Thursday, October 9, 2025

Menstrual Leave Policy -2025-ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ

  ISARESOURCEINFO       Thursday, October 9, 2025
Menstrual Leave Policy - 2025-ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ.




* ಒಡಿಶಾ ಸರ್ಕಾರ 2024ರಲ್ಲಿ ಈ ರಜಾ ಸೌಲಭ್ಯವನ್ನು ಜಾರಿಗೆ ತಂದಿತ್ತು.

* ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಜಾರಿಗೆ ತರಲು ದಿನಾಂಕ 10.01.2025 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಂಘವು ಮನವಿ ಸಲ್ಲಿಸಿತ್ತು, ಅದರಂತೆ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.

 * ಈ ಸಂಬಂಧ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಕಾರ್ಮಿಕ ವರ್ಗದ ಎಲ್ಲಾ ಮಹಿಳಾ ನೌಕರರಿಗೂ ಈ ಯೋಜನೆ ಅನ್ವಯಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

* 1ಲಕ್ಷದ 80 ಸಾವಿರ ಮಹಿಳಾ ಸರ್ಕಾರಿ ನೌಕರರಿಗೆ ಈ ಆದೇಶದಿಂದ ಅನುಕೂಲವಾಗಲಿದೆ.

* ತಿಂಗಳಿಗೆ ತಾವು ಬಯಸಿದ ಒಂದು ದಿನ ರಜೆಗೆ ಮಹಿಳಾ ನೌಕರರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

* ಈ ಸಂಬಂಧ ಅಧಿಕೃತ ಆದೇಶವನ್ನು ಸರ್ಕಾರ ಈ ವಾರ ಹೊರಡಿಸಲಿದೆ.
ನಾಡಿನ ಲಕ್ಷಾಂತರ ಹೆಣ್ಣುಮಕ್ಕಳು, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟವನ್ನು ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನವನ್ನು ರಾಜ್ಯ ಸರ್ಕಾರವು ಕೈಗೊಂಡಿದೆ.

ಸರ್ಕಾರವು ಮಾನವೀಯ ಕಾಳಜಿಯನ್ನು, ತನ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯವನ್ನು ಹೊಂದಿದ್ದಾಗ ಮಾತ್ರ ಇಂಥದ್ದೊಂದು ನಿರ್ಣಯ ಕೈಗೊಳ್ಳಲು ಸಾಧ್ಯ. ಈ ಐತಿಹಾಸಿಕ ನಿರ್ಣಯವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

logoblog

Thanks for reading Menstrual Leave Policy -2025-ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ

Previous
« Prev Post