BSNL ಬಂಪರ್ ಆಫರ್: ಹೊಸ ಗ್ರಾಹಕರಿಗೆ ಕೇವಲ ₹1ಕ್ಕೆ 4G ಸಿಮ್ ಕಾರ್ಡ್ ಪಡೆಯುವ ವಿಶೇಷ ಅವಕಾಶ!
ಬಿಎಸ್‌ಎನ್‌ಎಲ್ ನಿಂದ ದೀಪಾವಳಿಗೆ ಭರ್ಜರಿ ಆಫರ್
ಬಿಎಸ್‌ಎನ್‌ಎಲ್ ಹೊಸ ಗ್ರಾಹಕರಿಗಾಗಿ ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆಯನ್ನು ಘೋಷಿಸಿದ್ದು, ಅಕ್ಟೋಬರ್ 18ರಿಂದ ನವೆಂಬರ್ 18ರವರೆಗೆ ಗ್ರಾಹಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಹೊಸ ಗ್ರಾಹಕರು ಒಂದು ರೂಪಾಯಿ ಪಾವತಿಸಿ 4 ಜಿ ಸಿಮ್ ಕಾರ್ಡ್ ಪಡೆಯಬಹುದು. ಇದರಲ್ಲಿ 30 ದಿನ ಅನಿಯಮಿತ ಕರೆಗಳು, ಪ್ರತಿ ದಿನ 2 GB ಡೇಟಾ ಮತ್ತು ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ದೊರೆಯಲಿದೆ.
ಹಾಲಿ ಚಂದಾದಾರರಿಗೆ ಅಕ್ಟೋಬರ್ 18ರಿಂದ 20ರವರೆಗೆ ದೀಪಾವಳಿ ಲಕ್ಕಿ ಡ್ರಾ ನಡೆಸುತ್ತಿದ್ದು, ಬಿಎಸ್‌ಎನ್‌ಎಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ 100 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರೀಚಾರ್ಜ್ ಮಾಡುವ ಗ್ರಾಹಕರು ಪ್ರತಿದಿನ 10 ಗ್ರಾಂ ಬೆಳ್ಳಿ ನಾಣ್ಯಗಳನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ.
ದೀಪಾವಳಿ ಹಬ್ಬದ ಅಂಗವಾಗಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಅಕ್ಟೋಬರ್ 15 ರಿಂದ ನವೆಂಬರ್ 15, 2025ರವರೆಗೆ ಲಭ್ಯವಿರುವ ಈ ದೀಪಾವಳಿ ಬೊನಾಂಜಾದ ಮೂಲಕ, ₹1ಕ್ಕೆ ಒಂದು ತಿಂಗಳ ಕಾಲ 4G ಮೊಬೈಲ್ ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯಬಹುದು. ದಿನಕ್ಕೆ 2GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಹಾಗೂ 100 ಉಚಿತ SMSಗಳ ಜೊತೆಗೆ ಉಚಿತ SIM ಕಾರ್ಡ್ ಕೂಡ ಲಭ್ಯವಿದೆ.