UGC NET ಡಿಸೆಂಬರ್ 2025: ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭ.
ಯುಜಿಸಿ ನೆಟ್ (UGC NET) ಡಿಸೆಂಬರ್ 2025 ಸೆಷನ್‌ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಸೂಚನೆ ಬಿಡುಗಡೆ ಮಾಡಿದ ತಕ್ಷಣವೇ ಆನ್ಲೈನ್ ಅರ್ಜಿ ಪ್ರಕ್ರಿಯೆಯೂ ಪ್ರಾರಂಭಗೊಂಡಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 7, 2025 ರಿಂದ ನವೆಂಬರ್ 7, 2025 ರ ರಾತ್ರಿ 11:50ರವರೆಗೆ ಅಧಿಕೃತ ವೆಬ್ಸೈಟ್ ugcnet.nta.nic.in ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿರುವುದರಿಂದ, ಸಮಯಕ್ಕೆ ಸರಿಯಾಗಿ ಫಾರ್ಮ್ ಭರ್ತಿ ಮಾಡುವುದು ಅಗತ್ಯ.
ಅರ್ಹತಾ ಮಾನದಂಡಗಳು ಏನು:
UGC NET ಡಿಸೆಂಬರ್ 2025ಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
▪️ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
▪️ಸಾಮಾನ್ಯ (UR) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳನ್ನು ಪಡೆಯಬೇಕಾದುದು ಅಗತ್ಯ.
▪️OBC (Non-Creamy Layer), SC, ST ಮತ್ತು PWD ವರ್ಗದವರಿಗೆ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
▪️JRF ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ವಯೋಮಿತಿ
▪️ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಯಾವುದೇ ಗರಿಷ್ಠ ವಯೋಮಿತಿ ಇಲ್ಲ.
▪️ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಗೆ ಸಾಮಾನ್ಯವಾಗಿ ಗರಿಷ್ಠ ವಯಸ್ಸು 30 ವರ್ಷ, ಕೆಲ ವಯೋಮಿತಿ ಅನ್ವಯಿಸುತ್ತವೆ.
▪️ನಾಲ್ಕು ವರ್ಷಗಳ ಪದವಿದಾರರಿಗೆ ಅವಕಾಶ:
UGC ಹೊಸ ನಿಯಮದಡಿ ನಾಲ್ಕು ವರ್ಷಗಳ ಪದವಿ (FYUGP) ಪೂರ್ಣಗೊಳಿಸಿದವರು ಸಹ NET ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಇಂತಹ ಅಭ್ಯರ್ಥಿಗಳು ಕನಿಷ್ಠ 75% ಅಂಕಗಳು ಅಥವಾ ತತ್ಸಮಾನ ಶ್ರೇಣಿಯನ್ನು ಪಡೆದಿರಬೇಕು.
ಅರ್ಜಿ ಶುಲ್ಕದ ವಿವರ:
ಅರ್ಜಿ ಸಲ್ಲಿಸುವವರು ತಮ್ಮ ವರ್ಗದ ಪ್ರಕಾರ ಶುಲ್ಕ ಪಾವತಿಸಬೇಕಾಗುತ್ತದೆ:
▪️ಸಾಮಾನ್ಯ ವರ್ಗ (UR): ₹1,150
▪️ಸಾಮಾನ್ಯ–EWS / OBC–NCL: ₹600
▪️SC / ST / PWD / ತೃತೀಯ ಲಿಂಗ: ₹325
ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
UGC NET ಡಿಸೆಂಬರ್ 2025 ಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ:
▪️ಅಧಿಕೃತ ವೆಬ್ಸೈಟ್ ugcnet.nta.nic.in ಗೆ ಭೇಟಿ ನೀಡಿ.
▪️“UGC-NET DEC 2025 ನೋಂದಣಿ” ಲಿಂಕ್ ಕ್ಲಿಕ್ ಮಾಡಿ.
▪️“ಹೊಸ ನೋಂದಣಿ (New Registration)” ಆಯ್ಕೆ ಮಾಡಿ ಮತ್ತು ಅಗತ್ಯ ಮಾಹಿತಿ ಭರ್ತಿ ಮಾಡಿ.
▪️ಲಾಗಿನ್ ವಿವರಗಳನ್ನು ಬಳಸಿ ಪ್ರವೇಶಿಸಿ, ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
▪️ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
▪️ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಸಲ್ಲಿಸಿ.
▪️ಸಲ್ಲಿಸಿದ ಅರ್ಜಿಯ ಮುದ್ರಣ (Printout) ತೆಗೆದುಕೊಳ್ಳಿ ಮತ್ತು ಸಂಗ್ರಹಿಸಿಡಿ.
▪️ಬರುವ ಡಿಸೆಂಬರ್ 2025 UGC NET ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ.
UGC NET ಡಿಸೆಂಬರ್ 2025 – ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs)
1) UGC NET ಡಿಸೆಂಬರ್ 2025 ಅರ್ಜಿಯನ್ನು ಯಾವ ದಿನಾಂಕದವರೆಗೆ ಸಲ್ಲಿಸಬಹುದು?
ಅರ್ಜಿಯನ್ನು ಅಕ್ಟೋಬರ್ 7, 2025 ರಿಂದ ನವೆಂಬರ್ 7, 2025 ರ ರಾತ್ರಿ 11:50ರವರೆಗೆ ಸಲ್ಲಿಸಬಹುದು.
2) ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಯಾವುದು?
ಅಧಿಕೃತ ವೆಬ್ಸೈಟ್: https://ugcnet.nta.nic.in
3) ಯಾರು UGC NET ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು?
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
6) JRF ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ವಯೋಮಿತಿ ಎಷ್ಟು?
▪️JRF (Junior Research Fellowship): ಗರಿಷ್ಠ 30 ವರ್ಷ.
▪️ಸಹಾಯಕ ಪ್ರಾಧ್ಯಾಪಕ (Assistant Professor): ಯಾವುದೇ ಗರಿಷ್ಠ ವಯೋಮಿತಿ ಇಲ್ಲ.
6) ನಾಲ್ಕು ವರ್ಷಗಳ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದೇ?
ಹೌದು , UGC ಹೊಸ ನಿಯಮದ ಪ್ರಕಾರ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮ (FYUGP) ಪೂರ್ಣಗೊಳಿಸಿ ಕನಿಷ್ಠ 75% ಅಂಕಗಳು ಅಥವಾ ತತ್ಸಮಾನ ಶ್ರೇಣಿ ಪಡೆದವರು ಅರ್ಜಿ ಸಲ್ಲಿಸಬಹುದು.
7) ಅರ್ಜಿ ಶುಲ್ಕ ಎಷ್ಟು?
▪️ವರ್ಗ ಅರ್ಜಿ ಶುಲ್ಕ (₹)
▪️ಸಾಮಾನ್ಯ (UR) ₹1,150
ಸಾಮಾನ್ಯ-EWS / OBC-NCL ₹600
SC / ST / PWD / ತೃತೀಯ ಲಿಂಗ ₹325
7) ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್‌ನಲ್ಲಿ ಸಲ್ಲಿಕೆ ಮಾಡಬೇಕಾ?
ಹೌದು, ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಕೇವಲ ugcnet.nta.nic.in ಮೂಲಕವೇ ಸಲ್ಲಿಸಬೇಕು.
8) ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ ಮಾಡಬಹುದೇ?
ಹೌದು, NTA ಸಾಮಾನ್ಯವಾಗಿ ಅರ್ಜಿ ತಿದ್ದುಪಡಿ (Correction Window) ಸಮಯ ನೀಡುತ್ತದೆ. ಅದಕ್ಕಾಗಿ ಅಧಿಕೃತ ವೆಬ್ಸೈಟ್‌ನಲ್ಲಿ ಪ್ರಕಟಣೆ ಪರಿಶೀಲಿಸಿ.
9) ಪರೀಕ್ಷೆಯ ದಿನಾಂಕ ಯಾವಾಗ?
ಪರೀಕ್ಷೆಯ ನಿಖರ ದಿನಾಂಕವನ್ನು NTA ಬೇರೆ ಪ್ರಕಟಣೆ ಮೂಲಕ ಘೋಷಿಸುತ್ತದೆ. ಅದು ಸಾಮಾನ್ಯವಾಗಿ ಡಿಸೆಂಬರ್ 2025 ತಿಂಗಳಲ್ಲಿ ನಡೆಯುತ್ತದೆ.
10) ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು?
▪️ಅರ್ಜಿ ಸಲ್ಲಿಸಿದ ತರುವಾಯ ಅಭ್ಯರ್ಥಿಗಳು ಶುಲ್ಕ ಪಾವತಿ ರಸೀದಿ ಮತ್ತು ಸಲ್ಲಿಸಲಾದ ಅರ್ಜಿಯ ನಮೂನೆ ಪ್ರತಿ ಮುದ್ರಣ ಮಾಡಿಟ್ಟುಕೊಳ್ಳಬೇಕು.
▪️ಮುಂದಿನ ವೇಳಾಪಟ್ಟಿ ಹಾಗೂ ಪ್ರವೇಶಪತ್ರದ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತಿರಬೇಕು.
▪️ಮಹತ್ವದ ಲಿಂಕ್ ಈ ಕೆಳಗೆ ನೀಡಲಾಗಿದೆ.