Friday, November 21, 2025

ಸ್ವತಂತ್ರ ಭಾರತದ ಉದಯ: ಇತಿಹಾಸ ನೋಟ್ಸ್

  ISARESOURCEINFO       Friday, November 21, 2025
ಸ್ವತಂತ್ರ ಭಾರತದ ಉದಯ: ಇತಿಹಾಸ ನೋಟ್ಸ್


ಸ್ವತಂತ್ರ ಭಾರತ ಅಧಿಕಾರ ಸ್ವೀಕಾರ ಸಮಾರಂಭವು ಆಗಸ್ಟ್ 14 ರ ಮಧ್ಯರಾತ್ರಿ ದೆಹಲಿಯ ಸಂವಿಧಾನ ಸಭಾ ಭವನದಲ್ಲಿ ನಡೆಯಿತು. ಸಂವಿಧಾನ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ "ಹಸನ್ನು ಖಿಗಳಾಗಿ ಗಲ್ಲಿ ಗೇರಿದ ಮತ್ತು ಗುಂಡುಗಳನ್ನೆದುರಿಸಿದ ಅಸಂಖ್ಯಾತ ಮಂದಿ ಜಾತಾಜ್ಞಾತ ವ್ಯಕ್ತಿಗಳ ಸೇವೆ, ಬಲಿದಾನಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು ಹಾಗೂ ಕಳೆದ ಮೂವತ್ತು ವರ್ಷಗಳಿಂದ ದೀಪಸ್ತಂಬವೂ ಮತ್ತು ಮಾರ್ಗದರ್ಶಿ ತತ್ವಜ್ಞಾನಿಯೂ ಆದ ಮಹಾತ್ಮ ಗಾಂಧೀಜಿಯವರಿಗೆ ತಮ್ಮ ಗೌರವವನ್ನರ್ಪಿಸಿದರು.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರು "ಜಗತ್ತು ಮಲಗಿರುವಾಗ ಬದುಕು ಸ್ವಾತಂತ್ರ್ಯಗಳಿಗೆ ಭಾರತ ಎಚ್ಚರವಿರುವುದು. ನಾವು ಪುರಾತನದಿಂದ ನೂತನಕ್ಕೆ ಅಡಿಯಿಡುವ, ಯುಗವೊಂದು ಕೊನೆಗೊಳ್ಳುವ, ದೀರ್ಘಕಾಲ ದಮನಕ್ಕೀಡಾಗಿದ್ದ ರಾಷ್ಟ್ರವೊಂದು ಅಭಿವ್ಯಕ್ತಿ ಕಂಡುಕೊಳ್ಳುವ ಗಳಿಗೆಯೊಂದು ಬರುತ್ತಿದೆ" ಎಂದು ಅಧಿಕಾರ ಸ್ವೀಕಾರಕ್ಕೆ ಮೊದಲು ಮಾತನಾಡಿದರು. ಆಗಸ್ಟ್ 14ರ ಮಧ್ಯರಾತ್ರಿಯಲ್ಲಿ ಗಡಿಯಾರ 12 ಭಾರಿಸಿದಂತೆ ಸಂವಿಧಾನ ಸಭೆಯ ಸದಸ್ಯರು ಶುಭ ಘಟನೆಯನ್ನು ಸಾರಲು ಪ್ರಾಚೀನ ಹಿಂದೂ ಪದ್ಧತಿಯಂತೆ ಶಂಖವನ್ನೂದಿದರು. ಅಧ್ಯಕ್ಷ ರಾಜೇಂದ್ರ ಪ್ರಸಾದರು ಪ್ರತಿಜ್ಞೆಯನ್ನು ಓದಿದರು. ಎಲ್ಲ ಸದಸ್ಯರು ಅದನ್ನು ಪುನರುಚ್ಚರಿಸಿದರು. ನಂತರ ರಾಜೇಂದ್ರ ಪ್ರಸಾದರು "ಭಾರತದ ಸಂವಿಧಾನ ಸಭೆ ಭಾರತ ಸರ್ಕಾರದ ಪರವಾಗಿ ಅಧಿಕಾರ ವಹಿಸಿಕೊಂಡಿದೆಯೆಂದು ವೈಸರಾಯಿಯವರಿಗೆ ಘೋಷಿಸಿದರು. ಭಾರತ ಸ್ವತಂತ್ರವಾಯಿತು. ಸ್ವತಂತ್ರ ಭಾರತದ ಜನತೆಗೆ ನೀಡಿದ ಸಂದೇಶದಲ್ಲಿ ಜವಹರಲಾಲ್ ನೆಹರೂರವರು 'ದೀರ್ಘ ಕಾಲೀನ ನಿದ್ರೆ, ಹೋರಾಟಗಳ ತರುವಾಯ ಭಾರತ ಮತ್ತೆ ಜಾಗ್ರತವಾಗಿ, ಶಕ್ತಿಯುತವಾಗಿ, ಸ್ವತಂತ್ರವಾಗಿ ಎದ್ದು ನಿಂತಿದೆ" ಎಂದು ಸಾರಿದರು. ಹೀಗೆ ನಾಯಕರು, ಭಾರತೀಯ ಸ್ವತಂತ್ರ ಭಾರತದ ಸಂತೋಷದ ಸವಿಯನ್ನುಣ್ಣುವಾಗ ಆ ಘಟನೆಯ ಸಾಧನೆಗೆ ಎಲ್ಲರಿಗಿಂತಲೂ ಹೆಚ್ಚು ಜವಾಬ್ದಾರರಾಗಿದ್ದ ಗಾಂಧೀಜಿಯವರು ಈ ಉತ್ಸವದಲ್ಲೂ ಪಾಲ್ಗೊಳ್ಳಲಿಲ್ಲ. ಗಾಂಧೀಜಿಯವರು ಸ್ವಾತಂತ್ರ್ಯ ದಿನವನ್ನು ಕೋಮುಗಲಭೆಯಲ್ಲಿ ನೊಂದಿದ್ದ ಕಲ್ಕತ್ತೆಯ ನವಖಾಲಿಯ ಸಂತ್ರಸ್ಥರ ಜೊತೆಯಲ್ಲಿ ಉಪವಾಸ ಮತ್ತು ನೂಲುವುದರ ಮೂಲಕ ಆಚರಿಸಿದರು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಬಿ. ಬಿ. ಸಿ. ಯ ಪ್ರತಿನಿಧಿಗಳು ಸ್ವಾತಂತ್ರ್ಯದ ಸಂದೇಶವನ್ನು ನೀಡಲು ಗಾಂಧೀಜಿಯವರನ್ನು ಕೋರಿದಾಗ "ಸಂದೇಶವೇ ಇಲ್ಲ, ತಾವು ಬರಿದಾಗಿರುವುದಾಗಿ ಹೇಳಿದರು.

ಭಾರತದ ಸಂಸ್ಥಾನಗಳ ಏಕೀಕರಣ : ಸರ್ದಾರ್ ವಲ್ಲಭಬಾಯಿ ಪಟೇಲ್

ಕ್ಯಾಬಿನೆಟ್ ಆಯೋಗದ ಯೋಜನೆಯ ಅಂಶವನ್ನು ಛೇಂಬರ್ ಆಫ್ ಪ್ರಿನ್ಸಸ್‌ನ ಸ್ಥಾಯೀ ಸಮಿತಿ 1947ರ ಜನವರಿ 26ರಂದು ಅಂಗೀಕರಿಸಿತು. ಆ ಅಂಶಗಳೆಂದರೆ "ಭಾರತದ ಸಂಘಕ್ಕೆ ರಾಜ್ಯಗಳ ಸೇರ್ಪಡೆಗೆ ಸಮಾಲೋಚನೆಯೊಂದೇ ಆಧಾರವಾಗಿರತಕ್ಕದ್ದು ಮತ್ತು ಅಂತಿಮ ನಿರ್ಧಾರ ಪ್ರತಿಯೊಂದು ರಾಜ್ಯಕ್ಕೆ ಸೇರಿರತಕ್ಕದ್ದು. ಬ್ರಿಟಿಷ್ ಪರಮಾಧಿಕಾರಕ್ಕೆ ಸಂಸ್ಥಾನಗಳು ಒಪ್ಪಿಸಿರುವ ಹಕ್ಕುಗಳೆಲ್ಲವು ರಾಜ್ಯಗಳಿಗೆ ಮತ್ತೆ ದೊರೆಯುವುವು. ರಾಜ್ಯದ ಶಾಸನಗಳು, ಪದ್ಧತಿಗಳು ಹಾಗೂ ಬಳಕೆಗಳಿಗನುಗುಣವಾಗಿ ಪ್ರತಿಯೊಂದು ರಾಜ್ಯದ ಸಂವಿಧಾನ ಅದರ ಪ್ರಾದೇಶಿಕ ವಿಕತೆ ಮತ್ತು ಆಳುತ್ತಿರುವ ಸಂತತಿಯ ಉತ್ತರಾಧಿಕಾರಗಳಲ್ಲಿ ಭಾರತ ಸಂಘ ಅಥವಾ ಅದರ ಯಾವುದೇ ಭಾಗ ಮಧ್ಯೆ ಪ್ರವೇಶಿಸುವಂತಿಲ್ಲ". ಈ ಅಂಶದ ಆಧಾರದ ಮೇಲೆ 1947 ಆಗಸ್ಟ್ 15ರ ನಂತರ ಭಾರತದ 600 ಚಿಕ್ಕ ದೊಡ್ಡ ದೇಶೀಯ ಸಂಸ್ಥಾನಗಳೆಲ್ಲವು ಸ್ವತಂತ್ರವಾಗಲಿದ್ದವು. ಈ ಸಂಸ್ಥಾನಗಳು ಭಾರತಕ್ಕಾಗಲಿ, ಪಾಕಿಸ್ತಾನ್ನಕಾಗಲಿ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಅವಕಾಶ ಅವರ ಮುಂದಿದ್ದವು.

ಭಾರತದ ವಿಭಜನೆ ಮತ್ತು ಸ್ವಾತಂತ್ರ್ಯದ ಪ್ರಕಟಣೆ ಹೊರಬಂದ ತರುವಾಯ ಹೈದ್ರಬಾದ್, ಜುನಾಘಡ್, ಕಾಶ್ಮೀರ, ತಿರುವಾಂಕೂರು, ಭೂಪಾಲ ಮುಂತಾದ ರಾಜ್ಯಗಳು ಸಂಯುಕ್ತ ಭಾರತ ಆಧಾರದ ಮೇಲೆ ಸೂಚಿಸಿದ್ದ ಹಿಂದಿನ ಸಮ್ಮತಿಯನ್ನು ತಿರಸ್ಕರಿಸಿ ಬದಲಾದ ಪರಿಸ್ಥಿತಿಯಲ್ಲಿ ಇವುಗಳು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಆಲೋಚಿಸಿದವು. ಹಾಗೂ ಒಂದು ಪರಮಾಧಿಕಾರ ಹೊಂದಿದ ರಾಜ್ಯ ಮತ್ತೊಂದು ರಾಜ್ಯದೊಡನೆ ಮಾಡಿಕೊಳ್ಳುವಂತೆ, ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಅವು ಸೂಚಿಸಿದವು. ಮುಸ್ಲಿಂಲೀಗ್ ಈ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು. 1947 ಜೂನ್ 15 ರಂದು ಸಭೆ ಸೇರಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು “ಭಾರತದಲ್ಲಿನ ಯಾವುದೇ ರಾಜ್ಯ ಸ್ವಾತಂತ್ರ್ಯ ಘೋಷಿಸುವ ಹಕ್ಕನ್ನು ಒಪ್ಪುವುದಿಲ್ಲವೆಂದೂ ಹಾಗೆ ಮಾಡಿ ಭಾರತದ ಇತರ ಭಾಗಗಳಿಂದ ಪ್ರತ್ಯೇಕವಾಗಿ ಉಳಿಯಲು ಅವಕಾಶ ನೀಡುವುದಿಲ್ಲವೆಂದೂ' ತೀರ್ಮಾನಿಸಿತು. ಗಾಂಧೀಜಿಯವರು ಇಂತಹ ಸಂಸ್ಥಾನಗಳ ಘೋಷಣೆಯು ಭಾರತದ ಲಕ್ಷಾಂತರ ಸ್ವತಂತ್ರ ಜನತೆಯ ವಿರುದ್ಧ ಯುದ್ಧ ಘೋಷಿಸಿದುದಕ್ಕೆ ಸಮನಾದುದು' ಎಂದು ಅಭಿಪ್ರಾಯಪಟ್ಟರು. ನೆಹರೂರವರು "ಯಾವುದೇ ಪರರಾಷ್ಟ್ರ ಇಂಥ ಯಾವುದೇ ಸ್ವಾತಂತ್ರ್ಯವನ್ನು ಯಾವ ರೀತಿಯಲ್ಲಿ ಅಂಗೀಕರಿಸಿದರೂ ಅದನ್ನು ಮಿತ್ರ ವಿರೋಧಿ ಕಾರ್ಯವೆಂದು ಪರಿಗಣಿಸಲಾಗುವುದೆಂದು ಘೋಷಿಸಿದರು. ದೇಶೀಯ ಸಂಸ್ಥಾನಗಳ ಹಾಗೂ ಕೇಂದ್ರ ಸರ್ಕಾರದ ನಡುವೆ ತಲೆದೋರುವ ಸಮಸ್ಯೆಗಳ ಬಗ್ಗೆ ವ್ಯವಹರಿಸಲು ಭಾರತ ಸರ್ಕಾರ ನೇಮಿಸಿದ “ಇಂಡಿಯನ್ ಸ್ಟೇಟ್ಸ್ ಡಿಪಾರ್ಟ್‌ ಮೆಂಟ್'ನ ಅಧಿಕಾರವನ್ನು ಸರ್ದಾರ್ ವಲ್ಲಭಬಾಯಿ ಪಟೇಲರು 1947ರ ಜುಲೈ 5 ರಂದು ವಹಿಸಿಕೊಂಡರು. ಪಟೇಲರು 1947ರ ಜುಲೈ 4 ರಂದು ದೇಶೀಯ ಸಂಸ್ಥಾನಗಳು ಒಕ್ಕೂಟದಲ್ಲಿ ಸೇರಬೇಕೆಂದು ವಿನಂತಿಸುವ ಕರೆಯೊಂದನ್ನು ಹೀಗೆ ಕೊಟ್ಟರು "ನಮ್ಮ ದೇಶವು ನಮ್ಮದೇ ಪರಂಪರಾಗತ ಸಂಸ್ಥೆಗಳನ್ನು ಹೊಂದಿರುವ, ನಮ್ಮ ಜನರ ಹೆಮ್ಮೆ ಪರಂಪರೆಗಳ ಪ್ರತೀಕ. ನಾವು ಕೆಲವರು ಅಂತಹ ಸಂಸ್ಥಾನಗಳಲ್ಲೂ, ಇತರರು ಬ್ರಿಟಿಷ್ ಭಾರತದಲ್ಲೂ ಜೀವಿಸುತ್ತಾ ಬಂದಿರುವುದು ಕೇವಲ ಒಂದು ಆಕಸ್ಮಿಕ. ನಮ್ಮ ದೇಶವನ್ನು ನವ ವೈಭವದತ್ತ ಕೊಂಡೊಯ್ಯಲು ನಾವೆಲ್ಲ ಒಟ್ಟಾಗಿ ನಿಲ್ಲಬೇಕಾದುದು ಅನಿವಾರ್ಯ. ಅಸಂಘಟಿತವಾಗುಳಿದಲ್ಲಿ ದೇಶಕ್ಕೆ ಹೊಸ ಹೊಸ ಆಪತ್ತುಗಳು ಬಂದಾವು. ಒಟ್ಟುಗೂಡದಿದ್ದರೆ ನಮ್ಮೆಲ್ಲರ ನಾಶ ನಿಶ್ಚಿತ. ಅರಾಜಕತೆ, ಗೊಂದಲ, ಗಲಭೆಗಳು ಕಟ್ಟಿಟ್ಟದ್ದೇ ಎಂಬುದನ್ನು ದೇಶೀಯ ಸಂಸ್ಥಾನಿಕ ಮಿತ್ರರಲ್ಲಿ ನಿವೇದಿಸಬಯಸುತ್ತೇನೆ". 1949ರ ಕೊನೆಯೊಳಗಾಗಿ ಹೈದ್ರಾಬಾದ್, ಕಾಶ್ಮೀರ, ಜುನಾಘಡದಂತಹ ರಾಜ್ಯಗಳನ್ನುಳಿದು ಇತರ ಎಲ್ಲ ಸಂಸ್ಥಾನಗಳು ಭಾರತಕ್ಕೆ ಸೇರಿದ್ದವು. ಕೆಲವು ರಾಜ್ಯಗಳು ಭಾರತದ ಏಕೀಕರಣಕ್ಕೆ ವಿರುದ್ಧವಾಗಿ ಸ್ವತಂತ್ರ ಪ್ರವೃತ್ತಿಯನ್ನು ಮತ್ತು ಹೊಸ ಪಾಕಿಸ್ತಾನ ಸೇರುವ ಸಂಚು ನಡೆಸಿದವು. ಅವುಗಳನ್ನು ವಿಫಲಗೊಳಿಸಿ ಭಾರತದ ಏಕೀಕರಣ ಸಾಧಿಸಿದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಕಾರ್ಯ ವೈಖರಿಯನ್ನು ಈ ಕೆಳಕಂಡಂತೆ ತಿಳಿಯಬಹುದು.

ಹೈದ್ರಾಬಾದ್ : ಇದು ಭಾರತದ ಅತ್ಯಂತ ದೊಡ್ಡ ಸಂಸ್ಥಾನವಾಗಿದ್ದು ಬಹುಸಂಖ್ಯಾತ ಹಿಂದೂ ಜನರನ್ನು ಮುಸ್ಲಿಂ

ನಿಜಾಮನೊಬ್ಬ ಆಳುತ್ತಿದ್ದದ್ದು ವೈಶಿಷ್ಟ್ಯವಾಗಿತ್ತು. 1947ರ ಜೂನ್ 11ರಂದು ಹೈದ್ರಬಾದ್ ಸಂಸ್ಥಾನವು ಸ್ವತಂತ್ರವಾಗುಳಿಯುವುದೆಂದು ಅಲ್ಲಿನ ನಿಜಾಮ ಘೋಷಿಸಿದನು. ಕೊನೆಗೆ ಸರ್ದಾರ್ ಪಟೇಲರ ಎಡೆಬಿಡದ ಕಾರ್ಯಗಳ ಫಲವಾಗಿ 1947ರ ನವೆಂಬರ್ 29 ರಂದು ಒಂದು ವರ್ಷದ ತಾಟಸ್ಥ ಒಪ್ಪಂದ ಮಾಡಿಕೊಂಡು ಆಗಸ್ಟ್ 15 ರ ಪೂರ್ವಸ್ಥಿತಿಯಂತಿರುವಂತೆ ಒಪ್ಪಿಕೊಂಡಿತು. ಆದರೆ ಭಾರತ ಸರ್ಕಾರದ ಶ್ವೇತಪತ್ರದಲ್ಲಿ ಒಂದು ರಾಷ್ಟ್ರದ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಸ್ವತಂತ್ರವಾಗಿರುವ ರಾಜ್ಯವೊಂದು ಹಿಂದೆಂದೂ ಕೇಳಿರದಂಥ ಪ್ರಸ್ತಾಪವಾಗಿದೆ" ಎಂದು ತಿಳಿಸಿತು. ಇಂತಹ ರಾಜಕೀಯ ಚಟುವಟಿಕೆಯ ಪರಿಸ್ಥಿತಿಯಲ್ಲಿ ಹೈದರಾಬಾದ್ ರಾಜ್ಯದಲ್ಲಿ ಮಜ್ಜಿಸ್ ಇತ್ತಿಹಾದ್-ಉಲ್-ಮುಸ್ಲಿಮಿನ್ ಹಾಗೂ ಸೈಯದ್ ಖಾಸಿಂ ರಜ್ಜಿಯವರ ನಾಯಕತ್ವದಲ್ಲಿ ರಜಾಕಾರರು ಭಾರತದ ವಿರುದ್ಧವಾಗಿ ಅದರಲ್ಲೂ ಹಿಂದೂಗಳ ವಿರುದ್ಧವಾಗಿ ಅಪಪ್ರಚಾರ ಮತ್ತು ದಾಂಧಲೆಗಳಲ್ಲಿ ತೊಡಗಿದರು. ಹೀಗೆ ರಜಾಕಾರರು ಹೈದ್ರಾಬಾದ್‌ನಲ್ಲಿ ಪ್ರಾರಂಭಿಸಿದ ಗಲಭೆಯನ್ನು ಮದ್ರಾಸ್, ಬೊಂಬಾಯಿ ಮಧ್ಯಪ್ರಾಂತ್ಯಗಳ ಗಡಿಭಾಗಕ್ಕೂ ಪ್ರಸರಿಸಿದರು. ಲಾರ್ಡ್‌ ಮೌಂಟ್ ಬ್ಯಾಟಿನ್ ಭಾರತ ಸರ್ಕಾರದ ಪರವಾಗಿ ಮಾಡಿದ ಸಲಹೆಯನ್ನು ಹೈದ್ರಾಬಾದ್ ಒಪ್ಪಿಕೊಳ್ಳಲಿಲ್ಲ. ಹೈದ್ರಾಬಾದ್ ಭಾರತದ ಡೊಮಿನಿಯನ್‌ಗೆ ಸೇರಿಕೊಳ್ಳುವುದರ ವಿರುದ್ಧವಾಗಿ ಕಾರ್ಯಪ್ರವೃತ್ತವಾಗಿದ್ದ ಶಕ್ತಿಗಳು ಅಧಿಕಗೊಂಡು ನಿಜಾಮನು ಹೊರದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿಕೊಳ್ಳಲು ಪ್ರಯತ್ನಪಟ್ಟನು ಹಾಗೂ ರಾಜ್ಯದ ಸೇನೆಯನ್ನು ಹೆಚ್ಚಿಸಲು ತೊಡಗಿದನು. ಇಷ್ಟೇ ಅಲ್ಲದೆ ಗಡಿ ಪ್ರದೇಶಗಳಲ್ಲಿ ಹೆಚ್ಚುತ್ತಿದ್ದ ರಜಾಕಾರರ ಹಿಂಸಾಚಾರಗಳು ಶಾಂತಿ ಮತ್ತು ಶಿಸ್ತು ಪಾಲನೆಗೆ ತೀವ್ರ, ತೊಂದರೆಗೀಡುಮಾಡಿದ್ದವು. ಕೊನೆಗೆ ಭಾರತ ಸರ್ಕಾರವು ಸೆಪ್ಟೆಂಬರ್ 13, 1948 ರಂದು ಹೈದ್ರಾಬಾದ್ ರಾಜ್ಯಕ್ಕೆ ಸೈನ್ಯ ನುಗ್ಗಿಸಿತು. ಭಾರತ ಸರ್ಕಾರವು ಇದು ಯುದ್ಧ ಕಾರ್ಯವಲ್ಲವೆಂದೂ ರಾಜ್ಯದಲ್ಲಿ ಶಾಂತಿ ಮತ್ತು ಶಿಸ್ತುಗಳನ್ನು ತಂದು ನೆರೆಯ ಭಾರತದ ಪ್ರದೇಶಗಳಲ್ಲಿ ರಕ್ಷಣೆಯ ಭಾವನೆಯುಂಟುಮಾಡಲು ಕೈಗೊಂಡಿರುವ ಪೊಲೀಸ್ ಕ್ರಮವೆಂದು ಸಾರಿತು. 'ಆಪರೇಷನ್ ಪೋಲೊ' ಎಂಬ ಹೈದ್ರಾಬಾದ್ ಕಾರ್ಯಾಚರಣೆ ಪಡೆಯ ಜನರಲ್ ಜೆ. 2. ಚೌಧುರಿಯವರ ಕೇವಲ 108 ಗಂಟೆಗಳಲ್ಲಿ ರಜಾಕಾರರ ಸಂಘಟನೆಯನ್ನು ಮುರಿದು ಖಾಸಿಂ ರಸ್ತೆಯವರನ್ನು ಬಂಧಿಸಿತು. 1948ರ ಸೆಪ್ಟೆಂಬರ್ ನೇತೃತ್ವದ ಭಾರತದ ಸೈನ್ಯವು 18ರ ಮದ್ಯಾಹ್ನ 4-30ರಲ್ಲಿ ಹೈದ್ರಾಬಾದ್ ರಾಜ್ಯದ ಪಡೆಗಳ ಸೇನಾನಿ ಮೇಜರ್ ಜನರಲ್ ಎಲ್. ಎಡೋಸ್ ನಿಜಾಮನ ಪರವಾಗಿ ಶರಣಾದನು. ಹೈದ್ರಾಬಾದ್‌ನ ಶಾಂತಿ ಮತ್ತು ಶಿಸ್ತು ವ್ಯವಸ್ಥೆಯನ್ನು ನೋಡಿಕೊಳ್ಳಲು ಮೇಜರ್ ಜನರಲ್ ಜೆ. ಎನ್. ಚೌಧುರಿಯವರಿಗೆ ವಹಿಸಲಾಯಿತು. ನಿಜಾಮನು ಭಾರತದ ವಿರುದ್ಧ ಭದ್ರತಾ ಮಂಡಳಿಗೆ ನೀಡಿದ್ದ ದೂರನ್ನು ಹಿಂತೆಗೆದುಕೊಂಡನು. ಹೈದ್ರಾಬಾದ್ 1950ರ ಜನವರಿ 26 ರಂದು ಭಾರತದ ಸಂಘವನ್ನು ಸೇರಿತು.

ಕಾಶ್ಮೀರ : ಭಾರತದ ತುತ್ತತುದಿಯಲ್ಲಿನ ಈ ರಾಜ್ಯ 1941ರ ಜನಗಣತಿಯ ಪ್ರಕಾರ ಶೇ. 77.11 ಭಾಗ ಮುಸ್ಲಿ ಮದು, ಶೇ. 20.12 ಹಿಂದೂಗಳು, ಶೇ. 2.77 ಭಾಗ ಸಿಖ್ ಮತ್ತು ಬೌದ್ಧರಿದ್ದಾರೆ. ಕಾಶ್ಮೀರದ ಪಶ್ಚಿಮ ಗರಿಯಲ್ಲಿ ಪಾಕಿಸ್ತಾನವಿದ್ದು ಅದು ಭೌಗೋಳಿಕ ಸಾಮಿಪ್ಯ ಹಾಗೂ ರಾಜ್ಯದಲ್ಲಿನ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯ ಆಧಾರಾದ ಮೇಲೆ ಕಾಶ್ಮೀರವು ತನಗೆ ಸೇರಬೇಕೆಂಬ ವಾದ ಹೊಂದಿತ್ತು. ಕಾಶ್ಮೀರದ ಪರಿಸ್ಥಿತಿಯು ಹೈದ್ರಾಬಾದ್‌ ವಿರುದ್ಧವಾಗಿತ್ತು. ಕಾಶ್ಮೀರದಲ್ಲಿ ಬಹುಸಂಖ್ಯಾತರು ಮುಸ್ಲಿಂ ಜನತೆ, ರಾಜ ಹರಿಸಿಂಗ್ ಹಿಂದೂ, ಕಾಶ್ಮೀರವು ಭಾರತ ಒಕ್ಕೂಟಕ್ಕೆ ಸೇರುವುದು ಸುಲಭದ ವಿಷಯವಾಗಿರಲಿಲ್ಲ. ಕಾಶ್ಮೀರದ ಪ್ರಧಾನಿ ರಾಮಚಂದ್ರ ಕಾಕ್ ದೆಹಲಿಯಲ್ಲಿ ಪಟೇಲರನ್ನು ಭೇಟಿ ಮಾಡಿದರು. ಮೌಂಟ್ ಬ್ಯಾಟನ್ನರು ಕಾಶ್ಮೀರಕ್ಕೆ ಭೇಟಿ ನೀಡಿ ಮಹಾರಾಜರೊಡನೆ ದೀರ್ಘ ಚರ್ಚೆ ನಡೆಸಿದ ಸಂದರ್ಭದಲ್ಲಿ 'ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದರೂ ಭಾರತವು ತಪ್ಪು ತಿಳಿಯುವುದಿಲ್ಲ. ಮತ್ತು ಈ ಬಗ್ಗೆ ಸರ್ದಾರ್ ಪಟೇಲರೇ ದೃಢ ಆಶ್ವಾಸನೆ ನೀಡಿದ್ದಾರೆ ಎಂಬುದಾಗಿ ತಿಳಿಸಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರುವಂತೆ ಮನವೊಲಿಸಲು ಪ್ರಯತ್ನಪಟ್ಟರು.

ಆದರೆ ಪಾಕಿಸ್ತಾನಿ ಸೈನ್ಯಾಧಿಕಾರಿ ಅಕ್ಟರ್‌ಖಾನ್‌ನ ನೇತೃತ್ವದಲ್ಲಿ 1947ರ ಅಕ್ಟೋಬರ್ 23 ರಂದು ಅನಿರೀಕ್ಷಿತವಾಗಿ ಗುಡ್ಡಗಾಡಿನ ಜನರಿಂದ ಕೂಡಿದ ಪಾಕಿಸ್ತಾನಿ ಸೈನ್ಯ ಕಾಶ್ಮೀರದ ಮೇಲೆ ದಾಳಿ ಇಟ್ಟಿತು. ಜೀಲಂ ಕಣಿವೆ ಮಾರ್ಗದ ಮೇಲುಭಾಗಕ್ಕೂ ದಾಳಿಕಾರರು ಮುನ್ನುಗ್ಗಿದ್ದರಿಂದ ಕಾಶ್ಮೀರ ಸರ್ಕಾರ ಭಾರತ ಸರ್ಕಾರದ ನೆರವು ಕೇಳಿತು. ಅಕ್ಟೋಬರ್ 26 ರಂದು ಕಾಶ್ಮೀರದ ಮಹಾರಾಜ ಹರಿಸಿಂಗ್ ವಿಧ್ಯುಕ್ತವಾಗಿ ಭಾರತದ ಸಂಘವನ್ನು ಸೇರಿದನು. ಈ ಕ್ರಮಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಸಭೆಯ ಮುಖಂಡ ಷೇಖ್ ಮಹಮದ್ ಅಬ್ದುಲ್ಲಾ ಒಪ್ಪಿಗೆ ನೀಡಿದನು. ಭಾರತದ ಸೈನ್ಯವು ವಿಮಾನದಲ್ಲಿ 1947ರ ಅಕ್ಟೋಬರ್ 27ರ ಪ್ರಾತಃಕಾಲ ಕಾಶ್ಮೀರವನ್ನು ತಲುಪಿ ಪಾಕಿಸ್ತಾನಿ ಬೆಂಬಲ ಪಡೆದ ಗುಡ್ಡಗಾಡು ಪಡೆಗಳನ್ನು ಸಂಪೂರ್ಣವಾಗಿ ಸೋಲಿಸಿ ಅಸಾಮಾನ್ಯ ಮೇಲೆಯನ್ನು ಸಾಧಿಸಿತು. ಭಾರತ ಸರ್ಕಾರವು ಕಾಶ್ಮೀರದ ಸೇರ್ಪಡೆಯನ್ನು ತಾತ್ಕಾಲಿಕ ಕ್ರಮವೆಂದೂ ಒಪ್ಪಿ ಜನಮತಗಣನೆಯ ಮೂಲಕ ಕಾಶ್ಮೀರದ ಭವಿಷ್ಯ ತೀರ್ಮಾನಿಸಲು ವಿಶ್ವಸಂಸ್ಥೆಗೆ ಒಪ್ಪಿಸಿತು, ಆದರೆ ಅಡ್ಮಿರಲ್ ನಿಮಿಟ್ಸ್ ಮತ್ತು ಸರ್ ಓವನ್ ಡಿಕ್ಷನ್‌ರವರ ನೇತೃತ್ವದ ವಿಶ್ವಸಂಸ್ಥೆಯ ಆಯೋಗವು ಯಾವುದೇ ಸೂಕ್ತ ತೀರ್ಮಾನ ಮಾಡಲಾಗಲಿಲ್ಲ. ಪಾಕಿಸ್ತಾನಿ ಧಾಳಿಕಾರರನ್ನು ಕಾಶ್ಮೀರದಿಂದ ಸಂಪೂರ್ಣವಾಗಿ ಹೊರಗಟ್ಟುವ ಮೊದಲೇ ನೆಹರೂರವರು ಯುದ್ಧ ನಿಲುಗಡೆಗೆ ಒಪ್ಪಿದ್ದರಿಂದ ಕಾಶ್ಮೀರದ /, ಭಾಗವು ಪಾಕಿಸ್ತಾನಿ ಆಕ್ರಮಣಕಾರರ ಹತೋಟಿಯಲ್ಲಿ ಉಳಿದು ಆಗಾಗ್ಗೆ ಭಾರತದ ಗಡಿ ದಾಳಿಯ ಕೇಂದ್ರವಾಗಿದೆ. 

ಕಾಶ್ಮೀರ : ಭಾರತದ ತುತ್ತತುದಿಯಲ್ಲಿನ ಈ ರಾಜ್ಯ 1941ರ ಜನಗಣತಿಯ ಪ್ರಕಾರ ಶೇ. 77.11 ಭಾಗ ಮುಸ್ಲಿಮರು, ಶೇ. 20.12 ಹಿಂದೂಗಳು, ಶೇ. 2.77 ಭಾಗ ಸಿಖ್ ಮತ್ತು ಭೌದ್ಧರಿದ್ದಾರೆ. ಕಾಶ್ಮೀರದ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನವಿದ್ದು ಅದು ಭೌಗೋಳಿಕ ಸಾಮಿಪ್ಯ ಹಾಗೂ ರಾಜ್ಯದಲ್ಲಿನ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯ ಆಧಾರಾದ ಮೇಲೆ ಕಾಶ್ಮೀರವು ತನಗೆ ಸೇರಬೇಕೆಂಬ ವಾದ ಹೊಂದಿತ್ತು. ಕಾಶ್ಮೀರದ ಪರಿಸ್ಥಿತಿಯು ಹೈದ್ರಾಬಾದ್‌ಗೆ ವಿರುದ್ಧವಾಗಿತ್ತು. ಕಾಶ್ಮೀರದಲ್ಲಿ ಬಹುಸಂಖ್ಯಾತರು ಮುಸ್ಲಿಂ ಜನತೆ, ರಾಜ ಹರಿಸಿಂಗ್ ಹಿಂದೂ, ಕಾಶ್ಮೀರವು ಭಾರತ ಒಕ್ಕೂಟಕ್ಕೆ ಸೇರುವುದು ಸುಲಭದ ವಿಷಯವಾಗಿರಲಿಲ್ಲ. ಕಾಶ್ಮೀರದ ಪ್ರಧಾನಿ ರಾಮಚಂದ್ರ ಕಾಕ್ ದೆಹಲಿಯಲ್ಲಿ ಪಟೇಲರನ್ನು ಭೇಟಿ ಮಾಡಿದರು. ಮೌಂಟ್ ಬ್ಯಾಟನ್ನರು ಕಾಶ್ಮೀರಕ್ಕೆ ಭೇಟಿ ನೀಡಿ ಮಹಾರಾಜರೊಡನೆ ದೀರ್ಘ ಚರ್ಚೆ ನಡೆಸಿದ ಸಂದರ್ಭದಲ್ಲಿ 'ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದರೂ ಭಾರತವು ತಪ್ಪು ತಿಳಿಯುವುದಿಲ್ಲ ಮತ್ತು ಈ ಬಗ್ಗೆ ಸರ್ದಾ‌ರ್ ಪಟೇಲರೇ ದೃಢ ಆಶ್ವಾಸನೆ ನೀಡಿದ್ದಾರೆ" ಎಂಬುದಾಗಿ ತಿಳಿಸಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರುವಂತೆ ಮನವೊಲಿಸಲು ಪ್ರಯತ್ನಪಟ್ಟರು.

ಆದರೆ ಪಾಕಿಸ್ತಾನಿ ಸೈನ್ಯಾಧಿಕಾರಿ ಅಕ್ಟರ್‌ಖಾನ್‌ನ ನೇತೃತ್ವದಲ್ಲಿ 1947ರ ಅಕ್ಟೋಬರ್ 23 ರಂದು ಅನಿರೀಕ್ಷಿತವಾಗಿ ಗುಡ್ಡಗಾಡಿನ ಜನರಿಂದ ಕೂಡಿದ ಪಾಕಿಸ್ತಾನಿ ಸೈನ್ಯ ಕಾಶ್ಮೀರದ ಮೇಲೆ ದಾಳಿ ಇಟ್ಟಿತು. ಜೀಲಂ ಕಣಿವೆ ಮಾರ್ಗದ ಮೇಲುಭಾಗಕ್ಕೂ ದಾಳಿಕಾರರು ಮುನ್ನುಗ್ಗಿದ್ದರಿಂದ ಕಾಶ್ಮೀರ ಸರ್ಕಾರ ಭಾರತ ಸರ್ಕಾರದ ನೆರವು ಕೇಳಿತು. ಅಕ್ಟೋಬರ್ 26 ರಂದು ಕಾಶ್ಮೀರದ ಮಹಾರಾಜ ಹರಿಸಿಂಗ್ ವಿಧ್ಯುಕ್ತವಾಗಿ ಭಾರತದ ಸಂಘವನ್ನು ಸೇರಿದನು. ಈ ಕ್ರಮಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಸಭೆಯ ಮುಖಂಡ ಷೇಖ್ ಮಹಮದ್ ಅಬ್ದುಲ್ಲಾ ಒಪ್ಪಿಗೆ ನೀಡಿದನು. ಭಾರತದ ಸೈನ್ಯವು ವಿಮಾನದಲ್ಲಿ 1947ರ ಅಕ್ಟೋಬರ್ 27ರ ಪ್ರಾತಃಕಾಲ ಕಾಶ್ಮೀರವನ್ನು ತಲುಪಿ ಪಾಕಿಸ್ತಾನಿ ಬೆಂಬಲ ಪಡೆದ ಗುಡ್ಡಗಾಡು ಪಡೆಗಳನ್ನು ಸಂಪೂರ್ಣವಾಗಿ ಸೋಲಿಸಿ ಅಸಾಮಾನ್ಯ ಮೇಲ್ವೆಯನ್ನು ಸಾಧಿಸಿತು. ಭಾರತ ಸರ್ಕಾರವು ಕಾಶ್ಮೀರದ ಸೇರ್ಪಡೆಯನ್ನು ತಾತ್ಕಾಲಿಕ ಕ್ರಮವೆಂದೂ ಒಪ್ಪಿ ಜನಮತಗಣನೆಯ ಮೂಲಕ ಕಾಶ್ಮೀರದ ಭವಿಷ್ಯ ತೀರ್ಮಾನಿಸಲು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ ಅಡ್ಮಿರಲ್ ನಿಮಿಟ್ಸ್ ಮತ್ತು ಸರ್ ಓವನ್ ಡಿಕ್ಸನ್‌ರವರ ನೇತೃತ್ವದ ವಿಶ್ವಸಂಸ್ಥೆಯ ಆಯೋಗವು ಯಾವುದೇ ಸೂಕ್ತ ತೀರ್ಮಾನ ಮಾಡಲಾಗಲಿಲ್ಲ. ಪಾಕಿಸ್ತಾನಿ ಧಾಳಿಕಾರರನ್ನು ಕಾಶ್ಮೀರದಿಂದ ಸಂಪೂರ್ಣವಾಗಿ ಹೊರಗಟ್ಟುವ ಮೊದಲೇ ನೆಹರೂರವರು ಯುದ್ಧ ನಿಲುಗಡೆಗೆ ಒಪ್ಪಿದ್ದರಿಂದ ಕಾಶ್ಮೀರದ / ಭಾಗವು ಪಾಕಿಸ್ತಾನಿ ಆಕ್ರಮಣಕಾರರ ಹತೋಟಿಯಲ್ಲಿ ಉಳಿದು ಆಗಾಗ್ಗೆ ಭಾರತದ ಗಡಿ ದಾಳಿಯ ಕೇಂದ್ರವಾಗಿದೆ. 1954ರ ಫೆಬ್ರವರಿಯಲ್ಲಿ ಭಾರತಕ್ಕೆ ಕಾಶ್ಮೀರದ ಸೇರ್ಪಡೆಯನ್ನು ಸಂವಿಧಾನ ಸಭೆ ಸ್ಥಿರೀಕರಿಸಿತು. 19560 ನವಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಭಾರತದ ಸಂಘದ ಒಂದು ಭಾಗವಾಗಿರುವಂತಹ ಸಂವಿಧಾನವನ್ನು ಅಂಗೀಕರಿಸಿತು.

ಜುನಾಘಡ್ : ಹೈದ್ರಾಬಾದ್ ಹಾಗೂ ಕಾಶ್ಮೀರ ಸಮಸ್ಯೆಗಳ ಹಾಗೆ ಇನ್ನೂ ಕೆಲವು ಸಂಸ್ಥಾನಗಳು ಪಾಕಿಸ್ತಾನ ಸೇರುವ ಅಥವಾ ಸ್ವತಂತ್ರವಾಗುಳಿಯುವ ಪ್ರಯತ್ನಕ್ಕೆ ಕೈಹಾಕಿದವು ಅಂತಹ ಸಂಸ್ಥಾನವೆಂದರೆ ಗುಜರಾತ್ ಪ್ರಾಂತ್ಯದ ಜುನಾಘಡ್. ಈ ರಾಜ್ಯವು ಒಂದೆಡೆಗೆ ಅರಬ್ಬಿ ಸಮುದ್ರ ಉಳಿದ ಎರಡೂ ಕಡೆಗೆ ಭಾರತ ಸಂಘದ ರಾಜ್ಯಗಳಿದ್ದವು. ಹೀಗಾಗಿ ಜುನಾಘಡ್ ಮತ್ತು ಪಾಕಿಸ್ತಾನಕ್ಕೆ ಭೂ ಸಂಪರ್ಕವಿರಲಿಲ್ಲ. ಆದರೂ ಮುಸ್ಲಿಂ ನವಾಬನು ಪಾಕಿಸ್ತಾನಕ್ಕೆ ಸೇರಲು ತೀರ್ಮಾನಿಸಿದನು. ನವಾಬನು ಅಕ್ಕಪಕ್ಕದ ಚಿಕ್ಕಪುಟ್ಟ ರಾಜ್ಯಗಳು ಜುನಾಘಡ್‌ ಗೆ ಸೇರಿದವೆಂದು ಅವುಗಳ ಮೇಲೆ ಸೈನಿಕ ಆಕ್ರಮಣ ಮಾಡಿದ. ಇಂತಹ ಸಂದರ್ಭವನ್ನು ಸೈನಿಕ ಶಕ್ತಿಯ ಮೂಲಕವೇ ಎದುರಿಸಬೇಕೆಂಬುದು ಸರ್ದಾರ್ ಪಟೇಲರ ಅಭಿಪ್ರಾಯವಾಗಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಪಳೆಯುಳಿಕೆಯಾಗಿ ಉಳಿದಿದ್ದ ಮೌಂಟ್ ಬ್ಯಾಟನ್‌ರು ಭಾರತದ ಸೈನಿಕ ಕ್ರಮವು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಕಾರಣವಾಗುದೆಂದೂ, ಆದ್ದರಿಂದ ಜುನಾಘಡ್ ಪ್ರಶ್ನೆಯನ್ನು ವಿಶ್ವಸಂಸ್ಥೆಯ ಮುಂದೆ ಕೊಂಡೊಯ್ಯಬೇಕೆಂದು ಸೂಚಿಸಿದರು. ಈ ಸಲಹೆಯನ್ನು ಒಪ್ಪಿಕೊಂಡಿದ್ದರೆ ಕಾಶ್ಮೀರ ಸಮಸ್ಯೆಯಂತೆ ಬಗೆಹರಿಸಲಾರದಂತಹ ಸಮಸ್ಯೆಯಾಗಿ ಜುನಾಘಡ್ ಉಳಿಯುತ್ತಿತ್ತು. ಅದೇ ಸಮಯಕ್ಕೆ ಜುನಾಘಡ್ ರಾಜ್ಯದ ಜನ ನವಾಬನ ವಿರುದ್ಧ ದಂಗೆ ಎದ್ದರು. ಕೂಡಲೇ ಭಾರತ ಸೈನ್ಯವು ಜುನಾಘಡ್ ಪ್ರವೇಶಿಸಿ ಅಲ್ಲಿನ ಆಡಳಿತವನ್ನು ವಶಪಡಿಸಿಕೊಂಡಿತು. ಜುನಾಘಡ್ ನವಾಬನು ಪಾಕಿಸ್ತಾನಕ್ಕೆ ಎಷ್ಟು ತರಾತುರಿಯಲ್ಲಿ ಪರಾರಿಯಾದನೆಂದರೆ ತನ್ನ ಬೇಗಂ ಮತ್ತು ಚಿಕ್ಕ ಮಗುವನ್ನು ಬಿಟ್ಟು ಆಭರಣಗಳು ಮತ್ತು ಖಜಾನೆಯನ್ನು ಮರೆಯದೆ ತೆಗೆದುಕೊಂಡು ಹೋಗಿದ್ದ.

ಭೂಪಾಲ್ ಯೋಜನೆ : ಭೂಪಾಲದ ನವಾಬನು ಛೇಂಬರ್ ಆಫ್ ಪ್ರಿನ್ಸ್‌ಸ್‌ನ ಮುಖ್ಯಸ್ಥನಾಗಿದ್ದು ಭಾರತದ

ಸ್ವಾತಂತ್ರ್ಯ ಘೋಷಣೆಯ ನಂತರ ಸ್ವತಂತ್ರ ರಾಜ್ಯಗಳ ಒಕ್ಕೂಟದ "ಭೂಪಾಲ್ ಯೋಜನೆ"ಯನ್ನು ಸಿದ್ಧಗೊಳಿಸಿದನು. ಇಂತಹ ಮೂರನೇ ಶಕ್ತಿಯ ಇರುವಿಕೆಯನ್ನು ಬ್ರಿಟಿಷ್ ಹಿತಾಸಕ್ತಿಗಳು ಮತ್ತು ಪಾಕಿಸ್ತಾನಿಗಳು ಬೆಂಬಲಿಸಿದವು. ಆದರೆ ಉದಯಪುರದ ಮಹಾರಾಣಾ ಭೂಪಾಲಸಿಂಗರ ದೇಶಭಕ್ತಿ ಒಲುಮೆಯು ಭೂಪಾಲ್ ನವಾಬನ 'ಭೂಪಾಲ್ ಯೋಜನೆಯನ್ನು ನಾಶಗೊಳಿಸಿತು. ಹೀಗೆ ಹಿಂದಿನ ಪ್ರಖ್ಯಾತ ರಾಣಾಪ್ರತಾಪ ಸಿಂಗ್‌ ವಂಶಸ್ಥರಾದ ಉದಯಪುರದ ಮಹಾರಾಜರು ಭೂಪಾಲ್ ಯೋಜನೆಯನ್ನು ತಿರಸ್ಕರಿಸುತ್ತಾ “ನನ್ನ ಪೂರ್ವಜರೇ ನನಗೆ ಸದಾ ಸರ್ವದಾ ಮಾರ್ಗದರ್ಶಿಗಳು, ಅವರು ವಿದೇಶಿ ರಾಜನ ಹೊಗಳು ಭಟ್ಟರಾಗಿದ್ದರೆ ಅವರು ಇಂದಿನ ಹೈದ್ರಾಬಾದಿನಷ್ಟು ದೊಡ್ಡ ರಾಜ್ಯದ ಒಡೆಯರಾಗಿರುತ್ತಿದ್ದರು, ಅವರು ಹಾಗೆ ಮಾಡಲಿಲ್ಲ. ನಾನು ಅವರಂತೆಯೇ, ನಾನು ಭಾರತಕ್ಕೆ ಸೇರುವವ' ಎಂದು ಅಭಿಪ್ರಾಯಪಟ್ಟರು.

ತಿರುವಾಂಕೂರು : ತಿರುವಾಂಕೂರು ಸಹ ಸ್ವತಂತ್ರ ರಾಜ್ಯವಾಗಿ ಉಳಿಯಲು ತಿರುವಾಂಕೂರಿನ ಮಹಾರಾಜನಿಗೆ

ಅಲ್ಲಿನ ಪ್ರಧಾನಿ ಸಿ. ಪಿ. ರಾಮಸ್ವಾಮಿ ಅಯ್ಯರ್ ಸಲಹೆ ನೀಡಿ ಅದೇ ರೀತಿ ಘೋಷಿಸಿದರು. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಘೋಷಣೆಯ ವಿರುದ್ಧ ಹೋರಾಟ ನಡೆಸಿತು. ಈ ಹೋರಾಟವು ಪುನ್ನಪ್ರ-ವಯಲಾರ್ ಹೋರಾಟವೆಂದು ಹೆಸರಾಗಿದೆ. ದಿವಾನ್ ರಾಮಸ್ವಾಮಿ ಅಯ್ಯರ್ ಯೋಜನೆಯೊಂದನ್ನು ಸಿದ್ಧಪಡಿಸಿದರು. ಅದರ ಪ್ರಕಾರ ವಯಸ್ಕ ಮತದಾನದ ಮೂಲಕ ಚುನಾಯಿತವಾದ ಶಾಸನಸಭೆ ಇದ್ದು ಆಡಳಿತಯಂತ್ರ ಮಾತ್ರ ಮಹಾರಾಜನಿಂದ ನೇಮಿತನಾದ ದಿವಾನ್ ಕೈಲಿರುವಂತಹ ಈ ಯೋಜನೆಯನ್ನು ಅಮೇರಿಕನ್ ಮಾಡಲ್ ಎಂದು ಕರೆದರು. ಆದರೆ ರಾಷ್ಟ್ರೀಯ ಚಳುವಳಿಗಾರರು ಉಗ್ರ ಹೋರಾಟ ಮಾಡಿ ಭಾರತದ ಐಕ್ಯತೆಯ ವಿರೋಧಿಯಾಗಿದ್ದ ರಾಮಸ್ವಾಮಿ ಅಯ್ಯರ್‌ರನ್ನು ಚೂರಿಯಿಂದ ಗಾಯ ಗೊಳಿಸಿದರು. ಗಾಯಗೊಂಡು ಆಸ್ಪತ್ರೆ ಸೇರಿದ ದಿವಾನ್‌ರ ಅನುಪಸ್ಥಿತಿಯಲ್ಲಿ ಪರಿಸ್ಥಿತಿಯನ್ನರಿತು ಮಹಾರಾಜನು ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪಿದನು. ಈ ತಿರುವಾಂಕೂರಿನ ಜನಾಂದೋಲನಕ್ಕೆ ಅಪರೋಕ್ಷವಾಗಿ ಪಟೇಲರೇ ನೆರವು ನೀಡಿದ್ದರು.

ಹೀಗೆ “ಚರಿತ್ರಾರ್ಹವಾದ ಭಾರತದ ಸಂಸ್ಥಾನಗಳ ಏಕೀಕರಣ ಕಾರ್ಯವನ್ನು ಸಾಧಿಸಿದ ಮಹಾಶಿಲ್ಪಿಯೆಂದರೆ ಸರ್ದಾರ್ ಪಟೇಲರೇ" ಎನ್ನುವ ಅಭಿಪ್ರಾಯಕ್ಕೆ ಭಿನ್ನಾಭಿಪ್ರಾಯಗಳೇ ಇಲ್ಲ. ಪಟೇಲರು ಇಂಡಿಯನ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್‌ನ ಮುಖ್ಯಸ್ಥರಾಗಿ ವಿ. ಪಿ. ಮೆನನ್‌ ಸಹಕಾರದಿಂದ ಬ್ರಿಟಿಷ್ ಮತ್ತು ಮುಸ್ಲಿಂಲೀಗ್‌ ಕುಟಿಲೋಪಾಯಗಳನ್ನು ಬೇಧಿಸಿ, ಹರಿದು ಹಂಚಿಹೊಗಲಿದ್ದ ಭಾರತವನ್ನು ಅಖಂಡ ಭಾರತವಾಗಿ ರೂಪಿಸಿದ ಕಾರ್ಯವೈಖರಿಯನ್ನು ಮೆಚ್ಚಲೇಬೇಕು.

logoblog

Thanks for reading ಸ್ವತಂತ್ರ ಭಾರತದ ಉದಯ: ಇತಿಹಾಸ ನೋಟ್ಸ್

Previous
« Prev Post