ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಪೈಲಟ್ (ಫೈಟ್ ಕ್ರೂ) ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಗಳಿಗೆ ಕಂಪ್ಯೂಟರ್ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನೀಡುವ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ. ಈ ಕ್ರಮದಿಂದಾಗಿ ಅರ್ಜಿ ಪ್ರಕ್ರಿಯೆ ಸುಗಮವಾಗುವುದರ ಜೊತೆಗೆ, ಕೈಯಿಂದಲೇ ದಾಖಲೆ ಸಲ್ಲಿಸುವ ಅಗತ್ಯವೂ ತಪ್ಪಲಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆ ಯಲ್ಲಿ, ಸಿಬಿಎಸ್‌ಇ ಮಂಡಳಿಯ 10 ಮತ್ತು 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಪ್ರಮಾಣಪತ್ರವನ್ನು ಡಿಜಿಲಾಕರ್ ಮೂಲಕ ದೃಢೀಕರಿಸಿದರೆ ಅವರಿಗೆ ಕಂಪ್ಯೂಟರ್ ಸಂಖ್ಯೆ ಸ್ವಯಂಚಾಲಿತವಾಗಿ ಸಿಗಲಿದೆ ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಡಿಜಿಲಾಕರ್‌ನಲ್ಲಿ ಲಭ್ಯವಿರುವ ಇತರೆ ಶಿಕ್ಷಣ ಮಂಡಳಿಗಳ 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ ಅಥವಾ ಪ್ರಮಾಣಪತ್ರ ಅಭ್ಯರ್ಥಿಗಳಿಗೂ ಹೊಂದಿರುವ ವಿಸ್ತರಿಸಲಾಗುವುದು.
ಹೊಸ ವ್ಯವಸ್ಥೆಯಂತೆ, ಡಿಜಿಸಿಎ ಪರೀಕ್ಷಾ ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ಕೂಡಲೇ, ಅರ್ಹತಾ ಮಾನದಂಡಗಳನ್ನು ಪೂರೈಸಿದ ಅಭ್ಯರ್ಥಿಗೆ ಕಂಪ್ಯೂಟರ್ ಸಂಖ್ಯೆ ತಕ್ಷಣವೇ ಸ್ವಯಂಚಾಲಿತವಾಗಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.