Tuesday, October 28, 2025

ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ದೊಡ್ಡ ಬದಲಾವಣೆ! ಅಗತ್ಯ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ

  ISARESOURCEINFO       Tuesday, October 28, 2025
ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ದೊಡ್ಡ ಬದಲಾವಣೆ! ಅಗತ್ಯ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ



ನವೆಂಬರ್ 1 ರಿಂದ, ದೇಶಾದ್ಯಂತ ಅನೇಕ ಪ್ರಮುಖ ಹಣಕಾಸು & ಆಡಳಿತಾತ್ಮಕ ನಿಯಮ ಬದಲಾವಣೆಗಳು ಜಾರಿಯಾಗಲಿವೆ. ಈ ಹೊಸ ನಿಬ೦ಧನೆಗಳು ನಿಮ್ಮ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನೀವು ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ, ಆರ್ಥಿಕ ನಷ್ಟ ಅನುಭವಿಸಬಹುದು. ನವೆಂಬರ್ 1 ರಿಂದ ಜಾರಿಗೆ ತರಲಾಗುವ ಐದು ಪ್ರಮುಖ ಬದಲಾವಣೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಆಧಾರ್ ಕಾರ್ಡ್ ನವೀಕರಣದಲ್ಲಿ ಬದಲಾವಣೆ:

ಆಧಾ‌ರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ & ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ಕೇಂದ್ರಕ್ಕೆ ಹೋಗದೆ ಆನ್‌ಲೈನ್‌ನಲ್ಲಿ ನವೀಕರಿಸಬಹುದು.

ಬೆರಳಚ್ಚು ಅಥವಾ ಕಣ್ಣಿನ ಗುರುತು ಬಯೋಮೆಟ್ರಿಕ್ ನವೀಕರಿಸಲು ಕೇಂದ್ರಕ್ಕೆ ತೆರಳಬೇಕು. ಹೊಸ ವ್ಯವಸ್ಥೆಯಡಿಯಲ್ಲಿ, UIDAI ಸ್ವಯಂಚಾಲಿತವಾಗಿ PAN, ಪಾಸ್‌ಪೋರ್ಟ್‌, ಪಡಿತರ ಚೀಟಿ, MNREGA ಮತ್ತು ಶೈಕ್ಷಣಿಕ ದಾಖಲೆಗಳಂತಹ ಸರ್ಕಾರಿ ಡೇಟಾಬೇಸ್ ಗಳೊಂದಿಗೆ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ. ಇದು ದಾಖಲೆಗಳನ್ನು ಹಸ್ತಚಾಲಿತವಾಗಿ ಅಪ್‌ಲೋಡ್ ಮಾಡುವ ತೊಂದರೆಯನ್ನು ನಿವಾರಿಸುತ್ತದೆ.

SBI ಕ್ರೆಡಿಟ್ ಕಾರ್ಡ್ ಶುಲ್ಕದಲ್ಲಿ ಏರಿಕೆ:

ನವೆಂಬರ್ 1ರಿಂದ ಸುರಕ್ಷಿತವಲ್ಲದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 3.75% ಶುಲ್ಕ ವಿಧಿಸಲಾಗುತ್ತದೆ.

ಇದಲ್ಲದೆ, ನೀವು CRED, CheQ, Mobikwik ಮುಂತಾದ ತೃತೀಯ ಪಾರ್ಟಿ ಆ್ಯಪ್‌ಗಳ ಮೂಲಕ ಶಾಲೆ ಅಥವಾ ಕಾಲೇಜಿನ ಶುಲ್ಕ ಪಾವತಿಸಿದರೆ 1% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ POS ಯಂತ್ರದ ಮೂಲಕ ಪಾವತಿಸಿದರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಜೊತೆಗೆ ₹11,000 ಕ್ಕಿಂತ ಹೆಚ್ಚು ಮೊತ್ತವನ್ನು ವಾಲೆಟ್‌ಗೆ ಲೋಡ್ ಮಾಡಿದರೆ 1% ಶುಲ್ಕ ಪಾವತಿಸಬೇಕಾಗುತ್ತದೆ.

ಮ್ಯೂಚುವಲ್ ಫಂಡ್‌ಗಳು:

ಹೂಡಿಕೆದಾರರಿಗಾಗಿ SEBI ಹೊಸ ಪಾರದರ್ಶಕ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈಗ ಯಾವುದೇ ಆಸ್ತಿ ನಿರ್ವಹಣಾ ಸಂಸ್ಥೆ (AMC) ಯ ಅಧಿಕಾರಿ, ನೌಕರ ಅಥವಾ ಅವರ ಬಂಧುಗಳು ₹15 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವ್ಯವಹಾರ ಮಾಡಿದರೆ, ಅದನ್ನು ಕಂಪನಿಯ ಅನುಪಾಲನಾ ಅಧಿಕಾರಿಗೆ ಕಡ್ಡಾಯವಾಗಿ ವರದಿ ಮಾಡಬೇಕು. ಈ ನಿಯಮಗಳಿಂದ ಮ್ಯೂಚುಯಲ್ ಫಂಡ್ ವ್ಯವಹಾರಗಳು ಇನ್ನಷ್ಟು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಲಿವೆ.

ಬ್ಯಾಂಕ್ ನಾಮಿನಿ ನಿಯಮಗಳಲ್ಲಿ ತಿದ್ದುಪಡಿ:

ನವೆಂಬರ್ 1ರಿಂದ ಗ್ರಾಹಕರು ತಮ್ಮ ಖಾತೆ, ಲಾಕರ್ ಮತ್ತು ಸೆಫ್ ಕಸ್ಟಡಿ ಸೇವೆಗಳಿಗೆ ಒಂದು ನಾಮಿನಿಯ ಬದಲಿಗೆ ಗರಿಷ್ಠ ನಾಲ್ವರನ್ನು ನಾಮಿನಿಯಾಗಿ ನೇಮಿಸಬಹುದು. ಈ ผជជ "Banking Law (Revision) Act 2025" ಅಡಿಯಲ್ಲಿ ಜಾರಿಯಾಗಲಿದೆ. ಗ್ರಾಹಕರು ಯಾವ ನಾಮಿನಿಗೆ ಎಷ್ಟು ಶೇಕಡಾ ಹಂಚಿಕೆ ನೀಡಬೇಕು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಮೊದಲ ನಾಮಿನಿ ಲಭ್ಯವಿಲ್ಲದಿದ್ದರೆ, ಅವರ ಪಾಲು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗಾಯಿಸಲಾಗುತ್ತದೆ.

LPG ದರಗಳಲ್ಲಿ ಬದಲಾವಣೆ?

ಪ್ರತಿ ತಿಂಗಳಂತೆ ಈ ಬಾರಿ ಕೂಡ ನವೆಂಬರ್ 1ರಂದು ಎಲ್ ಪಿಜಿ (ಗೃಹ ಬಳಕೆಯ ಗ್ಯಾಸ್), ಸಿಎನ್‌ಜಿ ಮತ್ತು ಪಿಎನ್‌ಜಿ ಗ್ಯಾಸ್‌ ದರಗಳಲ್ಲಿ ಬದಲಾವಣೆ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆ ಮತ್ತು ವಿನಿಮಯ ದರದ ಆಧಾರದ ಮೇಲೆ ಈ ದರಗಳು ಏರಿಕೆ ಅಥವಾ ಇಳಿಕೆ ಕಾಣಬಹುದು. ಆದ್ದರಿಂದ ಗ್ರಾಹಕರು ದೈನಂದಿನ ನವೀಕರಣಗಳ ಮೇಲೆ ನಿಗಾ ಇಡಬೇಕು.


logoblog

Thanks for reading ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ದೊಡ್ಡ ಬದಲಾವಣೆ! ಅಗತ್ಯ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ

Previous
« Prev Post