ಭಾರತದಲ್ಲಿ ಸಮಾಜವಾದ ಮತ್ತು ಮತೀಯವಾದದ ಬೆಳವಣಿಗೆ
ಭಾರತದಲ್ಲಿ ಸಮಾಜವಾದದ ಬೆಳವಣಿಗೆ
ಸಮಾಜವಾದವು ಆಧುನಿಕ ಬಂಡವಾಳಶಾಹಿಯಿಂದ ಸ್ಥಾಪಿತವಾದ ಕಾರ್ಖಾನೆಗಳ ಕಾರ್ಮಿಕರ ಶೋಷಣೆಗೆ ಪ್ರತಿಕ್ರಿಯೆಯಾಗಿ ಬೆಳೆದ ತತ್ವ, ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಹಿಡಿತವೇ ಪ್ರಮುಖವಾಗಿದ್ದರಿಂದ ಮೊದಮೊದಲು ಕಾರ್ಮಿಕರ ಸಂಕಷ್ಟಗಳ ಕಡೆ ರಾಜಕೀಯ ನಾಯಕರು ಗಮನ ನೀಡಲಿಲ್ಲ. ಆದರೆ ಮೊದಲನೇ 'ಮಹಾಯುದ್ಧದ ಪರಿಣಾಮವಾಗಿ ಅವಶ್ಯಕ ವಸ್ತುಗಳ ಬೆಲೆಗಳು ಹೆಚ್ಚಳಗೊಂಡಿದ್ದರಿಂದ ಮತ್ತು ಕಾಮಗಳು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರ ಜೀವನವು ಕಷ್ಟದಾಯಕವಾಯಿತು. 1917ರ ರಷ್ಯಾದ ಕ್ರಾಂತಿಯ ಸಫಲತೆಯು ಭಾರತೀಯ ಬುದ್ಧಿಜೀವಿಗಳಿಗೆ, ರಾಜಕೀಯ ನಾಯಕರಿಗೆ, ಕಾರ್ಮಿಕರಿಗೆ ಹೊಸ ವಿಷಯದ ಅರಿವುಂಟಾಯಿತು. ಗಾಂಧೀಜಿಯವರು ಸ್ವದೇಶಿ, ಅಸಹಕಾರ ಚಳುವಳಿಗಳ ಮೂಲಕ ಕಾರ್ಮಿಕರನ್ನು ಸ್ವಾತಂತ್ರ್ಯ ಚಳುವಳಿಯ ಮುಖ್ಯವಾಹಿನಿಗೆ ತಂದರು. ನಿರುದ್ಯೋಗ ಸಮಸ್ಯೆಯು ಅನೇಕ ಭಾರತೀಯರನ್ನು ಉದಾರವಾದಕ್ಕೆ ವಿರುದ್ಧವಾಗಿ ಸಮಾಜವಾದದತ್ತ ಯೋಚಿಸಲು ಕಾರಣವಾಯಿತು. ಲಾಲಾಹರದಯಾಳ್‌ರವರು 1912ರಲ್ಲಿ ಕಾರ್ಲ್‌ಮಾರ್ಕ್ಸ್‌ರ ಜೀವನ ಚರಿತ್ರೆಯನ್ನು ಬರೆದು "ಮಾಡರ್ನ್ ರವ್ಯೂ" ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ರಾಮಕೃಷ್ಣ ಪಿಳ್ಳೆ ಎಂಬುವವರು ಮಲೆಯಾಳ ಭಾಷೆಯಲ್ಲಿ ಕಾರ್ಲ್ ಮಾರ್ಕ್ಸ್ರ ಜೀವನ ಚರಿತ್ರೆಯನ್ನು ಬರೆದರು. ಲೋಕಮಾನ್ಯ ತಿಲಕ್‌ರವರ 'ಕೇಸರಿ', ಹಾರ್ನಿಮನ್‌ರ 'ಬಾಂಬೆ ಕ್ರಾನಿಕಲ್', ರಮಾನಂದ ಚಟರ್ಜಿಯವರ ಮಾಡರ್ನ್ ರಿವ್ಯೂ ಮುಂತಾದ ಪತ್ರಿಕೆಗಳು ರಷ್ಯಾದ ಕ್ರಾಂತಿ, ಲೆನಿನ್, ಸಮಾಜವಾದದ ಪ್ರಚಾರ ಕಾರ್ಯವನ್ನು ಕೈಗೊಂಡವು
ಸೋವಿಯತ್‌ನ ನಾಯಕರು ಭಾರತದಲ್ಲೂ ಕಮ್ಯುನಿಸ್ಟ್ ತತ್ವವನ್ನು ಪ್ರಸರಿಸಲು ಪ್ರಯತ್ನ ಪಟ್ಟರು. ಎಂ.ಎನ್.
ರಾಯ್‌ರವರೇ ರಷ್ಯಾದ ಕಮ್ಯುನಿಸ್ಟ್ ಇಂಟರ್ ನ್ಯಾಷನಲ್ ಮತ್ತು ಭಾರತದ ಕಮ್ಯುನಿಸ್ಟ್‌ರಿಗೂ ಮೊದಲ ಕೊಂಡಿಯಾದರು. 1920ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ ಎಂ.ಎನ್. ರಾಯ್ ನಂತರ ಯೂರೋಪಿನ ಅನೇಕ ಕೇಂದ್ರಗಳಿಂದ ಇಂಗ್ಲಿಷ್‌ನಲ್ಲಿ "ವ್ಯಾಂಗಾರ್ಡ್" ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ನಂತರ ಅದನ್ನು “ದಿ ಮಾಸಸ್ ಆಫ್ ಇಂಡಿಯಾ" ಎಂದು ಬದಲಾಯಿಸಿ ಅದರ ಪ್ರತಿಗಳನ್ನು ಭಾರತದ ನಾಯಕರಿಗೆ, ಬುದ್ಧಿಜೀವಿಗಳಿಗೆ, ಕಾರ್ಮಿಕರಿಗೆ ಕಳುಹಿಸಲಾರಂಭಿಸಿದರು. 1923ರಲ್ಲಿ ಎಸ್.ಎ. ಡಾಂಗೆಯವರು "ಸೋಸಿಯಲಿಸ್ಟ್" ಎಂಬ ಇಂಗ್ಲಿಷ್ ವಾರಪತ್ರಿಕೆಯನ್ನು ಪ್ರಕಟಿಸಿದರು. ಕಲ್ಕತ್ತದಲ್ಲಿ 'ಜನವಾಣಿ' ಎಂಬ ಬಂಗಾಳಿ ವಾರಪತ್ರಿಕೆಯೂ ಅದೇ ಕಾಲದಲ್ಲಿ ಪ್ರಾರಂಭವಾಯಿತು. ಎಂ.ಎನ್. ರಾಯ್ ರವರ ಸಲಹೆಯ ಮೇರೆಗೆ 1924ರ ಜುಲೈನಲ್ಲಿ ಕಮ್ಯುನಿಸ್ಟ್ 'ಇಂಟರ್‌ನ್ಯಾಷನಲ್‌ನ ಶಾಖೆಯಾಗಿ ಭಾರತದ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಯಿತು.
ಸಮಾಜವಾದದ ತತ್ವದ ಮೇಲೆ 1918ರಲ್ಲಿ ಕಿಸಾನ್ ಸಭಾ ಎಂಬ ರೈತ ಸಂಘಟನೆ ಅಲಹಾಬಾದ್‌ನಲ್ಲಿ ಸ್ಥಾಪನೆಯಾಯಿತು. ಲಾಲಾಲಜಪತರಾಯರು 1920ರ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಅವರು ಸಮಾಜವಾದ ಮತ್ತು ಬೋವಿಕ್ ಸಿದ್ಧಾಂತದ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. 1920-23ರ ಅವಧಿಯಲ್ಲಿ ಎಂ.ಎನ್. ರಾಯ್‌ರವರು ಬರೆದ ಎರಡು ಕೃತಿಗಳಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬಂಡವಾಳಶಾಹಿಗಳ ಹಿಡಿತದಲ್ಲಿದೆಯೆಂದು ದೂಷಿಸಿ ಬರೆದರು. ಜವಾಹರಲಾಲ್ ನೆಹರೂರವರು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದದ ಬಗ್ಗೆ ತಿಳಿದವರಾಗಿದ್ದರು. 1926ರಲ್ಲಿ ಮೋತಿಲಾಲ್ ನೆಹರೂ ಮತ್ತು ಜವಾಹರಲಾಲ್ ನೆಹರೂರವರು ಯೂರೋಪಿಗೆ ಭೇಟಿ ನೀಡಿದಾಗ ಹಲವಾರು ಸೋಷಿಯಲಿಸ್ಟ್‌ರು ಹಾಗೂ ಕಮ್ಯೂನಿಸ್ಟ್ ರ ಪರಿಚಯ ಪಡೆದು ರಷ್ಯಾಕ್ಕೆ ಭೇಟಿ ನೀಡಿದರು. ರಷ್ಯಾ ಪ್ರವಾಸದ ” ಅನುಭವಗಳನ್ನು ಕುರಿತು "ಸೋವಿಯತ್ ರಷ್ಯಾ" ಎಂಬ ಪುಸ್ತಕ ಬರೆದರು. ಅದರಲ್ಲಿ ರಷ್ಯಾ ಕ್ರಾಂತಿಗೆ ಹಿಂದಿನ ರಷ್ಯಾ ಹಾಗೂ ಬ್ರಿಟಿಷ್ ಆಳ್ವಿಕೆಗೊಳಗಾಗಿರುವ ಭಾರತಗಳ ಪರಿಸ್ಥಿತಿಗಳು ಹೋಲಿಕೆಯಲ್ಲಿ ಸಮಾನಾಂಶಗಳನ್ನು ಹೊಂದಿವೆಯೆಂದು ತಿಳಿಸಿದರು. ರಷ್ಯಾವು ತನ್ನ ದಾರಿದ್ರ, ಹಾಗೂ ಅನಕ್ಷರತೆಗಳನ್ನು ಹೋಗಲಾಡಿಸಲು ಕೈಗೊಂಡಿರುವ ಕ್ರಮಗಳು ಭಾರತಕ್ಕೂ ಸಹಾಯಕಾರಿಯಾಗುತ್ತವೆಂದು ತಿಳಿಸಿದರು. 1929ರ ಲಾಹೋರ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂರವರು ತಾವೊಬ್ಬ ಸಮಾಜವಾದಿಯೆಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಪ್ರಕಟಿಸಿದರು. 1936ರ ಬಕ್ಕೋ ಅಧಿವೇಶನಕ್ಕೆ ಮತ್ತೆ ಅಧ್ಯಕ್ಷರಾದ ನೆಹರೂರವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮೂವರು ಕಟ್ಟಾ ಸಮಾಜವಾದಿಗಳಾದ ಜಯಪ್ರಕಾಶ್ ನಾರಾಯಣ್, ನರೇಂದ್ರದೇವ್ ಮತ್ತು ಅಚ್ಯುತ್ ಪಟವರ್ಧನ್‌ರವರನ್ನು ಸೇರಿಸಿಕೊಂಡರು. ನೆಹರೂರವರು ಸಮಾಜವಾದದ ಸಮರ್ಥಕರಾಗಿ ಕಾರ್ಯಕಾರಿ ಸಮಿತಿಯಿಂದ ಸರೋಜಿನಿ ನಾಯ್ಡುರವರನ್ನು ಹೊರಗಿಟ್ಟರು. ಇದು ಗಾಂಧೀ ಮತ್ತು ನೆಹರೂರವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಆದರೆ ನೆಹರೂರವರು ನೀಡಿದ ಸಮಾಜವಾದದ ಸಂದೇಶ ಭಾರತದಾದ್ಯಂತ
1924ರ ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ನಂತರ ಭಾರತದಲ್ಲಿ ಕಮ್ಮುನಿಸ್ಟ್ ಚಳುವಳಿಗಳು ಪ್ರಬಲವಾಗಿ ಬೆಳೆಯಲು ಬ್ರಿಟನ್‌ನ ಕಮ್ಯುನಿಸ್ಟ್ ಪಕ್ಷದಿಂದ ಸೂಚನೆಗಳು ಬರಲಾರಂಬಿಸಿದವು. ಈ ಚಟುವಟಿಕೆಗಳಲ್ಲಿ ಆರ್. ಪಾಮೆದತ್ ಪ್ರಮುಖ ಪಾತ್ರ ವಹಿಸಿದರು. ಬ್ರಿಟನ್‌ನಿಂದ ಅನೇಕ ಕಮ್ಮುನಿಸ್ಟ್ ಕಾರ್ಯಕರ್ತರು ಭಾರತದ ಕಮ್ಯುನಿಸ್ಟ್ ಚಳವಳಿಗೆ ಸಹಾಯಕರಾಗಿ ಬಂದರು. ಅವರಲ್ಲಿ ಪ್ರಮುಖರೆಂದರೆ ಪರ್ಸಿ ಇ ಗ್ರೇಡಿಂಗ್ ಮತ್ತು ಜಾರ್ಜ್ ಅಲ್ಲಿಸನ್, ಜಾರ್ಜ್ ಅಲ್ಲಿಸನ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಭಾಗವಹಿಸಿ ಬೊಂಬಾಯಿ ಮತ್ತು ಬಂಗಾಳದ ಕಾರ್ಮಿಕ ಚಳುವಳಿಗಳಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಚಟುವಟಿಕೆಗಳ ಕಾರಣ 1926ರಲ್ಲಿ ಅವರನ್ನು ಬಂಧಿಸಿ 18 ತಿಂಗಳ ಸೆರೆವಾಸ ವಿಧಿಸಿತು. ಫಿಲಿಫ್‌ಸ್ಟ್ರಾಟ್ ಎಂಬುವವನು 1926ರ ಡಿಸೆಂಬರ್ನನಲ್ಲಿ ಭಾರತದಲ್ಲಿ ಸೋವಿಯತ್ ರಷ್ಯಾದ ಹಣದ ಸಹಾಯದಿಂದ "ಲೇಬರ್ ರಿಸರ್ಚ್ ಆರ್ಗನೈಪೇಷನ್'ನ್ನು ಸ್ಥಾಪಿಸಲು ಬಂದನು. ಆಗ ಬೆರಳೆಣಿಕೆಯಷ್ಟಿದ್ದ ಕಮ್ಮುನಿಸ್ಟ್ ಪಕ್ಷದ ಸದಸ್ಯರ ಸಂಖ್ಯೆಯನ್ನು ಪರಿಶ್ರಮಪಟ್ಟು ಕಾರ್ಮಿಕರು, ಕೂಲಿಕಾರರು ಮತ್ತು ರೈತರನ್ನು ಸಂಘಟಿಸಿದನು. ಸ್ಟ್ರಾಟನು 1928ರ ಅಕ್ಟೋಬರ್‌ನಲ್ಲಿ ಕಾರ್ಮಿಕರು ಮತ್ತು ಕೃಷಿಕರ ಪಕ್ಷವನ್ನು ಒಕ್ಕೂಟ ಪ್ರಾಂತ್ಯದ ಮೀರತ್‌ನಲ್ಲಿ ಸ್ಥಾಪಿಸಿದನು. ಇದರ ಶಾಖೆಗಳು ದೆಹಲಿ, ಅಲಹಾಬಾದ್, ಗೋರಖ್ ಪುರ ಮತ್ತು ಝಾನ್ಸಿಗಳಲ್ಲಿ ಸ್ಥಾಪನೆಗೊಂಡವು. ಡಿಸೆಂಬರ್ 1928ರಲ್ಲಿ ಕಲ್ಕತ್ತದಲ್ಲಿ ಸಮಾವೇಶಗೊಂಡ ಕಮ್ಯುನಿಸ್ಟ್ ಪಕ್ಷದ ಸಭೆಯು ಹೊಸ ಕೇಂದ್ರೀಯ ಕಾರ್ಯಕಾರಿ ಸಮತಿಯನ್ನು ಆಯ್ಕೆ ಮಾಡಿತು. ಈ ಸಮಿತಿಯು ಪಕ್ಷದ ಚಟುವಟಿಕೆ ಮತ್ತು ಪ್ರಚಾರ ಕಾರ್ಯವನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಹೆಸರಿನಲ್ಲಿ ಕೈಗೊಳ್ಳಬೇಕೆಂದು ತೀರ್ಮಾನ ಕೈಗೊಂಡಿತು. ಮಾಸ್ಕೋದ ಕಮ್ಯುನಿಸ್ಟ್ ಇಟರ್‌ಷನಲ್ ಮುಜಾಫರ್ ಅಹ್ಮದ್‌ರನ್ನು ನಿಯೋಗಿಯಾಗಿ ಕಳುಹಿಸಿತು. ಹೀಗೆ ಭಾರತದ ಕಮ್ಯುನಿಸ್ಟ್ ಪಕ್ಷವು ಉತರ್‌ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಾಯಿತು. ಈ ಅವಧಿಯಲ್ಲಿ ಭಾರತವು ಕೈಇರಿಕೀಕರಣಗೊಂಡಿದ್ದರಿಂದ ಕಾರ್ಮಿಕರ ಸಂಖ್ಯೆ ಹೆಚ್ಚಿ ಟ್ರೇಡ್ ಯೂನಿಯನ್‌ಗಳು ಸ್ಥಾಪನೆಯಾದವು. ಬಹುತೇಕ ಕಾರ್ಮಿಕ ಸಂಘಗಳ ಮೇಲೆ ಕಮ್ಯುನಿಸ್ಟ್ ಪಕ್ಷ ಹತೋಟಿ ಹೊಂದಿತು.
ಕಾನ್ಸುರ ಪಿತೂರಿ ಮೊಕದ್ದಮೆ - 1924
ಎಂ.ಎನ್. ರಾಯ್‌ರವರ ಅನುಯಾಯಿ ನಳಿನಿಗುಪ್ತ ಮತ್ತು ಅಬನಿ ಮುಖರ್ಜಿಯವರು ಭಾರತಕ್ಕೆ ಮಾರ್ಕ್ಸ್ನಾದವನ್ನು ಪ್ರಚಾರಮಾಡಲು ಬಂದರು. ಭಾರತದಲ್ಲಿಯೂ ಮಾರ್ಕ್ಸ್ವಾದದತ್ತ ವಾಲಿದ್ದ ಬೊಂಬಾಯಿಯ ಎಸ್.ಎ. ಡಾಂಗೆ, ಕಲ್ಕತ್ತದ ಮುಜಾಫರ್ ಅಹ್ಮದ್, ಮದರಾಸಿನ ಸಿಂಗಾರವೇಲು ಮತ್ತು ಪಂಜಾಬಿನ ಕುಲಾಂಹುಸೇನ್ ಮುಂತಾದವರು ತಮ್ಮ ತಮ್ಮ ಭಾಷೆಯಲ್ಲಿ ಸಮಾಜವಾದಿ ಸಾಹಿತ್ಯವನ್ನು ಕೊರತರಲಾರಂಭಿಸಿದರು. ಮೇ ದಿನಾಚರಣೆ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು, ಕಾರ್ಮಿಕರ ಮುಷ್ಕರಗಳನ್ನು ಸಂಘಟಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿದರು. ನಳಿನಿಗುಪ್ತ ಮತ್ತು ಕಾಸ ಮುಖರ್ಜಿಯವರು ಬಂಗಾಳದ ಉಗ್ರಗಾಮಿ ತಂಡಗಳ ಜೊತೆಯಲ್ಲಿ ಸಂಪರ್ಕವಿರಿಸಿಕೊಂಡಿದ್ದರು. ಸರ್ಕಾರವು ಈ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳಲು 13 ಜನರ ಮೇಲೆ ಪಿತೂರಿ ಮೊಕದ್ದಮೆ ಹೂಡಿತು. ಈ ಮೊಕದ್ದಮೆಯು ಕಾನ್ಸುರದ ನ್ಯಾಯಾಲಯದಲ್ಲಿ ನಡೆದಿದ್ದರಿಂದ ಕಾನ್ಸುರ ಪಿತೂರಿ ಮೊಕದ್ದಮೆಯೆಂದು ಕರೆಯುತ್ತಾರೆ. ಈ ಮೊಕದ್ದಮೆಯಲ್ಲಿ ಅಪಾದಿತರು ಮಾಸ್ಕೋದ ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್ ಏಜೆಂಟರಾದ ಕಾರಣ ಅವರ ಚಟುವಟಿಕೆಗಳು ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಪಾಯಕಾರಿಯೆಂಬುದಾಗಿ ಅಪಾದಿಸಿತು. ಪ್ರಮುಖ ಅಪಾದಿತರಾದ ಎಸ್.ಎ. ಡಾಂಗೆ, ಮುಜಾಫರ್ ಅಹ್ಮದ್, ಪೌಕತ್ ಉಸ್ಮಾನಿ ಮತ್ತು ನಳಿನಿಗುಪ್ತಾರಿಗೆ ನಾಲ್ಕು
ಮೀರತ್ ಪಿತೂರಿ ಮೊಕದ್ದಮೆ : 1929
ಭಾರತದಲ್ಲಿ ಬಲಗೊಳ್ಳುತ್ತಿದ್ದ ಕಮ್ಯುನಿಸ್ಟ್ ಪ್ರಭಾವವನ್ನು ತಡೆಗಟ್ಟಲು ಬ್ರಿಟಿಷ್ ಸರ್ಕಾರವು ಕ್ರಮಗಳನ್ನು ಕೈಗೊಂಡಿತು. ಭಾರತದ ವಿವಿಧ ಪ್ರಾಂತ್ಯಗಳ 31 ನಾಯಕರನ್ನು 1929ರ ಮಾರ್ಚ್ 20 ರಂದು ಸರ್ಕಾರವು ಬಂಧಿಸಿತು. ಬಂಧಿತ ಪ್ರಮುಖರೆಂದರೆ ಸ್ಟ್ರಾಟ್, ಬ್ರಾಡ್ಮಿ, ಮುಜಾಫರ್ ಅಹ್ಮದ್, ಪೌಕತ್ ಉಸ್ಮಾನಿ, ಎಸ್.ಎ. ಡಾಂಗೆ, ಹಚಿಸನ್ ಮುಂತಾದವರು. ದೇಶದಾದ್ಯಂತ ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆ ದಾಳಿ ಮಾಡಿ ಕಮ್ಯುನಿಸ್ಟ್‌ರ ಕಾರ್ಯಚಟುವಟಿಕೆಯ ಆಧಾರಗಳನ್ನು ಸಂಗ್ರಹಿಸಿತು. ಕೆಳ ನ್ಯಾಯಾಲಯವು ಆಧಾರಗಳನ್ನು ಪರಿಶೀಲಿಸಿ 1919ರಲ್ಲೇ ಮಾಸ್ಕೋದಲ್ಲಿ ಸ್ಥಾಪನೆಗೊಂಡ ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್ ಎಲ್ಲಾ ದೇಶಗಳಲ್ಲೂ ಕಾರ್ಮಿಕರ ಗಣರಾಜ್ಯ ಸ್ಥಾವನೆಯ ಉದ್ದೇಶ ಹೊಂದಿದೆ; ಆ ಉದ್ದೇಶ ಸಾಧನೆಗೆ ಭಾರತದಲ್ಲೂ ಹಿಂಸಾತ್ಮಕ ಕ್ರಾಂತಿ ನಡೆಸಿ ಬ್ರಿಟಿಷ್ ಇಂಡಿಯಾದಲ್ಲಿ ರಾಜಪ್ರಭುತ್ರವನ್ನು ಕಿತ್ತೊಗೆಯಲು ಭಾರತದ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸಲು ಭಾರತದ ಕಮ್ಯುನಿಸ್ಟ್ ಪಕ್ಷವು ನೆರವು ನೀಡುತ್ತಿದೆ. ಕಮ್ಯುನಿಸ್ಟ್ ಪಕ್ಷ ಮತ್ತಿ ತರ ಕಾರ್ಮಿಕ ಮತ್ತು ರೈತ ಪಕ್ಷಗಳ ಕಾರ್ಯಚಟುವಟಿಕೆಗಳಿಗೆ ಮಾಸ್ಕೋದಿಂದ ಹಣ ಸಹಾಯ ಬರುತ್ತಿದೆ. ಈ ಹಣದ ಸಹಾಯದಿಂದ ಸಂಘಸಂಸ್ಥೆಗಳನ್ನು ಸಂಘಟಿಸುವ, ಪತ್ರಿಕಾ ಪ್ರಕಟಣೆ ಮತ್ತಿತರ ಚಳುವಳಿಗಳಿಗೆ ಉಪಯೋಗಿಸಲಾಗಿದೆ. ಈ ಎಲ್ಲ ವಿರೋಧಿ ಚಟುವಟಿಕೆಗಳು ಅಪಾದಿತರು ತಿಳಿದಿದ್ದು ವಿದೇಶಿಯರೊಂದಿಗೆ ಪಿತೂರಿಯಲ್ಲಿ ತೊಡಗಿದ್ದರು ಎಂಬುದಾಗಿ ಆಪಾದಿಸಿದರು.
ಸೆಷನ್ ನ್ಯಾಯಾಲಯವು ಜನವರಿ 16, 1933 ರಂದು ಮೊಕದ್ದಮೆಯ ತೀರ್ಪು ನೀಡಿತು. 31 ಆಪಾದಿತರಲ್ಲಿ ನಾಲ್ಕು ಮಂದಿಯನ್ನು ಬಿಡುಗಡೆ ಮಾಡಿ ಇನ್ನುಳಿದ 27 ಆಪಾದಿತರಿಗೆ ಜೀವಾವಧಿಯಿಂದ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಿತು. ಮುಜಾಫರ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ, ಎಸ್.ಎ. ಡಾಂಗೆ, ಎಸ್.ವಿ. ಘಾಟಿ, ಕೆ.ಎನ್. ಜೋಗೇಲ್ಕರ್, ಆರ್.ಎಸ್. ನಿಂಲ್ಕಾರ್ ಮತ್ತು ಸ್ಟಾಟ್‌ರಿಗೆ 12 ವರ್ಷ ಶಿಕ್ಷೆ ಮತ್ತು ಬ್ರಾಡ್ಲಿ, ಮಿರಾಜ್ಞರ್ ಮತ್ತು ಉಸ್ಮಾನಿಯರಿಗೆ 10 ವರ್ಷ ಗಡೀಪಾರು ಶಿಕ್ಷೆ ನೀಡಲಾಯಿತು. ಅಲಹಾಬಾದ್ ಹೈಕೋರ್ಟ್ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿತು. ಈ ಮೊಕದ್ದಮೆಯನ್ನು ಸರ್ಕಾರವು ಮುಖ್ಯವಾಗಿ ಪರಿಗಣಿಸಲು ಕಾರಣವೆಂದರೆ ಬಂಗಾಳ, ಬೊಂಬಾಯಿ, ಪಂಜಾಬ್ ಹಾಗೂ ಸಂಯುಕ್ತ ಪ್ರಾಂತ್ಯಗಳಲ್ಲಿ ಬಲಗೊಳ್ಳುತ್ತಿದ್ದ ಕಾರ್ಮಿಕ ಚಳವಳಿ ಮತ್ತು ಸಂಘಟನೆಯನ್ನು ಹತ್ತಿಕ್ಕುವ ಉದ್ದೇಶವೇ ಆಗಿತ್ತು.
ಮೀರತ್ ಪಿತೂರಿ ಮೊಕದ್ದಮೆಯು ರಾಷ್ಟ್ರೀಯವಾದಿಗಳ ಸಹಾನುಭೂತಿಗಳಿಸುವಲ್ಲಿ ಯಶಸ್ವಿಯಾಯಿತು. “ಮೊಕದ್ದಮೆಯ ವಿವರಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಬರುವಂತಾಯಿತು. ನಮ್ಮ ಗುಟ್ಟಾದ ಕಾರ್ಯಚಟುವಟಿಕೆಗಳು ಜನರಲ್ಲಿ ಅಭಿಮಾನಗಳಿಸಿದವು ಮತ್ತು ಯುವಕರನ್ನು ಆಕರ್ಷಿಸಿದವು. ಕಮ್ಯುನಿಸ್ಟ್ ನಾಯಕರ ರಾಜಕೀಯ ಹೇಳಿಕೆಗಳು ಚಿಕ್ಕ ಪುಸ್ತಕಗಳಾಗಿ ಪ್ರಕಟವಾದವು. ಒಟ್ಟಾರೆ ಕಮ್ಯುನಿಸ್ಟ್ ತತ್ವದ ಪರವಾದ ಪ್ರಚಾರಕಾರ್ಯ ಬಹುಬೇಗ ಹರಡಿತು' ಎಂದು ಸ್ಟ್ರಾಟ್‌ರವರು ಅಭಿಪ್ರಾಯಪಟ್ಟಿದ್ದಾರೆ.
ಮೀರತ್ ಪಿತೂರಿ ಮೊಕದ್ದಮೆಯಲ್ಲಿ ಪ್ರಮುಖ ನಾಯಕರೆಲ್ಲ ಬಂಧನಕ್ಕೊಳಗಾದ್ದರಿಂದ ಮತ್ತು ಬ್ರಿಟಿಷ್ ಸರ್ಕಾರವು ಕೈಗೊಂಡ ಹತೋಟಿ ಕ್ರಮಗಳಿಂದ 1930 ರಿಂದ 1935ರ ಅವಧಿಯಲ್ಲಿ ಕಮ್ಯುನಿಸ್ಟ್ ಚಟುವಟಿಕೆಗಳು ಸ್ಥಗಿತಗೊಂಡವು. ಆದರೆ 1935ರಲ್ಲಿ ಮೀರತ್ ಮೊಕದ್ದಮೆಯ ಖೈದಿಗಳೆಲ್ಲ ಬಿಡುಗಡೆಗೊಂಡು ಕಮ್ಯುನಿಸ್ಟ್ ಚಟುವಟಿಕೆಗಳನ್ನು ಪುನಶ್ಚತನಗೊಳಿಸಲು ಕಮ್ಯುನಿಸ್ಟ್ ಪಕ್ಷದ ಪ್ರಾಂತ್ಯ ಸಮಿತಿ, ಕೇಂದ್ರ ಸಮಿತಿ, ಪಾಲಿಟ್ ಬ್ಯೂರೋಗಳನ್ನು ಸ್ಥಾಪಿಸಿ ಸದಸ್ಯರು ಮತ್ತು ಕಾರ್ಯಕರ್ತರ ನಡುವೆ ಸಂಪರ್ಕ ವ್ಯವಸ್ಥೆ ಮಾಡಲಾಯಿತು. ಮುಖ್ಯ ಕೈಗಾರಿಕಾ ಕೇಂದ್ರಗಳಲ್ಲಿ ಕಾರ್ಮಿಕರನ್ನು ಸಂಘಟಿಸಿ ಸಾರ್ವತ್ರಿಕ ಮುಷ್ಕರಗಳನ್ನು ವ್ಯವಸ್ಥೆಗೊಳಿಸಿದರು. ಸರ್ಕಾರವು ಮತ್ತೆ ತಲೆಯೆತ್ತಿದ ಕಮ್ಯುನಿಸ್ಟ್ ಚಟುವಟಿಕೆಗಳನ್ನು ಹತ್ತಿಕ್ಕಲು 1935ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿತು.
ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷ 1934
ಬಿಹಾರ ಸೋಷಿಯಲಿಸ್ಟ್ ಪಕ್ಷವು 1931ರಲ್ಲಿ ಸ್ಥಾಪನೆಯಾಯಿತು. 1934ರಲ್ಲಿ ಬೊಂಬಾಯಿಯ ಸೋಷಿಯಲಿಸ್ಟ್ ಗುಂಪು ಒಗ್ಗೂಡಿದರು. ಕಾನೂನುಭಂಗ ಚಳುವಳಿಯಲ್ಲಿ ಬಂಧಿತರಾಗಿ ಸೆರೆಮನೆಗಳಲ್ಲಿದ್ದ ಯುವ ಕಾಂಗ್ರೆಸ್ಸಿಗರಲ್ಲಿ ಕಾಂಗ್ರೆಸ್‌ನ ಸಂಪ್ರದಾಯವಾದಿ ನಾಯಕತ್ವದ ಕಾರ್ಯಾಚರಣೆಗಳಲ್ಲಿ ಅವಿಶ್ವಾಸ ಉಂಟಾಯಿತು. ಇವರು ಚಳವಳಿಯಲ್ಲಿ ಕಾರ್ಮಿಕರು ಮತ್ತು ರೈತರನ್ನು ಸಂಘಟಿಸಲು ಸಮಾಜವಾದದ ಅಂಶಗಳಿಗೆ ಮಾರುಹೋದರು. ಸಮಾಜವಾದದಲ್ಲಿ ನಂಬಿಕೆಯಿದ್ದ ಕಾಂಗ್ರೆಸ್ ಕಾರ್ಯಕರ್ತರು 1934ರಲ್ಲಿ ಪಾಟ್ನಾ ಮತ್ತು ಬೊಂಬಾಯಿಯಲ್ಲಿ ಸಭೆ ಸೇರಿ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಹೊಸ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷಕ್ಕೆ ಜಯಪ್ರಕಾಶ್ ನಾರಾಯಣ್‌ರವರು ಪ್ರಧಾನ ಕಾರ್ಯದರ್ಶಿಯಾಗಿಯೂ ಅಚಾರ್ಯ ನರೇಂದ್ರದೇವ, ಡಾ|| ರಾಮಮನೋಹರಲೋಹಿಯಾ, ಕಮಲಾದೇವಿ ಚಟ್ಟೋಪಾಧ್ಯಾಯ, ಯೂಸೂಫ್ ಮಹರಲಿ, ಮಿನೂ ಮಸಾನಿ, ಎಸ್.ಎಂ. ಜೋಷಿ ಮತ್ತಿತರರು ಸದಸ್ಯರಾಗಿ ಸೇರಿದರು. ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಸ್ಥಾಪನೆಯ ಉದ್ದೇಶ ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಬಿರುಕು ಉಂಟುಮಾಡದೆ, ಕಾಂಗ್ರೆಸ್ಸಿನೊಳಗೆ ಉಳಿದುಕೊಂಡು ಸಮಾಜವಾದದ ಆಧಾರದ ಮೇಲೆ ಜನರನ್ನು ಸಂಘಟಿಸುವುದು, ಕಾಂಗ್ರೆಸ್ಸಿನ ಗುರಿ ಹಾಗೂ ಧೋರಣೆಗಳು ಹೆಚ್ಚು ಮಟ್ಟಿಗೆ ಬಡಜನವರ್ಗಗಳ ಪರವಾಗಿರುವಂತೆ ಮಾಡುವುದಾಗಿತ್ತು. ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ವೈಶಿಷ್ಟ್ಯವೆಂದರೆ ಕಾಂಗ್ರೆಸ್ಸಿನ ಸದಸ್ಯರಲ್ಲದವರು ಈ ಪಕ್ಷಕ್ಕೆ ಸೇರುವಂತಿರಲಿಲ್ಲ.
1934ರಲ್ಲಿ ಬೊಂಬಾಯಿಯಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಪ್ರಥಮ ಸಭೆಯಲ್ಲಿ 15 ಅಂಶಗಳ ಕಾರ್ಯಕ್ರಮವನ್ನು ಅಂಗೀಕರಿಸಿತು. ಅವುಗಳೆಂದರೆ ಭಾರತದ ವಿದೇಶಿ ಸಾಲವನ್ನು ಕಡಿತಗೊಳಿಸುವುದು, ಉತ್ಪಾದನಾ ವರ್ಗಕ್ಕೆ ಅಧಿಕಾರ ಹಸ್ತಾಂತರ, ರಾಜ್ಯ ನಿರ್ದೇಶಿತ ಅಭಿವೃದ್ಧಿ ಯೋಜನೆಗಳು, ವಿದೇಶಿ ವ್ಯಾಪಾರದ ಮೇಲೆ ರಾಜ್ಯ ನಿಯಂತ್ರಣ, ಸಹಕಾರಿ ಮತ್ತು ಸಮುದಾಯ ಕೃಷಿ, ಪ್ರಮುಖ ಕೈಗಾರಿಕೆಗಳನ್ನು ಸಾಮಾಜೀಕರಣಗೊಳಿಸುವುದು. ರಾಜಕುಮಾರರು ಮತ್ತು ಭೂ ಜಮೀನ್ದಾರರಿಗೆ ಯಾವುದೇ ಪರಿಹಾರ ನೀಡದೆ ಕಿತ್ತೊಗೆಯುವುದು ಮುಂತಾದವು. ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಸದಸ್ಯರು ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದರು. ಆದರೆ ಕಾಂಗ್ರೆಸ್ ಸಂಸ್ಥೆಯಲ್ಲಿ ವಿಶ್ವಾಸ ಹೊಂದಿದ್ದರು. ಆಚಾರ್ಯ ನರೇಂದ್ರದೇವರ ಪ್ರಕಾರ 'ಇದುವರೆವಿಗೆ ಮಧ್ಯಮ ವರ್ಗದವರ ಚಳವಳಿಯಾಗಿರುವ ವಸಾಹತು ವಿರೋಧಿ ಆಂದೋಲನಕ್ಕೆ ಕಾರ್ಮಿಕರು ಮತ್ತು ಕೃಷಿಕ ವರ್ಗವನ್ನು ಸಂಘಟಿಸಿ ಚಳುವಳಿಯ ಅಡಿಪಾಯವನ್ನು ವಿಸ್ತರಿಸುವುದೇ ಕಾಂಗ್ರೆಸ್ ಸೋಷಿಯಲಿಸ್ಟ್‌ರ ಗುರಿ' ಎಂದು ಹೇಳಿದರು. ಇವರು ಮಹಾತ್ಮ ಗಾಂಧಿಜಿಯವರ ಅಹಿಂಸಾ ನೀತಿ ಮತ್ತು ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದನ್ನು ಟೀಕಿಸುತ್ತಿದ್ದರು. ಹೀಗೆ ಕಾಂಗ್ರೆಸ್ ಸೋಷಿಯಲಿಸ್ಟ್ರಿಗೂ ಹಾಗೂ ಹಳೆಯ ಕಾಂಗ್ರೆಸ್ಸಿನಗರ ನಡುವೆ ಭಿನ್ನಾಭಿಪ್ರಾಯಗಳುಂಟಾದವು. 1935ರ ಭಾರತ ಸರ್ಕಾರದ ಕಾಯ್ದೆಯ ಬಗ್ಗೆ ಮತ್ತು 1937ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಸೋಷಿಯಲಿಸ್ಟರು ಮತ್ತು ನೆಹರೂರವರು ಕಾಂಗ್ರೆಸ್ಸನ್ನು ವಿರೋಧಿಸುವ ನಿಲುವನ್ನು ತಳೆದರು. ಕಾಂಗ್ರೆಸ್ ಸೋಷಿಯಲಿಸ್ಟರು ಕಿಸಾನ್ ಸಭಾ, ಕೃಷಿ ಸುಧಾರಣೆ ಮತ್ತು ರೈತರ ಚಳುವಳಿಗಳಲ್ಲಿ ಹೆಚ್ಚು ಭಾಗವಹಿಸಿ ತನ್ನ ಬಲವನ್ನು ಬೆಳೆಸಿಕೊಂಡಿತು. ಜಯಪ್ರಕಾಶ್ ನಾರಾಯಣ್‌ರವರು 'ಗಾಂಧೀವಾದವು ತನ್ನ ಪಾತ್ರವನ್ನು ನಿರ್ವಹಿಸಿತು ಆದರೆ ಇನ್ನು ಮುಂದೆ ಇದು ನಮ್ಮನ್ನು ಕೊಂಡೊಯ್ಯಲಾರದು ಆದ್ದರಿಂದ ನಾವು ಮುಂದುವರಿಯಲು ಸಮಾಜವಾದದ ತತ್ವ ಮತ್ತು ನಿರ್ದೇಶನವನ್ನು ಪಡೆಯಬೇಕಾಗುತ್ತದೆ" ಎನ್ನುವಂತಹ ಟೀಕೆಯನ್ನು ಕಾಂಗ್ರೆಸ್ ನಾಯಕತ್ವದ ಮೇಲೆ ಮಾಡಿದರು. 1936ರಲ್ಲಿ ಫೈಜ್ ಪುರ್ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷರಾದ ನೆಹರೂರವರು ಮೂವರು ಕಟ್ಟಾ ಸೋಷಿಯಲಿಸ್ಟ್ ನಾಯಕರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿಸಿದರು.