Tuesday, November 4, 2025

KASS-2025 ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-out) ನಿಗದಿಪಡಿಸಲಾಗಿರುವ ದಿನಾಂಕ ವಿಸ್ತರಣೆ

  ISARESOURCEINFO       Tuesday, November 4, 2025
KASS-2025 ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-out) ನಿಗದಿಪಡಿಸಲಾಗಿರುವ ದಿನಾಂಕ ವಿಸ್ತರಣೆ.





ಪ್ರಸ್ತಾವನೆ :-

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ರೂಪಿಸಿರುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-Out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ದಿನಾಂಕ 18.10.2025 ರವರೆಗೆ ಕಾಲಾವಕಾಶವನ್ನು ನೀಡಿ, ಸದರಿ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದೆಂದು ಮೇಲೆ ಓದಲಾದ ದಿನಾಂಕ 23.09.2025 ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿತ್ತು.

ಆದರೆ, ರಾಜ್ಯ ಸರ್ಕಾರವು ಕೈಗೆತ್ತಿಕೊಂಡಿರುವ ರಾಜ್ಯ ವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಸರ್ಕಾರಿ ನೌಕರರು ತೊಡಗಿದ್ದರಿಂದ, ಹಲವಾರು ನೌಕರರಿಗೆ ಈ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು ತಮ್ಮ ಅಭಿಮತ ವ್ಯಕ್ತಪಡಿಸಲು ಅವಕಾಶವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಈ ಸೂಚನೆಗಳನ್ನು ಭಾಗಶ: ಮಾರ್ಪಡಿಸಿ, ಇಂತಹ ಘೋಷಣೆಯನ್ನು ಸಲ್ಲಿಸಲು ಕಾಲಾವಕಾಶವನ್ನು ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ :-

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020 ಬೆಂಗಳೂರು, ದಿನಾಂಕ: 03.11.2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Optin, Opt-out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ನಿಗದಿಪಡಿಸಲಾಗಿರುವ ಕಾಲಾವಕಾಶವನ್ನು ದಿನಾಂಕ 25.11.2025 ರವರೆಗೆ ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ದಿನಾಂಕ 23.09.2025ರ ಸರ್ಕಾರಿ ಆದೇಶದಂತೆ ದಿನಾಂಕ 18.10.2025 ರೊಳಗೆ Opt-out ಆಗದೆ, ಈ ಆದೇಶದಲ್ಲಿ ವಿಸ್ತರಿಸಿರುವಂತೆ ನವೆಂಬರ್ 2025 ರವರೆಗೆ ನೀಡಿರುವ ಕಾಲಾವಕಾಶವನ್ನು ಉಪಯೋಗಿಸಿಕೊಂಡು ಯೋಜನೆಯಿಂದ Opt-out ಅದಲ್ಲಿ ಅಂತಹ ನೌಕರರ ವೇತನದಲ್ಲಿ ಮಾಸಿಕ ವಂತಿಕೆಯನ್ನು ನವೆಂಬರ್ 2025 ರಿಂದ ಕಟಾವಣೆಗೊಳಿಸದಿರಲು ಎಲ್ಲಾ ಇಲಾಖಾ ಮುಖ್ಯಸ್ಥರು/ಡಿ.ಡಿ.ಓ. ಗಳಿಗೆ ಸೂಚಿಸಲಾಗಿದೆ.

ಮುಂದುವರೆದು, KASS ಯೋಜನೆಗೆ ಒಳಪಡಲು ಅಥವಾ ಒಳಪಡದಿರಲು ಇಚ್ಛೆ ವ್ಯಕ್ತಪಡಿಸುವ ಪ್ರತಿ ನೌಕರನು ತನ್ನ ಕುಟುಂಬದ ಮಾಹಿತಿ ಹಾಗೂ Option ನಮೂದಿಸಲು HRMS ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದು ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ HRMS ನಲ್ಲೇ ಈ ಪ್ರಕ್ರಿಯೆ ಕೈಗೊಳ್ಳಬೇಕಾಗಿರುತ್ತದೆ. ಈ ಸಂಬಂಧದಲ್ಲಿ ನೌಕರರಿಂದ ಅಗತ್ಯ ಮಾಹಿತಿ ಪಡೆದು ದೃಢೀಕರಣ ಹಾಗೂ ಅನುಮೋದನೆಯನ್ನು ಸಂಬಂಧಿತ ಡಿ.ಡಿ.ಓ. ಗಳು HRMS Application ನಲ್ಲಿ ಮಾಡಲು ಕ್ರಮ ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.



logoblog

Thanks for reading KASS-2025 ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-out) ನಿಗದಿಪಡಿಸಲಾಗಿರುವ ದಿನಾಂಕ ವಿಸ್ತರಣೆ

Newest
You are reading the newest post