KSET EXAM-2025: ಕೆ-ಸೆಟ್ ಪರೀಕ್ಷೆ ಪ್ರವೇಶ ಪತ್ರ ಪ್ರಕಟ, ಅಭ್ಯರ್ಥಿಗಳು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ!
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) - 2025 ಬರೆಯುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಪರೀಕ್ಷೆಯ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲು ಇದು ಕಡ್ಡಾಯವಾದ ದಾಖಲೆ.
ಪರೀಕ್ಷೆಯ ದಿನಾಂಕ:
ಕೆ-ಸೆಟ್ ಪರೀಕ್ಷೆ 2025ರ ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಕೇಂದ್ರ, ಸಮಯ ಹಾಗೂ ವಿಷಯದ ವಿವರಗಳನ್ನು ಪ್ರವೇಶ ಪತ್ರದ ಮೂಲಕ ಪರಿಶೀಲಿಸಬಹುದು.
ಪ್ರವೇಶ ಪತ್ರ ಡೌನ್‌ಲೋಡ್ ವಿಧಾನ:
ಅಭ್ಯರ್ಥಿಗಳು ಕೆಳಗಿನ ವಿಧಾನದಂತೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಬಹುದು:
1. ಮೊದಲಿಗೆ ಅಧಿಕೃತ ವೆಬ್‌ಸೈಟ್ ತೆರೆಯಿರಿ
2. “Download Admit Card” ಅಥವಾ “Candidate Login” ಲಿಂಕ್ ಕ್ಲಿಕ್ ಮಾಡಿ
3. ನಿಮ್ಮ ಅಪ್ಲಿಕೇಶನ್ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ
4. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಪರೀಕ್ಷಾ ದಿನದ ಸೂಚನೆಗಳು:
▪️ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು
▪️ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಹಾಜರಾಗುವುದು ಅಗತ್ಯ
▪️ಮೊಬೈಲ್, ಕ್ಯಾಲ್ಕ್ಯುಲೇಟರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನು ತರಬಾರದು
ಪರೀಕ್ಷೆಯ ರಚನೆ:
▪️ಕೆ-ಸೆಟ್ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳಿರುತ್ತವೆ:
▪️ಪೇಪರ್-I: ಸಾಮಾನ್ಯ ವಿಷಯ (Teaching & Research Aptitude)
▪️ಪೇಪರ್-II: ಆಯ್ಕೆ ಮಾಡಿದ ವಿಷಯದ ಕುರಿತು ಪ್ರಶ್ನೆಗಳು
ಒಟ್ಟು 300 ಅಂಕಗಳಿಗೆ 3 ಗಂಟೆಯ ಪರೀಕ್ಷೆ ನಡೆಯಲಿದೆ.
▪️ಉಪಯುಕ್ತ ಮಾಹಿತಿ:
ಫಲಿತಾಂಶವನ್ನು ಪರೀಕ್ಷೆಯ ನಂತರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ
ಅರ್ಹ ಅಭ್ಯರ್ಥಿಗಳು ಅಸಿಸ್ಟೆಂಟ್ ಪ್ರೊಫೆಸರ್/ಲೇಕ್ಚರರ್ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹರಾಗುತ್ತಾರೆ
