Monday, November 10, 2025

KARTET: ಟಿಇಟಿ ಕಡ್ಡಾಯದಿಂದ ಶಿಕ್ಷಕರಿಗೆ ರಕ್ಷಣೆ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ನಿಲುವು

  ISARESOURCEINFO       Monday, November 10, 2025
KARTET: ಟಿಇಟಿ ಕಡ್ಡಾಯದಿಂದ ಶಿಕ್ಷಕರಿಗೆ ರಕ್ಷಣೆ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ನಿಲುವು..

ಟಿಇಟಿ ಕಡ್ಡಾಯದಿಂದ ಶಿಕ್ಷಕರನ್ನು ರಕ್ಷಿಸಲು ಸುಪ್ರೀಂಕೋರ್‌ಗೆ ರಾಜ್ಯ ಸರ್ಕಾರ, 1ಲಕ್ಷ ಶಿಕ್ಷಕರ ಸೇವಾಭದ್ರತೆಗೆ ಸರಕಾರ ನಿರ್ಧಾರ.

ರಾಜ್ಯದ 1 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣ ಕಡ್ಡಾಯ ನಿಯಮದಿಂದ ರಕ್ಷಣೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಸುಪ್ರಿಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾ ಗಿದೆ. ಇದರಿಂದ 2 ದಶಕಗಳಿಂದ ಸೇವೆಯಲ್ಲಿರುವ ಶಿಕ್ಷಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ಒಂದು ಬಾರಿ ವಿನಾಯ್ತಿಗೆ ಅರ್ಜಿ:

ಟಿಇಟಿ ಕಡ್ಡಾಯ ತೀರ್ಪಿನ ಸಂಬಂಧ ಕಾನೂನು ಇಲಾಖೆ ಮೂರು ದಿನಗಳ ಹಿಂದಷ್ಟೇ ಶಿಕ್ಷಣ ಇಲಾಖೆಗೆ ಅಭಿಪ್ರಾಯವನ್ನು ಸಲ್ಲಿಸಿದೆ. ಶಿಕ್ಷಣ ಸಚಿವರ ನಿರ್ದೇಶನ ಪಡೆದು ಶಿಕ್ಷಕರಿಗೆ ಒಂದು ಬಾರಿ ವಿನಾಯ್ತಿ ನೀಡುವ ಸಲುವಾಗಿ ಸುಪ್ರಿಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು. ಇದರಿಂದ ಲಕ್ಷಾಂತರ ಶಿಕ್ಷಕರಿಗೆ ಅನುಕೂಲವಾಗುತ್ತದೆ.

* ವಿ.ರಶ್ಮಿ ಮಹೇಶ್,

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 23ರ ಅನುಸಾರ 1ರಿಂದ 8ನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಶಿಕ್ಷಕರು ೬ ಟಿಇಟಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು ಹಾಗೂ ಈ ಅರ್ಹತೆ ಹೊಂದಿದೇ ಇರುವ ಹಾಲಿ ಸೇವೆಯಲ್ಲಿರುವ ಶಿಕ್ಷಕರು ಮುಂದಿನ 2 ವರ್ಷಗಳ ಒಳಗಾಗಿ ಟಿಇಟಿ ಉತ್ತೀರ್ಣರಾಗುವುದು ಕಡ್ಡಾಯ ಎಂದು ಸುಪ್ರಿಂಕೋರ್ಟ್ ಸೆಪ್ಟೆಂಬರ್ 1ರಂದು ನೀಡಿರುವ ಐತಿಹಾಸಿಕ ತೀರ್ಪು ರಾಜ್ಯದ ಸರಿಸುಮಾರು 1 ಲಕ್ಷ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಸರಕಾರಿ, ಅನುದಾನಿತ ಹಾಗೂ ಅನುದಾನಿತ ಶಾಲೆಗಳಲ್ಲಿ ಟಿಇಟಿ ವ್ಯವಸ್ಥೆ ಜಾರಿಗೆ ಬರುವ ಮೊದಲೇ ನೇಮಕಾತಿ ಹೊಂದಿರುವ 1 ಲಕ್ಷ ಶಿಕ್ಷಕರನ್ನು ಸುಪ್ರಿಂಕೋರ್ಟ್ ಆದೇಶದಿಂದ ಪಾರು ಮಾಡಲು ರಾಜ್ಯ ಸರಕಾರ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದೆ. ಕೆಸಿಎಸ್‌ಆರ್ ನಿಯಮಗಳಡಿ ನೇಮಕಗೊಂಡ ನೌಕರರು ನೇಮಕಾತಿ ವೇಳೆ ವಿಧಿಸಲಾದ ಷರತ್ತುಗಳನ್ನು ಪೂರ್ಣಗೊಳಿಸಿದ್ದು, ಟಿಇಟಿ ವ್ಯವಸ್ಥೆ ಜಾರಿಗೆ ಮೊದಲೇ ಸೇವೆಗೆ ಸೇರ್ಪಡೆಗೊಂಡಿದ್ದಾರೆ. ಅದರ ನಂತರ ಜಾರಿಗೆ ಬಂದ ನಿಯಮಗಳಿಂದ ಹಳೆಯ ಶಿಕ್ಷಕರಿಗೆ ಒಂದು ಬಾರಿಗೆ ರಕ್ಷಣೆ ನೀಡಬೇಕೆಂದು ಸರಕಾರ ಪುನರ್ ಪರಿಶೀಲನಾ ಅರ್ಜಿಯಲ್ಲಿ ಸರಕಾರ ಮನವಿ ಮಾಡಲಿದೆ.

ಸಂಪುಟದಲ್ಲೂ ಸುದೀರ್ಘ ಚರ್ಚೆ:

ರಾಜ್ಯದ 1 ಲಕ್ಷ ಶಿಕ್ಷಕರಿಗೆ ಸುಪ್ರಿಂಕೋರ್ಟ್ ಆದೇಶದಿಂದ ರಕ್ಷಣೆ ನೀಡಲು ಮಸೂದೆ ಮಂಡನೆ ಮೂಲಕ ಕಾಯ್ದೆ ರಚನೆಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು. ಆದರೆ ಭವಿಷ್ಯದಲ್ಲಿ ಕಾನೂನು ತೊಡಕು ಎದುರಾಗಬಹುದು.

ಎಂಬ ಆತಂಕವನ್ನು ಕೆಲವು ಸಚಿವರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾನೂನು ಇಲಾಖೆಗೆ ಈ ಸಂಬಂಧ ಅಭಿಪ್ರಾಯ ನೀಡುವಂತೆ ಸೂಚಿಸಲಾಗಿತ್ತು. ಇದೀಗ ಕಾನೂನು ಇಲಾಖೆ ಸಮಗ್ರ ಅಧ್ಯಯನ ನಡೆಸಿ, ಶಿಕ್ಷಣ ಇಲಾಖೆಗೆ ಅಭಿಪ್ರಾಯ ರವಾನಿಸಿದೆ. ದೇಶದ 10ಕ್ಕೂ ರಾಜ್ಯಗಳು ಟಿಇಟಿ ಕಡ್ಡಾಯ ಸಮಸ್ಯೆಯಿಂದ ಪಾರಾಗಲು ಸುಪ್ರಿಂಕೋರ್ಟ್‌ ವಿಭಾಗೀಯ ಪೀಠಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಮುಂದಾಗಿರುವ ಪರಿಣಾಮ ಕರ್ನಾಟಕವೂ ಕಾನೂನು ಹೋರಾಟ ನಡೆಸುವುದು ವಿಹಿತ ಎಂಬ ಅಭಿಪ್ರಾಯವನ್ನು ಕಾನೂನು ಇಲಾಖೆ ನೀಡಿದೆ.

ಈ ಹಿನ್ನೆಲೆಯಲ್ಲಿ ಕಡತವು ಸದ್ಯ ಶಿಕ್ಷಣ ಇಲಾಖೆಯಲ್ಲಿದ್ದು, ಮುಂದಿನ ವಾರ ಸುಪ್ರಿಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಸಿದ್ಧತೆ ಆರಂಭವಾಗಿದೆ.

ಶಿಕ್ಷಕರ ರಕ್ಷಣೆಗೆ ದಿಲ್ಲಿಯಲ್ಲಿ ಹೋರಾಟ:

ರಾಜ್ಯ ಸರಕಾರ 1 ಲಕ್ಷ ಶಿಕ್ಷಕರ ರಕ್ಷಣೆಗೆ ಸರಕಾರವೇ ಕಾನೂನು ಹೋರಾಟ ನಡೆಸಬೇಕು, ಶಿಕ್ಷಕರ ಸಂಘಟನೆಗಳು ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಿದ್ದು, ದೆಹಲಿಯಲ್ಲಿ ಹೋರಾಟ ನಡೆಸುತ್ತೇವೆ. ಅರ್ಧ ಆಯಸ್ಸು ಸೇವೆ ಸಲ್ಲಿಸಿದ ನಂತರ ಮತ್ತೆ ಪರೀಕ್ಷೆ ಬರೆಯಬೇಕೆಂಬುದು ನೈಸರ್ಗಿಕ ನ್ಯಾಯವಲ್ಲ.

▪️ಚಂದ್ರಶೇಖರ್ ನುಗ್ಗಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

logoblog

Thanks for reading KARTET: ಟಿಇಟಿ ಕಡ್ಡಾಯದಿಂದ ಶಿಕ್ಷಕರಿಗೆ ರಕ್ಷಣೆ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ನಿಲುವು

Previous
« Prev Post