ರೈಲ್ವೆ ಇಲಾಖೆಯು ಅತಿ ಹೆಚ್ಚು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಸಂಸ್ಥೆಯಾಗಿದ್ದು, ಜಾಗತಿಕವಾಗಿಯೂಬೃಹತ್ ಉದ್ಯೋಗಸ್ಥ ಇಲಾಖೆಯಾಗಿಯೂ ಗುರುತಿಸಿಕೊಂಡಿದೆ. ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಹತೆಯ ತಾಂತ್ರಿಕೇತರ ಹುದ್ದೆಗಳಿಗೆ ಇಲಾಖೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ಇದನ್ನು ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಂದೇ (ಎನ್‌ಟಿಪಿಸಿ) ಎಂದೇ ಕರೆಯಲಾಗುತ್ತದೆ.
ಈ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ದೇಶದ ಎಲ್ಲ ನೇಮಕಾತಿ ಮಂಡಳಿಗಳಲ್ಲಿ 10,620 ಹುದ್ದೆಗಳಿಗಾಗಿ ಎರಡು ಕಿರು ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದೆ.
▪️ಎನ್‌ಟಿಪಿಸಿಯಲ್ಲಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಹತೆಯ ಒಟ್ಟು 8,570 ಹುದ್ದೆಗಳಿವೆ. ಈ ಪೈಕಿ ಪದವೀಧರ ಹುದ್ದೆಗಳಿಗೆ ವಿಸ್ತ್ರತ ಅಧಿಸೂಚನೆ ಪ್ರಕಟಿವಾಗಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ನ.20 ಕೊನೆಯ ದಿನವಾಗಿದೆ.
▪️ಆದರೆ, ಪದವಿ ಪೂರ್ವ ವಿದ್ಯಾರ್ಹತೆಯ 3,058 ಹುದ್ದೆಗಳಿಗೆ ಅ.28 ರಂದು ವಿಸ್ತ್ರತ ಅಧಿಸೂಚನೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ನ.27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರಲಿದೆ.
▪️ಇನ್ನು, ಜೂನಿಯರ್ ಇಂಜಿನಿಯರ್‌ಗಳ 2,570 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಈ ಹುದ್ದೆಗಳಿಗೆ ಅ.31ರಿಂದ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.
ವೇತನ- ವಯೋಮಿತಿ :
ಪದವಿ ವಿದ್ಯಾರ್ಹತೆಯ ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್ ಹುದ್ದೆಗೆ 6ನೇ ಹಂತದ ವೇತನಶ್ರೇಣಿಯಿರಲಿದ್ದು, 35,400 ರೂ. ಆರಂಭಿಕ ವೇತನವಾಗಿರುತ್ತದೆ.
ಗೂಡ್ಸ್ ಟ್ರೇನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಕಂ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ 5ನೇ ಹಂತದ ವೇತನಶ್ರೇಣಿಯಲ್ಲಿ 29,200 ರೂ. ಆರಂಭಿಕ ವೇತನವಾಗಿರುತ್ತದೆ. ಆದರೆ, ಇತರ ಭತ್ಯೆಗಳು ಅನ್ವಯವಾಗಲಿವೆ. ಈವೆರಡೂ ವಿಭಾಗಕ್ಕೆ 18-33 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
▪️ಪದವಿ ಪೂರ್ವ ವಿದ್ಯಾರ್ಹತೆಯ ಟ್ರಾಫಿಕ್ ಅಸಿಸ್ಟೆಂಟ್‌ಗೆ 25,500 ರೂ.,
▪️ಕಮರ್ಷಿಯಲ್ ಟಿಕೆಟ್ ಕ್ಲರ್ಕ್‌ಗೆ 21,700 ರೂ.,
▪️ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್, ಟ್ರೇನ್ಸ್ ಕ್ಲರ್ಕ್‌ಗಳಿಗೆ 19,900 ರೂ. ಆರಂಭಿಕ ವೇತನವಾಗಿದೆ.
▪️ಈ ಹುದ್ದೆಗಳನ್ನು 18-30 ವಯೋಮಾನದ ಸ್ಥಾನಗಳೆಂದು ವಿಂಗಡಿಸಲಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯಿಸುವಂತೆ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.
▪️ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಅರ್ಜಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಆಧಾರದಲ್ಲಿಯೇ ಅಭ್ಯರ್ಥಿಯ ಅರ್ಹತೆ ನಿರ್ಧಾರವಾಗಲಿದೆ.
▪️ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣಪತ್ರದಲ್ಲಿರುವಂತೆ ತನ್ನ ಹೆಸರು, ಪಾಲಕರ ಹೆಸರು ಹಾಗೂ ಜನ್ಮದಿನಾಂಕವನ್ನು ನಮೂದಿಸತಕ್ಕದ್ದು.
▪️ರೈಲ್ವೆ ಇಲಾಖೆಯಲ್ಲಿ ಬಹು ಬೇಡಿಕೆಯ ನೇಮಕಾತಿ ವಿಭಾಗ
▪️ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದು
▪️ಅಭ್ಯರ್ಥಿಗಳಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ
ಯಾವ ಹುದ್ದೆಗಳು? ಎಷ್ಟು?
ಪದವಿ ವಿದ್ಯಾರ್ಹತೆ ಸ್ಥಾನಗಳು: 5800
▪️ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್ವೈಸರ್
▪️ ಸ್ಟೇಷನ್ ಮಾಸ್ಟರ್
▪️ಗೂಡ್ಸ್ ಟ್ರೇನ್
▪️ಮ್ಯಾನೇಜರ್
▪️ಜೂನಿಯರ್ ಅಕೌಂಟ್ ಅಸಿಸ್ಟೆಂಟ್
▪️ಕಂ ಟೈಪಿಸ್ಟ್ ಪದವಿ ಪೂರ್ವ ವಿದ್ಯಾರ್ಹತೆ
ಪದವಿ ಪೂರ್ವ ಹುದ್ದೆಗಳು: 3,058
▪️ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್
▪️ಟ್ರಾಫಿಕ್ ಅಸಿಸ್ಟೆಂಟ್
▪️ಕಮರ್ಷಿಯಲ್
▪️ಟಿಕೆಟ್ ಕ್ಲರ್ಕ್
▪️ಅಕೌಂಟ್ಸ್ ಕ್ಲರ್ಕ್ ಕಂ ಟೈಪಿಸ್ಟ್
▪️ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಪದವಿ ಪೂರ್ವ ವಿಭಾಗಕ್ಕೆ ಒಂದು ಹಂತದ ಪದವಿ ವಿದ್ಯಾರ್ಹತೆಯ ಉನ್ನತ ಹಂತದ ಹುದ್ದೆಗಳಿಗೆ ಎರಡು ಹಂತದ ಪರೀಕ್ಷೆಗಳು ಇರಲಿವೆ.
ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆ ಲಿಂಕ್: