Thursday, October 30, 2025

ESR: ರಾಜ್ಯ ಸರ್ಕಾರಿ ನೌಕರರ ಸೇವಾ ವಹಿಯನ್ನು ESR ನಲ್ಲಿ ಅನುಷ್ಠಾನ

  ISARESOURCEINFO       Thursday, October 30, 2025
ESR: ರಾಜ್ಯ ಸರ್ಕಾರಿ ನೌಕರರ ಸೇವಾ ವಹಿಯನ್ನು ESR ನಲ್ಲಿ ಅನುಷ್ಠಾನ



ಮೇಲ್ಕಂಡ ಉಲ್ಲೇಖಗಳತ್ತ ತಮ್ಮ ಗಮನವನ್ನು ಸೆಳೆಯಲಾಗಿದೆ. ಸದರಿ ಉಲ್ಲೇಖಗಳನ್ವಯ 2021-22 ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ" Electronic Service Register (ESR)ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ. 

ಹಾಗೂ ಉಲ್ಲೇಖಿತ ಸರ್ಕಾರದ ಸುತ್ತೋಲೆ (3) & (4) ರಂತೆ, ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ಇಎಸ್‌ಆರ್‌ಗೆ ಬದಲಾಯಿಸಿ ಮುಂದೆ ಎಎಸ್‌ಆರ್ ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ. ಹಾಗೂ ಹೆಚ್‌ಆರ್‌ಎಂಎಸ್-1 ತಂತ ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು ಹೆಚ್‌ಆರ್‌ಎಂಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ ಹೆಚ್‌ಆರ್‌ಎಂಎಸ್-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿತ್ತು.

HOD ಮಟ್ಟದಲ್ಲಿ ಡಿಡಿಓಗಳು ವರದಿಸಿದ ಸಮಸ್ಯೆಯನ್ನು /ವಿನಂತಿಯನ್ನು ತ್ವರಿತವಾಗಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ ಮತ್ತು ಆದ್ದರಿಂದ ESR ಅನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಆದ್ದರಿಂದ HRMS 1 ರಲ್ಲಿನ ಸರ್ಕಾರಿ ನೌಕರರುಗಳ ಡೇಟಾದಲ್ಲಿನ ತಿದ್ದುಪಡಿಗಳು ಅಥವಾ ನವೀಕರಣಗಳಿಗಾಗಿ ಮಾಡಲಾದ ವಿನಂತಿಯನ್ನು ಮೊದಲ ಆದ್ಯತೆಯ ಮೇಲೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.

ಹೆಚ್ಚಿನ ಇಲಾಖೆಗಳು ಈಗಾಗಲೇ HRMS 2 ಗೆ ಸೇರ್ಪಡೆಗೊಂಡಿವೆ. HRMS 2 ರಲ್ಲಿ ಒದಗಿಸಬೇಕಾದ ಸೇವೆಗಳಿಗಾಗಿ ನೌಕರರ ಸೇವಾ ವಿವರಗಳನ್ನು ESR ಬದಲಾಗಿ, ಪ್ರಸ್ತುತ HRMS 1 ರಿಂದ ಪಡೆಯಲಾಗುತ್ತಿದೆ. ಭವಿಷ್ಯದಲ್ಲಿ HRMS1 ಕಾರ್ಯನಿರ್ವಹಿಸುವುದು ನಿಲ್ಲಿಸಿದಾಗ, ನೌಕರರ ಡೇಟಾವನ್ನು HRMS 2 ವಿನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ESR ನಲ್ಲಿ ನೌಕರರ ಸೇವಾ ವಿವರಗಳನ್ನು ತುರ್ತಾಗಿ ನವೀಕರಿಸುವುದು ಬಹಳ ಅವಶ್ಯಕವಾಗಿದೆ.

ಮೊದಲನೇಯದಾಗಿ, ಮುಖ್ಯ ಕಾರ್ಯದರ್ಶಿಗಳು ಸೂಚಿಸಿರುವಂತೆ, ಮೂರು ವರ್ಷಗಳ ಒಳಗೆ ನಿವೃತ್ತರಾಗಲಿರುವ ನೌಕರರ ESR ಅನ್ನು ತುರ್ತಾಗಿ ತಯಾರಿಸಬೇಕಾಗಿದೆ ಏಕೆಂದರೆ ಭವಿಷ್ಯದಲ್ಲಿ AG ಪಿಂಚಣಿ ಉದ್ದೇಶಕ್ಕಾಗಿ ESR ನಿಂದಲೇ Form-7 ಸ್ವೀಕರಿಸುತ್ತಾರೆ. ಆದ್ದರಿಂದ ಇವರುಗಳ ESR ಪ್ರಥಮ ಆದ್ಯತೆಯಲ್ಲಿ ತಯಾರಿಸುವುದು ಅವಶ್ಯಕವಾಗಿದೆ.

ಗ್ರೂಪ್ ಎ ಮತ್ತು ಬಿ ಉದ್ಯೋಗಿಗಳ ಸೇವಾ ವಿವರಗಳನ್ನು AG ಯಿಂದ ಲಭ್ಯವಿರುವಂತೆ ಪಡೆಯಲಾಗುತ್ತದೆ ಮತ್ತು ನಂತರ ಅವರ ESR ಪೂರ್ಣಗೊಳಿಸುವಿಕೆಯ ಬಗ್ಗೆ ನಾವು ಸೂಕ್ತ ಮಾರ್ಗದರ್ಶನದೊಂದಿಗೆ ತಮಗೆ ತಿಳಿಸಲಾಗುವುದು.

HRMS 2 ರಲ್ಲಿ ಎಲ್ಲಾ ಸೇವೆಗಳನ್ನು ನೌಕರರಿಗೆ ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತದೆ. HRMS 2 ಪೂರ್ಣವಾಗಿ ಅನುಷ್ಠಾನ ಆದ ನಂತರ ಅವರ ವಿವರಗಳನ್ನು ESR LIVE ಮಾಡ್ಯೂಲ್ ನಲ್ಲಿ ಸ್ವಯಂಚಾಲಿತವಾಗಿ ಪಡೆಯಲಾಗುತ್ತದೆ. ಇದರೊಂದಿಗೆ, ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ESR ತಯಾರಿಸುವ ಅವಶ್ಯಕತೆ ಇರುವುದಿಲ್ಲ.

ಆದ್ದರಿಂದ, ESR ಅನುಷ್ಠಾನವನ್ನು ತಕ್ಷಣವೇ ಪೂರ್ಣಗೊಳಿಸಲು ತಾವು, ತಮ್ಮ ಡಿಡಿಓಗಳಿಗೆ ಸೂಚಿಸಿ ಹಾಗೂ ಸಿಬ್ಬಂದಿಗಳ ESR ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾಗದಂತೆ ವಿಶೇಷ ಗಮನವನ್ನು ವಹಿಸಿ ಸದರಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಇಲಾಖಾ ಹಂತದಲ್ಲಿ ಕ್ರಮ ತೆಗೆದುಕೊಳ್ಳಲು ತಮ್ಮನ್ನು ಕೋರಿದೆ.

logoblog

Thanks for reading ESR: ರಾಜ್ಯ ಸರ್ಕಾರಿ ನೌಕರರ ಸೇವಾ ವಹಿಯನ್ನು ESR ನಲ್ಲಿ ಅನುಷ್ಠಾನ

Previous
« Prev Post