ಬ್ರೆಜಿಲ್‌ನಲ್ಲಿ ಉನ್ನತ ವ್ಯಾಸಂಗ ಭಾರತೀಯರಿಗೆ ಸ್ಕಾಲರ್‌ಶಿಪ್
ಮಾನ್ಯತೆ ಪಡೆದ ಬ್ರೆಜಿಲಿಯನ್ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2026ನೇ ಸಾಲಿನಲ್ಲಿ ಸ್ನಾತಕೋತ್ತರ ಅಧ್ಯಯನಕ್ಕಾಗಿ ಪ್ರವೇಶ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಬ್ರೆಜಿಲ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಿಇಸಿ-ಪಿಜಿ (ಪದವಿ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ) ಯೋಜನೆಯಡಿ ವಿದ್ಯಾರ್ಥಿವೇತನವನ್ನು ಘೋಷಿಸಿದೆ.
ಈ ಕಾರ್ಯಕ್ರಮವು ಬ್ರೆಜಿಲಿಯನ್ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದ ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ದೇಶೀಯ ಹಾಗೂ ವಿದೇಶಿ ಡಾಕ್ಟರೇಟ್ (ಸ್ಯಾಂಡ್‌ವಿಚ್ ಡಾಕ್ಟರೇಟ್) ಕಾರ್ಯಕ್ರಮಗಳನ್ನು ಒಳಗೊಂಡಂತೆ ವೈಯಕ್ತಿಕ ಪದವಿ ಕೋರ್ಸ್ ಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಿದೆ. ಪ್ರಸ್ತುತ, ಸ್ಯಾಂಡ್‌ವಿಚ್ ಡಾಕ್ಟರೇಟ್ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅಭ್ಯರ್ಥಿಗಳ ನಾಮನಿರ್ದೇಶನ ಅಥವಾ ಆಯ್ಕೆ ಪ್ರಕ್ರಿಯೆಯಲ್ಲಿ ತನ್ನ ಯಾವುದೇ ಪಾತ್ರವಿಲ್ಲವೆಂದು ತಿಳಿಸಿದೆ.ಪೂರ್ಣ ಆಯ್ಕೆ, ಮೌಲ್ಯಮಾಪನ ಮತ್ತು ಅಂತಿಮ ಅನುಮೋದನೆ ಪ್ರಕ್ರಿಯೆ ದಾನಿ ದೇಶವಾದ ಬ್ರೆಜಿಲ್ ಸರ್ಕಾರದ ವತಿಯಿಂದ ಸಂಪೂರ್ಣವಾಗಿ ನಡೆಸಲಾಗುತ್ತದೆ.
ಕಾರ್ಯಕ್ರಮದ ಬಗ್ಗೆ
ಪಿಇಸಿ-ಪಿಜಿ (Programa de Estudantes-Convênio de Pós-Graduação) ಎಂಬುದು ಬ್ರೆಜಿಲ್ ಸರ್ಕಾರದ ದೀರ್ಘಕಾಲದ ಉಪಕ್ರಮವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಶೈಕ್ಷಣಿಕ ಸಹಕಾರವನ್ನು ಉತ್ತೇಜಿಸಲು ಮತ್ತು ಅಕಾಡೆಮಿಕ್ ಬಾಂಧವ್ಯಗಳನ್ನು ಬಲಪಡಿಸಲು ಉದ್ದೇಶಿಸಲಾಗಿದೆ.
▪️ಅರ್ಜಿ ಸಲ್ಲಿಸಲು ಕೊನೇ ದಿನ: ಡಿಸೆಂಬರ್ 30, 2025
▪️ಆಯ್ಕೆಪಟ್ಟಿ ಪ್ರಕಟ: ಏಪ್ರಿಲ್ 30, 2026
▪️ತರಗತಿಗಳ ಆರಂಭ: ಆಗಸ್ಟ್ 2026
▪️ಅರ್ಜಿ ಸಲ್ಲಿಕೆ ಲಿಂಕ್: https://inscricao.capes.gov.br/