ಪಿಎಂ ಕಿಸಾನ್ 21ನೇ ಕಂತು: ದೀಪಾವಳಿಗೂ ಮುನ್ನವೇ ಖಾತೆಗೆ 2,000 ರೂ. ಜಮಾ
ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ₹2,000 ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ಜಮಾ ಮಾಡಲು ಸಿದ್ಧತೆ ನಡೆಸಿದೆ. ಈ ಹಣ ದೀಪಾವಳಿಗೆ ಮುನ್ನವೇ ರೈತರ ಖಾತೆಗಳಿಗೆ ತಲುಪುವ ನಿರೀಕ್ಷೆಯಿದೆ. ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡದ ರೈತರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಸುಮಾರು 2.7 ಮಿಲಿಯನ್ ರೈತರಿಗೆ ಈಗಾಗಲೇ ಹಣ ವರ್ಗಾಯಿಸಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಹಣ ಜಮಾ ಆಗಲಿದೆ. ರೈತರು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.
ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ 21ನೇ ಕಂತಿನ ಹಣ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು,
ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ 21ನೇ ಕಂತಿನ ಹಣ ನಿಮಗೆ ಬರುವುದು. ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಬಹುದು.
▪️ಫಲಾನುಭವಿಗಳ ಪಟ್ಟಿ ನೋಡಲು ಈ ವಿಧಾನ ಅನುಸರಿಸಿ.
▪️ಮೊದಲಿಗೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
▪️ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
▪️ನಿಮ್ಮ ತಾಲೂಕು ಆಯ್ಕೆ ಮಾಡಿ
▪️ನಂತರ ನಿಮ್ಮ ಊರನ್ನು ಆಯ್ಕೆ ಮಾಡಿ.
▪️ಇಲ್ಲಿ ನಿಮಗೆ ನಿಮ್ಮ ಊರಿನ ಎಲ್ಲ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ದೊರೆಯುವುದು.