ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ, ಯೋಜನೆಯ ಸಾಲುದಾರ ಕುಟುಂಬದ ಸ್ವ-ಸಹಾಯ ಹಾಗೂ ಪ್ರಗತಿಬಂಧು ಸಂಘಗಳ, ಅರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಸುಜ್ಞಾನನಿಧಿ ಕಾರ್ಯಕ್ರಮದಡಿಯಲ್ಲಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಎರಡರಿಂದ ಐದು ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಸಂಸ್ಥೆಯು ನಿಗದಿಪಡಿಸಿದ ಆಯ್ದ ಕೋರ್ಸ್ ಗೆ ಅನುಗುಣವಾಗಿ ರೂಪಾಯಿ 400 ರಿಂದ ರೂಪಾಯಿ 1000 ವರೆಗೆ ಮಾಸಿಕ ಶಿಷ್ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ. ಕರ್ನಾಟಕ ರಾಜ್ಯಾದ್ಯಂತ ಇದುವರೆಗೂ 1 ಲಕ್ಷ 25 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ರೂ 152.75 ಕೋಟಿ ಶಿಷ್ಯವೇತನವನ್ನು ಇದುವರೆಗೆ ವಿತರಿಸಲಾಗಿದೆ.ಇದೀಗ 2025 - 2026ರ ಸಾಲಿನ ಶಿಷ್ಯವೇತನಕ್ಕೆ ಅರ್ಜಿಯನ್ನು ವಿದ್ಯಾರ್ಥಿಗಳಿಂದ ಆಹ್ವಾನಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
▪️ವಿದ್ಯಾರ್ಥಿಗಳ ತಂದೆ/ತಾಯಿ ಯೋಜನೆಯ ಸಂಘದಲ್ಲಿರಬೇಕು.
▪️30.06.2023ರ ಮೊದಲು ಪ್ರಾರಂಭಿಸಲಾದ ಕ್ರಿಯಾಶೀಲ ಸಂಘದಲ್ಲಿದ್ದು ಸಂಘ 'ಎಸ್', 'ಎ ಪ್ಲಸ್', 'ಎ', 'ಬಿ' ಶ್ರೇಣಿಯಲ್ಲಿರಬೇಕು.
▪️ಬಿ.ಪಿ.ಎಲ್. ಪಡಿತರ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
▪️01.04.2025ರ ನಂತರ ಕಾಲೇಜಿಗೆ ದಾಖಲಾದ ಮೊದಲ ಸೆಮಿಸ್ಟರ್ನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. (ಈ ಬಗ್ಗೆ ಕಾಲೇಜು ದೃಢೀಕರಣದಲ್ಲಿ ದಾಖಲಾತಿಯ ಬಗ್ಗೆ ಸರಿಯಾದ ಮಾಹಿತಿಯ ವಿವರಗಳನ್ನು ತುಂಬಿ ಕಾಲೇಜು ಮುಖ್ಯಸ್ಥರ ಸಹಿ ಮತ್ತು ಸ್ಪಷ್ಟವಾದ ಮೊಹರನ್ನು ಹಾಕಿಸಬೇಕು.)
▪️ಮೊದಲನೇ ವ್ಯಾಸಂಗ ವರ್ಷದ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸದೇ ಇದ್ದರೆ ಎರಡನೇ ವರ್ಷಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಬೇಕಾದ ದಾಖಲಾತಿಗಳು:
▪️ಸುಜ್ಞಾನನಿಧಿ ಶಿಷ್ಯವೇತನ ಮನವಿ ಪತ್ರ (ನಮೂನೆ 1)
▪️ವಿದ್ಯಾರ್ಥಿಯು ಪ್ರಸ್ತುತ ವರ್ಷ ಆಯ್ಕೆ ಮಾಡಿರುವ ಕಾಲೇಜಿನ ದೃಢೀಕರಣ ಹಾಗೂ ಶುಲ್ಕ ಪಾವತಿ ರಶೀದಿ. (ನಮೂನೆ 2)
▪️ಎಸ್ಸೆಸ್ಸೆಲ್ಸಿ ಅಂಕಪಟ್ಟಿ.
▪️ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್.
▪️ವಿದ್ಯಾರ್ಥಿಯ ಆಧಾರ್ ಕಾರ್ಡ್.
▪️ವಿದ್ಯಾರ್ಥಿಯ ಕುಟುಂಬದ ಬಿ.ಪಿ.ಎಲ್. ಪಡಿತರ ಚೀಟಿ.
▪️ಪೋಷಕರ ಸಂಘದ ನಿರ್ಣಯ ಪುಸ್ತಕ.
▪️ಪ್ರಸ್ತುತ ಕೋರ್ಸ್‌ಗೆ ಅರ್ಹತೆ ಪಡೆದ ಹಿಂದಿನ ವರ್ಷದ ಅಧ್ಯಯನದ ಅಂಕಪಟ್ಟಿ.
ನವೀಕರಣಕ್ಕೆ ಬೇಕಾದ ದಾಖಲಾತಿಗಳು:
▪️ಸುಜ್ಞಾನನಿಧಿ ಶಿಷ್ಯವೇತನ ಮನವಿ ಪತ್ರ (ನಮೂನೆ 1)
▪️ಪ್ರಸ್ತುತ ವರ್ಷದ ಕಾಲೇಜಿನ ದೃಢೀಕರಣ ಹಾಗೂ ಶುಲ್ಕ ಪಾವತಿ ರಶೀದಿ. (ನಮೂನೆ 2)
▪️ಎಸ್ಸೆಸ್ಸೆಲ್ಸಿ ಅಂಕಪಟ್ಟಿ,
▪️ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್.
▪️ವಿದ್ಯಾರ್ಥಿಯ ಆಧಾರ್ ಕಾರ್ಡ್.
▪️ವಿದ್ಯಾರ್ಥಿಯ ಕುಟುಂಬದ ಪಡಿತರ ಚೀಟಿ.
▪️ಪೋಷಕರ ಸಂಘದ ನಿರ್ಣಯ ಪುಸ್ತಕ.
▪️ಹಿಂದಿನ ವರ್ಷ ವ್ಯಾಸಂಗ ನಡೆಸಿದ ಕೋರ್ಸಿನ ಅಂಕಪಟ್ಟಿ.
ಅರ್ಜಿ ಸಲ್ಲಿಸುವುದು ಎಲ್ಲಿ?
ತಮ್ಮ ತಾಲೂಕಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯನ್ನು ಸಂಪರ್ಕಿಸಿ ಅಲ್ಲಿಯೇ ಅರ್ಜಿ ಸಲ್ಲಿಸಬೇಕು.
ನವೀಕರಣ ಅರ್ಜಿ:
ವಿದ್ಯಾರ್ಥಿಯು 2024-25ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಕೋರ್ಸಿನ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ನವೀಕರಣ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹೊಸ ಹಾಗೂ ನವೀಕರಣ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು.
ಹೊಸ ಅರ್ಜಿ:
1. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ಪ್ರಾಯೋಜಿತ ಸಂಘದ BPL ಕುಟುಂಬದ ಸದಸ್ಯರ ಓರ್ವ ವಿದ್ಯಾರ್ಥಿನಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
2. ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸ್, A+, A ಮತ್ತು B ಶ್ರೇಣಿ ಯಲ್ಲಿರುವ) ಸಂಘದ ಸದಸ್ಯರ ಸಂಘದ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು.
3. 01.04.2025 ರ ನಂತರ ಕಾಲೇಜಿಗೆ ದಾಖಲಾದ ಮೊದಲ ಸೆಮಿಸ್ಟರಿನ ವಿದ್ಯಾರ್ಥಿಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.( ಈ ಬಗ್ಗೆ ಕಾಲೇಜು ದೃಡೀಕರಣದಲ್ಲಿ ದಾಖಲಾತಿಯ ಬಗ್ಗೆ ಸರಿಯಾದ ಮಾಹಿತಿಯ ವಿವರವನ್ನು ತುಂಬಿ ಕಾಲೇಜು ಮುಖ್ಯಸ್ಥರ ಸಹಿ ಮತ್ತು ಸ್ಪಷ್ಟವಾದ ಮೊಹರನ್ನು ಕಡ್ಡಾಯವಾಗಿ ಹಾಕಿಸುವುದು.)
4. ವಿದ್ಯಾರ್ಥಿನಿಯು ಐಎಫ್ಎಸ್‌ಸಿ ಕೋಡ್ ಹೊಂದಿರುವ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಬ್ಯಾಂಕ್ ಅಧಿಕಾರಿಗಳ ಸಹಿ ಮತ್ತು ಮುದ್ರೆ ಕಡ್ಡಾಯವಾಗಿ ಇರಬೇಕು. ಖಾತೆಯಲ್ಲಿನ ವ್ಯವಹಾರಗಳು ಇತ್ತೀಚಿನ ಮೂರು ತಿಂಗಳಿಂದ ಚಾಲ್ತಿಯಲ್ಲಿರಬೇಕು.
5. ವರ್ಷಕ್ಕೆ 5000 ಕ್ಕಿಂತ ಕಡಿಮೆ ಮೊತ್ತದ ವಿದ್ಯಾರ್ಥಿವೇತನವನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ.
6. ದಿವ್ಯಾಂಗರು, ಅನಾಥರು ಮತ್ತು ಏಕ ಪೋಷಕರನ್ನು ಹೊಂದಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಇದ್ದಲ್ಲಿ ಸಂಘದ ಸದಸ್ಯರ ಮಕ್ಕಳು ಅಲ್ಲದೇ ಇದ್ದರೂ ಒಕ್ಕೂಟದ ಪದಾಧಿಕಾರಿಗಳ ಶಿಫಾರಸ್ಸಿನೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
7. ರಾಜ್ಯಾಧ್ಯಂತ ಅನಾಥ ಆಶ್ರಮದಲ್ಲಿದ್ದು ಅನಾಥ ಆಶ್ರಮದ ಉಸ್ತುವಾರಿಯಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ನವೀಕರಣ ಅರ್ಜಿ:
1. ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗೊಂಡಿರುವ ನವೀಕರಣ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
2. ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ S, A+, A ಮತ್ತು B ಶ್ರೇಣಿಯಲ್ಲಿರುವ) ಸಂಘಗಳ ಸದಸ್ಯರ ಮಕ್ಕಳು ಮಾತ್ರ ನವೀಕರಣ ಅರ್ಜಿ ಸಲ್ಲಿಸಬಹುದು.
3. ವಿದ್ಯಾರ್ಥಿಯು 2024-25 ಸಾಲಿನಲ್ಲಿ ವ್ಯಾಸಂಗ ಮಾಡಿದ ಕೋರ್ಸಿನ ಎಲ್ಲಾ ವಿಷಯಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ನವೀಕರಣ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
4. ವಿದ್ಯಾರ್ಥಿಯು ಹಿಂದಿನ ವರ್ಷದ ಸುಜ್ಞಾನನಿಧಿ ಪಡೆಯುವ ಸಂದರ್ಭ ನೀಡಿದ ಬ್ಯಾಂಕ್ ಖಾತೆಯನ್ನು ನೀಡುವುದು. ಈ ಹಿಂದೆ ನಡೆದ ಬ್ಯಾಂಕ್ ಬ್ರಾಂಚ್ ಬದಲಾವಣೆ ಇದ್ದಲ್ಲಿ ಅಪ್ಡೇಟ್ ಮಾಡಿದ ಹೊಸ ಪಾಸ್ ಪುಸ್ತಕದಲ್ಲಿ ಶಾಕಾ ಪ್ರಬಂಧಕರ ಸಹಿ ಮತ್ತು ಮೊಹರು ಕಡ್ಡಾಯವಾಗಿ ಹಾಕಿಸುವುದು.
5. ಪ್ರಸ್ತುತ ವಿದ್ಯಾರ್ಜನೆ ಮಾಡುತ್ತಿರುವ ಕೋರ್ಸ ಯಾ ಶಿಕ್ಷಣ ಸಂಸ್ಥೆಯನ್ನು ಬದಲಾಯಿಸಿ ಬೇರೆ ಕೋರ್ಸ್ ಯಾ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಂಡರೆ ಶಿಷ್ಯ ವೇತನವನ್ನು ಮುಂದುವರಿಸಲಾಗುವುದಿಲ್ಲ.
▪️ಸುಜ್ಞಾನನಿಧಿ ಶಿಷ್ಯವೇತನದ ಮನವಿ ಪತ್ರ (ನಮೂನೆ 1) ಮತ್ತು ಶಿಕ್ಷಣ ಸಂಸ್ಥೆಯ ದೃಢೀಕರಣ (ನಮೂನೆ 2)ಕ್ಕಾಗಿ- CLICK HERE
▪️ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ : 9591770660 / 6366358320