ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯ್ದೆ-1983 ರ ಸೆಕ್ಷನ್-36 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು( ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು 1999 ರ ನಿಯಮ-3ರಂತೆ ಹಾಗೂ ಉಲ್ಲೇಖ(3) ರ ಸೆಕ್ಷನ್-18 ಹಾಗೂ ಉಲ್ಲೇಖ(4)ರ ನಿಯಮ-11 ರಂತೆ ಎಲ್ಲಾ ಶಾಲೆಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ, ಯಾವುದೇ ಶಾಲೆಯು ಮಾನ್ಯತೆ ಪಡೆಯದೇ ನಡೆಯುತ್ತಿದ್ದಲ್ಲಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಕ್ರಮ ವಹಿಸುವುದು ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.
ಖಾಸಗಿ ಅನುದಾನಿತ / ಅನುದಾನ ರಹಿತ ಶಾಲೆಗಳ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಪ್ರಾಧಿಕಾರಿಗಳು ಸಂಬಂಧಿಸಿದ ಶಾಲೆಗಳಿಗೆ ಆಯಾ ಶೈಕ್ಷಣಿಕ ವರ್ಷದಲ್ಲಿಯೇ ನಿಯಮಾನುಸಾರ ಮಾನ್ಯತೆ/ಮಾನ್ಯತೆ ನವೀಕರಣ ನೀಡಬೇಕಿರುತ್ತದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿಯಮಾನುಸಾರ ತಂತ್ರಾಂಶದ ಮೂಲಕವೇ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ, ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಥಮ ಮಾನ್ಯತೆ/ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗಿದೆ. ಆಡಳಿತ ಮಂಡಳಿಗಳಿಂದ ಭೌತಿಕ ಪ್ರಸ್ತಾವನೆಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿದೆ.
ಉಲ್ಲೇಖ(7)ರ ಸುತ್ತೋಲೆಯಂತೆ ನಿಯಮಗಳಿಗೆ ತಿದ್ದುಪಡಿ ತಂದಿರುವ ಅಂಶಗಳಂತೆ ಅಗತ್ಯ ಮಾಹಿತಿ/ದಾಖಲೆಗಳಿಂದ ಮಾನ್ಯತೆ ಅರ್ಜಿಯು ತಿರಸ್ಕೃತಗೊಂಡ ಶಾಲಾ ಆಡಳಿತ ಮಂಡಳಿಗಳಿಗೆ ಈಗಾಗಲೇ ಪಾವತಿಸಿದ ಶುಲ್ಕವನ್ನು ಬಳಸಿ ಇದೇ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ ಗರಿಷ್ಟ 03 ಬಾರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವಂತೆ ಅರ್ಜಿ ತಿರಸ್ಕೃತಗೊಂಡಿರುವ ಶಾಲಾ ಆಡಳಿತ ಮಂಡಳಿಗಳು ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣವೇ ಮರು ಅರ್ಜಿ ಸಲ್ಲಿಸಲು ಕ್ರಮವಹಿಸುವುದು. ಹಾಗೂ ಸಕ್ಷಮ ಪ್ರಾಧಿಕಾರಿಗಳು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಿದ ಶಾಲೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಿದಂತೆ ಮಾನ್ಯತೆ ನವೀಕರಣವನ್ನು ಮೊದಲ ಬಾರಿಗೆ 10 ವರ್ಷಗಳಿಗೆ ನೀಡಲು ಅಗತ್ಯ ಕ್ರಮವಹಿಸುವುದು.
1)ಪ್ರಥಮ ಮಾನ್ಯತೆ:
2025-26ನೇ ಶೈಕ್ಷಣಿಕ ಸಾಲಿಗೆ ನೊಂದಣಿ ಪಡೆದು ಶಾಲೆಯನ್ನು ಪ್ರಾರಂಭಿಸಿರುವ ಎಲ್ಲಾ ಶಾಲೆಗಳು ತಂತ್ರಾಂಶದ ಮೂಲಕ ನಿಯಮಾನುಸಾರ ನಿಗದಿ ಪಡಿಸಿರುವ ದಾಖಲೆ/ಮಾಹಿತಿಗಳನ್ನು ಸಲ್ಲಿಸಿ ಪ್ರಥಮ ಮಾನ್ಯತೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಶಾಲೆಯು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಯಮಾನುಸಾರ ಮಾನ್ಯತೆ ಪಡೆಯದಿದ್ದಲ್ಲಿ ಶಾಲಾ ನೊಂದಣಿ ಪ್ರಮಾಣಪತ್ರದ ಷರತ್ತಿನಂತೆ ಶಾಲಾ ನೊಂದಣಿಯು ತಂತಾನೆ ರದ್ದಾಗುತ್ತದೆ.
ಶಾಲೆಯು ನೊಂದಣಿ ಪಡೆಯುವಾಗ ಆನ್‌ಲೈನ್ ಮೂಲಕ ಸಲ್ಲಿಸಿದ ದಾಖಲೆಗಳು ತಂತಾನೆ ಪ್ರಥಮ ಮಾನ್ಯತೆ ಅರ್ಜಿಯಲ್ಲಿ ಸೆಳೆಯಲ್ಪಡುತ್ತವೆ. ಉಳಿದ ಮಾಹಿತಿ/ದಾಖಲೆಗಳನ್ನು ಮತ್ತು ವಾಯಿದೆ ಮುಗಿದ ಪ್ರಕರಣಗಳಲ್ಲಿ ಇತ್ತೀಚಿನ ದಿನಾಂಕಕ್ಕೆ ಚಾಲ್ತಿಯಲ್ಲಿರುವ ದಾಖಲೆಗಳನ್ನು ಮಾತ್ರ ಇಂದೀಕರಿಸಿ ಅರ್ಜಿ ಸಲ್ಲಿಸುವುದು.
2)ಮಾನ್ಯತೆ ನವೀಕರಣ: : (Recognition Renewal- RR) ಅನುಷ್ಠಾನಕ್ಕೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು:
1. ಉಲ್ಲೇಖಿತ ಕಾಯ್ದೆ/ ನಿಯಮಗಳು ಹಾಗೂ ಸರ್ಕಾರಿ ಅಧಿಸೂಚನೆಗಳನ್ವಯ ಎಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಆಯಾ ವರ್ಷದ ಶೈಕ್ಷಣಿಕ ಸಾಲಿನ ಚಟುವಟಿಕೆಗಳಿಗೆ ಹಿನ್ನಡೆಯಾಗದಂತೆ ಆಗಸ್ಟ್-31ರೊಳಗಾಗಿ ತಂತ್ರಾಂಶದ ಮೂಲಕ ಶುಲ್ಕ ಪಾವತಿಸಿ ಎಲ್ಲಾ ಅಗತ್ಯ ದಾಖಲೆ/ಮಾಹಿತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
2. ಯಾವುದೇ ಶಾಲೆಯು ಒಂದೇ ಡೈಸ್ ಕೋಡ್ ಹೊಂದಿದ್ದು, ಪ್ರಾಥಮಿಕ/ಹಿರಿಯ ಪ್ರಾಥಮಿಕ/ಪ್ರೌಢ ಶಾಲಾ ವಿಭಾಗಗಳಿಗೆ ಪ್ರತ್ಯೇಕವಾಗಿ ನೊಂದಣಿ ಪಡೆದಿರುವ ಕೆಲವು ಶಾಲೆಗಳು ಈಗಾಗಲೇ ಪ್ರತ್ಯೇಕ ಅವಧಿಗಳಿಗೆ ಮಾನ್ಯತೆ ನವೀಕರಿಸಿಕೊಂಡಿರುತ್ತವೆ. ಪುಸ್ತುತ ವರ್ಷದಲ್ಲಿ ಅಂತಹ ಶಾಲೆಗಳ ಯಾವುದೇ ವಿಭಾಗದ ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದಲ್ಲಿ ಅಂತಹ ಶಾಲೆಯು ಪ್ರಸ್ತುತ ವರ್ಷದಲ್ಲಿ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಭಾಗಶ, ವಿಭಾಗ(ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
3. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಿಗೆ ಒಂದೇ ಡ್ರೆಸ್ ಕೋಡ್ ಹೊಂದಿರುವ ಶಾಲೆಗಳು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಅವರ ಶಾಲೆಗೆ ನೊಂದಣಿ ನೀಡಿದ ಪ್ರಾರಂಭದ ತರಗತಿಯಿಂದ ಉನ್ನತ ತರಗತಿಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಇದರಂತೆ ಕ್ರಮವಹಿಸಿದಲ್ಲಿ ಮುಂಬರುವ ಶೈಕ್ಷಣಿಕ ಸಾಲುಗಳಲ್ಲಿ ಎಲ್ಲಾ ಶಾಲೆಗಳ ಮಾನ್ಯತೆ ನವೀಕರಣವನ್ನು ಏಕ ರೂಪದಲ್ಲಿ ನಿರ್ವಹಿಸಲು ಸಹಕಾರಿಯಾಗುತ್ತದೆ.
ಉದಾಹರಣೆ: ಒಂದು ಶಾಲೆಗೆ ಒಂದೇ ಡ್ರೆಸ್ ಕೋಡ್ ಅಡಿಯಲ್ಲಿ 1-10ನೇ ತರಗತಿಯವರೆಗೆ ಬೇರೆ ಬೇರೆ ಅವಧಿಯಲ್ಲಿ ನೊಂದಣಿ ಪಡೆದಿದ್ದು, ಪ್ರಸ್ತುತ 1-7ನೇ ತರಗತಿಯ ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದು, B-10ನೇ ತರಗತಿಯ ಮಾನ್ಯತೆ ಅವಧಿ 2025-26ನೇ ಸಾಲಿಗೆ ಚಾಲ್ತಿಯಲ್ಲಿದ್ದರೂ ಸಹಿತ ಅಂತಹ ಶಾಲೆಯು 2025-26ನೇ ಸಾಲಿಗೆ 1-10ನೇ ತರಗತಿಯನ್ನು ಆಯ್ಕೆ ಮಾಡಿಕೊಂಡು ಮಾನ್ಯತೆ ನವೀಕರಣಕ್ಕೆ, ಅರ್ಜಿ ಸಲ್ಲಿಸುವುದು ಭಾಗಶ: ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ತಂತ್ರಾಂಶದಲ್ಲಿ ಅವಕಾಶವಿರುವುದಿಲ್ಲ.
4. ಪ್ರತಿ ಹಂತದಲ್ಲಿ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ಪ್ರಗತಿ ಮಾಹಿತಿ SMS/E-MAIL ಮುಖಾಂತರ ತಿಳಿಸಲಾಗುವುದು.
5. ಅಪೂರ್ಣ ಅರ್ಜಿ ಸಲ್ಲಿಸಿದವರಿಗೆ ಪುನಃ ಸರಿಪಡಿಸಿ ಸಲ್ಲಿಸಲು ಉಪನಿರ್ದೇಶಕರ ಹಂತದಲ್ಲಿ ಒಂದು ಬಾರಿಗೆ ಮಾತ್ರ ಅರ್ಜಿಯನ್ನು ಆಕ್ಷೇಪಣೆ ಸಹಿತ ಆಡಳಿತ ಮಂಡಳಿ ಲಾಗಿನ್ ಹಿಂತಿರುಗಿಸಲು (Roll Back) ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಹಿಂತಿರುಗಿಸಿದ ಅರ್ಜಿಗಳನ್ನು ಆಡಳಿತ ಮಂಡಳಿಗಳು ಪರಿಶೀಲಿಸಿ ಅಕ್ಷೇಪಣೆಗಳನ್ನು ನಿಗದಿತ ಕಾಲಮಿತಿ 07 ದಿನಗಳೊಳಗಾಗಿ ಸರಿಪಡಿಸಿ ಸಲ್ಲಿಸಬೇಕು.
6. ಯಾವುದೇ ಕಾರಣಕ್ಕೂ ಉಪನಿರ್ದೇಶಕರು ಭೌತಿಕವಾಗಿ ಯಾವುದೇ ದಾಖಲೆಗಳನ್ನು ಆಫ್‌ಲೈನ್‌ನಲ್ಲಿ ಸ್ವೀಕರಿಸುವುದನ್ನು ನಿಷೇಧಿಸಿದೆ ಹಾಗೂ ಕೇವಲ ನಿಗದಿಪಡಿಸಿದ ಕಾಲಮಿತಿಯೊಳಗಾಗಿ ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಬಹುದಾಗಿದೆ.
7. ಅರ್ಜಿಗಳು ಸ್ವೀಕೃತವಾದ ತಕ್ಷಣ ಸಂಬಂಧಿಸಿದ ಸಿಬ್ಬಂದಿ/ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕಾಲಮಿತಿ ಅಂದರೆ ಕರ್ತವ್ಯದ ದಿನಗಳೊಳಗಾಗಿ ನಿಯಮಾನುಸಾರ ಪರಿಶೀಲಿಸಿದ ಸೂಕ್ತ ಷರಾದೊಂದಿಗೆ ಮೇಲಿನ ಹಂತಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಕಡೇ ದಿನಾಂಕದವರೆಗೆ ಕಾಯುವ ಅಥವಾ ವಿಳಂಬ ಮಾಡುವ ಅವಶ್ಯಕತೆ ಇರುವುದಿಲ್ಲ. ಪ್ರತೀ ಹಂತದ ಪ್ರಗತಿ ವರದಿಯನ್ನು ಪ್ರತೀ ದಿನ ರಾಜ್ಯದ ಎಲ್ಲಾ ವಿಭಾಗದ ಆಯುಕ್ತಾಲಯಕ್ಕೆ ವೀಕ್ಷಣೆಗೆ ಮತ್ತು ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸಿದೆ. ಪ್ರಯುಕ್ತ ಪ್ರತೀ ದಿನ ಸಂಬಂಧಿಸಿದ ಸಕ್ಷಮ ಅಧಿಕಾರಿ/ಸಿಬ್ಬಂದಿಗಳು ನಿಯಮಾನುಸಾರ ಕ್ರಮವಹಿಸಬೇಕಾಗುತ್ತದೆ.
8. ಸದರಿ ಮಾನ್ಯತೆ ನವೀಕರಣವನ್ನು ಇನ್ನು ಮುಂದೆ ಆಡಳಿತ ಮಂಡಳಿಗಳು ಎಸ್.ಎ.ಟಿ.ಎಸ್ ನಲ್ಲಿ ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕಿದ್ದು ಯಾವುದೇ ದಾಖಲೆಗಳ ಕಾಲಾವಧಿ ಮುಕ್ತಾಯವಾಗಿದ್ದಲ್ಲಿ ಪರಿಷ್ಕೃತ ಮಾಹಿತಿಯನ್ನು ಪ್ರತೀ ವರ್ಷ ಮಾರ್ಚ್ ಅಂತ್ಯಕ್ಕೆ ಅಪ್‌ಡೇಟ್ ಮಾಡುವುದು. ಅದರಲ್ಲಿನ ಮಾಹಿತಿಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣಕ್ಕೆ ಪರಿಗಣಿಸಲಾಗುವುದು.
9. ಎಲ್ಲಾ ಪುಸ್ತಾವನೆಗಳನ್ನು 03 ಹಂತದಲ್ಲಿ ಪರಿಶೀಲಿಸಬೇಕಾಗಿದ್ದು ವಿಷಯ ನಿರ್ವಾಹಕರು, ಪತ್ರಾಂಕಿತ ಸಹಾಯಕರು ಮತ್ತು ಉಪನಿರ್ದೇಶಕರು ತಮ್ಮ ಲಾಗಿನ್ನನಲ್ಲಿ ಸ್ವೀಕೃತವಾಗುವ ಯಾವುದೇ ಅರ್ಜಿಗಳನ್ನು ವಿಳಂಬ ಮಾಡಿ Overdue ಆಗಲು ಅವಕಾಶ ನೀಡದಂತೆ ನೀಡಿದ ಕಾಲಮಿತಿಯಲ್ಲಿ ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ.
ಉಲ್ಲೇಖ(8)ರಲ್ಲಿ ಸುತ್ತೋಲೆಯಂತೆ ಖಾಸಗಿ ಶಾಲೆಗಳ ಸೇವೆಗೆ ಸಲ್ಲಿಸಬೇಕಾದ ದಾಖಲೆ/ದೃಢೀಕರಣ ಪತ್ರಗಳನ್ನು ಸರಳೀಕರಣಗೊಳಿಸಿರುವಂತೆ ಮಾನ್ಯತೆ ನವೀಕರಣಕ್ಕೆ ಆಡಳಿತ ಮಂಡಳಿಗಳು ಆನ್‌ಲೈನ್ ಮೂಲಕ SATS ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಲ್ಲಿಸಬೇಕಾದ ದಾಖಲೆಗಳ ವಿವರ & ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ...