ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ಗೆ ಸಂಬಂಧಿಸಿದಂತೆ ದಿನಾಂಕ:22.08.2025 ರಂದು ವಿವರವಾದ ಅಧಿಸೂಚನೆ ಹೊರಡಿಸಿ ದಿನಾಂಕ:24.09.2025ರ ವರೆಗೆ ಅರ್ಜಿ ಸಲ್ಲಿಸಲು ಹಾಗೂ 25.09.2025ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿತ್ತು.
ಆದರೆ, ಅರ್ಜಿ ಸಲ್ಲಿಸಿದ ಕೆಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ಅರ್ಜಿ ತಿದ್ದುಪಡಿ (Editing) ಮಾಡಲು ಅವಕಾಶ ನೀಡುವಂತೆ ಪ್ರಾಧಿಕಾರವನ್ನು ಕೋರಿರುತ್ತಾರೆ. ಅದರಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನಿಗದಿತ ಶುಲ್ಕ ಪಾವತಿಸಿದ ಅಭ್ಯರ್ಥಿಗಳಿಗೆ ಅನ್‌ಲೈನ್ ಅರ್ಜಿಯಲ್ಲಿನ ವಿವರಗಳನ್ನು ತಿದ್ದುಪಡಿ ಮಾಡಲು (ಆವಶ್ಯಕತೆಯಿದ್ದಲ್ಲಿ) 2:03.10.2025 ರಿಂದ ದಿನಾಂಕ:06.10.2025ರ ಸಂಜೆ 05.30 ಗಂಟೆಯವರೆಗೆ ಅವಕಾಶ ನೀಡಲಾಗಿರುತ್ತದೆ. ಇದು ಅಂತಿಮ ಅವಕಾಶವಾಗಿದ್ದು, ನಂತರದಲ್ಲಿ ತಿದ್ದುಪಡಿ ಕೋರಿ ಬರುವ ಯಾವುದೇ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ತಿಳಿಸಿದೆ.