KASS: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮಾಸಿಕ ವಂತಿಕೆಯನ್ನು ಪಾವತಿಸುವ ವಿಧಾನದ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.
1. ಉಲ್ಲೇಖಿತ ಸರ್ಕಾರದ ಆದೇಶದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯನ್ನು ಅಕ್ಟೋಬರ್ 01, 2025 ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದು, ಸದರಿ ಯೋಜನೆಗೆ ಸಂಬಂಧಿಸಿದಂತೆ. ಮತ್ತಷ್ಟು ಪರಿಷ್ಕೃತ ಸೂಚನೆಗಳನ್ನು ಸದರಿ ಆದೇಶದಲ್ಲಿ ನೀಡಲಾಗಿದೆ.
2. ಸದರಿ ಆದೇಶದಲ್ಲಿ, ಯೋಜನೆಗೆ ಮಾಸಿಕ ವಂತಿಗೆಯನ್ನು ಪಾವತಿಸುವ ಕುರಿತು, ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.
a. ಮಾಸಿಕ ವಂತಿಕೆಯನ್ನು ಪಾವತಿಸುವ ವಿಧಾನ
ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ 2ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ ಗೆ ಜಮಾ ಮಾಡತಕ್ಕದ್ದು.(ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ ಹೆಚ್‌ಅರ್‌ಎಂಎಸ್ ಮುಖಾಂತರ ತಿಳಿಸಲಾಗುವುದು)
3. ಸದರಿ ಸೂಚನೆಗಳಂತೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡುವ ತಂತ್ರಾಂಶದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಕಾಲಾವಕಾಶ ಬೇಕಾಗಿದ್ದು, ಅಕ್ಟೋಬರ್ 2025ರ ವೇತನ ಬಿಲ್ಲುಗಳಲ್ಲಿ ಸರ್ಕಾರಿ ನೌಕರರಿಂದ ವಂತಿಕೆಗಳು ಕಡಿತಗಳು ಪ್ರಾರಂಭವಾಗುವುದರಿಂದ, 2 ತಿಂಗಳ ಅವಧಿಯವರೆಗೆ ಅಥವಾ ತಂತ್ರಾಂಶದ ವ್ಯವಸ್ಥೆಯ ಅಭಿವೃದ್ಧಿಯಾಗುವವರೆಗೆ, ವಂತಿಕೆಗಳ ಕಡಿತಗಳನ್ನು ಖಜಾನೆ ಠೇವಣಿ ಖಾತೆಯಲ್ಲಿ ಕೇಂದ್ರಿಕೃತವಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ.
4. ಆದುದರಿಂದ ಮುಂದಿನ ಆದೇಶದವರೆಗೆ, ಈ ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಬ್ಯಾಕ್ ಖಾತೆಗೆ ಪಾವತಿಸಲು ಖಜಾನೆಗಳಲ್ಲಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.
1) ಖಜಾನೆಗಳಲ್ಲಿ, ವೇತನ ಬಿಲ್ಲುಗಳನ್ನು ತೀರಗೊಳಿಸುವಾಗ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯ ವಂತಿಗೆಗಳ ಮೊತ್ತವನ್ನು ಈ ಸಂಬಂಧ ಖಜಾನೆ 2ರಲ್ಲಿ ರಾಜ್ಯ ಹುಜೂರು ಖಜಾನೆ ಬೆಂಗಳೂರು ಇಲ್ಲಿ ತೆರೆಯಲಾಗಿರುವ ಠೇವಣಿ ಖಾತೆಗೆ ಟಿಟಿಆರ್ ಮೂಲಕ ವರ್ಗಾಯಿಸುವುದು.
2) ಖಜಾನೆ 2-ರಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಸ್ವೀಕರ್ತರ ಐಡಿಯನ್ನು ಸೃಜಿಸಲಾಗಿದ್ದು ವಿವರಗಳು ಈ ಕೆಳಕಂಡಂತಿದೆ.
3) ಜಂಟಿ ನಿರ್ದೇಶಕರು, ರಾಜ್ಯ ಹುಜೂರು ಖಜಾನೆ, ಬೆಂಗಳೂರು ಇವರು, ಮಾಸಿಕ ಲೆಕ್ಕ ಮುಕ್ತಾಯವಾದ ನಂತರ, ಸದರಿ ಖಾತೆಯಲ್ಲಿ ಸಂಗ್ರಹವಾಗಿರುವ ವಂತಿಗೆಗಳ ಮೊತ್ತವನ್ನು ಸೆಳೆದು, ಮೇಲ್ಕಂಡ ಐಡಿ ಗೆ ಪಾವತಿಸುವುದು ಹಾಗೂ ವಂತಿಗೆದಾರರ ವಿವರಗಳುಳ್ಳ ಸಂಚಿತ ಷೆಡ್ಯೂಲ್ ಪ್ರತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಲಭ್ಯಗೊಳಿಸುವುದು. ಜಮೆ ಹಾಗೂ ಪಾವತಿಗಳ ಕುರಿತಂತೆ ನಿಯಮಿತವಾಗಿ ಲೆಕ್ಕ ಸಮನ್ವಯ ಮಾಡಲು ಸಹ ಸೂಚಿಸಿದೆ.