತ್ತದೆ.
ತಾಳ್ಮೆಯಿಂದ ನಡೆದುಕೊಳ್ಳುವುದು ಮತ್ತು ತಾಳ್ಮೆಯಿಂದ ಪ್ರಶ್ನೆ ಕೇಳುವುದು ಉತ್ತಮ.
ಮಾಹಿತಿದಾರರು ಹೇಳುವ ಜಾತಿಯೇ ಅಂತಿಮ ಆಗಿರುತ್ತದೆ.
ಯಾವುದೇ ಕಾರಣಕ್ಕೂ,ಡಮ್ಮಿ ಆಪ್ ನಲ್ಲಿ ಮಾಹಿತಿ ಹಾಕಬೇಡಿ ಅಥವಾ ಸಮೀಕ್ಷೆ ಮಾಡಬೇಡಿ. ಅಧಿಕೃತ ಆಪ್ ಅಥವಾ ಅಂತಿಮ ಆಪ್ ಬಿಡುಗಡೆ ಮಾಡಿದ ಆಪ್ ನಲಿ ಮಾತ್ರ ಸಮೀಕ್ಷೆ ಮಾಡಿ
BPL ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಈ 3 ರಲ್ಲಿ ಒಂದು ಕಡ್ಡಾಯವಾಗಿ ಇದ್ದರೆ ಮಾತ್ರ ಆ ಮನೆಯ ಸಮೀಕ್ಷೆ ಮಾಡಿ
ವಿವಾಹವಾಗಿ ಬೇರೆ ಊರಿನಲ್ಲಿರುವ ಅಥವಾ ಗಂಡನ ಮನೆಯಲ್ಲಿರುವ ಮಹಿಳಾ ಸದಸ್ಯಳ ಹೆಸರನ್ನು ಆ ಮನೆಯ ಸಮೀಕ್ಷೆ ಪಟ್ಟಿಯಿಂದ delete ಮಾಡಿ.
ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾದರೆ ಒಂದು ಚಾರ್ಜರ್ ಮತ್ತು ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಿ
ಸಮೀಕ್ಷೆಯಲ್ಲಿ ಪ್ರತಿ ಕುಟುಂಬಕ್ಕೆ 42 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ
ನಿಮಗೆ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯಾದರೆ ಸಮೀಕ್ಷೆ ಸಹಾಯವಾಣಿ, ಮೇಲ್ವಿಚಾರಕರು, ಮಾಸ್ಟರ್ ಟ್ರೈನರ್, ಗಣತಿ ತಾಲೂಕು ಉಸ್ತುವಾರಿ ಯವರಿಗೆ ಕಾಲ್ ಮಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಮೀಕ್ಷಾ ಕೈಪಿಡಿ ಪುಟ ಸಂಖ್ಯೆ 83 ರಿಂದ 90 ವರೆಗೆ ಸ್ಪಷ್ಟೀಕರಣ ಇದೆ ಓದಿಕೊಳ್ಳಿ.
No comments:
Post a Comment