Tapas Saadhana- 2026-27: ತಪಸ್–ಸಾಧನಾ 2026-27: ಪ್ರವೇಶಾತಿಗೆ ಅರ್ಜಿಗಳು ನವೆಂಬರ್ 1ರಿಂದ ಆರಂಭ.
ರಾಷ್ಟ್ರೋತ್ಥಾನ ಪರಿಷತ್ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹುಡುಗರು ಮತ್ತು ಹುಡುಗಿಯರ IIT ಹಾಗೂ ಡಾಕ್ಟರ್ ಆಗುವ ಕನಸನ್ನು ನನಸು ಮಾಡುವ ಉದ್ದೇಶದಿಂದ ತಪಸ್–ಸಾಧನಾ ಯೋಜನೆ 2026-27ನೇ ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ನವೆಂಬರ್ 1, 2025ರಿಂದ ಆನ್‌ಲೈನ್ ಮೂಲಕ ಆಹ್ವಾನಿಸಲಾಗುತ್ತಿದೆ ಅರ್ಹ ವಿದ್ಯಾರ್ಥಿ/ನಿಯರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ವಿದ್ಯಾರ್ಥಿಗಳಿಗೆ – ತಪಸ್ ಯೋಜನೆ:
ಆರ್ಥಿಕವಾಗಿ ಸಬಲರಲ್ಲದ ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಗಂಡು ಮಕ್ಕಳಿಗೆ
▪️ಉಚಿತ ತರಬೇತಿ: CBSE 11+12 PCMCs ಹಾಗೂ IIT-JEE
▪️ಕ್ಯಾಂಪಸ್: ರಾಷ್ಟೋತ್ಥಾನ ವಿದ್ಯಾಕೇಂದ್ರ, ಬನಶಂಕರಿ 6ನೇ ಹಂತ, ಕೆಂಗೇರಿ ಸಮೀಪ, ಬೆಂಗಳೂರು
▪️ಜೊತೆಗೆ ವಸತಿ, ಊಟ ಹಾಗೂ ಪಾಠ್ಯ ಸಾಮಗ್ರಿ ಉಚಿತವಾಗಿ ಒದಗಿಸಲಾಗುತ್ತದೆ.
ವಿದ್ಯಾರ್ಥಿನಿಯರಿಗೆ – ಸಾಧನಾ ಯೋಜನೆ:
ಆರ್ಥಿಕವಾಗಿ ಸಬಲರಲ್ಲದ ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ
▪️CBSE 11+12 PCMB ಹಾಗೂ NEET, JEE
▪️ವಸತಿ, ಊಟ ಮತ್ತು ಶೈಕ್ಷಣಿಕ ಸಾಮಗ್ರಿಗಳು ಸಂಪೂರ್ಣ ಉಚಿತ.
▪️ಕ್ಯಾಂಪಸ್: ರಾಷ್ಟೋತ್ಥಾನ ವಿದ್ಯಾಕೇಂದ್ರ, ಥಣಿಸಂದ್ರ ಮುಖ್ಯರಸ್ತೆ, ಹೆಗಡೆನಗರ, ಬೆಂಗಳೂರು
ಅರ್ಹತೆ ವಿವರ:
ಅರ್ಜಿ ಸಲ್ಲಿಸಲು ಅರ್ಹತೆಗಳು:
▪️ತಪಸ್‌ಗೆ ಗಂಡು ಮಕ್ಕಳು ಹಾಗೂ ಸಾಧನಾಗೆ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಬಹುದು.
▪️ಅವರು ಪ್ರಸ್ತುತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ./ 10ನೇ ತರಗತಿಯ ಪರೀಕ್ಷೆಯನ್ನು ಬರೆಯುವವರಾಗಿರಬೇಕು.
▪️9ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 90% ಅಂಕಗಳನ್ನು ಪಡೆದಿರಬೇಕು.
▪️ಪೋಷಕರ ವಾರ್ಷಿಕ ವರಮಾನ ರೂ. 3 ಲಕ್ಷ (ರೂಪಾಯಿ ಮೂರು ಲಕ್ಷ) ಮೀರಿರಬಾರದು.
ಯಾವುದೇ ಅರ್ಜಿ ಶುಲ್ಕವಿಲ್ಲ:
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇಲ್ಲ.
ಆಯೋಜಕರು:
ರಾಷ್ಟ್ರೋತ್ಥಾನ ಪರಿಷತ್, ಕಳೆದ 60 ವರ್ಷಗಳಿಂದ ಸಾಹಿತ್ಯ, ಸೇವೆ, ಆರೋಗ್ಯ ಮತ್ತು ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿ ಸಮಾಜ ನಿರ್ಮಾಣದತ್ತ ಕಾರ್ಯನಿರ್ವಹಿಸುತ್ತಿದೆ.
2012ರಿಂದ ತಪಸ್ ಹಾಗೂ 2017ರಿಂದ ಸಾಧನಾ ಯೋಜನೆಗಳ ಮೂಲಕ ಅನೇಕ ವಿದ್ಯಾರ್ಥಿಗಳ ಎಂಜಿನಿಯರ್ ಮತ್ತು ವೈದ್ಯರಾಗುವ ಕನಸಿಗೆ ಪಥ ಪ್ರದರ್ಶಕವಾಗಿದೆ.
ಅರ್ಜಿ ಸಲ್ಲಿಕೆ:
ಅರ್ಜಿಯನ್ನು ನವೆಂಬರ್ 1ರ ನಂತರ ಆನ್‌ಲೈನ್‌ನಲ್ಲಿ, ಈ ಕೆಳಕಂಡ ವೆಬ್ಸೈಟ್ ನಲ್ಲಿಯೇ ಅರ್ಜಿ ಸಲ್ಲಿಕೆ tapassaadhana.rashtrotthana.org
▪️ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ 9ನೇ ತರಗತಿಯ ಅಂಕಪಟ್ಟಿ ಹಾಗೂ ಫೋಟೋವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಸೂಚನೆ:
ಅರ್ಜಿ ಸಲ್ಲಿಕೆ ಹಾಗೂ ಆಯ್ಕೆ ಪರೀಕ್ಷೆಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಆಯ್ಕೆ ವಿಧಾನ:
▪️ಆಯ್ಕೆಯನ್ನು ಲಿಖಿತ ಪರೀಕ್ಷೆಗಳು ಮತ್ತು ಆಯ್ಕೆ ಶಿಬಿರದ ಮೂಲಕ ಮಾಡಲಾಗುವುದು.
▪️ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಕೆಲವು ನಗರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು.
▪️1ನೇ ಹಂತದ ಪರೀಕ್ಷೆ: 25 ನೇ ಡಿಸೆಂಬರ್, ಬೆಳಗ್ಗೆ 10 ರಿಂದ ಮಧ್ಯಾಹ್ನ 1
▪️1 ನೇ ಹಂತದ ಪರೀಕ್ಷಾ ಫಲಿತಾಂಶ, 50 ಜನವರಿ
▪️2ನೇ ಹಂತದ ಪರೀಕ್ಷೆ: 26ನೇ ಜನವರಿ, ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ
▪️ಫಲಿತಾಂಶ ಹಾಗೂ ಇನ್ನಿತರೇ ಮಾಹಿತಿಯನ್ನು 15 15 ನೇ ಫೆಬ್ರವರಿ ಯಂದು ವೆಬೈಟ್‌ನಲ್ಲಿ -tapassaadhana.rashtrotthana.org ನಲ್ಲಿ ಪ್ರಕಟ ಮಾಡಲಾಗುವುದು.
▪️ಕೊಡಮಾಡುವ ಸೌಕರ್ಯಗಳು ಎಲ್ಲವೂ ಉಚಿತವಾಗಿ:
▪️ತಪಸ್ ಹಾಗೂ ಸಾಧನಾಗೆ ಆಯ್ಕೆಯಾದ ಗಂಡು ಹಾಗೂ ಹೆಣ್ಣು ಮಕ್ಕಳಿಗೆ 11ನೇ ತರಗತಿಗೆ ಪ್ರವೇಶ ಒದಗಿಸಲಾಗುವುದು.
▪️ಬೇಸ್ ಸಂಸ್ಥೆಯ ನುರಿತ ಉಪನ್ಯಾಸಕರಿಂದ ತರಬೇತಿ, ತರಗತಿಗಳು, ಪ್ರಯೋಗಾಲಯಗಳು ಹಾಗೂ ಸುಸಜ್ಜಿತ ಗ್ರಂಥಾಲಯವಿದ್ದು, ಕಠಿಣ ಪರಿಶ್ರಮದಿಂದ ಶ್ರೇಷ್ಠರೆನಿಸಲು ಸ್ಫೂರ್ತಿ ನೀಡುವಂತಿವೆ.
▪️ವಿದ್ಯಾರ್ಥಿ ನಿಲಯ:
ಕ್ಷೇಮಕರ, ಸ್ವಚ್ಛ ಮತ್ತು ಆರೋಗ್ಯದಾಯಕ ಸಸ್ಯಾಹಾರಿ ಆಹಾರವನ್ನು ಒದಗಿಸಲಾಗುತ್ತದೆ.
▪️ತಪಸ್ - ಸಾಧನಾ ಪ್ರಕಲ್ಪಗಳಿಗೆ ಅರ್ಹತೆ ಇಲ್ಲದವರು ರಾಷ್ಟೋತ್ಥಾನದ ಪದವಿಪೂರ್ವ ಕಾಲೇಜುಗಳಲ್ಲಿ ವಸತಿ ಸಹಿತ ಪ್ರವೇಶಕ್ಕೆ ಸಂಪರ್ಕಿಸಬಹುದು.
* ರಾಷ್ಟೋತ್ಥಾನ ಪಿಯು ಕಾಲೇಜು, ಉಡುಪಿ-9900124118
▪️ರಾಷ್ಟೋತ್ಥಾನ ಪಿಯು ಕಾಲೇಜು, ದಾವಣಗೆರೆ- 8792627879
▪️ರಾಷ್ಟೋತ್ಥಾನ ಪಿಯು ಕಾಲೇಜು, ಧಾರವಾಡ - 9980732311
▪️ಅರ್ಜಿ ಸಲ್ಲಿಕೆ ಮಾಡಲು ಆರಂಭಿಕ ದಿನಾಂಕ: ನವೆಂಬರ್ 1.
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15ನೇ ಡಿಸೆಂಬರ್ (ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ನ್ನು ಗಮನಿಸುವುದು)
▪️ಮೊದಲ ಹಂತದ ಪ್ರವೇಶ ಪರೀಕ್ಷೆ: 25 ಡಿಸೆಂಬರ್ 2025 ರಂದು ಜರುಗಲಿದೆ.
▪️ಅಧಿಕೃತ ವೆಬ್ಸೈಟ್: tapassaadhana.rashtrotthana.org