Friday, October 17, 2025

Commonwealth Scholarship: ಕಾಮನ್‌ವೆಲ್ತ್ ಶಿಷ್ಯವೇತನ ಅರ್ಜಿ ಅವಧಿ ವಿಸ್ತರಣೆ

  ISARESOURCEINFO       Friday, October 17, 2025
Commonwealth Scholarship: ಕಾಮನ್‌ವೆಲ್ತ್ ಶಿಷ್ಯವೇತನ ಅರ್ಜಿ ಅವಧಿ ವಿಸ್ತರಣೆ.



ಯುನೈಟೆಡ್ ಕಿಂಗ್‌ಡಮ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಕಾಮನ್‌ವೆಲ್ತ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗಿದೆ.

ಆಸಕ್ತರು ಅ.21ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿವರ್ಷ 700ಕ್ಕೂ ಅಧಿಕ ಪ್ರತಿಭಾವಂತರಿಗೆ ಈ ಶಿಷ್ಯವೇತನ ನೀಡಲಾಗುತ್ತದೆ. ಪದವಿಯನ್ನು ಮುಗಿಸಿರುವ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಥವಾ ಪಿಎಚ್ .ಡಿ ಪದವಿಯನ್ನು ಪಡೆಯಲು ಈ ಶಿಷ್ಯವೇತನವನ್ನು ಪಡೆಯಬಹುದಾಗಿದೆ. 2026ರಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಲು ಬಯಸುವ ಆಸಕ್ತರು ಇದರ ಪ್ರಯೋಜನ ಪಡೆಯಬಹುದು.

ಯಾವುದಕ್ಕೆ ಅವಕಾಶ?: 

ಪಿಎಚ್‌ಡಿ, ಸ್ನಾತಕೋತ್ತರ,ದೂರಶಿಕ್ಷಣ, ಕಾಮನ್‌ವೆಲ್ತ್ ಪ್ರೊಫೆಷನಲ್ ಸ್ಕಾಲರ್‌ಶಿಪ್‌, ಕಾಮನ್‌ವೆಲ್ತ್ ಸ್ಟಾರ್ಟಪ್ ವಿಭಾಗಗಳಲ್ಲಿ ಆರ್ಥಿಕ ನೆರವು ಪಡೆಯಬಹುದಾಗಿದೆ. 

ಅರ್ಜಿ ಸಲ್ಲಿಕೆ ಲಿಂಕ್: https://cscuk.fcdo.gov.uk/apply/
logoblog

Thanks for reading Commonwealth Scholarship: ಕಾಮನ್‌ವೆಲ್ತ್ ಶಿಷ್ಯವೇತನ ಅರ್ಜಿ ಅವಧಿ ವಿಸ್ತರಣೆ

Previous
« Prev Post