ನಿಮ್ಮ ಕನಸಿನ ಮನೆಗೆ 1.80 ಲಕ್ಷ ರೂ. ಸಬ್ಸಿಡಿ ಪಡೆಯೋದು ಹೇಗೆ?
ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ನಮ್ಮದೇ ಅಂತ ಒಂದು ಸೂರು ಮಾಡಿಕೊಳ್ಳಬೇಕಾದರೆ ಸಾಕಷ್ಟು ಬಂಡವಾಳ ಬೇಕು. ಅದರಲ್ಲೂ ಇವತ್ತಿನ ರಿಯಲ್ ಎಸ್ಟೇಟ್ ಭರಾಟೆಯಲ್ಲಿ ದೊಡ್ಡನಗರ ಮತ್ತು ಪಟ್ಟಣಗಳಲ್ಲಿ ಜನಸಾಮಾನ್ಯರು ಸ್ವಂತ ಮನೆ ಕಟ್ಟಿಕೊಳ್ಳುವುದು ಸುಲಭದ ವಿಷಯವಲ್ಲ. ಅದಕ್ಕಾಗಿಯೇ ಕೇಂದ್ರ ಸರಕಾರವು 'ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0' ಅನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಪಡೆಯುವ ಗೃಹ ಸಾಲಕ್ಕೆ 1.80 ಲಕ್ಷ ರೂ. ವರೆಗೆ ಬಡ್ಡಿ ವಿನಾಯಿತಿ ಸಿಗುತ್ತದೆ. ಆದರೆ, ವಾಸ್ತವದಲ್ಲಿ ಈ 1.80 ಲಕ್ಷ ರೂ. ಸಬ್ಸಿಡಿ ಪಡೆದ ಸಾಲಗಾರನಿಗೆ 4 ಲಕ್ಷ ರೂ.ವರೆಗೆ ಉಳಿತಾಯವಾಗುತ್ತದೆ! ಬನ್ನಿ, ಸರಕಾರದ ಈ ಯೋಜನೆಯ ಲಾಭ ಪಡೆಯೋದು ಹೇಗೆ ಎನ್ನುವುದನ್ನು ವಿವರವಾಗಿ ತಿಳಿಯೋಣ.
▪️2024ರ ಸೆಪ್ಟೆಂಬರ್‌ನಿಂದ ಜಾರಿಗೆ ಬಂದಿದೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0
▪️ವಾರ್ಷಿಕ ಆದಾಯ 9 ಲಕ್ಷದ ರೂಪಾಯಿ ವರೆಗೆ ಇರೋರಿಗೆ ಸಿಗುತ್ತೆ ಈ ಯೋಜನೆಯ ಬೆನಿಫಿಟ್
▪️ಸರಕಾರದ ಸಬ್ಸಿಡಿಯಿಂದ ಬಡ್ಡಿ ಹೊರೆ ಇಳಿದು, ಸಾಲ ಪಡೆದವರಿಗೆ ಸಿಗುತ್ತೆ 4 ಲಕ್ಷ ರೂ. ವರೆಗಿನ ಲಾಭ
ನೀವು ಮನೆ ಕಟ್ಟುತ್ತೇನೆ ಎಂದರೆ, ಆಪ್ತರು ನೆರವಿಗೆ ಧಾವಿಸಬಹುದು, ಅವರು ಅಷ್ಟೇ ಅಲ್ಲ, ಕೇಂದ್ರ ಸರಕಾರವೂ ನಿನ್ನಮ್ಮ ಮನೆ ಕನಸಿಗೆ ಬಲ ತುಂಬುತ್ತಿದೆ. ನೀವು ಪಡೆಯುವ ಗೃಹ ಸಾಲಕ್ಕೆ ಸಬ್ಸಿಡಿ ಒದಗಿಸುವ ಮೂಲಕ ಪ್ರೋತ್ಸಾಹವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿಯೇ 'ಪ್ರಧಾನಮಂತ್ರಿ ಆವಾಸ್ ಯೋಜನ ಅರ್ಬನ್ 2.0 (PMAY-U 2.0) ಕೇಂದ್ರ ಸರಕಾರವು 2024ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದಿದೆ. ಎಲ್ಲರಿಗೂ ಸುರಕ್ಷಿತ ಮತ್ತು ಕೈಗೆಟಕುವ ದರದಲ್ಲಿ ಸೂರು ಕಲಿಸಿಕೊಡಬೇ ಇದನ್ನು ರೂಪಿಸಲಾಗಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆ ಅಡಿಯಲ್ಲಿ ನಗರ ಪ್ರದೇಶದ ಬಡವರು ಮತ್ತು ಮಧ್ಯಮ ವರ್ಗದ ಕೋಟೆ ಜನರಿಗೆ ಅನುಕೂಲ ಕಲ್ಪಿಸಲು ಸರಕಾರ ಸಜ್ಜಾಗಿದೆ.
▪️ಯಾರು ಈ ಯೋಜನೆಗೆ ಅರ್ಹರು?
ವಾರ್ಷಿಕ ಆದಾಯ ಲಕ್ಷ ರೂ. ವರೆಗೆ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ (economically weaker section" (EWS) 3 ರಿಂದ 6 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ಕಡಿಮೆ ಆದಾಯದ ವರ್ಗ(Low income group) ಮತ್ತು 6 ರಿಂದ 9 ಲಕ್ಷ ರೂ. ಒಳಗಿನ ಆದಾಯ ಹೊಂದಿರುವ ಮಧ್ಯಮ ಆದಾಯ ವರ್ಗದವರು (middle income group) ಈ ಯೋಜನೆಗೆ ಅರ್ಹರು.
ಸರಳವಾಗಿ ಹೇಳುವುದಾದರೆ 3 ಲಕ್ಷದಿಂದ ಹಿಡಿದು 9 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಯೋಜನೆಯ ಅನುಕೂಲ ಪಡೆಯಬಹುಮ. ಆದರೆ ಭಾರತದ ಯಾವುದೇ ಪ್ರದೇಶದಲ್ಲಿ ಸ್ವಂತ ಪಕ್ಕಾ ಮನೆ ಹೊಂದಿಲ್ಲದವರಿಗೆ ಮಾತ್ರ ಈ ಯೋಜನೆಯ ಲಾಭ ದಕ್ಕುತ್ತದೆ. ಯೋಜನೆಯ ಪ್ರಮುಖಾಂಶಗಳು ಹೀಗಿದೆ.
1.ಮಹಿಳಾ ಸಬಲೀಕರಣ:
ಪ್ರಧಾನಮಂತ್ರಿ ಅವಾಸ್ ಯೋಜನೆಯ ಅನುಕೂಲ ಪಡೆದುಕೊಳ್ಳುವ ಮನೆಗಳನ್ನು ಮನೆಯ ಯಜಮಾನಿ ಅಥವಾ ಮನೆಯ ಯಜಮಾನಿ ಮತ್ತು ಯಜಮಾನನ ಹೆಸರಿನಲ್ಲಿ ನೋಂದಾಯಿಸಬಹುದು. ಮಹಿಳಾ ಸಬಲೀಕರಣ & ಲಿಂಗ ಸಮಾನತೆಯನ್ನು ಈ ಯೋಜನೆ ಪ್ರೋತ್ಸಾಹಿಸುತ್ತದೆ.
2. ಬೇರೆ ಲಾಭ ಪಡೆದಿರಬಾರದು:
ಕೇಂದ್ರ ಸರಕಾರ, ರಾಜ್ಯ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಗೃಹ ನಿರ್ಮಾಣದ ಉದ್ದೇಶಕ್ಕೆ ಯಾವುದಾದರೂ ಯೋಜನೆಯ ಲಾಭ ಪಡೆದಿದ್ದರೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0'ದ ಅನುಕೂಲ ಸಿಗುವುದಿಲ್ಲ.
3. ಎಲ್ಲ ಪಟ್ಟಣಗಳು ಮತ್ತು ನಗರಗಳಲ್ಲಿ ಲಭ್ಯ:
ದೇಶದ ಎಲ್ಲಾ ಸೂಚಿತ ಪಟ್ಟಣ ಮತ್ತು ನಗರಗಳಲ್ಲಿ ಈ ಯೋಜನೆ ಲಭ್ಯವಿದೆ. ಹೊಸದಾಗಿ ರೂಪಿಸಲಾಗಿರುವ ನಗರಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಗಿದೆ.
4. ಒಂದು ಕುಟುಂಬಕ್ಕೆ ಒಮ್ಮೆ ಮಾತ್ರ ಈ ಯೋಜನೆಯ ಲಾಭ:
ಕಳೆದ 20 ವರ್ಷಗಳ ಅವಧಿಯಲ್ಲಿ ಸರಕಾರದ ಇನ್ನಾವುದೇ ಯೋಜನೆ ಅಡಿಯಲ್ಲಿ ಗೃಹ ನಿರ್ಮಾಣಕ್ಕೆ ಸಬ್ಸಿಡಿ ಅಥವಾ ಅನ್ಯ ರೀತಿಯ ಅನುಕೂಲಗಳನ್ನು ಪಡೆದಿದ್ದರೆ ಅಂಥವರು ಈ ಯೋಜನೆಗೆ ಅರ್ಹರಲ್ಲ.
5. ಬ್ಯಾಂಕ್ ನಿಂದ ಬ್ಯಾಂಕ್ ಸಾಲ ವರ್ಗಾಯಿಸಿದ್ರೂ ಒಮ್ಮೆ ಮಾತ್ರ ಸಬ್ಸಿಡಿ ಲಭ್ಯ:
ಈಗಾಗಲೇ ನೀವು ಪ್ರಧಾನಮಂತ್ರಿ ಅವಾಸ್ ಯೋಜನೆ ಅರ್ಬನ್ 2.0 ಸ್ಕೀಮ್ ನಿಂದ ಸಬ್ಸಿಡಿ ಅನುಕೂಲ ಪಡೆದಿದ್ದು, ಮತ್ತೊಂದು ಬ್ಯಾಂಕ್‌ಗೆ ನಿಮ್ಮ ಸಾಲದ ಬಾಕಿ ಮೊತ್ತವನ್ನು ವರ್ಗಾಯಿಸಿಕೊಂಡರೆ ಆ ಬ್ಯಾಂಕ್ ನಿಂದ ನಿಮಗೆ ಮತ್ತೊಮ್ಮೆ ಅಂದರೆ ಎರಡನೇ ಬಾರಿಗೆ ಸಬ್ಸಿಡಿ ಆನುಕೂಲ ದೊರೆಯುವುದಿಲ್ಲ.
ಏನಿದು PMAY-U 2.0 ಬಡ್ಡಿ ವಿನಾಯತಿ ಯೋಜನೆ:
▪️ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಬಹುದು, ಇಲಿ ಮನೆ ಖರೀದಿ, ಮನೆ ನಿರ್ಮಾಣಕ್ಕೆ ನೇರವಾಗಿ ಬಡ್ಡಿದರದ ಮೇಲೆ ಸಬ್ಸಿಡಿಯನ್ನು ಕೊಡುತ್ತದೆ. ಈ ಯೋಜನೆಯು ಹೊಸ ಹೊಸ ಗೃಹ ನಿರ್ಮಾಣ, ಈಗಾಗಲೇ ನಿರ್ಮಾಣವಾಗಿರುವ ಕಟ್ಟಡ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಕಟ್ಟಡಗಳಿಗೆ ಅನ್ವಯಿಸುತ್ತದೆ. ಅಂದರೆ ಫ್ಲಾಟ್ ಗಳನ್ನು ಖರೀದಿಸುವವರು ಸಹ ಈ ಯೋಜನೆ ಲಾಭ ಪಡೆಯಬಹುದು.
▪️ಗರಿಷ್ಠ 1.80 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿ ಸಬ್ಸಿಡಿಯನ್ನು ಯೋಜನೆಯಡಿ ಪಡೆಯಬಹುದು. ಈ ಮೊತ್ತವು 5 ವರ್ಷಗಳಲ್ಲಿ 5 ಕಂತುಗಳಲ್ಲಿ ಬಿಡುಗಡೆಯಾಗುತ್ತದೆ. ವಾರ್ಷಿಕ ಆದಾಯ 9 ಲಕ್ಷ ರೂ.ವರೆಗೆ ಇರುವ ಜನರು ಯೋಜನೆಗೆ ಅರ್ಹರು. ಗರಿಷ್ಠ 25 ಲಕ್ಷ ರೂ.ವರೆಗಿನ ಸಾಲಕ್ಕೆ ಮಾತ್ರ ಈ ಸಬ್ಸಿಡಿ ಅನುಕೂಲ ಸಿಗುತ್ತದೆ.
▪️ಯೋಜನೆಯಡಿ ಸಬ್ಸಿಡಿ ಪಡೆಯಲು ಕೆಲವು ಷರತ್ತುಗಳು ಇವೆ. ಆಸ್ತಿಯ ಒಟ್ಟು ಮೌಲ್ಯ 35 ಲಕ್ಷ ರೂ. ಮೀರುವಂತಿಲ್ಲ, ಮನೆಯ ಕಾರ್ಪೆಟ ಏರಿಯಾ 120 ಚದರ ಮೀ ಗಿಂತ ಹೆಚ್ಚಿರುವಂತಿಲ್ಲ, ಸಾಲದ ಒಟ್ಟು ಮೊತ್ತದಲ್ಲಿ ಮೊದಲ 8 ಲಕ್ಷ ರೂ. ಮೊತ್ತಕ್ಕೆ ಮಾತ್ರ ಶೇ.4ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ.
▪️ಸೆಪ್ಟೆಂಬರ್ 1, 2024ರ ನಂತರ ನಡೆದ ಗೃಹ ಸಾಲಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಯೋಜನೆಯಲ್ಲಿ ಬಡ್ಡಿ ಸಬ್ಸಿಡಿಯನ್ನು ಸಾಲದ ಖಾತೆಗೆ ಸೇರವಾಗಿ ಜಮೆ ಮಾಡಲಾಗುತ್ತದೆ. ಹೀಗಾಗಿ ಸಾಲದ ಅಸಲಿನ ಮೊತ್ತ ಕಡಿಮೆಯಾಗಿ ಸಾಲದ ಮಾಸಿಕ ಕಂತು (ಇಎಐ) ತಗ್ಗುತ್ತದೆ. ಇದರಿಂದಾಗಿ ಒಟ್ಟಾರೆ ಪಾವತಿಸುವ ಬಡ್ಡಿ ಮೊತ್ತವೂ ತಗ್ಗುತ್ತದೆ.
PMAY-U 2.0 ಯೋಜನೆಯಡಿ 4 ಲಕ್ಷ ರೂ. ತನಕ ಅನುಕೂಲ ಪಡೆಯುವುದು ಹೇಗೆ?
ಅಸಲಿಗೆ ಯೋಜನೆಯಡಿ 1.80 ಲಕ್ಷ ರೂ ವರೆಗೆ ಸಬ್ಸಿಡಿ ಸಿಕ್ಕರೂ, ವಾಸ್ತವದಲ್ಲಿ ಸಾಲ ಪಡೆದ ವಕ್ತಿಗೆ ಇದರಿಂದ 4 ಲಕ್ಷ ರೂಪಾಯಿ ವರೆಗೆ ಲಾಭ ಸಿಗುತ್ತದೆ ಅದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಉದಾಹರಣೆಗೆ ನೀವು 35 ಲಕ್ಷ ರೂ. ಮೌಲ್ಯದ ಮನೆ ಖರೀದಿಗೆ 25 ಲಕ್ಷ ರೂಪಾಯಿ ಸಾಲವನ್ನು ಶೇ.8.5ರ ಬಡ್ಡಿದರದಲ್ಲಿ 11 ವರ್ಷಗಳ ಅವಧಿಗೆ ಪಡೆದಿದ್ದೀರಿ ಎಂದು ಭಾವಿಸೋಣ ಈ ಲೆಕ್ಕಾಚಾರದ ಪ್ರಕಾರ - ಒಟ್ಟು 25 ಲಕ್ಷ ರೂ ಸಾಲಕ್ಕೆ. 12 ವರ್ಷಗಳ ಅವಧಿಯಲ್ಲಿ 14.96 ಲಕ್ಷ ರೂ. ಬಡ್ಡಿ ಕಟ್ಟಬೇಕಾಗುತ್ತದೆ. 'ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ರಿಂದ ಪ್ರತಿ ವರ್ಷ 36 ಸಾವಿರ ರೂಪಾಯಿ ಸಬ್ಸಿಡಿ ಮೊತ್ತ (ಮೊದಲ 8 ಲಕ್ಷ ರೂ.ಗೆ ಶೇ 4ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ) 5 ವರ್ಷಗಳ ಅವಧಿಗೆ ಲಭಿಸುತ್ತದೆ. ಅದರಂತೆ 1.8 ಲಕ್ಷ ರೂ ಸಬ್ಸಿಡಿ ಸಿಕ್ಕಂತಾಗುತ್ತದೆ. ನಿಮ್ಮ ಸಾಲದ ಆಕೌಂಟ್ ಪ್ರತಿ ವರ್ಷ 36 ಸಾವಿರ ರೂಪಾಯಿ ಜಮೆ ಆಗುವುದರಿಂದ ನಿಮ್ಮ ಹೆಸರಿನ ಒಟ್ಟು ಮೊತ್ತದಲ್ಲಿ ಪ್ರತಿ ವರ್ಷ 36 ಸಾವಿರ ರೂಪಾಯಿ ಕಡಿಮೆಯಾಗುತ್ತಾ ಹೋಗುತ್ತದೆ.
ಸಾಲದ ಆಸಲಿನ ಮೊತ್ತ ಕಡಿಮೆಯಾಗುತ್ತಾ ಹೋಗುವುದರಿಂದ ಸಾಲದ ಮೇಲಿನ ಬಡ್ತಿ ಹೊರೆಯೂ ಕೂಡ 14.96 ಲಕ್ಷದಿಂದ 12.75 ಲಕ್ಷ ರೂ ಗೆ ಇಳಿಕೆಯಾಗುತ್ತದೆ. ಅಂದರೆ ಸಬ್ಸಿಡಿಯಿಂದ 1.80 ಲಕ್ಷ ರೂ. ಮತ್ತು ಬಡ್ಡಿ ಹೊರೆಯಿಂದ 2.20 ಲಕ್ಷ ರೂ. ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಸಾಲ ಪಡೆದ ವ್ಯಕ್ತಿಗೆ 4 ಲಕ್ಷ ರೂಪಾಯಿ ವರೆಗೆ ಅನುಕೂಲ ಸಿಗುತ್ತದೆ.
PMAY-U 2.0 ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
▪️PMAY-U " ಅಧಿಕೃತ ವೆಬ್ಸೈಟ್ pmay&urban.gov.in
▪️ಯೋಜನೆಗೆ ನೀವು ಅರ್ಹರಾ ಎನ್ನುವುದನ್ನು ವರಿಶೀಲಿಸಿ
▪️PMAY-U 2.0 ಅರ್ಜಿ ಎನ್ನುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ ಮಾಡಿ
▪️ನಿಮ್ಮ ಆಧಾರ್, ಅದಾಯ, ಸಂಪರ್ಕ ಸಂಖ್ಯೆ, ಆಸ್ತಿ ವಿವರಗಳನ್ನು ನಮೂದಿಸಿ
▪️ಆದಾರ್ ಓಟಿಪಿ ಮೂಲಕ ದೃಢೀಕರಣ ಮಾಡಿಕೊಳ್ಳಿ
▪️ಆಧಾರ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ದಿವರ ಸೇರಿ ಅಗತ್ಯ ದಾಖಲೆ ಅಪ್ ಲೋಡ್ ಮಾಡಿ
▪️ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿ.
▪️ಯೋಜನೆಗಾಗಿ ಸಲ್ಲಿಸಿದ ಅರ್ಜಿಯನ್ನು ಟ್ರ್ಯಾಕ್ ಮಾಡಲು ಅರ್ಜಿ ಸಂಖ್ಯೆ ಪಡೆಯಿರಿ.
▪️ನಿಮ್ಮ ಅರ್ಜಿ ಮಾನ್ಯವಾದರೆ ಸಬ್ಸಿಡಿ ಮೊತ್ತ ನಿಮ್ಮ ಗೃಹ ಸಾಲದ ಖಾತೆಗೆ ಸಂದಾಯವಾಗುತ್ತದೆ.