Thursday, November 6, 2025

School Admission 2026-27 ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ

  ISARESOURCEINFO       Thursday, November 6, 2025
School Admission 2026-27 ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ ನಡೆಸುವ ಹಾಗೂ ಸರ್ಕಾರಿ ಶಾಲೆಗಳು/ಪದವಿ ಪೂರ್ವ ಕಾಲೇಜುಗಳಲ್ಲಿ ಅರ್ಹ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅಗತ್ಯ ಪೂರ್ವ ಸಿದ್ಧತೆ ಮಾಡುವ ಕುರಿತು ನಡೆಸುವ ಹಾಗೂ ಸರ್ಕಾರಿ ಶಾಲೆಗಳು/ಪದವಿ ಪೂರ್ವ ಕಾಲೇಜುಗಳಲ್ಲಿ ಅರ್ಹ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅಗತ್ಯ ಪೂರ್ವ ಸಿದ್ಧತೆ ಮಾಡುವ ಕುರಿತು.




ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಹಾಗೂ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012 ರ ರನ್ವಯ 6 ರಿಂದ 14ರ ವಯೋಮಾನದ ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣವನ್ನು ಒದಗಿಸುವುದು ಸರ್ಕಾರದ, ಸಹಸಂಬಂಧಿ ಇಲಾಖೆಗಳ, ಪೋಷಕರ ಮತ್ತು ಸಾರ್ವಜನಿಕರ ಕರ್ತವ್ಯವಾಗಿರುತ್ತದೆ. ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು, ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವುದು ಹಾಗೂ ದಾಖಲಾದ ಎಲ್ಲಾ ಮಕ್ಕಳು ಶಾಲೆಯಲ್ಲಿ ಉಳಿದು ಗುಣಮಟ್ಟದ ಶಿಕ್ಷಣ ನೀಡುವುದು ಈ ಕಾಯ್ದೆ ಮತ್ತು ನಿಯಮ ಉದ್ದೇಶವಾಗಿರುತ್ತದೆ. ರಾಷ್ಟ್ರ ನಿರ್ಮಾಣ ಮತ್ತು ಚೈತನ್ಯಶೀಲ ಸಮಾಜ ನಿರ್ಮಾಣದ ಸಾಕಾರಕ್ಕಾಗಿ ಅರ್ಹ ವಯೋಮಾನದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿರಂತರ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯವಾಗಿರುತ್ತದೆ.

ಮುಂದುವರೆದು, ಅರ್ಹ 6 ರಿಂದ 18ರ ವಯೋಮಾನದ ಎಲ್ಲಾ ಮಕ್ಕಳನ್ನು ಗುರುತಿಸಿಶಾಲೆ/ಕಾಲೇಜಿಗೆ ದಾಖಲಿಸುವುದು, ಶಾಲೆ/ಕಾಲೇಜಿಗೆ ದಾಖಲಾಗಿರುವ ಎಲ್ಲಾ ಮಕ್ಕಳನ್ನು ನಿರಂತರವಾಗಿ ಹಾಜರಾಗುವಂತೆ ಕ್ರಮವಹಿಸುವುದು ಹಾಗೂ ಮಕ್ಕಳನ್ನು ಶಾಲೆ/ಕಾಲೇಜಿಗೆ ನಿರಂತರವಾಗಿ ಕಳುಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಪ್ರೋತ್ಸಾಹಿಸುವಂತೆ ಪೋಷಕರಲ್ಲಿ ಅರಿವು ಮೂಡಿಸುವುದು ಮತ್ತು ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಸಹಸಂಬಂಧಿ ಇಲಾಖೆಗಳು, ಸಾರ್ವಜನಿಕರು, ದಾನಿಗಳು, ಸಂಘಸಂಸ್ಥೆಗಳ ಸಹಕಾರದೊಂದಿಗೆ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಇಂದಿನ ಅನಿವಾರ್ಯತೆ ಮತ್ತು ಅಗತ್ಯವಾಗಿದೆ.

ಪ್ರಸ್ತುತ ದಾಖಲಾದ ಕೆಲವು ಮಕ್ಕಳು ವಿವಿಧ ಕಾರಣಗಳಿಂದ ಶಾಲೆ/ಪದವಿಪೂರ್ವ ಕಾಲೇಜನ್ನು ಮಧ್ಯದಲ್ಲೇ ಬಿಡುವುದು, ಪದೇ ಪದೇ ಗೈರು ಹಾಜರಾಗುವುದು, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅನೇಕ ಮಕ್ಕಳು ಬೇರೆ ಜಿಲ್ಲೆಗಳಿಂದ, ಬೇರೆ ರಾಜ್ಯಗಳಿಂದ ವಲಸೆ ಬರುವುದು ಮತ್ತು ಬೇರೆ ಕಡೆಗೆ ವಲಸೆ ಹೋಗುವುದು ಕಂಡುಬರುತ್ತಿದೆ. ಮಕ್ಕಳು ಶಾಲೆ/ಕಾಲೇಜಿನಿಂದ ಹೊರಗುಳಿಯುವ ಪ್ರವೃತ್ತಿಯನ್ನು ತಪ್ಪಿಸಲು ಮತ್ತು ವಲಸೆ ಮಕ್ಕಳನ್ನು ಪೂರ್ವ ಯೋಜನೆಯೊಂದಿಗೆ ಮುಖ್ಯವಾಹಿನಿಗೆ ದಾಖಲಿಸಿಕೊಳ್ಳಲು ಅಗತ್ಯ ಕ್ರಮವಹಿಸುವುದು ಎಲ್ಲಾ ಭಾಗೀದಾರರ ಜವಾಬ್ದಾರಿಯಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ನವೆಂಬರ್-2025 ರಿಂದ ವಿವಿಧ ಕಾರಣಗಳಿಂದ ಶಾಲೆ/ಕಾಲೇಜು ಬಿಟ್ಟ 6 ರಿಂದ 18ತ ವಯೋಮಾನದ ಮಕ್ಕಳನ್ನು ಪುನಃ ಶಾಲೆ/ಕಾಲೇಜಿಗೆ ಕರೆ ತರಲು ಹಾಗೂ 2026-27ನೇ ಸಾಲಿನ ದಾಖಲಾತಿಗೆ ಸಂಬಂಧಿಸಿದಂತೆ ಜನವಸತಿ ಪ್ರದೇಶದ ಅರ್ಹ ವಯೋಮಾನದ ಮಕ್ಕಳನ್ನು ಗುರುತಿಸಿ ದಾಖಲಿಸಲು "ದಾಖಲಾತಿ ಜಾಗೃತಿ ಅಭಿಯಾನ" ಕಾರ್ಯಕ್ರಮವನ್ನು ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಅಭಿಯಾನವು ನವೆಂಬರ್ 2025 ರಿಂದ ಜೂನ್ 2026ರವರೆಗೂ ನಿರಂತರವಾಗಿ ಜಾರಿಯಲ್ಲಿರುತ್ತದೆ.

ದಾಖಲಾತಿ ಜಾಗೃತಿ ಅಭಿಯಾನದ ಅಂಗವಾಗಿ ನವೆಂಬರ್ 20250 ರಾಜ್ಯಾದ್ಯಂತ 6-18ರ ವಯೋಮಾನದ ಮಕ್ಕಳನ್ನು ಎಲ್ಲಾ ಶಾಲೆ/ಕಾಲೇಜುಗಳಲ್ಲಿ ದಾಖಲಿಸಲು ಹಾಗೂ ವಿವಿಧ ಕಾರಣಗಳಿಂದ ಶಾಲೆ/ಕಾಲೇಜು ಬಿಟ್ಟ ಮಕ್ಕಳನ್ನು ಪುನಃ ಶಾಲೆ/ಕಾಲೇಜಿಗೆ ಕರೆ ತರಲು ರಾಜ್ಯಮಟ್ಟದಲ್ಲಿ ದಾಖಲಾತಿ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿನಾಂಕ:06.11.2025 ರಿಂದ 30.06.2026 ರವರೆಗೆ ನಿರಂತರವಾಗಿ 6-18ರ ವಯೋಮಾನದ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳು:

1. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬರುವ ಎಲ್ಲಾ ಜನವಸತಿ/ಶಾಲೆ/ಗ್ರಾಮಪಂಚಾಯತ್/ಕ್ಲಸ್ಟರ್/ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ದಾಖಲಾತಿ ಜಾಗೃತಿ ಅಭಿಯಾನ ಕೈಗೊಳ್ಳುವುದು.

2.ದಿನಾಂಕ:06.11.2025 ರಿಂದ ದಿನಾಂಕ:11.11.2025 ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ,ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ SDMC/CDC ಸಭೆಯನ್ನು ಆಯೋಜಿಸಿ ಶಿಕ್ಷಣದ ಪ್ರಾಮುಖ್ಯತೆ, ದಾಖಲಾತಿ ಜಾಗೃತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಬಗ್ಗೆ, ಅಭಿಯಾನದ ರೂಪುರೇಷೆಗಳ ಬಗ್ಗೆ, ಪೋಷಕ-ಶಿಕ್ಷಕರ ಮಹಾಸಭೆಯನ್ನು ಹಮ್ಮಿಕೊಳ್ಳುವ ಬಗ್ಗೆ ಮತ್ತು ಸಮುದಾಯದ ಸಹಕಾರ ಪಡೆಯುವ ಬಗ್ಗೆ ಚರ್ಚಿಸುವುದು.

3. ದಿ:11.11.2025 ರಂದು ರಾಷ್ಟ್ರೀಯ ಶಿಕ್ಷಣ ದಿನದ ಅಂಗವಾಗಿ ಶಿಕ್ಷಣದ ಮಹತ್ವ, ಸರ್ವರಿಗೂ ಶಿಕ್ಷಣ ಒದಗಿಸಲು ಸರ್ಕಾರದ ಯೋಜನೆಗಳ ಕುರಿತು ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಜಾಥಾ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.

4. ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳುವುದು. ಈ ಸಭೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸರ್ಕಾರದಿಂದ ಅನುಷ್ಠಾನಿಸಲಾಗಿರುವ ಉಪಕ್ರಮಗಳು, ಗುಣಮಟ್ಟದ ಶಿಕ್ಷಣದ ಬಗ್ಗೆ, ಮಕ್ಕಳ ಕಲಿಕಾ ಪ್ರಗತಿ, ಪೋಷಕರ ಸಹಕಾರದ ಬಗ್ಗೆಚರ್ಚಿಸುವುದು ಹಾಗೂ ಮಕ್ಕಳಿಂದ ಕಲಿಕಾ ಚಟುವಟಿಕೆಗಳ ಪ್ರದರ್ಶನವನ್ನು ಆಯೋಜಿಸುವುದು.

5. ದಿ:26.11.2025 ರಂದು ಸಂವಿಧಾನ ದಿನಾಚರಣೆ ಅಂಗವಾಗಿ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣ ಹಕ್ಕು, ಮಕ್ಕಳ ರಕ್ಷಣೆಯ ಹಕ್ಕುಗಳ ಕುರಿತು ಬೀದಿ ನಾಟಕ/ಜಾಥಾ ಮೂಲಕ ಜಾಗೃತಿ ಮೂಡಿಸುವುದು.

6. ಡಿಸೆಂಬರ್ ಮಾಹೆಯಲ್ಲಿ ದಿ:03.12.2025 ರಂದು ವಿಶ್ವ ವಿಕಲ ಚೇತನರ ದಿನಾಚರಣೆಯ ಅಂಗವಾಗಿ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳು ಕುರಿತು ಬೀದಿ ನಾಟಕ/ಜಾಥಾ ಮೂಲಕ ಜಾಗೃತಿ ಮೂಡಿಸುವುದು.

7. ದಿನಾಂಕ:10.12.2025 ರಿಂದ ದಿನಾಂಕ:17.12.2025 ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ -ಗುಣಾತ್ಮಕ ಶಿಕ್ಷಣದ ಉಪಕ್ರಮಗಳಿಂದ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಪ್ರಗತಿಯನ್ನು ಪೋಷಕರು ಹಾಗೂ ಸಮುದಾಯಕ್ಕೆ ಪ್ರದರ್ಶಿಸಲು ಮಕ್ಕಳ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳು ಉತ್ಕೃಷ್ಟತಾ ಕೇಂದ್ರಗಳಾಗಿರುವುದನ್ನು (Centres of Excellence) ಖಾತ್ರಿಪಡಿಸುವುದು.

8. ದಿ:26.12.2025 ರಂದು ಅಣಕು ಸಂಸತ್ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿ, ಸರ್ವರಿಗೂ ಶಿಕ್ಷಣ ನೀಡುವಲ್ಲಿ ಜನಪತಿನಿಧಿಗಳ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವುದು.

9. ಜನವರಿ-2026ರ ಮಾಹೆಯಲ್ಲಿ ಸರ್ಕಾರದ ಗುಣಾತ್ಮಕತೆ ಉತ್ತೇಜಕ ಉಪಕ್ರಮಗಳಿಂದ ಶಾಲೆ/ಕಾಲೇಜುಗಳಲ್ಲಿ ಉಂಟಾಗಿರುವ ಕಲಿಕಾ ಪೂರಕ ವಾತಾವರಣದ ಬಗ್ಗೆ, ಶಿಕ್ಷಣದ ಮಹತ್ವ ಮತ್ತು ಸರ್ಕಾರಿ ಶಾಲೆ/ಕಾಲೇಜುಗಳು ಉತ್ಕೃಷ್ಟತಾ ಕೇಂದ್ರಗಳಾಗಿರುವ (Centres of excellence) ಬಗ್ಗೆ ಶಿಕ್ಷಕರು, SDMC ಹಾಗೂ ಎಲ್ಲಾ ಸಹಸಂಬಂಧಿ ಇಲಾಖೆಯವರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.

▪️ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳುವುದು.

▪️ಜಿಲ್ಲೆ, ತಾಲ್ಲೂಕು ಮತ್ತು ಶಾಲಾ/ಕಾಲೇಜು ಮಟ್ಟದಲ್ಲಿ ಶಾಲಾ ಶಿಕ್ಷಣದ ಮಹತ್ವ ಸಾರುವ ಸಾಕ್ಷ್ಯ ಚಿತ್ರಗಳು, ಧ್ವನಿ ಮುದ್ರಿಕೆಗಳು, ಪೋಸ್ಟರ್ಸ್, ಚಾರ್ಟ್ಸ್, ಮಾಡೆಲ್ ಗಳು ಇತ್ಯಾದಿಗಳನ್ನು ಬಳಸಿ ಜಾಗೃತಿ ಮೂಡಿಸುವುದು.

▪️ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣದ ರಾಯಭಾರಿಗಳನ್ನು ಆಯ್ಕೆ ಮಾಡಿ ಅವರ ಸಹಕಾರ ಪಡೆಯುವುದು.

▪️ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಂದ ಶಿಕ್ಷಣದ ಮಹತ್ವ ಸಾರುವ ಕಥೆಗಳು, ಹಾಡುಗಳು, ಏಕ ಪಾತ್ರ ಅಭಿನಯ, ಕಿರು ನಾಟಕಗಳು, ವೇಷ-ಭೂಷಣ, ಬೀದಿ ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

▪️ರೇಡಿಯೋ, ದೂರದರ್ಶನ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಚಾರ

▪️ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಕ್ಷಗಾನ, ಹರಿಕಥೆ, ಜಾನಪದ ಗೀತೆ, ಸಾಕ್ಷ್ಯ ಚಿತ್ರಗಳ (Documentaries) ಪ್ರದರ್ಶನ,ಬೀದಿ ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜಾಗೃತಿ ಮೂಡಿಸುವುದು

10. ಫೆಬ್ರವರಿ ಮತ್ತು ಮಾರ್ಚ್-2026 ಮಾಹೆಗಳಲ್ಲಿ ಶಾಲಾ/ಕಾಲೇಜು ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾಗುವ ಅರ್ಹ ವಯಸ್ಸಿನ ಮಕ್ಕಳ ಸಮೀಕ್ಷೆ ಮತ್ತು ಶಾಲೆ/ಕಾಲೇಜುಗಳಿಂದ ಹೊರಗುಳಿದ/ನಿರಂತರವಾಗಿ ಗೈರುಹಾಜರಾಗುವ ಮಕ್ಕಳ ಸಮೀಕ್ಷೆ.

▪️ ಸಹಸಂಬಂಧಿ ಇಲಾಖೆಗಳ ಸಹಕಾರದೊಂದಿಗೆ ಶಾಲೆ/ಕಾಲೇಜು ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾಗುವ ಅರ್ಹ ವಯಸ್ಸಿನ ಮಕ್ಕಳ ಸಮೀಕ್ಷೆ ಮತ್ತು ಶಾಲೆ/ಕಾಲೇಜುಗಳಿಂದ ಹೊರಗುಳಿದ/ನಿರಂತರವಾಗಿ ಗೈರುಹಾಜರಾಗುವ ಮಕ್ಕಳ ಸಮೀಕ್ಷೆ ನಡೆಸುವುದು.

▪️ ಗ್ರಾಮೀಣ ಪ್ರದೇಶ: 

ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ದಿನಗೂಲಿ ಕಾರ್ಯನಿರ್ವಹಿಸುತ್ತಿರುವ ಪೋಷಕರು ಹಾಗೂ ಇವರ ಮಕ್ಕಳ ಪಟ್ಟಿಯನ್ನು ಸಮೀಕ್ಷೆ ಸಂದರ್ಭದಲ್ಲಿ ತಯಾರಿಸಿ ಶಾಲೆ/ಕಾಲೇಜುಗಳಲ್ಲಿ ನಿರ್ವಹಿಸುವುದು. ಈ ಪಟ್ಟಿ ಆಧರಿಸಿ ಹೊಲ ಗದ್ದೆಗಳು, ಅಂಗಡಿಗಳು, ಹೋಟೆಲ್‌ಗಳು, ಇಟ್ಟಿಗೆ ತಯಾರಿಕೆ ಸ್ಥಳ, ಸುಣ್ಣದ ಭಟ್ಟಿ, ಕಟ್ಟಡ ಕಾಮಗಾರಿ ನಡೆಯುವ ಸ್ಥಳ ಇತ್ಯಾದಿ ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪೋಷಕರನ್ನು ಮತ್ತು ಸಂಬಂಧಿತ ಮಾಲೀಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ, ದಿನಗೂಲಿ ಮಾಡುತ್ತಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಕಾಲೇಜಿಗೆ ಕಳುಹಿಸುವಂತೆ ಮನವೊಲಿಸಿ ಶಾಲೆ/ಕಾಲೇಜಿಗೆ ಕರೆತರುವುದು.

▪️ ನಗರ ಪ್ರದೇಶ: ಸಮೀಕ್ಷೆಯಲ್ಲಿ ಗುರುತಿಸಲಾದ ಬೀದಿ ಮಕ್ಕಳು, ನಗರ ವಂಚಿತ, ಚಿಂದಿ ಆಯುವವರು, ಬಾಲ ಕಾರ್ಮಿಕರು, ಅನಾರೋಗ್ಯ ಪೀಡಿತ ಮಕ್ಕಳು, ವಿಶೇಷ ಅಗತ್ಯವಿರುವ ಮಕ್ಕಳು, ಅನಾಥರು, ಇತರ ರಾಜ್ಯಗಳು ಅಥವಾ ಜಿಲ್ಲೆಗಳಿಂದ ವಲಸೆ ಬಂದ ಮಕ್ಕಳಿಗೆ ಅಗತ್ಯ ತರಬೇತಿ ನೀಡಿ ಕಲಿಕೆಯ ಮಟ್ಟವನ್ನು ಆಧರಿಸಿ, ನೇತಾಜಿ ಅವಾಸೀಯ ವಿದ್ಯಾಲಯ, ಚಿಣ್ಣರ ತಂಗುಧಾಮ (Transit Homes) ಹಾಗೂ ಕೆಜಿಬಿವಿ ಶಾಲೆಗಳು ಕೆಕೆಜಿಬಿವಿ (Hostels) ವಸತಿ ಶಾಲೆಗಳಲ್ಲಿ ದಾಖಲಿಸಲಾಗುವುದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಬಾಲಕ ಹಾಗೂ ಬಾಲಕಿಯರ ಬಾಲಮಂದಿರಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ಬಾಲ ಕಾರ್ಮಿಕ ಮಕ್ಕಳಿಗಾಗಿ ಕಾರ್ಮಿಕ ಇಲಾಖೆ ನಡೆಸುತ್ತಿರುವ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ (ಎನ್.ಸಿ.ಎಲ್.ಪಿ) ಯಡಿ ಶಾಲೆಗಳಿಗೆ ದಾಖಲಿಸುವುದು. ನಗರ ಪ್ರದೇಶಗಳಲ್ಲಿ ಹಾಜರಾತಿ ಪ್ರಾಧಿಕಾರಿಗಳು UDD/GBA ವಾರ್ಡ್ ನೋಡಲ್‌ ಅಧಿಕಾರಿಗಳ ಸಹಕಾರದೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಮೇಲೆ ತಿಳಿಸಿದಂತೆ ಕ್ರಮವಹಿಸುವುದು.

▪️ ಶಾಲಾ/ಕಾಲೇಜಿನ SDMC/CDC, PDO ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ/ಕಾಲೇಜು ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾಗುವ ಅರ್ಹ ವಯಸ್ಸಿನ ಮಕ್ಕಳ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳುವುದು.

▪️ ಶಾಲೆ/ಕಾಲೇಜು ಬಿಡಲು ಸ್ಥಳೀಯ ಕಾರಣಗಳನ್ನು ಗುರುತಿಸಿ ಅದಕ್ಕನುಗುಣವಾಗಿ ಮಕ್ಕಳನ್ನು ಶಾಲೆ/ಕಾಲೇಜಿಗೆ ಕರೆತರಲು ವಿವಿಧ ಕಾರ್ಯ ತಂತ್ರಗಳನ್ನು ಸ್ಥಳೀಯರೊಂದಿಗೆ ಚರ್ಚಿಸಿ, ರೂಪಿಸಿ,ಅನುಷ್ಠಾನಗೊಳಿಸುವುದು. ಮುಖ್ಯವಾಗಿ ಬಾಲ ಕಾರ್ಮಿಕರು ಬಾಲ್ಯವಿವಾಹಕ್ಕೊಳಗಾದವರು, ಚಿಂದಿ ಆಯುವ ಮಕ್ಕಳು, ಬೀದಿಯಲ್ಲಿ ವ್ಯಾಪಾರ ಮಾಡುವ ಮಕ್ಕಳು, ಅನಾಥ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ಇತ್ಯಾದಿ ಗುರುತಿಸಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಆರಕ್ಷಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮುಖ್ಯವಾಹಿನಿಗೆ ತರುವುದು.

▪️ ಈ ರೀತಿ ಗುರುತಿಸಿಕೊಳ್ಳಲಾದ ಅರ್ಹ ವಯೋಮಾನದ ಎಲ್ಲಾ ಮಕ್ಕಳನ್ನು ನೆರೆಹೊರೆ ಶಾಲೆ/ಕಾಲೇಜುಗಳಿಗೆ ಆಯಾ ವ್ಯಾಪ್ತಿಯ ಶಾಲಾ/ಕಾಲೇಜುಗಳ ಮುಖ್ಯಸ್ಥರು, ಸಿ.ಆ‌ರ್.ಪಿ ಮತ್ತು ಹಾಜರಾತಿ ಅಧಿಕಾರಿಗಳಾದ ಇಸಿಓ ರವರು ಮ್ಯಾಪಿಂಗ್ ಮಾಡಿಕೊಳ್ಳುವುದು. ಗ್ರಾಮ ಶಿಕ್ಷಣ ಸಮಿತಿ ಸಭೆಯಲ್ಲಿ ಸಮೀಕ್ಷೆಯಲ್ಲಿ ಗುರುತಿಸಿದ ಅರ್ಹ ವಯೋಮಾನದ ಮಕ್ಕಳನ್ನು ದಾಖಲಿಸುವುದರ ಬಗ್ಗೆ ಚರ್ಚಿಸಿ ನಡವಳಿಯನ್ನು ದಾಖಲಿಸುವುದು. ಪ್ರತಿಯನ್ನು ಆಯಾ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಅನುಪಾಲನಾ ಕ್ರಮಕ್ಕೆ ಸಲ್ಲಿಸುವುದು.

▪️ಸರ್ಕಾರಿ ಹಿರಿಯ ಪ್ರಾಥಮಿಕ. ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಮುಖ್ಯಸ್ಥರು/ ಹಾಗೂ ಶಿಕ್ಷಕರು/ಉಪನ್ಯಾಸಕರು ತಮ್ಮ ಶಾಲಾ/ಕಾಲೇಜು ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ/ಪ್ರೌಢಶಾಲೆಗಳ ಶಿಕ್ಷಕರು/ಪೋಷಕರನ್ನು ಸಂಪರ್ಕಿಸಿ ಸದರಿ ವಿದ್ಯಾರ್ಥಿಗಳು 6ನೇ/8ನೇ/9ನೇ ತರಗತಿಗೆ ವಿದ್ಯಾಭ್ಯಾಸ ಮುಂದುವರೆಸಲು ತಮ್ಮ ಶಾಲೆಯಲ್ಲಿ ಲಭ್ಯವಿರುವ ಉತ್ತಮ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳು ಮುಂದಿನ ತರಗತಿಗೆ ದಾಖಲಾಗುವುದನ್ನು ಖಾತ್ರಿಪಡಿಸಿಕೊಳ್ಳುವುದು.

11. ಏಪ್ರಿಲ್-2026 ರಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಂದು ದಾಖಲಾತಿ ಜಾಗೃತಿ ಜಾಥಾ ನಡೆಸುವುದು. ಜಾಥಾ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪೋಷಕರಲ್ಲಿ ಅರಿವು ಮೂಡಿಸಲು ಶಿಕ್ಷಣದ ಮಹತ್ವ ಹಾಗೂ ಶಾಲೆ/ಕಾಲೇಜುಗಳಲ್ಲಿ ದೊರೆಯುವ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣದ ಕುರಿತು ಪ್ರಚಾರ ಮಾಡುವುದು- ಕರಪತ್ರ ಹಂಚುವುದು.

ಕರಪತ್ರದಲ್ಲಿ ಸರ್ಕಾರವು ದಾಖಲಾತಿ ಪ್ರಮಾಣ ಹೆಚ್ಚಿಸಲು ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಒದಗಿಸುತ್ತಿರುವ ಪ್ರೋತ್ಸಾಹದಾಯಕ ಸೌಲಭ್ಯಗಳಾದ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರ ಭಾಗ್ಯ. ಪೂರಕ ಪೌಷ್ಠಿಕಾಂಶ ಯೋಜನೆ, ಶೂ-ಸಾಕ್ಸ್ ವಿತರಣೆ, ವಿದ್ಯಾರ್ಥಿ ವೇತನ, ಸಾರಿಗೆ ಮತ್ತು ಬೆಂಗಾವಲು ಭತ್ಯೆ, ವಿಶೇಷ ಚೇತನ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ, ಅಗತ್ಯವಿರುವ ಸಾಧನ-ಸಲಕರಣೆಗಳು, ಫಿಸಿಯೋಥೆರಪಿ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿರುವ ಕುರಿತು ಮಾಹಿತಿಯನ್ನು ಒದಗಿಸುವುದು.

▪️ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಲಭ್ಯವಿರುವ ಉತ್ತಮ ಮೂಲಭೂತ ಸೌಲಭ್ಯಗಳು, ಪೂರ್ವ ಪ್ರಾಥಮಿಕ ಶಿಕ್ಷಣ, ದ್ವಿಭಾಷಾ ಮಾಧ್ಯಮ ವಿಭಾಗಗಳು, ಪದವಿಪೂರ್ವ ಕಾಲೇಜುಗಳಲ್ಲಿರುವ ಸಂಯೋಜನೆಗಳು, ಪ್ರತಿಭಾನ್ವಿತ ಶಿಕ್ಷಕರು/ಉಪನ್ಯಾಸಕರು, డిజిటిలో ಶಿಕ್ಷಣ, ಪ್ರಯೋಗಾಲಯ, ಗ್ರಂಥಾಲಯಗಳ ಲಭ್ಯತೆ, ವೃತ್ತಿ ಶಿಕ್ಷಣ, ಮೌಲ್ಯ ಶಿಕ್ಷಣ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿ-ಸಾಧನೆಗಳ ಕುರಿತು ಆಕರ್ಷಕ ಚಿತ್ರ ಸಹಿತ ಮಾಹಿತಿ ನಮೂದಿಸುವುದು.

▪️ತಾಲ್ಲೂಕು/ಜಿಲ್ಲೆಯಲ್ಲಿ ಲಭ್ಯವಿರುವ ವಿಶೇಷ ಸಾಧನೆ ತೋರಿರುವ ಸರ್ಕಾರಿ ಶಾಲೆ/ಕಾಲೇಜುಗಳು, ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿ.ಎಂ.ಶ್ರೀ ಶಾಲೆಗಳು, ಕೆಜಿಬಿವಿ, ಕೆಕೆಜಿಬಿವಿ, ನೇತಾಜಿ ಸುಭಾಷ್‌ಚಂದ್ರ ಬೋಸ್‌ಆವಾಸೀಯ ವಿದ್ಯಾಲಯ ಉಚಿತ ವಸತಿ ಶಾಲೆ/ ನಿಲಯಗಳ ವ್ಯವಸ್ಥೆ ಹಾಗೂ ದ್ವಿಭಾಷಾ ಮಾಧ್ಯಮ ವಿಭಾಗಗಳು, ಡಿಜಿಟಲ್ ಶಿಕ್ಷಣ, ಪ್ರಯೋಗಾಲಯ, ಗ್ರಂಥಾಲಯಗಳ ಲಭ್ಯತೆ ಇತ್ಯಾದಿ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕು/ಜಿಲ್ಲಾ ಹಂತದ ಅಧಿಕಾರಿಗಳು ಸಾರ್ವಜನಿಕರಿಗೆ ಪ್ರದರ್ಶನ ಫಲಕಗಳ ಮೂಲಕ ಅರಿವು ಮೂಡಿಸುವುದು.

▪️ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರ ಮನೆ-ಮನೆಗೆ ಭೇಟಿ ನೀಡಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ ಗುರುತಿಸಲಾದ ಅರ್ಹ ವಯೋಮಾನದ ಮಕ್ಕಳನ್ನು ಸರ್ಕಾರಿ ಶಾಲೆ/ಕಾಲೇಜುಗಳಿಗೆ ಏಪ್ರಿಲ್ 10ರೊಳಗಾಗಿ ದಾಖಲಿಸಿಕೊಳ್ಳುವುದು.

12. ಮೇ – 2026ರ ಮಾಹೆಯಲ್ಲಿ ಗುರುತಿಸಲಾದ ಅರ್ಹ ವಯೋಮಾನದ ಮಕ್ಕಳು ಮತ್ತು ಶಾಲೆ/ಕಾಲೇಜು ಬಿಟ್ಟ ಮಕ್ಕಳನ್ನು ಶಾಲೆಗೆ ಸೆಳೆಯಲು, ದಾಖಲಾದ ಮಕ್ಕಳನ್ನು ಶಾಲಾ ವಾತಾರಣಕ್ಕೆ ಸಜ್ಜುಗೊಳಿಸಲು ಸಮುದಾಯ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳುವುದು.

▪️2026-27 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಾದ ಶಾಲಾಭಿವೃದ್ಧಿ ಯೋಜನೆ (SDP), ವಾರ್ಷಿಕ ಕಾರ್ಯಹಂಚಿಕೆ ಶಾಲಾ/ಕಾಲೇಜು ಪಂಚಾಂಗ, ಶಾಲಾ/ಕಾಲೇಜು ಮತ್ತು ಶಿಕ್ಷಕರ ವಾರ್ಷಿಕ ವೇಳಾಪಟ್ಟಿಯನ್ನು ಒಳಗೊಂಡಂತೆ ಶೈಕ್ಷಣಿಕ ಕ್ರಿಯಾಯೋಜನೆಯನ್ನು ಶಾಲಾ/ಕಾಲೇಜು ಹಂತದಲ್ಲಿ ಸಿದ್ಧಪಡಿಸಿಕೊಳ್ಳುವುದು.

▪️2026-27 ನೇ ಸಾಲಿನ ಶಾಲಾ/ಕಾಲೇಜುಗಳ ದಾಖಲಾತಿ, ಗುಣಮಟ್ಟದ ಕಲಿಕೆಯ ಆಯಾಮಗಳಾದ FLN, ತರಗತಿ ನಿರ್ದಿಷ್ಟ ಕಲಿಕಾಫಲಗಳು, ವಿವಿಧ ಸಮೀಕ್ಷೆಗಳಾದ PARAKH, KSAS ನಲ್ಲಿ ಗುರುತಿಸಲ್ಪಟ್ಟ ಕಲಿಕಾಫಲಗಳನ್ನು ಸಾಧಿಸಲು ಪೂರಕವಾದ ಶೈಕ್ಷಣಿಕ ಕ್ರಿಯಾ ಯೋಜನೆಯನ್ನು ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಆಯಾ ಉಸ್ತುವಾರಿ ಅಧಿಕಾರಿಗಳು ರೂಪಿಸಿಕೊಳ್ಳುವುದು.

▪️ ಗುಣಮಟ್ಟದ ಶಿಕ್ಷಣ ನೀಡಲು ಪ್ರತಿಸರ್ಕಾರಿ ಶಾಲೆ/ಕಾಲೇಜುಗಳಲ್ಲಿಯೂ SDMC/CDC ಸಹಕಾರದೊಂದಿಗೆ ಅಗತ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕ್ರಿಯಾ ಯೋಜನೆ ತಯಾರಿಸುವುದು. ಇದೇ ರೀತಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಕ್ರೋಢೀಕೃತ ಕ್ರಿಯಾ ಯೋಜನೆ ತಯಾರಿಸುವುದು. ಸರ್ಕಾರಿ ಶಾಲೆ/ಕಾಲೇಜುಗಳ ಅಭಿವೃದ್ಧಿಯಲ್ಲಿ ಪೋಷಕರು, SDMC/CDC, ಸಾರ್ವಜನಿಕರು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತಗಳ ಪಾತ್ರದ ಬಗ್ಗೆ ಅರಿವು ಮೂಡಿಸುವ ಮೂಲಕ ಸಹಕಾರ ಪಡೆಯುವುದು.

▪️ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿನ ಅಂತಿಮ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಲ್ಲಿ ದಾಖಲಿಸುವ ಕುರಿತು: ಸರ್ಕಾರಿ ಶಾಲೆ/ಕಾಲೇಜುಗಳಲ್ಲಿನ ಅಂತಿಮ ತರಗತಿಯಾದ 5ನೇ/6ನೇ/7ನೇ/8ನೇ/10ನೇ/12ನೇ ತರಗತಿಗಳಲ್ಲಿ 2025-26 ನೇ ಸಾಲಿಗೆ ವ್ಯಾಸಂಗ ಮಾಡುತ್ತಿದ್ದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹತ್ತಿರದ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ದಾಖಲಾಗಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಒಂದು ವೇಳೆ ಯಾವುದೇ ವಿದ್ಯಾರ್ಥಿಯು ಮುಂದಿನ ತರಗತಿಗೆ ದಾಖಲಾಗದೇ ಇದ್ದಲ್ಲಿ ಆ ವಿದ್ಯಾರ್ಥಿಯು ಓದುತ್ತಿದ್ದ ಶಾಲೆ/ಕಾಲೇಜಿನ ಮುಖ್ಯಸ್ಥರು/ಶಿಕ್ಷಕರು ಸದರಿ ವಿದ್ಯಾರ್ಥಿಯನ್ನು ಹತ್ತಿರದ ಸರ್ಕಾರಿ ಶಾಲೆ/ಕಾಲೇಜಿಗೆ ದಾಖಲಿಸಲು ಅಗತ್ಯ ಕ್ರಮವಹಿಸುವುದು. (ಜೂನ್ 2026 ತಿಂಗಳ ಮೊದಲನೇ ಮತ್ತು ಎರಡನೇ ವಾರಗಳಲ್ಲಿ).

13. ಜೂನ್-2026ರ ಮಾಹೆಯಲ್ಲಿ ದಾಖಲಾತಿ ಅಭಿಯಾನದ ನಂತರವೂ ವಿವಿಧ ಕಾರಣಗಳಿಂದಾಗಿ ಶಾಲೆ/ಕಾಲೇಜು ಬಿಟ್ಟ ಹಾಗೂ ಶಾಲೆ/ಕಾಲೇಜಿಗೆ ಸೇರದ ಮಕ್ಕಳನ್ನು ಶಾಲಾ/ಕಾಲೇಜು ಮುಖ್ಯವಾಹಿನಿಗೆ ತರುವುದು.

14.2025-2026ನೇ ಮತ್ತು 2026-2027ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ, ದಾಖಲಾದ ಮಕ್ಕಳ ಹಾಜರಾತಿಯನ್ನು ಖಾತ್ರಿ ಪಡಿಸಿಕೊಳ್ಳಲು ಹಾಗೂ ನಿರಂತರ ಹಾಜರಾತಿಯನ್ನು ಕಾಯ್ದುಕೊಳ್ಳಲು ಹಮ್ಮಿಕೊಂಡ ಚಟುವಟಿಕೆಗಳನ್ನು ಎಲ್ಲ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಸಾಮಾಜಿಕ ಜಾಲ ತಾಣ (X, Facebook ಮುಂತಾದ ಜಾಲ ತಾಣಗಳಲ್ಲಿ) ದಲ್ಲಿ ಶಾಲಾ ಖಾತೆಯನ್ನು ತೆರೆದು ದಾಖಲಾತಿ, ಜಾಗೃತಿ ಅಭಿಯಾನದ ಸಚಿತ್ರ ವರದಿಯನ್ನು ಪ್ರಚುರ ಪಡಿಸುವುದು.

15. ದಾಖಲಾತಿ ಜಾಗೃತಿ ಅಭಿಯಾನದ ಫಲಶೃತಿಗಳನ್ನು ದಾಖಲಿಸಿ ಅಂಕಿ ಅಂಶಗಳೊಂದಿಗೆ ವರದಿಯನ್ನು ಕ್ಲಸ್ಟರ್, ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಹಂತದವರೆಗೆ ಮಾಹಿತಿಯನ್ನು ಹಂಚಿಕೊಳ್ಳುವುದು.

16. ಡಯಟ್ ಮತ್ತು ಉಪನಿರ್ದೇಶಕರು(ಪದವಿ ಪೂರ್ವ) ಹಂತದಲ್ಲಿ ಜಾಗೃತಿ ಅಭಿಯಾನದ ಪ್ರಕ್ರಿಯೆ, ದತ್ತಾಂಶಗಳು ಮತ್ತು ಯಶೋಗಾಥೆಗಳ ಸಂಗ್ರಹ ಕೈಗೊಂಡು ವಿಶ್ಲೇಷಿಸಿ ವರದಿಯನ್ನು ರಾಜ್ಯ ಹಂತಕ್ಕೆ ಸಲ್ಲಿಸುವುದು ಹಾಗೂ ಇಲಾಖಾ ವೆಬ್‌ಸೈಟ್‌ಗಳಲ್ಲಿ ಇಂದೀಕರಿಸುವುದು.

17. ಜಿಲ್ಲಾ ಹಂತದಲ್ಲಿ ಜಾಗೃತಿಯ ಫಲಶೃತಿಯಿಂದ ದಾಖಲಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ದಾಖಲಾತಿಯನ್ನು ದಾಖಲಿಸಲು ಶ್ರಮಿಸಿದ ಶಾಲೆ ಮತ್ತು SDMC/CDC ಯವರನ್ನು ಗುರುತಿಸಿ ಅಭಿನಂದಿಸುವುದು.

ಮಾರ್ಗದರ್ಶನ, ಅನುಷ್ಠಾನ, ಅನುಪಾಲನೆ ಮತ್ತು ಕ್ರೋಢೀಕರಣ:

▪️ದಾಖಲಾತಿ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮೇಲೆ ತಿಳಿಸಿರುವಂತೆ ಮಾಹೆವಾರು ಚಟುವಟಿಕೆಗಳನ್ನು ಅನುಷ್ಠಾನ ಮಾಡಬೇಕಾಗಿರುವ ಅವಧಿ, ವಹಿಸಬೇಕಾದ ಕ್ರಮ, ಕಾರ್ಯತಂತ್ರಗಳು, ಸಭೆಗಳಲ್ಲಿ ಚರ್ಚಿಸಬೇಕಾಗಿರುವ ಅಂಶಗಳು ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಅಧಿಕಾರಿಗಳನ್ನು ಗುರುತಿಸಿ ಈ ಸುತ್ತೋಲೆಯೊಂದಿಗೆ ನೀಡಿರುವ ಅನುಬಂಧದಲ್ಲಿ ನೀಡಲಾಗಿದೆ. ಕಾರ್ಯಕ್ರಮ/ಸಭೆ/ಚಟುವಟಿಕೆ/ಜಾಥಾಗಳನ್ನು ಹಮ್ಮಿಕೊಳ್ಳುವಾಗ ಈ ಎಲ್ಲಾ ಅಂಶಗಳನ್ನು ಪಾಲನೆ ಮಾಡುವುದು.

▪️ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಉಪನಿರ್ದೇಶಕರು(ಆಡಳಿತ), ಉಪನಿರ್ದೇಶಕರು(ಅಭಿವೃದ್ಧಿ) ಮತ್ತು ಉಪನಿರ್ದೇಶಕರು(ಪದವಿಪೂರ್ವ) ರವರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಜಾಗೃತಿ ದಾಖಲಾತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ, ಜಿಲ್ಲೆ, ತಾಲ್ಲೂಕು ಮತ್ತು ಕ್ಲಸ್ಟರ್ ಹಂತದ ಕ್ಷೇತ್ರ ಮಟ್ಟದ ಅಧಿಕಾರಿ/ಸಿಬ್ಬಂದಿಗಳಿಗೆ ಸಭೆ ಮೂಲಕ ಸೂಕ್ತ ಮಾರ್ಗದರ್ಶನ ನೀಡುವುದು.

▪️ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ/ಕಾಲೇಜುಗಳ ಮುಖ್ಯಸ್ಥರಿಗೆ ಅಭಿಯಾನದಲ್ಲಿ ಕಾರ್ಯಕ್ರಮ/ಸಭೆ/ಚಟುವಟಿಕೆ/ಜಾಥಾಗಳನ್ನು ಹಮ್ಮಿಕೊಳ್ಳುವ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡುವುದು.

▪️ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 2025-26ನೇ ಸಾಲಿನ ದಾಖಲಾತಿಗಿಂತ 2026-27ನೇ ಸಾಲಿನ ದಾಖಲಾತಿಯಲ್ಲಿ ಕನಿಷ್ಟ ಶೇ.5 ರಷ್ಟು ದಾಖಲಾತಿ ಹೆಚ್ಚಳವಾಗುವಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು.

▪️ಕರ್ನಾಟಕ ಪಬ್ಲಿಕ್ ಶಾಲೆ, ಪಿ.ಎಂ.ಶ್ರೀ, ಆದರ್ಶ ವಿದ್ಯಾಲಯಗಳಲ್ಲಿ 2026-27ನೇ ಸಾಲಿನ ದಾಖಲಾತಿ ಪ್ರಮಾಣ ಪ್ರಸ್ತುತ ಸಾಲಿಗಿಂತ ಕನಿಷ್ಟ ಶೇ.10 ರಷ್ಟು ಹೆಚ್ಚಳವಾಗುವಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು.

▪️ಪ್ರಸ್ತುತ ಸಾಲಿನ ಉನ್ನತೀಕರಿಸಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2026-27ನೇ ಸಾಲಿಗೆ ವ್ಯಾಪಕ ಪ್ರಚಾರ ನೀಡಿ ದಾಖಲಾತಿ ಉತ್ತಮಗೊಳಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು.

▪️ಸುತ್ತೋಲೆಯಲ್ಲಿ ತಿಳಿಸಿರುವಂತೆ ಹಾಗೂ ಜಿಲ್ಲಾ ಹಂತದಲ್ಲಿ ಯೋಜಿಸಿರುವ ಕ್ರಿಯಾಯೋಜನೆಯಂತೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿರುವ ಬಗ್ಗೆ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಕ್ಷೇತ್ರ ಮಟ್ಟದ ಸಿಬ್ಬಂದಿಯೊಂದಿಗೆ ನಿರಂತರವಾಗಿ ಅನುಪಾಲನೆ ಮಾಡುವುದು.

▪️ಸಹಸಂಬಂಧಿ ಇಲಾಖೆಗಳ ಸಹಕಾರದೊಂದಿಗೆ ಯೋಜಿಸಬೇಕಾಗಿರುವ ಕಾರ್ಯಕ್ರಮಗಳು/ಚಟುವಟಿಕೆಗಳನ್ನು ಜಿಲ್ಲಾಡಳಿತದ ಮಾರ್ಗದರ್ಶನ ಮತ್ತು ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಆಯೋಜಿಸುವುದು.

▪️ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಬ್ಲಾಕ್ ಹಂತದಲ್ಲಿ ಬಿ.ಆರ್.ಸಿ ಮತ್ತು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಪದವಿಪೂರ್ವ) ಮತ್ತು DYPC, SSK ಯವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ದಾಖಲಾತಿ ಜಾಗೃತಿ ಅಭಿಯಾನದ ಅನುಪಾಲನೆಯ ದಾಖಲೀಕರಣ ಮಾಡುವುದು. ಡಯಟ್ ಹಂತದಲ್ಲಿ ಉಪಪ್ರಾಂಶುಪಾಲರು ಸದರಿ ಜಾಗೃತಿ ಅಭಿಯಾನದ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಕ್ರೋಢೀಕರಣ ಕಾರ್ಯವನ್ನು ನಿರ್ವಹಿಸುವುದು.

▪️ಜಿಲ್ಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಿ ತಾಲ್ಲೂಕು ಮತ್ತು ಕ್ಲಸ್ತರ್ ಹಂತದವರದಿಗ ಅಧಿಕಾರಿ/ಸಿಬ್ಬಂದಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ. ಅಭಿಯಾನದ ಅನುಷ್ಠಾನದ ನಿರಂತರ ಅನುಪಾಲನೆ ಮಾಡುವುದು.

▪️ಸದರಿ ಕಾರ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಜಿಲ್ಲೆಗಳ/ಬ್ಲಾಕ್‌ಗಳ ಮತ್ತು ಶಾಲೆಗಳವರಿಗೆ ಅಭಿನಂದಿಸಲಾಗುವುದು ಹಾಗೂ ಸದರಿಯವರಿಗೆ ಇತರೆ ಬ್ಲಾಕ್ /ಜಿಲ್ಲೆಗಳಲ್ಲಿ ತಮ್ಮ ಉತ್ತಮ ಆಚರಣೆಗಳನ್ನು ಹಂಚಿಕೊಳ್ಳಲು ಮತ್ತು ಇತರೆ ಬ್ಲಾಕ್/ಜಿಲ್ಲೆಗಳಲ್ಲಿರುವ ಉತ್ತಮ ಆಚರಣೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು.

▪️ಸದರಿ ಕಾರ್ಯದಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆಯನ್ನು ಮಾಡುವ ಐದು ಉಪ ನಿರ್ದೇಶಕರು (ಆಡಳಿತ), ಐದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಐದು ಪ್ರಾಥಮಿಕ ಶಾಲಾ ಮತ್ತು ಐದು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿನ ಅತ್ಯುತ್ತಮ ಆಚರಣೆಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗುವುದು.

▪️ 6-18ರ ವಯೋಮಾನದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರೀಕರನ್ನಾಗಿಸಲು ಹಾಗೂ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಿರಲು ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನವನ್ನು ನವೆಂಬರ್-2025 ರಿಂದ ಜೂನ್-2026 ರವರೆಗೆ ಹಮ್ಮಿಕೊಳ್ಳುವ ಮೂಲಕ ಎಲ್ಲಾ ಮಕ್ಕಳು ಶಾಲಾ/ಕಾಲೇಜುಗಳಲ್ಲಿ ದಾಖಲಾಗಿ ಶಿಕ್ಷಣ ಪಡೆಯುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು. 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿಯನ್ನು 2025-26ನೇ ಸಾಲಿಗಿಂತೆ ಕನಿಷ್ಟ ಶೇ.5 ರಷ್ಟು ಹೆಚ್ಚಿಸಲು ದಾಖಲಾತಿ ಜಾಗೃತಿ ಅಭಿಯಾನದಲ್ಲಿ ಮಾಹೆವಾರು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ವಿವರವನ್ನು ಅನುಬಂಧದಲ್ಲಿ ನೀಡಲಾಗಿದ್ದು, ಅದರಂತೆ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಮುಖ್ಯಸ್ಥರು, ಕ್ಲಸ್ಟರ್, ತಾಲ್ಲೂಕು ಮತ್ತು ಜಿಲ್ಲಾ ಹಂತದ ಎಲ್ಲಾ ಕ್ಷೇತ್ರ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಗತ್ಯ ಕ್ರಮವಹಿಸುವ ಮೂಲಕ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿಯನ್ನು ಉತ್ತಮಪಡಿಸಲು ಸೂಚಿಸಿದೆ.




logoblog

Thanks for reading School Admission 2026-27 ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ

Previous
« Prev Post