ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಕ್ಷಿಪ್ರವಾಗಿ ಚೆಕ್ ಕ್ಲಿಯರೆನ್ಸ್ ಆಗಬೇಕು. ಚೆಕ್ ಅನ್ನು ಬ್ಯಾಂಕಿಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಗ್ರಾಹಕರ ಖಾತೆಗೆ ಹಣ ಜಮೆಯಾಗಬೇಕು ಎಂದು ಕೇಂದ್ರ ಸರಕಾರವು Continuous Clearing System (CCS) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಜಾರಿಗೆ ತಂದರೂ, ಗ್ರಾಹಕರ ಖಾತೆಗೆ ಹಲವೆಡೆ ಕ್ಷಿಪ್ರವಾಗಿ ಹಣ ಜಮೆಯಾಗುತ್ತಿಲ್ಲ. ಹೊಸ ವ್ಯವಸ್ಥೆಯು ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಗಾದರೆ, ಸಿಸಿಎಸ್ ವ್ಯವಸ್ಥೆಯ ಲೋಪಗಳು ಯಾವುವು? ತಿಳಿಯೋಣ ಬನ್ನಿ.
ಕೆಲವು ವರ್ಷಗಳ ಹಿಂದೆ ನನ್ನ ಬ್ಯಾಂಕಿಂಗ್ ಮಿತ್ರರೊಬ್ಬರು "ಕೇಂದ್ರ ಸರಕಾರದ ಹಲವು ಯೋಜನೆಗಳಿಂದ ಬ್ಯಾಂಕ್ ನೌಕರರಿಗೆ ಕೆಲಸದ ಹೊರ ಹಚ್ಚುತ್ತಿದೆ." ಎಂದಿದ್ದರು. ಅವರಿಗೆ ಈ ಬಗ್ಗೆ ಕೋಪ ಇತ್ತು. ಇದು ಸ್ವಲ್ಪ ನಿಜವೂ ಇತ್ತು. ಏಕೆಂದರೆ ಕೇಂದ್ರ ಸರಕಾರದಿಂದ ನೋಟ್ ಬ್ಯಾನ್, ಹೊಸ ನೋಟುಗಳ ಪರಿಚಯ, ಪ್ರಧಾನ ಮಂತ್ರಿ ಜನಧನ್ ಯೋಜನೆ, ಪಿಎಂ ಕಿಸಾನ್ ಯೋಜನೆ, ಪಿಎಂವೈ ಯೋಜನೆ,ಹೀಗೆ ಹಲವು ಯೋಜನೆಗಳ ಒತ್ತಡ ಬ್ಯಾಂಕಿಂಗ್ ನೌಕರರ ಮೇಲೆ ಇತ್ತು.
ಇದಕ್ಕಿಂತಲೂ ಹೆಚ್ಚು ಕಷ್ಟ ಅಂದರೆ 2000ನೇ ಇಸವಿಯಲ್ಲಿ ಇತ್ತು. ಪೇಪರ್ ಬ್ಯಾಂಕ್‌ನಿಂದ ಪೂರ್ತಿ ಕಂಪ್ಯೂಟರ್ ಬ್ಯಾಂಕ್ ಆಗುವ ವೇಳೆ ನೌಕರರು ದಣಿದಿದ್ದರು. ಇದರಿಂದ ಬ್ಯಾಂಕ್ ನೌಕರರಿಗೆ ಹೆಚ್ಚಿನ ಕೆಲಸವಾದರೂ, ಕ್ರಮೇಣ ಬ್ಯಾಂಕ್ ನೌಕರರಿಗೂ ಮತ್ತು ಬ್ಯಾಂಕ್‌ಗಳಿಗೆ ಪರೋಕ್ಷವಾಗಿ ಹೆಚ್ಚು ಅನುಕೂಲವೇ ಆಯ್ತು. ಇವರ ಜತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲ ವರ್ಷಗಳಲ್ಲಿ ತ್ವರಿತ ಡಿಜಿಟಲೀಕರಣದ ಹಾದಿಯಲ್ಲಿ ವೇಗವಾಗಿ ಸಾಗುತ್ತಾ UPI, IMPS, NEFT RTGS ಮುಂತಾದ ಡಿಜಿಟಲ್ ಪಾವತಿ ವ್ಯವಸ್ಥೆಗಳು ಗ್ರಾಹಕರಿಗೆ ಹಂತ, ಸುಲಭ, ಭದ್ರ ಮತ್ತು ಪಾರದರ್ಶಕ ಸೇವೆಯನ್ನು ಒದಗಿಸುತ್ತಿವೆ.
ಆದರೂ, ಚೆಕ್ಗಳು ಇನ್ನೂ ವ್ಯಾಪಾರ, ಉದ್ಯಮ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಪ್ರಮುಖ ಪಾವತಿ ಮಾಧ್ಯಮವಾಗಿ ಉಳಿಯುತ್ತಿವೆ. ಇಂತಹ ಹೊಸ ವ್ಯವಸ್ಥೆಗಳ ಜತೆಯಲ್ಲಿಯೇ 'ನಿರಂತರವಾಗಿ ಚೆಕ್ಕುಗಳನ್ನು ತೀರುವಳಿ (Continuous Clearing System & CCS) ಎಂದು ಹೊಸ ವ್ಯವಸ್ಥೆಯನ್ನು 2025ರ ಆಕ್ಟೋಬರ್ 4 ರಿಂದ ಆರ್‌ಬಿಐ ಮತ್ತು ಎನ್ ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಪ್ ಇಂಡಿಯಾ) ಜಾರಿಗೆ ತಂದಿವೆ. ಇದರ ಉದ್ದೇಶ ದಿನಪೂರ್ತಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯನ್ನು ನಿರಂತವಾಗಿ ನಡೆಸಿ ಗ್ರಾಹಕರಿಗೆ ಅದೇ ದಿನ ಖಾತೆಗೆ ಜಮಾ ಮಾಡಿ ನಗದು ಸಹ ಡ್ರಾ ಮಾಡಲು ಅನುಕೂಲ ಮಾಡುವುದಾಗಿದೆ.
ಹೊಸ ಬದಲಾವಣೆ ವ್ಯವಸ್ಥೆಯು ಬ್ಯಾಂಕ್ ನೌಕರರಿಗೆ ಮತ್ತು ಗ್ರಾಹಕರಿಗೆ ಕೆಲಸದ ಒತ್ತಡದ ಜತೆಗೆ ಆತಂಕ ಸೃಷ್ಟಿದೆ. ಈ ಸಿಸಿಎಸ್ ಎಂಬುದು image based real time clearing process ಆಗಿದೆ. ಅಂದರೆ ಇದರಲ್ಲಿ ಚೆಕ್ಕುಗಳನ್ನು ದಿನವೂರ್ತಿ ಮಾವುದಾದರೂ ಸಮಯದಲ್ಲಿ ಅಪ್ ಲೋಡ್ ಮಾಡಬಹುದು ಮತ್ತು ತಕ್ಷಣ ಪ್ರೊಸೆಸ್ ಆಗುವಂತೆ ಮಾಡಲಾಗಿದೆ. ಹಳೆಯ Batch based learning systemನಲ್ಲಿ ಚೆಕ್ ಗಳನ್ನು ದಿನಕ್ಕೆ ಒಂದು ಬಾರಿ ಮಾತ್ರ ಕ್ಲಿಯರ್ ಮಾಡಲಾಗುತ್ತಿತ್ತು. ಇದರ ಪರಿಣಾಮವಾಗಿ ಒಂದು ದಿನದಿಂದ ಮೂರು ದಿನದವರೆಗೆ ವಿಳಂಬವಾಗುತ್ತಿತ್ತು ಮತ್ತು ಗ್ರಾಹಕರಿಗೆ ಅಸಮಾಧಾನ ಉಂಟಾಗುತ್ತಿತ್ತು.
ಸಿಸಿಎಸ್ ಉದ್ದೇಶವು ಅಂತಿಮವಾಗಿ ಈ ಎಲ್ಲ ಸಮಸ್ಯೆಗಳನ್ನು ಕಡಿಮೆ ಮಾಡಿ. ಚೆಕ್ ಪ್ರಸ್ತುತಪಡಿಸಿದ ಮೂರು ಗಂಟೆಗಳ ಒಳಗಾಗಿ ಹಣ ಪಾವತಿಯಾಗುವಂತೆ ಮಾಡುವುದು. ಈ ವ್ಯವಸ್ಥೆಯನ್ನು ಮುಂದಿನ ವರ್ಷ ಜನವರಿಯಿಂದ ಜಾರಿಗೊಳಿಸಲು ಸಿದ್ಧತೆ ನಡೆಯುತ್ತದೆ. ಆದರೆ ಇಂಥ ಅದ್ಭುತವಾದ ವ್ಯವಸ್ಥೆಯು ಪ್ರಾರಂಭವಾದ ದಿನದಿಂದಲೇ ನಿಧಾನ ಗತಿಯಲ್ಲಿ ಸಾಗಿದೆ.
ಬೆಳಗ್ಗೆ ಬ್ಯಾಂಕಿಗೆ ಕೊಟ್ಟ ಚೆಕ್ ಸಂಜೆಯ ವೇಳೆ ಖಾತೆಗೆ ಜಮಾ ಆಗಬೇಕಾಗಿದ್ದು ಹಲವಾರು ತೊಂದರೆಗಳಿಂದ ಸುಮಾರು 4ರಿಂದ 10 ದಿನಗಳವರೆಗೂ ಆಗಿದೆ ಎಂದು ವರದಿ ಆಗಿದೆ. ಎನ್ ಪಿಸಿಐ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಚೆಕ್ಕುಗಳನ್ನು ವಿಲೇವಾರಿ ಮಾಡುತ್ತಿದ್ದು, ಅ.4ರಿಂದ ಅ.19ರವರೆಗೆ 1 ಕೋಟಿ ಚೆಕ್ ಗಳನ್ನು ವಿಲೇವಾರಿ ಮಾಡಿದೆ. ಆದರೂ ಈ ವ್ಯವಸ್ಥೆಯು ಇನ್ನೂ ಸರಿಯಾದ ದಾರಿಗೆ ಬಂದಿಲ್ಲ.
ಹೊಸ ವ್ಯವಸ್ಥೆಯಿಂದ ಗ್ರಾಹಕರಿಗೆ ಏನು ಪ್ರಯೋಜನ?
▪️ಬ್ಯಾಂಕ್‌ಗಳಿಗೆ ಚೆಕ್ ನೀಡಿದ ಕೆಲವೇ ಗಂಟೆಗಳಲ್ಲಿ ಖಾತೆಗೆ ಹಣ ವರ್ಗಾವಣೆ
▪️ಚೆಕ್ ಕ್ಲಿಯರೆನ್ಸ್ ಬೇಗ ಆದರೆ ವ್ಯಾಪಾರಿಗಳ ಚಟುವಟಿಕೆಗಳಿಗೆ ವೇಗ.
▪️ದೊಡ್ಡ ವ್ಯಾಪಾರಿಗಳಿಗೆ, ಸಾಲ ಮರುಪಾವತಿ ಮಾಡುವವರಿಗೆ ಅನುಕೂಲ.
▪️ನಿಗದಿತ ವ್ಯಕ್ತಿಗೆ ಹಣ ಜಮೆ, ಐಎಫ್‌ಎಸ್‌ಸಿ ಕೋಡ್ ಬರೆಯುವ ಅವಶ್ಯಕತೆ ಇಲ್ಲ
▪️ಸಾಲದ ರೂಪದಲ್ಲಿ ವ್ಯವಹಾರ ಮಾಡುವವರಿಗೆ ಅನುಕೂಲ.
ಹೊಸ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ ಏಕೆ?
2. ಸ್ಕ್ಯಾನ್ ಮಾಡಿದ ಚಿತ್ರಗಳು ಕಪ್ಪು ಬಿಳುಪು ಮಾದರಿಯಲ್ಲಿದ್ದು, ಸ್ಪಷ್ಟವಾಗಿ ಕಾಣಿಸುವುದಿಲ್ಲ ಇದರಿಂದಾಗಿ ಚೆಕ್ ಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.
2. ಸಿಗ್ನೇಚರ್ ಮಿಸ್ ಮ್ಯಾಚ್:
ಚೆಕ್ ಗಳ ಚಿತ್ರವು ಸ್ಪಷ್ಟವಾಗಿ ಇರದ ಕಾರಣ ಸಹಿ ಮತ್ತು ದಿನಾಂಕ ಹಾಗೂ ಅಕ್ಷರಗಳಲ್ಲಿ ಬರೆಯುವಾಗ ಸ್ವಲ್ಪ ವ್ಯತ್ಯಾಸ ಇದ್ದರೂ ವಾಪಸ್ ಬರುವ ಸಂಭವವಿದೆ.
3. ದೇಶದ ಎಲ್ಲ ಭಾಗದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಮತ್ತು ನೆಟ್‌ವರ್ಕ್ ಇರುವುದಿಲ್ಲ, ಗುಣಮಟ್ಟದ ಸ್ಕ್ಯಾನರಗಳು,ಡೇಟೆಡ್ ಕಂಪ್ಯೂಟರ್ ಗಳು ಇಲ್ಲ.
4. ಸರಿಯಾದ ನೆಟ್ವರ್ಕ್, ಇಂಟರ್ನೆಟ್ ಇರದ ಕಾರಣ ಅಪ್ಲೋಡ್ ಮಾಡಿದ ಚೆಕ್ ಗಳು ಮಧ್ಯರಾತ್ರಿಯ ವೇಳೆಗೆ ಬರುತ್ತಿವೆ.ಇಂತಹ ಚೆಕ್ಕುಗಳನ್ನು ಸರಿಯಾದ ವೇಳೆಗೆ ತೀರುವಳಿ ಮಾಡದಿದ್ದರೆ ಅವು ಸ್ವಯಂ ಅನುಮೋದನೆ ಆಗುತ್ತವೆ ಎಂದು ಭಾವಿಸಬಹುದಾಗಿದೆ ಎನ್ನುತ್ತಾರೆ. ಆದ್ದರಿಂದ ಬ್ಯಾಂಕ್ ನೌಕರರ ಮೇಲೆ ಬಹಳಷ್ಟು ಒತ್ತಡ ಬಿದ್ದಿದೆ. ಇದರಿಂದಾಗಿ ಬ್ಯಾಂಕ್ ನೌಕರರು ರಾತ್ರಿ ಹತ್ತರವರೆಗೆ ಬ್ಯಾಂಕಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ಅಲ್ಲದೆ. ಇದು ಬ್ಯಾಂಕಿನ ಸುರಕ್ಷತೆಯ ದೃಷ್ಟಿಯಿಂದಲೂ ಮತ್ತು ಮಹಿಳಾ ನೌಕರರ ಸುರಕ್ಷತೆಯ ದೃಷ್ಟಿಯಿಂದ ಕೂಡ ಆತಂಕಕಾರಿಯಾಗಿದೆ.
5. ಬ್ಯಾಂಕ್ ಗಳು (Core banking system CCS software) ನಡುವಿನ proper integration ಇಲ್ಲ ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಸಿಟಿಎಸ್ ಸಾಫ್ಟ್‌ವೇರ್ ಪ್ರೊವೈಡರ್‌ಗಳನ್ನು ಹೊಂದಿರುವುದೂ ಸಮಸ್ಯೆಯಾಗಿದೆ.
6. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಿಬ್ಬಂದಿಗೆ ಆಗುತ್ತಿಲ್ಲ. ಅವರಿಗೆ ತರಬೇತಿಯ ಕೊರತೆಯಿದೆ.
ಚೆಕ್ ಬರೆಯುವ ಮುನ ಗಮನಿಸಬೇಕಾದ ಅಂಶಗಳು:
1. ಚೆಕ್‌ಗಳನ್ನು ಇಂಗ್ಲಿಷ್, ಹಿಂದಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು.
2. ಶಾಶ್ವತ (Permanent) ಇಂಕ್ ಬಳಸಬೇಕು. ನೀಲಿ ಅಥವಾ ಕಪ್ಪು ಇಂಕ್ ಬಳಸುವುದು ಉತ್ತಮ.
3. ಅಕ್ಷರಗಳು ಸ್ಪಷ್ಟವಾಗಿರಬೇಕು, ತಿದ್ದುಪಡಿ ಮಾಡಬಾರದು.
4. ತಪ್ಪಾದರೆ ಹೊಸ ಚೆಕ್ ಬರೆಯಿರಿ.
5. ಹಳೆಯ ದಿನಾಂಕದ (3 ತಿಂಗಳಿಗಿಂತ ಹಳೆಯ) ಚಿಕ್ಕ ಅಮಾನ್ಯ.
6. ಭವಿಷ್ಯದ ದಿನಾಂಕದ ಚೆಕ್ ಬಳಸಬಹುದು. ಆದರೆ ಆ ದಿನಾಂಕದವರೆಗೆ ಹಣ ಪಾವತಿ ಆಗುವುದಿಲ್ಲ.
7 . ಮೊತ್ತವನ್ನು ಸಂಖ್ಯೆ ಮತ್ತು ಆಕ್ಷರಗಳಲ್ಲಿ ಸ್ಪಷ್ಟವಾಗಿ ಬರೆಯಿರಿ.
8. ಮೊತ್ತದ ನಂತರ only ಎಂದು ಬರೆಯಿರಿ.
9. ಸಂಖ್ಯೆಯ ಮೊದಲು ರೂ. ಚಿಹ್ನೆ ಮತ್ತು ನಂತರ /- ಗುರುತು ಹಾಕಿ.
10. ಸಹಿ ಬ್ಯಾಂಕ್‌ನಲ್ಲಿ ದಾಖಲಾಗಿರುವ ಮಾದರಿಯಂತೆಯೇ ಇರಲಿ.
11. // ಗುರುತು ಹಾಕಿ A/C Payee only ಎಂದು ಬರೆಯಿರಿ. ಹಣ ಖಾತೆಗೆ ಮಾತ್ರ ಜಮೆ ಆಗುತ್ತದೆ.
12. ಖಾಲಿ ಸಹಿ ಮಾಡಿದ ಚೆಕ್ ಗಳನ್ನು ಯಾರಿಗೂ ಕೊಡಬೇಡಿ.
13. ಇನ್ನು ಮುಂದೆ ಯಾರಿಗಾದರೂ ಚೆಕ್ಕು ಕೊಟ್ಟರೆ, ಕೊಡುವುದಕ್ಕಿಂತ ಮುಂಚೆ ಖಾತೆಯಲ್ಲಿ ಹಣವನ್ನು ಪಾವತಿಸಿ, ಇಲ್ಲದಿದ್ದರೆ ಚೆಕ್ ಬೌನ್ಸ್ ಆಗುತ್ತದೆ.
14. ಚೆಕ್ ಬೌನ್ಸ್ ಆದರೆ (Negotiable Instruments Act 1881) (ಸೆಕ್ಷನ್ 138) ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
15. ಚೆಕ್ಕಗಳನ್ನು ಬ್ಯಾಂಕಿಗೆ ಕೊಡುವಾಗ ಆ ಬ್ಯಾಂಕ್ ಶಾಖೆಯಲ್ಲಿ ಸಿಸಿಎಸ್ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.