2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಶಾಲಾ ಶಿಕ್ಷಕರ ವೇತನಕ್ಕಾಗಿ ಮೂರನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖ-4ರ ಸರ್ಕಾರದ ಆದೇಶದನ್ವಯ 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಕರ ವೇತನಕ್ಕಾಗಿ ನಿಗಧಿಪಡಿಸಲಾಗಿರುವ ಅನುದಾನದಲ್ಲಿ ಮೂರನೇ ತ್ರೈಮಾಸಿಕ ವೇತನ ಅನುದಾನ ಅಕ್ಟೋಬರ್ 2025 ರಿಂದ ಡಿಸೆಂಬರ್ 2025ರ ಅವಧಿಯ 03 ತಿಂಗಳ ವೇತನಕ್ಕಾಗಿ ಬಿಡುಗಡೆ ಮಾಡಲಾಗಿದೆ.
ಸದರಿ ವೇತನ ಅನುದಾನವನ್ನು ಲೆಕ್ಕ ಶೀರ್ಷಿಕೆ 2202-00-101-0-19 (2202-01-197-1-02) ರ ಅನುಬಂಧ-1ರಲ್ಲಿ ರೂ.54192.56 ಲಕ್ಷ (ರೂ.ಐದು ನೂರಾ ನಲವತ್ತೊಂದು ಕೋಟಿ ತೊಂಬತ್ತೇರಡು ಲಕ್ಷದ ಐವತ್ತಾರು ಸಾವಿರ ಮಾತ್ರ) ಗಳನ್ನು ಖಜಾನೆ-2 ರಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸದರಿ ಅನುಬಂಧ-1ನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಅದರಂತೆ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನದ ಬಿಲ್ಲುಗಳನ್ನು ತುರ್ತಾಗಿ ಸಿದ್ಧಪಡಿಸಿ ಖಜಾನೆಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಜ್ಞಾಪನ ಹೊರಡಿಸಲಾಗಿದೆ.
▪️ಎಸ್.ಎಸ್.ಎ/ಆರ್.ಎಂ.ಎಸ್.ಎ ಶಾಲಾ ಶಿಕ್ಷಕರ ವೇತನಕ್ಕಾಗಿ 2025-26 ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಆದೇಶ