Sunday, October 12, 2025

AISSE: Sainik school admission-2026 ಸೈನಿಕ ಶಾಲೆಗೆ ಅರ್ಜಿ ಆಹ್ವಾನ- 6, 9ನೇ ತರಗತಿಗೆ ಪ್ರವೇಶ,ಲಿಖಿತ ಪರೀಕ್ಷೆ ಮೂಲಕ ಆಯ್ಕೆ

  ISARESOURCEINFO       Sunday, October 12, 2025
AISSEE: Sainik school admission-2026 ಸೈನಿಕ ಶಾಲೆಗೆ ಅರ್ಜಿ ಆಹ್ವಾನ- 6, 9ನೇ ತರಗತಿಗೆ ಪ್ರವೇಶ,ಲಿಖಿತ ಪರೀಕ್ಷೆ ಮೂಲಕ ಆಯ್ಕೆ





AISSEE: ದೇಶಾದ್ಯಂತ ಸೈನಿಕ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ನಡೆಸಲಾಗುವ ಅಖಿಲ ಭಾರತ ಸೈನಿಕ ಸ್ಕೂಲ್ ಪ್ರವೇಶ ಪರೀಕ್ಷೆಗೆ (ಎಐಎಸ್‌ಎಸ್‌ಇಇ-2026) ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಅರ್ಜಿಗಳನ್ನು ಆಹ್ವಾನಿಸಿದೆ. 

ವಿದ್ಯಾರ್ಥಿಗಳು ಆರನೇ ತರಗತಿ ಹಾಗೂ 9ನೇ ತರಗತಿಗೆ ಹರಿದ ಮನದ ಪಡೆಯಬಹುದಾಗಿದೆ. ಬಾಲಕಿಯರೂ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಸ್ವಾಮ್ಯದ 33 ಹಾಗೂ ಹೊಸದಾಗಿ ಆರಂಭಿಸಲಾದ ಎಲ್ಲ 69 ಶಾಲೆಗಳಲ್ಲಿ 6ನೇ ತರಗತಿ ಹಾಗೂ ಈ ಪೈಕಿ ಅನುಮತಿ ಪಡೆದ 19 ಹೊಸ ಶಾಲೆಗಳಲ್ಲಿ 9ನೇ ತರಗತಿ ಪ್ರವೇಶ ಕಲ್ಪಿಸಲಾಗುತ್ತದೆ.

ವಿದ್ಯಾರ್ಥಿಗಳು ಒಂದೇ ಅರ್ಜಿ ಸಲ್ಲಿಸಬೇಕಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳಿದ್ದಲ್ಲಿ ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಮಾಹಿತಿ ಕೈಪಿಡಿಯನ್ನು ಡೌನ್‌ಲೋಡ್ ಮಾಡಿಕೊಂಡು ಗಮನಿಸುವಂತೆ ಸೂಚಿಸಲಾಗಿದೆ.

ಅರ್ಹತೆಗಳು ಏನು?:

▪️ಆರನೇ ತರಗತಿ: ಮಾ.31ಕ್ಕೆ ಅನ್ವಯಿಸುವಂತೆ 10-12 ವರ್ಷದೊಳಗಿರಬೇಕು. ದಿನಾಂಕ: 01.04.2014 ಮತ್ತು ದಿನಾಂಕ: 31.06.2016ರ ನಡುವೆ ಜನಿಸಿರಬೇಕು.

▪️9ನೇ ತರಗತಿ: 13-15 ವರ್ಷದೊಳಗಿನವರಾಗಿರಬೇಕು. ದಿನಾಂಕ: 01.04.2011 ಮತ್ತು ದಿನಾಂಕ: 31.06.20130 ನಡುವೆ ಜನಿಸಿರಬೇಕು.

ಮುಖ್ಯ ಮಾಹಿತಿ:

▪️ದೇಶದ ಯಾವುದೇ ಭಾಗದ ಶಾಲೆಗಳಿಗೆ ಆಯ್ಕೆಯಾಗಬಹುದು.
▪️ರಾಜ್ಯದ ಐದು ಜಿಲ್ಲೆಗಳಲ್ಲಿವೆ ಸೈನಿಕ ಶಾಲೆಗಳು.
▪️ಬಾಲಕಿಯರೂ ಅರ್ಜಿ ಸಲ್ಲಿಸಬಹುದು.
▪️10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅವಕಾಶ.


ಪರೀಕ್ಷಾ ಕೇಂದ್ರಗಳು:

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಬೈಲಕುಪ್ಪೆ, ಚಿತ್ರದುರ್ಗ, ಧಾರವಾಡ, ಕಲಬುರಗಿ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ.

ಆಯ್ಕೆ ಪಟ್ಟಿ ಹೇಗೆ ಪ್ರಕಟ ಮಾಡಲಾಗುತ್ತೆ?:

ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಆಯ್ಕೆಪಟ್ಟಿಯನ್ನು ತಯಾರಿಸಲಾಗುತ್ತದೆ. ಶಾಲಾವಾರು, ವರ್ಗವಾರು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಆಯಾ ರಾಜ್ಯ ಹಾಗೂ ಬೇರೆ ರಾಜ್ಯಗಳ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ಪರೀಕ್ಷಾ ಶುಲ್ಕ: 

▪️ಪರಿಶಿಷ್ಟರಿಗೆ: 700 ರೂ.
▪️ಉಳಿದವರಿಗೆ: 850 ರೂ.

ಲಿಖಿತ ಪರೀಕ್ಷೆ ಸ್ವರೂಪ:

ಪ್ರವೇಶ ಪರೀಕ್ಷೆಯು ಲಿಖಿತ ಸ್ವರೂಪದಾಗಿದ್ದು, 6ನೇ ತರಗತಿಗೆ 150 ನಿಮಿಷ ಹಾಗೂ 9ನೇ ತರಗತಿಗೆ 180 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಒಎಂಆರ್ ಶೀಟ್‌ನಲ್ಲಿ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಆರನೇ ತರಗತಿಗೆ ಭಾಷೆಗೆ ಸಂಬಂಧಿಸಿದ 25 ಪ್ರಶ್ನೆಗಳಿಗೆ 50 ಅಂಕ, ಗಣಿತದ 50 ಪ್ರಶ್ನೆಗಳಿಗೆ 150 ಅಂಕ, ಬುದ್ಧಿಮತ್ತೆ, ಸಾಮಾನ್ಯ ಜ್ಞಾನ ತಲಾ 25 ಪ್ರಶ್ನೆಗಳಿಗೆ 50 ಅಂಕಗಳಿದ್ದು, ಒಟ್ಟಾರೆ 125 ಪ್ರಶ್ನೆಗಳಿಗೆ 300 ಅಂಕಗಳು ಇರಲಿವೆ. 

ಇನ್ನು, 9ನೇ ತರಗತಿಗೆ 150 ಪ್ರಶ್ನೆಗಳಿದ್ದು, 400 ಅಂಕಗಳು ಇರುತ್ತವೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದಿಲ್ಲ. 9ನೇ ತರಗತಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಆದರೆ, 6ನೇ ತರಗತಿಗೆ ಕನ್ನಡ ಸೇರಿ ಇತರ ಭಾಷೆಗಳಲ್ಲಿ ಉತ್ತರ ನೀಡಬಹುದಾಗಿದೆ. ಅರ್ಹತೆಗೆ ಪ್ರವೇಶ ಪರೀಕ್ಷೆಯ ಪ್ರತಿ ಸೆಕ್ಷನ್‌ನಲ್ಲಿ ಶೇ.25 ಅಂಕ ಹಾಗೂ ಒಟ್ಟಾರೆಯಾಗಿ ಶೇ.40 ಅಂಕಗಳನ್ನು ಗಳಿಸಬೇಕು.

ರಾಜ್ಯದಲ್ಲಿ ಎಲ್ಲಿವೆ?

ದೇಶಾದ್ಯಂತ ಒಟ್ಟು ಸರ್ಕಾರಿ ಸ್ವಾಮ್ಯದ 33 ಹಾಗೂ ಖಾಸಗಿ ಸಹಭಾಗಿತ್ವದ 69 ಸೈನಿಕ ಶಾಲೆಗಳಿವೆ. ರಾಜ್ಯದ ವಿಜಯಪುರ, ಕೊಡಗು, ಮೈಸೂರು, ಬೆಳಗಾವಿ, ಬೀದರ್ ಹಾಗೂ ರಾಯಚೂರಿನಲ್ಲಿ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗಿದೆ.

ಸೀಟುಗಳ ಹಂಚಿಕೆ:

ಆಯಾ ಸೈನಿಕ ಶಾಲೆಗಳ ಒಟ್ಟಾರೆ ಸೀಟುಗಳಲ್ಲಿ ಶೇ.67 ಸ್ಥಾನಗಳನ್ನು ಆಯಾ ರಾಜ್ಯದವರಿಗೆ ಮೀಸಲಾಗಿರಿಸಿದ್ದರೆ, ಉಳಿದ ಶೇ.37 ಸೀಟುಗಳನ್ನು ಹೊರರಾಜ್ಯದವರಿಗೆ ನೀಡಲಾಗುತ್ತದೆ. ಹೀಗಾಗಿ ದೇಶದ ಯಾವುದೇ ಸೈನಿಕ ಶಾಲೆಗಳಲ್ಲಿ ಪ್ರವೇಶ ಪಡೆಯುವ ಅವಕಾಶ ವಿದ್ಯಾರ್ಥಿಗಳಿಗೆ ಇರಲಿದೆ.

ಸೈನಿಕ ಶಾಲೆಗಳ ಪ್ರಾಮುಖ್ಯತೆ:

ರಕ್ಷಣಾ ಇಲಾಖೆ ಅಧೀನದಲ್ಲಿರುವ ಸೈನಿಕ ಸ್ಕೂಲ್ ಸೊಸೈಟಿ ಮೂಲಕ ಸೈನಿಕ ಶಾಲೆಗಳನ್ನು ನಿರ್ವಹಿಸಲಾಗುತ್ತದೆ. ಸಿಬಿಎಸ್‌ಇ ಪಠ್ಯಕ್ರಮವನ್ನು ಇಲ್ಲಿ ಅನುಸರಿಸಲಾಗುತ್ತಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಟ್ರೇನಿಂಗ್ ಅಕಾಡೆಮಿ ಫಾರ್ ಆಫೀಸರ್ ಸಂಸ್ಥೆಗಳಿಗೆ ಇಲ್ಲಿ ಕಡೆಟ್‌ಗಳನ್ನು ರೂಪಿಸಲಾಗುತ್ತದೆ. ಸದ್ಯ ದೇಶದಲ್ಲಿ ಒಟ್ಟಾರೆ 102 ಸೈನಿಕ ಶಾಲೆಗಳಿವೆ.


ಅರ್ಜಿ ಸಲ್ಲಿಕೆ ಮಾಡುವ ವಿಧಾನ: 

ಅಭ್ಯರ್ಥಿಗಳು https://exams.nta.nic.in/sainik-school-society/ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ. ನಂತರ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ ವಿವರಗಳನ್ನು ದಾಖಲಿಸಬೇಕು ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ. ಶುಲ್ಕ ಸಲ್ಲಿಕೆ ಬಳಿಕವಷ್ಟೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗಮನಿಸಿ: 

ಪ್ರವೇಶಪತ್ರದಲ್ಲಿ ನಮೂದಾಗುವ ಪರೀಕ್ಷಾ ದಿನ, ಸ್ಥಳ ಹಾಗೂ ಪರೀಕ್ಷಾ ಕೇಂದ್ರದ ಬದಲಾವಣೆ ಮನವಿ ಪುರಸ್ಕರಿಸಲಾಗುವುದಿಲ್ಲ, ಜತೆಗೆ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.

ಮಹತ್ವದ ದಿನಾಂಕಗಳು:

▪️ಅರ್ಜಿ ಸಲ್ಲಿಸಲು ಕೊನೆಯ ದಿನ: ಅ.30 
▪️ಶುಲ್ಕ ಪಾವತಿಗೆ ಕೊನೆಯ ದಿನ: ಅ.31
▪️ಅರ್ಜಿ ತಿದ್ದುಪಡಿ ಅವಕಾಶ: ನ.2-4ರವರೆಗೆ
▪️ಲಿಖಿತ ಪರೀಕ್ಷೆ ಅವಧಿ: 2026ರ ಜನವರಿ





logoblog

Thanks for reading AISSE: Sainik school admission-2026 ಸೈನಿಕ ಶಾಲೆಗೆ ಅರ್ಜಿ ಆಹ್ವಾನ- 6, 9ನೇ ತರಗತಿಗೆ ಪ್ರವೇಶ,ಲಿಖಿತ ಪರೀಕ್ಷೆ ಮೂಲಕ ಆಯ್ಕೆ

Previous
« Prev Post